KGF 2 Vs Multiplex: ಬಗೆಹರಿದ 'ಕೆಜಿಎಫ್ 2' ಮಲ್ಟಿಪ್ಲೆಕ್ಸ್ ನಡುವಿನ ಸಮಸ್ಯೆ, ಟಿಕೆಟ್ ಬುಕಿಂಗ್ ಆರಂಭ
'ಕೆಜಿಎಫ್ 2' ಸಿನಿಮಾ ಮೊದಲ ಶೋಗೆ ಕೆಲವೇ ಗಂಟೆಗಳು ಬಾಕಿ ಇದೆ. ಆದರೂ ಈ ಸಿನಿಮಾ ಮಲ್ಟಿಪ್ಲೆಕ್ಸ್‌ನಲ್ಲಿ ರಿಲೀಸ್ ಆಗುತ್ತೆ ಅನ್ನುವ ಬಗ್ಗೆ ಅನುಮಾನವಿತ್ತು. 'ಕೆಜಿಎಫ್ 2' ಸಿನಿಮಾದ ನಿರ್ಮಾಪಕರು ಹಾಗೂ ಮಲ್ಟಿಪ್ಲೆಕ್ಸ್ ನಡುವೆ ಗಳಿಕೆ ಹಂಚಿಕೆ ವಿಚಾರವಾಗಿ ಭಿನ್ನಭಿಪ್ರಾಯ ಎದ್ದಿದ್ದರಿಂದ ಬುಕಿಂಗ್ ಓಪನ್ ಆಗಿರಲಿಲ್ಲ.
ಕೇವಲ ಸಿಂಗಲ್ ಸ್ಕ್ರೀನ್‌ನಲ್ಲಿ ಬುಕಿಂಗ್ ಓಪನ್ ಮಾಡಿದ್ದರಿಂದ ಬಹುತೇಕ ಎಲ್ಲಾ ಕಡೆ ಹೌಸ್ ಆಗಿದೆ. ಆದ್ರೀಗ ಇಬ್ಬರ ನಡುವೆ ಕೊನೆಗೂ ಹೊಂದಾಣಿಕೆಯಾಗಿದ್ದು, ಸಮಸ್ಯೆ ಬಗೆಹರಿದಿದೆ. 'ಕೆಜಿಎಫ್ 2' ಸಿನಿಮಾ ಮಲ್ಟಿಪ್ಲೆಕ್ಸ್‌ನಲ್ಲಿ ರಿಲೀಸ್ ಆಗುತ್ತಿದೆ.

ಬುಕ್ ಮೈ ಶೋನಲ್ಲಿ ಮಲ್ಟಿಪ್ಲೆಕ್ಸ್‌ನಲ್ಲಿ ಬಿಡುಗಡೆಯಾಗುತ್ತಿರುವ ಕೆಜಿಎಫ್ 2 ಸಿನಿಮಾದ ಪಟ್ಟಿಯನ್ನು ರಿಲೀಸ್ ಮಾಡಲಾಗಿದೆ. ಐನಾಕ್ಸ್, ಪಿವಿಆರ್ ಸೇರಿಂದ ಸಿನಿಪೊಲೀಸ್‌ನಲ್ಲಿ ಕೆಜಿಎಫ್ 2 ಚಿತ್ರದ ಬುಕಿಂಗ್ ಆರಂಭ ಆಗಿದೆ.
English summary
KGF 2 Producer And Karnataka Multiplex Problem Solved. Know More.


Click it and Unblock the Notifications