KCC 2023 ಮೊದಲ ಪಂದ್ಯ:ಹೊಯ್ಸಳ ಈಗಲ್ಸ್ Vs ಗಂಗಾ ವಾರಿಯರ್ಸ್.. ಕ್ರಿಸ್ ಗೇಲ್ಸ್ Vs ಸುರೇಶ್ ರೈನಾ!
ಕಿಚ್ಚ ಸುದೀಪ್ ಮುಂದಾಳತ್ವದಲ್ಲಿ ಕೆಸಿಸಿ 2023 ಪಂದ್ಯಾವಳಿ ನಡೆಯುತ್ತಿದೆ. ಇದು ಕನ್ನಡ ಚಲನಚಿತ್ರ ಕಪ್ ಮೂರನೇ ಸೀಸನ್‌ಗೆ ಇಡೀ ಕನ್ನಡ ಚಿತ್ರರಂಗ ಒಂದಾಗಿದ್ದಾರೆ. ಕಿಚ್ಚ ಸುದೀಪ್, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್,ಗೋಲ್ಡನ್ ಸ್ಟಾರ್ ಗಣೇಶ್, ಧ್ರುವ ಸರ್ಜಾ, ಡಾಲಿ ಧನಂಜಯ್, ಡಾರ್ಲಿಂಗ್ ಕೃಷ್ಣ ಸೇರಿದಂತೆ ಇಡೀ ಚಿತ್ರರಂಗವೇ ಒಟ್ಟಿಗೆ ಸೇರಿದೆ. ಇವರೊಂದಿಗೆ ಕ್ರಿಸ್ ಗೇಲ್, ಸುರೇಶ್ ರೈನಾ, ತಿಲಕರತ್ನೆ ದಿಲ್‌ಶಾನ್, ಹರ್ಷಲ್ ಗಿಬ್ಸ್, ಬ್ರಿಯಾನ್ ಲಾರಾ ಅಂತಹ ದಿಗ್ಗಜರು ಈ ಬಾರಿ ಕೆಸಿಸಿಯಲ್ಲಿ ಭಾಗವಹಿಸುತ್ತಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯುತ್ತಿದೆ. ಡಾರ್ಲಿಂಗ್ ಕೃಷ್ಣ ನಾಯಕತ್ವದ ಗಂಗಾ ವಾರಿಯಸ್ಸ್ ಹಾಗೂ ಕಿಚ್ಚ ನಾಯಕತ್ವದ ಹೊಯ್ಸಳ ಈಗಲ್ಸ್ ತಂಡದ ನಡುವೆ ಫಸ್ಟ್ ಮ್ಯಾಚ್ ನಡೆಯುತ್ತಿದೆ. ಗಂಗಾ ವಾರಿಯರ್ಸ್ ತಂಡದಲ್ಲಿ ಡಾಲಿ ಧನಂಜಯ್, ಕರಣ್ ಆರ್ಯ, ನವೀನ್ ರಾಘು, ವೈಭವ್ ರಾಮ್,ಮಲ್ಲಿಕಾಚರಣ್ ವಾದಿ, ಸುದರ್ಶನ್, ಸುನೀಲ್ ರಾವ್, ಸಿಂಪಲ್ ಸುನಿ,ಪ್ರಸನ್ನ, ರಾಜನ್ ಹಾಸನ್, ಪ್ರವೀಣ್, ಶಿವಕುಮಾರ್ ಬಿಯು, ಡಾರ್ಲಿಂಗ್ ಕೃಷ್ಣ ಆಟ ಆಡುತ್ತಿದ್ದಾರೆ. ಈ ತಂಡ ಸ್ಟಾರ್ ಪ್ಲೇಯರ್ ಸುರೇಶ್ ರೈನಾ.
ಕಿಚ್ಚ ಸುದೀಪ್ ನಾಯಕತ್ವದ ಹೊಯ್ಸಳ ಈಗಲ್ಸ್ ತಂಡದಲ್ಲಿ ಸಾಗರ್ ಗೌಡ, ಅನುಪ್ ಭಂಡಾರಿ, ನಾಗಾರ್ಜುನಾ ಶರ್ಮಾ, ಅರ್ಜುನ್ ಬಚ್ಚನ್, ವಿಶ್ವ, ಮಂಜು ಪಾವಗಡ, ಸುನಿಲ್ ಗೌಡ, ತರುಣ್ ಸುದೀರ್, ರೋಹಿತ್ ಗೌಡ, ರಿತೇಶ್ ಭಟ್ಕಳ್ ಹಾಗೂ ಅಭಿಶೇಕ್ ಆಡುತ್ತಿದ್ದಾರೆ. ಈ ತಂಡದ ಸ್ಟಾರ್ ಪ್ಲೇಯರ್ ಅಂದ್ರೆ, ಕ್ರಿಸ್ ಗೇಲ್. ಹೀಗಾಗಿ ಈ ಎರಡೂ ತಂಡಗಳ ನಡುವೆ ಭರ್ಜರಿ ಪೈಪೋಟಿ ನಡೆಯುತ್ತಿದೆ.

ಹೊಯ್ಸಳ ಈಗಲ್ಸ್ Vs ಗಂಗಾ ವಾರಿಯರ್ಸ್
ಮೊದಲ ಪಂದ್ಯದಲ್ಲಿ ಗಂಗಾ ವಾರಿಯರ್ಸ್ ಮುಂದೆ ಹೊಯ್ಸಳ ಈಗಲ್ಸ್ ಟಾಪ್ ಗೆದ್ದು, ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರಂಭಿಕ ಆಟಗಾರರಾಗಿ ಸುರೇಶ್ ರೈನಾ ಹಾಗೂ ಡಾರ್ಲಿಂಗ್ ಕೃಷ್ಣ ಅಖಾಡಕ್ಕಿಳಿದಿದ್ದರು. ಸುರೇಶ್ ರೈನಾ ಬ್ಯಾಟಿಂಗ್ ಮೇಲೆ ಎಲ್ಲರ ಕಣ್ಣಿತ್ತು. ಆರಂಭದಲ್ಲಿ ಸುರೇಶ್ ರೈನಾ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಆರಂಭಿಸಿದ್ದರು. ಆದರೆ, ಹೆಚ್ಚು ಹೊತ್ತು ನಿಲ್ಲಲಿಲ್ಲ.ಕೇವಲ 20 ರನ್ ಗಳಿಸಿ ರೈನಾ ಪೆವಿಲಿಯನ್‌ಗೆ ಮರಳಿದ್ರು. ಇತ್ತ ಡಾರ್ಲಿಂಗ್ ಕೃಷ್ಣ ಕೂಡ ಅಂತ ಮೋಡಿ ಮಾಡಿಲ್ಲ.
ಮೊದಲ ಇನ್ನಿಂಗ್ಸ್‌ನಲ್ಲಿ ಗಂಗಾ ವಾರಿಯರ್ಸ್ ತಂಡ 10 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 114 ರನ್ ಗಳಿಸಿದ್ದಾರೆ. ಹೊಯ್ಸಳ ಈಗಲ್ಸ್‌ಗೆ 115 ರನ್ ಟಾರ್ಗೆಟ್ ಕೊಟ್ಟಿದ್ದಾರೆ.


Click it and Unblock the Notifications











