'ಹಬ್ಬ', 'ಚೆಲುವ', 'ನಾಗದೇವತೆ'ಯ ಖಳನಾಯಕ ಹೃದಯಾಘಾತದಿಂದ ನಿಧನ: ಚಿತ್ರರಂಗದ ಕಣ್ಣೀರು!
ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಖಳನಾಯಕ ಮಿಂಚಿದ್ದ ನಟ ಕಜಾನ್ ಖಾನ್. ದಕ್ಷಿಣ ಭಾರತ ಪ್ರಮುಖ ಭಾಷೆಗಳಲ್ಲಿ ನಟಿಸಿದ್ದ ಈ ನಟ ಹೃದಯಾಘಾತದಿಂದ ನಿಧನರಾಗಿದ್ದಾರೆ. ದಕ್ಷಿಣ ಭಾರತೀಯ ಚಿತ್ರರಂಗ ಮತ್ತೊಬ್ಬ ಅದ್ಭುತ ನಟನನ್ನು ಕಳೆದುಕೊಂಡಿದೆ.
ಕಜಾನ್ ಖಾನ್ ಜೂನ್ 12ರಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಈ ಸುದ್ದಿಯನ್ನು ಮಲಯಾಳಂನ ಮಲಯಾಳಂನ ಪ್ರೊಡಕ್ಷನ್ ಕಂಟ್ರೋಲರ್ ಹಾಗೂ ನಿರ್ಮಾಪಕ ಎನ್ ಎಂ ಬಾದುಷಾ ತಮ್ಮ ಫೇಸ್‌ಬುಕ್ ಖಾತೆಯ ಮೂಲಕ ಖಚಿತ ಪಡಿಸಿದ್ದರು.

ಮೋಹನ್ ಲಾಲ್ ಸಿನಿಮಾ ಮೂಲಕ ಎಂಟ್ರಿ
ಕಜಾನ್ ಖಾನ್ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದರು. 1993ರಲ್ಲಿ ತೆರೆಕಂಡಿದ್ದ ಮೋಹನ್ ಲಾಲ್ ಅಭಿನಯದ 'ಗಂಧರ್ವ' ಸಿನಿಮಾ ಮೂಲಕ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದರು. ಬಳಿಕ ಮಲಯಾಳಂನ ಎವರ್‌ಗ್ರೀನ್ ಸಿನಿಮಾ 'ಸಿಐಡಿ ಮೂಸಾ' ದಲ್ಲಿ ಖಳನಾಯಕನಾಗಿ ನಟಿಸಿದ್ದರು. ದಿಲೀಪ್ ಕುಮಾರ್ ಅಭಿನಯದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.
ಇಲ್ಲಿಂದ ಕಜಾನ್ ಖಾನ್ ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ಭಾಷೆಯ ಸಿನಿಮಾಗಳಲ್ಲಿ ಖಳನಾಯಕನಾಗಿ ನಟಿಸಿದ್ದಾರೆ. ಕನ್ನಡದ ಹಲವು ಸಿನಿಮಾಗಳಲ್ಲಿ ಖಳನಾಯಕನಾಗಿ ನಟಿಸಿದ್ದರು. ಹೀಗಾಗಿ ಈ ನಟ ಕನ್ನಡ ಸಿನಿಮಾ ಪ್ರೇಮಿಗಳಿಗೂ ಚಿರಪರಿಚಿತ.
ಕನ್ನಡದಲ್ಲೂ ನಟಿಸಿರೋ ಖಳನಟ
ಕನ್ನಡ ಸಿನಿಪ್ರೇಮಿಗಳಿಗೂ ಕಜಾನ್ ಖಾನ್ ಖಳನಾಯಕನಾಗಿ ಚಿರಪರಿಚಿತ. ವಿಷ್ಣುವರ್ಧನ್, ಅಂಬರೀಶ್, ಶಶಿಕುಮಾರ್, ರಾಮ್ ಕುಮಾರ್ ಅಭಿನಯದ ಹಬ್ಬದಲ್ಲಿ ಖಳನಾಯಕನಾಗಿ ನಟಿಸಿದ್ದರು. ಹಾಗೇ 'ನಾಗದೇವತೆ', 'ಚೆಲುವ'ದಂತಹ ಹಲವು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಸ್ಸು ಗೆದ್ದಿದ್ದರು.
ಕಜಾನ್ ಖಾನ್ 'ಗಂಧರ್ವಂ', 'ಸಿಐಡಿ ಮೂಸ','ದಿ ಕಿಂಗ್','ವರ್ಣಪಕಿಟ್ಟು','ಡ್ರೀಮ್ಸ್','ದಿ ಡಾನ್','ಮಾಯಾಮೋಹಿನಿ','ರಾಜಾಧಿರಾಜ' ಹೀಗೆ ಕಜಾನ್ ಖಾನ್ ನಟಿಸಿದ ಹಲವು ಮಲಯಾಳಂ ಸಿನಿಮಾಗಳಿಂದ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು.
ಸ್ಫುರದ್ರೂಪಿ ಖಳನಾಯಕ
ಚಿತ್ರರಂಗದಲ್ಲಿ ಖಳನಾಯಕ ನೋಡೋಕೆ ಭಯ ಹುಟ್ಟಿಸುವಂತಿರಬೇಕು ಅನ್ನೋ ಮಾನದಂಡವಿದೆ. ಆದರೆ, 90ರ ದಶಕದಲ್ಲಿ ಬಂದ ಕಜಾನ್ ಖಾನ್ ಅತ್ಯಂತ ಸ್ಫುರದ್ರೂಪಿ ಖಳನಟನಾಗಿ ಹೊರಹೊಮ್ಮಿದ್ದರು. ಅಂದಿನ ಕಾಲಕ್ಕೆ ಇವರನ್ನು ಹ್ಯಾಂಡ್‌ಸಮ್ ವಿಲನ್ ಎಂದು ಕರೆಯುತ್ತಿದ್ದರು.
ಸುಮಾರು 50 ಸಿನಿಮಾಗಳಲ್ಲಿ ನಟಿಸಿರೋ ಈ ಖಳನಟ ಇಂಗ್ಲಿಷ್ ಭಾಷೆಯ ಸಿನಿಮಾ 'ಆರ್ಟ್ ಆಫ್ ಫೈಟಿಂಗ್ 2'ದಲ್ಲೂ ಕಾಣಿಸಿಕೊಂಡಿದ್ದಾರೆ. ಈ ಅದ್ಭುತ ನಟನ ದಿಢೀರ್ ನಿಧನಕ್ಕೆ ಮಲಯಾಳಂ, ತಮಿಳು ಹಾಗೂ ಕನ್ನಡ ಚಿತ್ರಪ್ರೇಮಿಗಳಿಗೆ ನೋವುಂಟು ಮಾಡಿದೆ.


Click it and Unblock the Notifications











