ರಾಕಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ 'KGF 2' ಟ್ರೈಲರ್ ರಿಲೀಸ್ ಆಗುತ್ತಾ ಇಲ್ವಾ? 13 ದಿನ ಬಾಕಿ ಅಷ್ಟೇ ಬಾಕಿ

'ಕೆಜಿಎಫ್ 2' ಪ್ಯಾನ್ ಇಂಡಿಯಾ ಸಿನಿಮಾಗಾಗಿ ಇಡೀ ವಿಶ್ವವೇ ಕಾದು ಕೂತಿದೆ. ವಿಶ್ವದ ಮೂಲೆ ಮೂಲೆಯಲ್ಲಿರುವ ಯಶ್ ಅಭಿಮಾನಿಗಳು ಇದೊಂದು ಸಿನಿಮಾಗಾಗಿ ಕಾದು ಕೂತಿದ್ದಾರೆ. 'ಕೆಜಿಎಫ್ 2' ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಈ ಬಹು ನಿರೀಕ್ಷಿತ ಸಿನಿಮಾ ನೋಡಲು ಏಪ್ರಿಲ್ 14ರವರೆಗೂ ಕಾಯಲೇಬೇಕಿದೆ. ಅಲ್ಲಿವರೆಗೂ ರಾಕಿ ಭಾಯ್ ಅಭಿಮಾನಿಗಳಿಗೆ ಬೇರೆ ವಿಧಿಯಿಲ್ಲ.

Recommended Video

ಯಶ್ ಹುಟ್ಟುಹಬ್ಬಕ್ಕೆ KGF 2 ಟ್ರೈಲರ್..? ಯಶ್ ಏನಂದ್ರು

'ಕೆಜಿಎಫ್ 2' ಬಿಡುಗಡೆವರೆಗೂ ರಾಕಿಂಗ್‌ಸ್ಟಾರ್ ಅಭಿಮಾನಿಗಳು ಕಾಯುವುದಕ್ಕೆ ಸಿದ್ಧವಿದ್ದಾರೆ. ಆದರೆ, ಈ ಗ್ಯಾಪ್‌ನಲ್ಲಿ ಮತ್ತೊಂದು ಟೀಸರ್ ಬಿಡುಗಡೆ ಆಗಲಿ. ಇಲ್ಲಾ ಟ್ರೈಲರ್ ಆದರೂ ರಿಲೀಸ್ ಮಾಡಲಿ ಅನ್ನುವುದು ಯಶ್ ಅಭಿಮಾನಿಗಳ ಆಶಯ. ಇನ್ನು ಕೆಲವೇ ದಿನಗಳಲ್ಲಿ ರಾಕಿಂಗ್ ಸ್ಟಾರ್ ಹುಟ್ಟಹಬ್ಬ ಬೇರೆ ಇದೆ. ಈ ಸಂದರ್ಭದಲ್ಲಾದರೂ, ಟ್ರೈಲರ್ ಇಲ್ಲಾ ಟೀಸರ್ ರಿಲೀಸ್ ಮಾಡಿ ಅನ್ನುವುದು ಅಭಿಮಾನಿಗಳ ಒತ್ತಾಸೆ. ಆದರೆ, ರಾಕಿ ಭಾಯ್ ಒಂದು ನಿರ್ಧಾರಕ್ಕೆ ಬಂದಿದ್ದಾಗಿದೆ. ಇನ್ನು 13 ದಿನಗಳಲ್ಲಿ ಸರ್ಪ್ರೈಸ್ ಸಿಗುತ್ತಾ ಅಂತ ಕಾಯಬೇಕಿದೆ ಅಷ್ಟೇ.

ಹುಟ್ಟುಹಬ್ಬಕ್ಕೆ 'ಕೆಜಿಎಫ್ 2' ಟ್ರೈಲರ್ ಇಲ್ಲ

ಹುಟ್ಟುಹಬ್ಬಕ್ಕೆ 'ಕೆಜಿಎಫ್ 2' ಟ್ರೈಲರ್ ಇಲ್ಲ

ಜನವರಿ 07 ಬಂದರೆ, 'ಕೆಜಿಎಫ್ 2' ಯುನಿವರ್ಸಲ್ ಟೀಸರ್ ರಿಲೀಸ್ ಬಿಡುಗಡೆಯಾಗಿ ಒಂದು ವರ್ಷ ಆಗುತ್ತೆ. ರಿಲೀಸ್ ಆದ ಒಂದೇ ಒಂದು ಟೀಸರ್ ವಿಶ್ವದೆಲ್ಲೆಡೆ ಸದ್ದು ಮಾಡಿದ್ದು ಗೊತ್ತೇ ಇದೆ. ಈ ಟೀಸರ್ ಬರೆದ ಒಂದೊಂದು ದಾಖಲೆಗಳನ್ನೂ ನೋಡಿ ಯಶ್ ಅಭಿಮಾನಿಗಳು ಸಿನಿಮಾ ಬಿಡುಗಡೆಯಾದಷ್ಟೇ ಖುಷಿಯಿಂದ ಸಂಭ್ರಮಿಸಿದ್ದರು. ಈಗ ಈ ಟೀಸರ್ ರಿಲೀಸ್ ಆಗಿ ಹೆಚ್ಚು ಕಡಿಮೆ ಒಂದು ವರ್ಷ ಆಗುತ್ತಿದೆ. ಹೀಗಾಗಿ ಮತ್ತೊಂದು ಟೀಸರ್, ಇಲ್ಲವೇ ಟ್ರೈಲರ್ ರಿಲೀಸ್ ಮಾಡಿ ಅನ್ನುವುದು ಯಶ್ ಅಭಿಮಾನಿಗಳ ಆಶಯ. ಆದರೆ, ಯಶ್ ಹುಟ್ಟುಹಬ್ಬಕ್ಕೆ ಟ್ರೈಲರ್ ರಿಲೀಸ್ ಮಾಡಲ್ಲ ಅಂತ ಈಗಾಗಲೇ ಹೇಳಿದ್ದಾರೆ.

'ಕೆಜಿಎಫ್ 2' ಟ್ರೈಲರ್ ರಿಲೀಸ್ ಯಾವಾಗ?

'ಕೆಜಿಎಫ್ 2' ಟ್ರೈಲರ್ ರಿಲೀಸ್ ಯಾವಾಗ?

ಕೆಜಿಎಫ್ 2 ಟ್ರೈಲರ್ ಹುಟ್ಟುಹಬ್ಬಕ್ಕೆ ರಿಲೀಸ್ ಆಗುವುದಿಲ್ಲ. ಸಿನಿಮಾ ಬಿಡುಗಡೆಗೆ ಇನ್ನೂ ಸಾಕಷ್ಟು ಸಮಯವಿದೆ. ಏಪ್ರಿಲ್ 14 ಇನ್ನೂ ದೂರವಿರುವುದರಿಂದ ಈಗಲೇ ಟ್ರೈಲರ್ ರಿಲೀಸ್ ಮಾಡುವುದು ಒಳ್ಳೆಯದಲ್ಲ. ಹಾಗಾಗಿ ಟ್ರೈಲರ್ ರಿಲೀಸ್ ತಡವಾಗಿ ಆಗುತ್ತೆ. ಈ ಬಾರಿ ಹುಟ್ಟುಹಬ್ಬಕ್ಕೆ ಟ್ರೈಲರ್ ಅನ್ನು ರಿಲೀಸ್ ಮಾಡಬೇಡಿ ಅಂತ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ. ಹೀಗಾಗಿ ಟ್ರೈಲರ್ ಇರಲಿ, ಟೀಸರ್ ಕೂಡ ರಿಲೀಸ್ ಆಗುವುದಿಲ್ಲ ಅನ್ನುವುದು ಕನ್ಫರ್ಮ್.

ಟ್ರೈಲರ್ ಇಲ್ಲ.. ಬರ್ತ್‌ಡೆನೂ ಇಲ್ಲ

ಟ್ರೈಲರ್ ಇಲ್ಲ.. ಬರ್ತ್‌ಡೆನೂ ಇಲ್ಲ

ಈ ಬಾರಿ ಕೊರೊನಾ ಸೋಂಕು ಮತ್ತೆ ಹೆಚ್ಚಾಗುತ್ತಿದೆ. ಒಮಿಕ್ರಾನ್ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲೇ ಕರ್ನಾಟಕ ಸರ್ಕಾರ ಹೊಸ ನಿಯಮಾವಳಿಯನ್ನು ಬಿಡುಗಡೆ ಮಾಡಿದೆ. ಹೀಗಾಗಿ ಈ ಬಾರಿ ಅಭಿಮಾನಿಗಳು ಬರ್ತ್‌ಡೇ ಮಾಡುವುದು ಸರಿಯಲ್ಲ ಎಂಬುದು ರಾಕಿಂಗ್ ಸ್ಟಾರ್ ಯಶ್ ಅಭಿಪ್ರಾಯ. ಹೀಗಾಗಿ ಕಳೆದ ವರ್ಷದಂತೆ ಯಶ್ ಹುಟ್ಟುಹಬ್ಬದ ಸಂಭ್ರಮವಿರುವುದಿಲ್ಲ. ಎಲ್ಲರೂ ಎಲ್ಲಿದ್ದಾರೋ ಅಲ್ಲಿಂದಲೇ ಶುಭ ಕೋರಿ ಅಂತ ಯಶ್ ಮನವಿ ಮಾಡಿಕೊಂಡಿದ್ದಾರೆ.

ಯಶ್ ಸಿನಿಮಾ ರಿಲೀಸ್ ಆಗದೆ 3 ವರ್ಷ

ಯಶ್ ಸಿನಿಮಾ ರಿಲೀಸ್ ಆಗದೆ 3 ವರ್ಷ

'ಕೆಜಿಎಫ್ ಚಾಪ್ಟರ್ 1' ಬಿಡುಗಡೆಯಾದ ಯಶ್ ಕೊನೆಯ ಸಿನಿಮಾ. 2018ರ ಡಿಸೆಂಬರ್‌ನಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಅಲ್ಲಿಂದ ರಾಕಿಂಗ್‌ಸ್ಟಾರ್ ಯಶ್ ಅಭಿನಯದ ಒಂದೇ ಒಂದು ಸಿನಿಮಾ ಕೂಡ ಬಿಡುಗಡೆಯಾಗಿಲ್ಲ. ಹೀಗಾಗಿ ಯಶ್ ಅಭಿಮಾನಿಗಳು 'ಕೆಜಿಎಫ್ 2'ಗಾಗಿ ಕಾಯುತ್ತಲೇ ಇದ್ದಾರೆ. ಜನವರಿ ಕೊನೆಯಲ್ಲಿ ಇಲ್ಲವೇ ಫೆಬ್ರವರಿಯಲ್ಲಿ ಕೊರೊನಾ ಮೂರನೇ ಅಲೆ ಬರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಹಾಗೇನಾದರೂ ಕೊರೊನಾ ಮತ್ತೆ ಹೆಚ್ಚಾದರೆ, 'ಕೆಜಿಎಫ್ 2' ಮತ್ತೆ ಪೋಸ್ಟ್‌ಪೋನ್ ಆಗಿಬಿಟ್ಟರೆ ಎನ್ನುವ ಆತಂಕದಲ್ಲಿದ್ದಾರೆ.

More from Filmibeat

English summary
KGF 2 trailer will not release on Rocking Star Yash Birthday. Hombale films also share the same details that kgf2 trailer will be releasing bit late.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X