Yash On Dr. Rajkumar: ವರನಟನನ್ನು ನೆನೆದ ಯಶ್, ಇದು 'ಅಣ್ಣಾವ್ರ ನಾಡು' ಎಂದಿದ್ದೇಕೆ?

'ಕೆಜಿಎಫ್ 2' ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಯಶ್ ಹಾಗೂ ಅವರ ತಂಡ ಬಿಡುವಿಲ್ಲದೆ ಸಿನಿಮಾ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಮುಂಬೈ, ತಮಿಳುನಾಡು, ಕೇರಳ ಈಗ ಕರ್ನಾಟಕದಲ್ಲಿ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಕೆಲವೆಡೆ 'ಕೆಜಿಎಫ್ 2' ಸಿನಿಮಾದ ಬುಕಿಂಗ್ ಕೂಡ ಆರಂಭ ಆಗಿದೆ. ಬುಕಿಂಗ್ ಓಪನ್ ಆದ ಕೆಲವೇ ಕ್ಷಣಗಳಲ್ಲಿ ಲಕ್ಷ ಲಕ್ಷ ಟಿಕೆಟ್‌ಗಳು ಬುಕ್ ಆಗಿವೆ.

Recommended Video

KGF 2 V/S BEAST | ದೊಡ್ಡ ಸಿನಿಮಾ ಪಟ್ಟಿಯಲ್ಲಿ ಎಲ್ಲರನ್ನು ಹಿಂದಿಕ್ಕಿದ KGF 2 | Yash | Vijay

ಯಶ್ ಹೋದಲ್ಲೆಲ್ಲಾ 'ಕೆಜಿಎಫ್ 2' ಸಿನಿಮಾಗೆ ಮಸ್ತ್ ರೆಸ್ಪಾನ್ಸ್ ಸಿಗುತ್ತಿದೆ. ಸಿನಿಮಾಗೆ ಬಿಡುಗಡೆ ಮುನ್ನವೇ ಗೆದ್ದಿರುವ ಫೀಲಿಂಗ್ ಇದೆ. ಇತ್ತ ಸಿನಿಮಾ ತಂಡ 'ಕೆಜಿಎಫ್ 2' ಬಗ್ಗೆ ಮಾತಾಡುತ್ತಲೇ ಇಲ್ಲ. ಬದಲಾಗಿ ಸಿನಿಮಾ ಇಷ್ಟಪಟ್ಟ ಅಭಿಮಾನಿಗಳಿಗೆ, ಜನರಿಗೆ ಅಭಿನಂದನೆಗಳನ್ನು ಅರ್ಪಿಸುತ್ತಿದ್ದಾರೆ.

ಅಣ್ಣಾವ್ರ ನೆನೆದ ಯಶ್

ಅಣ್ಣಾವ್ರ ನೆನೆದ ಯಶ್

ಸದ್ಯ ಕರ್ನಾಟಕದಲ್ಲಿ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿರುವ ರಾಕಿಂಗ್ ಸ್ಟಾರ್ ಯಶ್, 'ಕೆಜಿಎಫ್ 2' ಜರ್ನಿ ಬಗ್ಗೆ ಮನಸ್ಸು ಬಿಚ್ಚಿ ಮಾತಾಡುತ್ತಿದ್ದಾರೆ. 8 ವರ್ಷಗಳ ಸುಧೀರ್ಘ ಪಯಣದ ಬಗ್ಗೆ ಗುಟ್ಟನ್ನು ಒಂದೊಂದಾಗೇ ರಿವೀಲ್ ಮಾಡುತ್ತಿದ್ದಾರೆ. ಇದೇ ವೇಳೆ ಯಶ್ 'ಅಣ್ಣಾವ್ರ ನಾಡು' ಇದು ಎಂದು ಹೇಳಿಕೆ ನೀಡಿ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದ್ದಾರೆ. ಡಾ.ರಾಜ್‌ಕುಮಾರ್ ಅವರ ಅಭಿಮಾನಿಗಳ ಮನ ಸೆಳೆದಿದ್ದಾರೆ.

'ಅಣ್ಣಾವ್ರ ನಾಡು' ಎಂದಿದ್ದೇಕೆ ಯಶ್?

'ಅಣ್ಣಾವ್ರ ನಾಡು' ಎಂದಿದ್ದೇಕೆ ಯಶ್?

ಹೌದು.. ಯಶ್ ಇದು 'ಅಣ್ಣಾವ್ರ ನಾಡು' ಅನ್ನೋ ಪದ ಬಳಸಿದ್ದಾರೆ. ಅದ್ಯಾಕೆ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕನ್ನಡದ ಪ್ರತಿಯೊಬ್ಬ ಸಿನಿಮಾ ಲವರ್ ಕೂಡ ಈ ಮಾತನ್ನು ಒಪ್ಪಿಕೊಳ್ಳುತ್ತಾರೆ. ಆದರೆ, ಯಶ್ ಇದು 'ಅಣ್ಣಾವ್ರ ನಾಡು' ಎಂದು ಹೇಳುವುದಕ್ಕೆ ಕಾರಣವಿದೆ. ಕನ್ನಡಿಗರು ತಮ್ಮ ಸಂಸ್ಕೃತಿಯನ್ನು ಬಿಟ್ಟು ಕೊಡುವುದಿಲ್ಲ. ಕನ್ನಡ ಚಿತ್ರರಂಗ, ಸಿನಿಮಾ ಹಾಗೂ ತಾರೆಯರ ವಿಷಯಕ್ಕೆ ಬಂದರೆ ವಿಶೇಷವಾದ ಗೌರವವನ್ನೇ ಇಟ್ಟುಕೊಂಡಿದ್ದಾರೆ. ಅದಕ್ಕೆ ಕಾರಣ ಇದು ಅಣ್ಣಾವ್ರು. ಅವರು ಹಾಕಿಕೊಟ್ಟ ದಾರಿಯಲ್ಲೇ ನಡೆಯುತ್ತಿದ್ದೇವೆ." ಎಂದು ಯಶ್ ಹೇಳಿದ್ದಾರೆ.

ಅಭಿಮಾನಿ ದೇವರು ಎಂದಿದ್ದೇಕೆ ಅನ್ನೋದು ಈಗ ಅರಿವಾಗುತ್ತಿದೆ.

ಅಭಿಮಾನಿ ದೇವರು ಎಂದಿದ್ದೇಕೆ ಅನ್ನೋದು ಈಗ ಅರಿವಾಗುತ್ತಿದೆ.

ಅಣ್ಣಾವ್ರು ತಮ್ಮ ಅಭಿಮಾನಿಗಳನ್ನು ದೇವರು ಎಂದು ಯಾಕೆ ಕಡೆಯುತ್ತಿದ್ದರು ಎಂಬುದು ಈಗ ಅರಿವಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ನಾನು ಎಲ್ಲೂ ಕಾಣಿಸಿಕೊಂಡಿಲ್ಲ. ಒಂದೇ ಒಂದು ಸಂದರ್ಶನ ನೀಡಿಲ್ಲ. 'ಕೆಜಿಎಫ್ ಚಾಪ್ಟರ್ 1' ಬಂದು ಮೂರು-ನಾಲ್ಕು ವರ್ಷಗಳೇ ಆಗಿವೆ. ಹೀಗಿದ್ದರೂ, ಅಭಿಮಾನಿಗಳೇ ಕ್ರೇಜ್ ಹುಟ್ಟಾಕಿದ್ದಾರೆ. ಸಿನಿಮಾ ನೋಡಲು ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದಾರೆ. ಅದಕ್ಕೆ ಅಣ್ಣಾವ್ರು ಅಭಿಮಾನಿಗಳು ದೇವರು ಅಂತ ಯಾಕೆ ಕರೆಯುತ್ತಿದ್ದರು ಎಂಬುದು ಈಗೀಗ ಅರಿವಾಗುತ್ತಿದೆ." ಎಂದು ಯಶ್ ಹೇಳಿದ್ದಾರೆ.

ಯಶ್‌ಗೆ ಸೂಪರ್ ರೆಸ್ಪಾನ್ಸ್

ಯಶ್‌ಗೆ ಸೂಪರ್ ರೆಸ್ಪಾನ್ಸ್

ಯಶ್ ಮುಂಬೈ, ದೆಹಲಿ, ತಮಿಳುನಾಡು, ಕೇರಳ ಅಂತೆಲ್ಲಾ ಸುತ್ತಾಡಿ ಬಂದಿದ್ದಾರೆ. ಎಲ್ಲಾ ಅವರಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 'ಕೆಜಿಎಫ್ 2' ಕ್ರೇಜ್ ನೋಡಿ ಅವರೇ ದಂಗಾಗಿದ್ದಾರೆ. ವಿಶ್ವದಾದ್ಯಂತ ಸಿನಿಮಾಗಿರುವ ಕ್ರೇಜ್ ನೋಡಿ, ಹೊಸ ದಾಖಲೆ ಸೃಷ್ಟಿಸುವುದಕ್ಕೆ ಸಜ್ಜಾಗಿದ್ದಾರೆ. ಮೂಲಗಳ ಪ್ರಕಾರ, ಮೊದಲ ದಿನವೇ 'ಕೆಜಿಎಫ್ 2' ದಾಖಲೆ ಕಲೆಕ್ಷನ್ ಮಾಡಲಿದೆ. ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ.

More from Filmibeat

English summary
KGF 2 Star Yash Mentioned Annavara Naadu in interaction with Media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X