25ನೇ ದಿನಕ್ಕೆ ರಾಜಮೌಳಿಯ RRR ಕಲೆಕ್ಷನ್‌ಗೆ ಸೆಡ್ಡು ಹೊಡೆದ 'KGF 2': ಗಳಿಕೆ ಬೇಟೆ ಇನ್ನೂ ನಿಂತಿಲ್ಲ!

'ಕೆಜಿಎಫ್ 2' ಬಿಡುಗಡೆಯಾಗಿದ 25 ದಿನ ಕಳೆದರೂ ಬಾಕ್ಸಾಫೀಸ್‌ನಲ್ಲಿ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ. ವಿಶ್ವದ ಮೂಲೆ ಮೂಲೆಯಲ್ಲೂ 'ಕೆಜಿಎಫ್ 2' ಕಲೆಕ್ಷನ್ ಬಗ್ಗೆ ದೊಡ್ಡದೊಂದು ಚರ್ಚೆಯಾಗುತ್ತಿದೆ. ಸದ್ಯ 25 ದಿನಗಳನ್ನು ಪೂರೈಸಿರುವ ಸಿನಿಮಾದ ನಾಗಾಲೋಟಕ್ಕೆ ಬ್ರೇಕ್ ಹಾಕುವುದಕ್ಕೆ ಸಾಧ್ಯವಾಗುತ್ತಿಲ್ಲ.

ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಪ್ರೇಮಿಗಳನ್ನು ಇನ್ನಿಲ್ಲದಂತೆ ಮೋಡಿ ಮಾಡಿದೆ. ಅದರಲ್ಲೂ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವೊಂದು ಒಂದೊಂದೇ ದಾಖಲೆಗಳನ್ನು ನೆಲಸಮ ಮಾಡುತ್ತಾ ಮುನ್ನುಗ್ಗುತ್ತಿದೆ. 25ನೇ ದಿನವೂ ಹೊಸ ಹೊಸ ದಾಖಲೆಯನ್ನು ಬರೆದಿದೆ.

ತೂಫಾನ್‌ನಂತೆ ಬಾಕ್ಸಾಫೀಸ್‌ಗೆ ಬಂದಪ್ಪಳಿಸಿದ 'ಕೆಜಿಎಫ್ 2', ಇನ್ನೂ ತನ್ನ ಆರ್ಭಟವನ್ನು ನಿಲ್ಲಿಸಿಲ್ಲ. ಗಲ್ಲಾಪೆಟ್ಟಿಗೆ ಹಿಂದೆಂದೂ ಶೇಕ್ ಆಗದ ಹಾಗೆ ಸದ್ದು ಮಾಡುತ್ತಿದೆ. 25 ದಿನಗಳ ಬಳಿಕ 'ಕೆಜಿಎಫ್ 2' ರಾಜಮೌಳಿ ಸಿನಿಮಾ RRR ಅನ್ನು ಹಿಂದಿಕ್ಕಿದೆ. ಹಾಗಿದ್ದರೆ, 25ನೇ ದಿನ 'ಕೆಜಿಎಫ್ 2' ಗಳಿಕೆ ಎಷ್ಟು? ವರ್ಲ್ಡ್‌ ವೈಡ್ ಕಲೆಕ್ಷನ್ ಎಷ್ಟು? RRR ಎಷ್ಟು ಕೋಟಿ ಕಲೆಹಾಕಿದೆ? ಈ ಎಲ್ಲಾ ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

'ಕೆಜಿಎಫ್ 2' 25ನೇ ದಿನದ ಸಂಭ್ರಮ

'ಕೆಜಿಎಫ್ 2' 25ನೇ ದಿನದ ಸಂಭ್ರಮ

'ಕೆಜಿಎಫ್ 2' ಏಪ್ರಿಲ್ 14ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಸಿನಿಮಾ ಬಿಡುಗಡೆಯಾದಲ್ಲಿಂದ ದಾಖಲೆಗಳನ್ನು ಉಡೀಸ್ ಮಾಡುತ್ತಾ ಮುನ್ನುಗ್ಗುತ್ತಿದೆ. ಸದ್ಯಕ್ಕೆ ಸಿನಿಮಾ ವಲಯದಲ್ಲಿ 'ಕೆಜಿಎಫ್ 2' ಟಾಕ್ ಆಫ್‌ ದಿ ಟೌನ್ ಆಗಿದೆ. ಅದರಲ್ಲೂ 25ನೇ ದಿನದಲ್ಲೂ ಕೆಜಿಎಫ್ 2 ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದ್ದು, ಉಳಿದ ಚಿತ್ರರಂಗ ದಂಗಾಗಿ ಹೋಗಿದೆ. ವೀಕೆಂಡ್‌ನಲ್ಲಿ 'ಕೆಜಿಎಫ್ 2' ಕಲೆಕ್ಷನ್ ಗಣನೀಯವಾಗಿ ಏರಿಕೆಯಾಗುತ್ತಿದೆ. ಇನ್ನು ಈ ಸಿನಿಮಾ ಬಿಡುಗಡೆಯಾದ 25ನೇ ದಿನದಲ್ಲೂ ದಾಖಲೆ ಗಳಿಕೆ ಮಾಡಿದ್ದು ಇತಿಹಾಸ ಎಂದೇ ಹೇಳಲಾಗುತ್ತಿದೆ.

ವಿಶ್ವದಾದ್ಯಂತ 25ನೇ ದಿನ ಕಲೆಕ್ಷನ್ ಎಷ್ಟು?

'ಕೆಜಿಎಫ್ 2' ವರ್ಲ್ಡ್‌ವೈಡ್ ರಿಲೀಸ್ ಆಗಿದೆ. ಈ 25 ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಗುಡುಗುತ್ತಲೇ ಇದೆ. ನಿನ್ನೆ ( ಮೇ 8) 25ನೇ ದಿನಗಳನ್ನು ಪೂರೈಸಿದೆ. ಅದೃಷ್ಟ ಅಂದರೆ, 25ನೇ ವೀಕೆಂಡ್‌ನಲ್ಲಿ ಸಿಕ್ಕಿದ್ದು, 'ಕೆಜಿಎಫ್ 2' ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಿದೆ. 25ನೇ ದಿನ 'ಕೆಜಿಎಫ್ 2' ಬರೋಬ್ಬರಿ 24.65 ಕೋಟಿ ಗಳಿಕೆ ಕಂಡಿದೆ. ನಾಲ್ಕನೇ ವಾರದ ಮೂರನೇ ದಿನವೂ ಕಲೆಕ್ಷನ್ ವಿಚಾರದಲ್ಲಿ ದಾಖಲೆ ಅಂತಲೇ ಹೇಳಾಗುತ್ತಿದೆ. ಇದು ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ಬಿಡುಗಡೆಯಾದ ಹೊಸ ಸಿನಿಮಾದ ಮೊದಲನೇ ದಿನದ ಗಳಿಕೆಗೆ ಸಮ ಎನ್ನಲಾಗಿದೆ.

'KGF 2' 3ನೇ ಅತೀ ಹೆಚ್ಚು ಗಳಿಕೆ ಕಂಡ ಚಿತ್ರ

'KGF 2' 3ನೇ ಅತೀ ಹೆಚ್ಚು ಗಳಿಕೆ ಕಂಡ ಚಿತ್ರ

'KGF 2' ಸಿನಿಮಾ ಭಾರತದ ಮೂರನೇ ಅತೀ ಹೆಚ್ಚು ಗಳಿಕೆ ಕಂಡ ಭಾರತದ ಸಿನಿಮಾದ ಪಟ್ಟಿಗೆ ಸೇರಿದೆ. ಭಾನುವಾರ( ಮೇ 8) ಬಾಕ್ಸಾಫೀಸ್‌ನಲ್ಲಿ ದಾಖಲೆ ಗಳಿಕೆ ಕಂಡ ಬಳಿಕ ರಾಜಮೌಳಿಯ RRR ಸಿನಿಮಾವನ್ನು ಹಿಂದಿಕ್ಕಿದೆ. ಈ ಮೂಲಕ RRR ಇದೂವರೆಗೂ ಗಳಿಸಿದ 1127.65 ಕೋಟಿಯನ್ನು ಮೀರಿದೆ. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, 'ಕೆಜಿಎಫ್ 2' 1129.38 ಕೋಟಿ ಗಳಿಕೆ ಕಂಡಿದೆ. ಈ ಮೂಲಕ 'ದಂಗಲ್', 'ಬಾಹುಬಲಿ 2' ಬಳಿಕ ವಿಶ್ವದಾದ್ಯಂತ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ 'ಕೆಜಿಎಫ್ 2' ಸೇರಿಕೊಂಡಿದೆ.

KGF Chapter 2 ವರ್ಲ್ಡ್‌ವೈಡ್ ಬಾಕ್ಸಾಫೀಸ್ ಕಲೆಕ್ಷನ್

1ನೇ ವಾರ ₹ 720.31 ಕೋಟಿ
2ನೇ ವಾರ ₹ 223.51 ಕೋಟಿ
3ನೇ ವಾರ ₹ 140.55 ಕೋಟಿ

4ನೇ ವಾರದಲ್ಲಿ
1ನೇ ದಿನ ₹ 11.46 ಕೋಟಿ
2ನೇ ದಿನ ₹ 8.90 ಕೋಟಿ
3ನೇ ದಿನ ₹ 24.65 ಕೋಟಿ

ಒಟ್ಟು ₹ 1129.38 ಕೋಟಿ

ಕೆಜಿಎಫ್ 2 ಮುಂದಿನ ಗುರಿಯೇನು?

ಕೆಜಿಎಫ್ 2 ಮುಂದಿನ ಗುರಿಯೇನು?

'ಕೆಜಿಎಫ್ 2' ವರ್ಲ್ಡ್‌ ವೈಡ್ ಬಾಕ್ಸಾಫೀಸ್‌ನಲ್ಲಿ RRR ಸಿನಿಮಾವನ್ನು ಹಿಂದಿಕ್ಕಿದೆ. ಆದರೆ, ಆಮಿರ್ ಖಾನ್ ನಟಿಸಿದ 'ದಂಗಲ್', 'ಬಾಹುಬಲಿ 2' ಸಿನಿಮಾಗಳ ದಾಖಲೆಯನ್ನು ಬಾಕ್ಸಾಫೀಸ್‌ನಲ್ಲಿ ಬೀಟ್ ಮಾಡಬಹುದಾ? ಈ ಅನುಮಾನವಂತೂ ಇದ್ದೇ ಇದೆ. ಆದರೆ, ನಿನ್ನೆ (ಮೇ 8) ರಂದು ಬಾಕ್ಸಾಫೀಸ್‌ನಲ್ಲಿ ಕಂಡ ದಿಢೀರ್ ಏರಿಕೆಯಿಂದ 'ದಂಗಲ್' ಹಾಗೂ ' ಬಾಹುಬಲಿ 2' ಕಲೆಕ್ಷನ್ ಅನ್ನು ಬೀಟ್ ಮಾಡಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

More from Filmibeat

English summary
KGF 2 Day 25 Worldwide Box Office Collections: Becomes 3rd Highest Grossing Movie After Baahubali 2, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X