KGF 2-RCB: 'ಕೆಜೆಎಫ್ 2' ಪೋಸ್ಟರ್‌ನಲ್ಲಿ RCBಯ ವಿರಾಟ್ ಕೊಹ್ಲಿ, ಮ್ಯಾಕ್ಸ್‌ವೆಲ್, ಡುಪ್ಲೆಸಿಸ್
'ಕೆಜಿಎಫ್ 2' ಸಿನಿಮಾ ಬಿಡುಗಡೆಗೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಅಷ್ಟರಲ್ಲೇ ಈ ಸಿನಿಮಾ ಕ್ರೇಜ್ ಮುಗಿಲು ಮುಟ್ಟಿದೆ. ರಾಜ್ಯ, ದೇಶದಲ್ಲಷ್ಟೇ ಅಲ್ಲ. ವಿಶ್ವದಲ್ಲಿಯೇ ದೊಡ್ಡ ಮಟ್ಟಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. 'ಕೆಜಿಎಫ್ 2' ಕ್ರೇಜ್ ನೋಡಿ ಭಾರತದ ಎಲ್ಲಾ ಚಿತ್ರರಂಗ ತಣ್ಣಾಗಾಗಿದೆ. ವಿಶ್ವದ ಮೂಲೆ ಮೂಲೆಯಲ್ಲಿ 'ಕೆಜಿಎಫ್' ಫ್ಯಾನ್ಸ್ ಸಿನಿಮಾ ನೋಡಲು ಕಾತುರರಾಗಿದ್ದಾರೆ.
'ಕೆಜಿಎಫ್' ಸಿನಿಮಾ ಬಿಡುಗಡೆಗೂ ಮುನ್ನ ಫ್ಯಾನ್ಸ್ ಇಂದು (ಏಪ್ರಿಲ್ 12) ನಡೆಯಲಿರುವ ಐಪಿಎಲ್ ಮ್ಯಾಚ್ ಬಗ್ಗೆನೂ ಕಾತುರರಾಗಿದ್ದಾರೆ. RCB Vs CSK ಹೈ ವೋಲ್ಟೇಜ್ ಪಂದ್ಯವನ್ನು ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದಾರೆ.
ಒಂದ್ಕಡೆ 'ಕೆಜೆಎಫ್ 2' ಹ್ಯಾಂಗೋವರ್‌ನಿಂದ ಅಭಿಮಾನಿಗಳು ಹೊರಬಂದಿಲ್ಲ. ಇನ್ಮೊಂದು ಕಡೆ ಆರ್‌ಸಿಬಿ ತಂಡದ ಗೆಲುವನ್ನು ಎದುರು ನೋಡುತ್ತಿದ್ದಾರೆ. ಹೀಗಾಗಿ 'ಕೆಜಿಎಫ್ 2' ಮೂಡ್‌ನಲ್ಲೇ ಇರುವ ಫ್ಯಾನ್ಸ್ ಆರ್‌ಸಿಬಿಯ ಮೂವರು ದಿಗ್ಗಜರನ್ನಿಟ್ಟುಕೊಂಡು ಹೊಸ ಪೋಸ್ಟರ್ ಮಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Recommended Video


'ಕೆಜಿಎಫ್ 2' ಹ್ಯಾಂಗೋವರ್‌ನಲ್ಲಿ ಆರ್‌ಸಿಬಿ ಫ್ಯಾನ್ಸ್
'ಕೆಜಿಎಫ್ 2' ಹಾಗೂ ಆರ್‌ಸಿಬಿ ಎರಡಕ್ಕೂ ಕನ್ನಡದ ನಂಟಿದೆ. ಹೀಗಾಗಿ 'ಕೆಜಿಎಫ್ 2' ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿರುವ ಅಭಿಮಾನಿಗಳು ಆರ್‌ಸಿಬಿ ತಂಡದಲ್ಲಿಯೂ 'ಕೆಜಿಎಫ್' ಅನ್ನೇ ಕಾಣುತ್ತಿದ್ದಾರೆ. ಇಂದು ನಡೆಯಲಿರುವ ಆರ್‌ಬಿಸಿ ಹಾಗೂ ಸಿಎಸ್‌ಕೆ ನಡುವಿನ ಪಂದ್ಯಕ್ಕಾಗಿ ವಿಶೇಷವಾದ ಪೋಸ್ಟರ್ ಅನ್ನು ಅಭಿಮಾನಿಗಳೇ ಸಿದ್ಧಪಡಿಸಿದ್ದಾರೆ. ಆ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲೀಗ ಬೇಜಾನ್ ಸದ್ದು ಮಾಡುತ್ತಿದೆ.
RCB ಪೋಸ್ಟರ್ ಹೈಲೈಟ್ ಏನು?
'ಕೆಜಿಎಫ್ 2' ಗುಂಗಿನಲ್ಲಿರುವ RCB ಅಭಿಮಾನಿಗಳು ಹೊಸ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಇದರಲ್ಲಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಪಫ್ ಡೂಪ್ಲೆಸಿಸ್ ಅವರ ಫೋಟೊವನ್ನು ಕೆಜಿಎಫ್ ಪೋಸ್ಟರ್ ಜೊತೆ ಜೋಡಿಸಲಾಗಿದೆ. ಒಂದೇ ಪೋಸ್ಟರ್‌ನಲ್ಲಿ ಮೂರು ಸ್ಟಾರ್ ಆಟಗಾರರನ್ನು 'ಕೆಜಿಎಫ್' ಲುಕ್‌ನಲ್ಲಿ ಕಂಡು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಹಾಗೇ KGF ಟೈಟಲ್‌ನಲ್ಲಿಯೂ ಕ್ರಿಯೇಟಿವಿಟಿ ತೋರಿಸಿದ್ದಾರೆ. ಫ್ಯಾನ್ಸ್ ಪ್ರಕಾರ K ಅಂದರೆ ಕಿಂಗ್ ಕೊಹ್ಲಿ, G ಅಂದರೆ ಗ್ಲೆನ್ ಮ್ಯಾಕ್ಸ್‌ವೆಲ್, F ಅಂದರೆ ಫೆಂಟಾಸ್ಟಿಕ್ ಪಫ್ ಎಂದು ಬರೆದುಕೊಂಡಿದ್ದಾರೆ. ಹಾಗೇ " ಕಿಂಗ್ ಕೊಹ್ಲಿ ಬರುವನು ತೂಫಾನಿನಂತೆ, ಮ್ಯಾಕ್ಸಿ ಅಬ್ಬರಿಸುವನು ಸುಲ್ತಾನನಂತೆ, ಪಫ್ ಹೆಜ್ಜೆ ಇಡುವನು ಎಂಟೆದೆ ಶೂರನಂತೆ." ಎಂದು ಬರೆದುಕೊಂಡಿದ್ದಾರೆ.

RCB Vs CSK ಪಂದ್ಯ
ಇಂದು ಹೈ ವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ನವಿ ಮುಂಬೈನಲ್ಲಿರುವ ಡಾ. ಡಿವೈ ಪಾಟೀಲ್ ಸ್ಪೋರ್ಟ್ ಅಕಾಡೆಮಿಯಲ್ಲಿ ಈ ಪಂದ್ಯ ನಡೆಯಲಿದೆ. ಈ ಸೀಸನ್‌ನಲ್ಲಿ ಆರ್‌ಸಿಬಿ ತನ್ನ ಸಂಪ್ರದಾಯಿಕ ಎದುರಾಳಿ ಸಿಎಸ್‌ಕೆಯನ್ನು ಎದುರಿಸಲಿದೆ. ಹೀಗಾಗಿ ಈ ಪಂದ್ಯ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.

ಹೊಂಬಾಳೆ-ಆರ್‌ಸಿಬಿ ಜಂಟಿ ಒಪ್ಪಂದ
ಈಗಾಗಲೇ ಹೊಂಬಾಳೆ ಫಿಲ್ಮ್ಸ್ ಹಾಗೂ ಆರ್‌ಸಿಬಿ ಜಂಟಿಯಾಗಿ ಕಾರ್ಯ ನಿರ್ವಹಿಸಲಿದೆ. ಸಿನಿಮಾ ಮತ್ತು ಕ್ರೀಡೆಯನ್ನು ಸಮ್ಮಿಲನ ಆಗುತ್ತಿದ್ದು, ಹೊಸ ಸಾಹಸಕ್ಕೆ ಕೈ ಹಾಕಿದೆ. ಈ ಮೂಲಕ ಸಿನಿಮಾ ಹಾಗೂ ಕ್ರಿಕೆಟ್ ತಂಡಗಳು ಒಟ್ಟಿಗೆ ಕಾರ್ಯ ನಿರ್ವಹಿಸಲಿವೆ. ಅದು ಹೇಗೆ ಅನ್ನುವುದನ್ನು ಇನ್ನೂ ಚಿತ್ರತಂಡ ಬಹಿರಂಗ ಪಡಿಸಿಲ್ಲ. ಮೂಲಗಳ ಪ್ರಕಾರ, ಆರ್‌ಸಿಬಿ ಆಟಗಾರರರು, ಏಪ್ರಿಲ್ 14ರಂದು 'ಕೆಜಿಎಫ್ 2' ಸಿನಿಮಾ ವೀಕ್ಷಣೆ ಮಾಡಲಿದ್ದಾರೆ.


Click it and Unblock the Notifications











