ಶ್ರೀರಾಮ ನವಮಿಯಂದೇ ಕವಲುದಾರಿ ಹಿಡಿದು 'ರಾಮನ ಅವತಾರ'ವೆತ್ತಿದ ರಿಷಿ
'ಅವರೇಷನ್ ಅಲಮೇಲಮ್ಮ', 'ಕವಲುದಾರಿ' ಅಂತಹ ಹಿಟ್ ಸಿನಿಮಾಗಳಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿರೋ ನಟಿ ರಿಷಿ. ಆದರೆ, ಕೆಲವು ದಿನಗಳಿಂದ ರಿಷಿ ಬಗ್ಗೆ ಸುಳಿವೇ ಇರಲಿಲ್ಲ. ಈಗ ಸದ್ದಿಲ್ಲದೆ ಸಿನಿಮಾವೊಂದನ್ನು ಮಾಡಿ ಮುಗಿಸಿದ್ದಾರೆ. ಅದುವೇ 'ರಾಮನ ಅವತಾರ'.
ಗಂಭೀರ ಕಥೆಯಿರಲಿ, ಇಲ್ಲಾ ಹಾಸ್ಯ ಇರಲಿ, ರಿಷಿ ಆ ಕಥೆಗೆ ಹೊಂದಿಕೊಳ್ಳುವ ನಟ. ಕನ್ನಡದ ಈ ಪ್ರತಿಭಾನ್ವಿತ ನಟನ ಮುಂದಿನ ಸಿನಿಮಾ ಬಗ್ಗೆ ಸಿನಿಪ್ರಿಯರಿಗೆ ಕುತೂಹಲವಿದೆ. ಅದರಲ್ಲೂ ಶ್ರೀರಾಮ ನವಮಿಯಂದೇ ಬಿಡುಗಡೆಯಾಗಿರುವ ಹೊಸ ಪೋಸ್ಟರ್ ಕುತೂಹಲ ಕೆರಳಿಸಿದೆ.

ರಿಷಿ ನಟಿಸಿರುವ ಹೊಚ್ಚ ಹೊಸ ಸಿನಿಮಾ 'ರಾಮನ ಅವತಾರ'ದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಥೇಟ್ ಶ್ರೀ ರಾಮನ ಅವತಾರದಲ್ಲಿಯೇ ರಿಷಿ ಕಾಣಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಸಿನಿಪ್ರಿಯರು ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ. ಅಲ್ಲದೆ ಇವರಿಂದಿಗೆ ಅರುಣ್ ಸಾಗರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಶೇಷ ಅಂದ್ರೆ, ರಿಷಿ ಜೊತೆ ಈ ಸಿನಿಮಾದಲ್ಲಿ ಶುಭ್ರ ಅಯ್ಯಪ್ಪ ಹಾಗೂ ಪ್ರಣೀತಾ ಸುಭಾಷ್ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
'ಆಪರೇಷನ್ ಅಲಮೇಲಮ್ಮ' ಸಿನಿಮಾದಲ್ಲಿ ಸಿಂಪಲ್ ಸುನಿ ಹಾಗೂ ರಿಷಿ ಕಾಂಬಿನೇಷನ್ ವರ್ಕ್‌ಔಟ್ ಆಗಿತ್ತು. ಹೀಗಾಗಿ ಅದೇ ಕಾಂಬಿನೇಷನ್ ಎದುರು ನೋಡುತ್ತಿದ್ದ ಸಿನಿಮಾ ಪ್ರೇಮಿಗಳಿಗೆ ಸುನಿ ಗರಡಿಯಲ್ಲೇ ಪಳಗಿರೋ ವಿಕಾಸ್ ಪಂಪಾಪತಿ 'ರಾಮನ ಅವತಾರ'ಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ವಿಕಾಸ್ ಪಂಪಾಪತಿ ನಿರ್ದೇಶಕ ಸಿಂಪಲ್ ಸುನಿ ಕ್ಯಾಂಪನ್‌ನಲ್ಲಿ ಸಹಾಯಕ ನಿರ್ದೇಶಕರಾಗಿ ಹಾಗೂ ಬರಹಗಾರನಾಗಿ ಕೆಲಸ ಮಾಡಿದ ಅನುಭವವಿದೆ. ವಿಕಾಸ್ ತಮ್ಮದೇ ನಾಟಿ ಫ್ಯಾಕ್ಟರಿ ಯೂಟ್ಯೂಬ್ ಚಾನೆಲ್ ಮೂಲಕ ಜನಪ್ರಿಯತೆಗಳನ್ನು ಗಳಿಸಿದ್ದಾರೆ. 'ರಾಮನ ಅವತಾರ' ವಿಕಾಸ್ ಅವರ ಚೊಚ್ಚಲ ಸಿನಿಮಾ ಕೂಡ ಹೌದು.
'ಆಪರೇಷನ್ ಅಲಮೇಲಮ್ಮ' ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಈ ಸಿನಿಮಾವನ್ನೂ ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ರೋಮ್ಯಾಂಟಿಕ್ ಕಾಮಿಡಿ ಹಿನ್ನೆಲೆಯುಳ್ಳ ಸಿನಿಮಾ. ಈ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್‌ಪಾಂಡೇ ಕ್ಯಾಮೆರಾ ವರ್ಕ್ ಇದೆ. ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದು, ಅಮರನಾಥ್ ಎಡಿಟಿಂಗ್ ಮಾಡಿದ್ದಾರೆ.
'ರಾಮನ ಅವತಾರ' ಸಿನಿಮಾವನ್ನು ಉಡುಪಿ, ಬೆಂಗಳೂರು ಸುತ್ತುಮುತ್ತ ಶೂಟಿಂಗ್ ಮಾಡಲಾಗಿದೆ. ಈಗಾಗಲೇ ರಿಷಿ ಹಾಗೂ ತಂಡ ಶೂಟಿಂಗ್ ಸಹ ಮುಗಿಸಿದ್ದಾರೆ. ಗ್ರಾಫಿಕ್ಸ್ ಹಾಗೂ ಸಂಗೀತ ಸಂಬಂಧಿಸಿದ ಕೆಲಸ ನಡೆಯುತ್ತಿದೆ. ಜೂನ್ ಮೊದಲನೇ ವಾರದಲ್ಲಿ 'ರಾಮನ ಅವತಾರ' ಸಿನಿಮಾ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದೆ.


Click it and Unblock the Notifications











