Sanjay Dutt: ಅಪ್ಪು ಮನೆಗೆ ಭೇಟಿ ನೀಡಿದ 'ಕೆಜೆಎಫ್ 2' ಚಿತ್ರದ ಅಧೀರ ಸಂಜಯ್ ದತ್
'ಕೆಜಿಎಫ್ 2' ಟ್ರೈಲರ್ ರಿಲೀಸ್ ಆಗುತ್ತಿದೆ. ಈ ಕಾರಣಕ್ಕೆ ಬಾಲಿವುಡ್ ನಟ ಸಂಜಯ್ ದತ್ ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಿಗೆ ಬಂದವರೇ ಸೀದಾ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಮನೆಗೆ ಭೇಟಿ ನೀಡಿದ್ದಾರೆ. ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಭೇಟಿ ನೀಡಿ, ಅಪ್ಪು ಫೋಟೊಗೆ ನಮಿಸಿ, ಕುಟುಂಬವನ್ನು ಭೇಟಿ ಮಾಡಿ ಅವರ ಯೋಗಕ್ಷೇಮವನ್ನು ವಿಚಾರಿಸಿಕೊಂಡಿದ್ದಾರೆ.
ಇದೇ ವೇಳೆ ಸಂಜಯ್ ದತ್ ಅವರನ್ನು ಪುನೀತ್ ರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಕುಟುಂಬ ಸ್ವಾಗತಿಸಿದೆ. ಕೆಲ ಹೊತ್ತು ಸಂಜಯ್ ದತ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಂಜಯ್ ದತ್ ಜೊತೆ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಅವರ ಇಬ್ಬರು ಮಕ್ಕಳು ಯವರಾಜ್‌ಕುಮಾರ್ ಹಾಗೂ ವಿನಯ್ ರಾಜ್‌ಕುಮಾರ್ ಸೇರಿದಂತೆ ರಾಘಣ್ಣನ ಪತ್ನಿ ಮಂಗಳಾ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.
ಸಂಜಯ್ ದತ್ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಇಷ್ಟು ವರ್ಷಗಳ ಬಳಿಕ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2'ನಲ್ಲಿ ನಟಿಸಿದ್ದಾರೆ. ಅಧೀರನಾಗಿ ಕಾಣಿಸಿಕೊಳ್ಳಲಿದ್ದು ತೆರೆಮೇಲೆ ರಾಕಿಂಗ್ ಸ್ಟಾರ್ ಯಶ್ ಜೊತೆ ಮುಖಾಮುಖಿಯಾಗಲಿದ್ದಾರೆ.

ಅಪ್ಪು ಮನೆಗೆ ಸಂಜಯ್ ದತ್ ಭೇಟಿ
ಸಂಜಯ್ ದತ್ ಅಪ್ಪು ಮನೆಗೆ ಭೇಟಿ ನೀಡುತ್ತಿದ್ದಂತೆ ಫೋಟೊಗಳು ವೈರಲ್ ಆಗುತ್ತಿದೆ. ದು:ಖದಲ್ಲಿರುವ ಪುನೀತ್ ರಾಜ್‌ಕುಮಾರ್ ಕುಟುಂಬಕ್ಕೆ ಸಂಜಯ್ ದತ್ ಸಮಾಧಾನದ ಮಾತುಗಳನ್ನು ಆಡಿದ್ದಾರೆ. ಅಪ್ಪು ದಿಢೀರ್ ನಿಧನದ ಬಗ್ಗೆ ಸಂಜಯ್ ದತ್ ಬೇಸರ ವ್ಯಕ್ತಪಡಿಸಿದ್ದು, ಅಪ್ಪು ಪತ್ನಿ ಹಾಗೂ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ ಎನ್ನಲಾಗಿದೆ.
Recommended Video


ಹೊಂಬಾಳೆ ಜೊತೆ ಉತ್ತಮ ಬಾಂಧವ್ಯ
ಹೊಂಬಾಳೆ ಫಿಲಂಸ್ ಜೊತೆ ಪುನೀತ್ ರಾಜ್‌ಕುಮಾರ್ ಉತ್ತಮ ಬಾಂಧವ್ಯ ಹೊಂದಿದ್ದರು. ಅಪ್ಪುಗಾಗಿಯೇ ಹೊಂಬಾಳೆ ಫಿಲಂಸ್ ಮೂರು ಸಿನಿಮಾಗಳನ್ನು ನಿರ್ಮಿಸಿದ್ದರು. ನಾಲ್ಕುನೇ ಸಿನಿಮಾ ಕೂಡ ಅನೌನ್ಸ್ ಆಗಿತ್ತು. ಪುನೀತ್‌ಗಾಗಿ ಪ್ರತಿ ವರ್ಷ ಒಂದು ಸಿನಿಮಾ ಮಾಡಲು ಮುಂದಾಗಿತ್ತು. ಈ ಕಾರಣಕ್ಕಾಗಿಯೇ 'ಕೆಜಿಎಫ್ 2' ಟ್ರೈಲರ್ ಲಾಂಚ್‌ಗೂ ಮುನ್ನ ಸಂಜಯ್ ದತ್‌ರನ್ನು ಅಪ್ಪು ಮನೆಗೆ ಕರೆದುಕೊಂಡು ಬಂದಿದೆ.

ರಾಘಣ್ಣ ಜೊತೆ ಮಾತುಕತೆ
'ಕೆಜಿಎಫ್ 2' ಸಂಜಯ್ ದತ್ ಅಭಿನಯದ ಮೊದಲ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ. ಈ ಕಾರಣಕ್ಕೆ ಪುನೀತ್ ರಾಜ್ ಮನೆಗೆ ಸಂಜಯ್ ಭೇಟಿ ನೀಡಿ, ಅವರ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ. ಈ ವೇಳೆ ರಾಘಣ್ಣನೊಂದಿಗೂ ಕೆಲ ಕಾಲ ಮಾತಾಡಿದ್ದಾರೆ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ರಾಘಣ್ಣ, ಯುವರಾಜ್‌ಕುಮಾರ್, ವಿನೋದ್ ರಾಜ್‌ಕುಮಾರ್ ಉಪಸ್ಥಿತಿ ಇತ್ತು.

'ಕೆಜಿಎಫ್ 2' ಇವೆಂಟ್‌ಗೆ ಶಿವಣ್ಣ ಗೆಸ್ಟ್
'ಕೆಜಿಎಫ್ 2' ಚಿತ್ರದ ಟ್ರೈಲರ್ ಲಾಂಚ್‌ಗೆ ಶಿವರಾಜ್‌ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಕನ್ನಡದ ಟ್ರೈಲರ್ ಅನ್ನು ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಬಿಡುಗಡೆ ಮಾಡಲಿದ್ದಾರೆ. ತಮಿಳಿನಲ್ಲಿ ಸೂರ್ಯ, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್, ಹಿಂದಿಯಲ್ಲಿ ಫರ್ಹಾನ್ ಅಖ್ತರ್ ಬಿಡುಗಡೆ ಮಾಡಲಿದ್ದಾರೆ.


Click it and Unblock the Notifications











