KGF 2 Trailer: ವೈಲೆನ್ಸ್.. ವೈಲೆನ್ಸ್.. ವೈಲೆನ್ಸ್.. ಅಧೀರಾ, ರಾಕಿ ಭಾಯ್ ಫುಲ್ ವೈಲೆನ್ಸ್!

ಇಷ್ಟು ಕಾದು ಕೂತಿದ್ದ ಕ್ಷಣ ಕೊನೆಗೂ ಬಂದೇ ಬಿಟ್ಟಿದೆ. ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕೆಜಿಎಫ್ 2' ಟ್ರೈಲರ್ ಕೊನೆಗೂ ಬಿಡುಗಡೆಯಾಗಿದೆ. 'ಕೆಜಿಎಫ್ 2' ಟ್ರೈಲರ್‌ನಲ್ಲಿ ಏನಿದೆ? ಕೆಜಿಎಫ್‌ 2 ಟ್ರೈಲರ್‌ನಲ್ಲಿ ಯಾರಿದ್ದಾರೆ? ಸಿನಿಮಾ ಎಲ್ಲಿಂದ ಶುರುವಾಗುತ್ತೆ? ಅನ್ನೋ ಪ್ರಶ್ನೆಗಳನ್ನು ತಲೆಯಲ್ಲಿ ಇಟ್ಟುಕೊಂಡು ಕಾದು ಕೂತಿದ್ದ ಅಭಿಮಾನಿಗಳಿಗೆ ಕೊನೆಗೂ 'ಕೆಜಿಎಫ್ 2' ಟ್ರೈಲರ್ ಸಿಕ್ಕಿದೆ. ಯಶ್ ವೈಲೆನ್ಸ್ ವೈಲೆನ್ಸ್ ವೈಲೆನ್ಸ್ ಎನ್ನುತ್ತಿದ್ದಂತೆ ಪ್ಯಾನ್ಸ್ ಥ್ರಿಲ್ ಆಗಿದ್ದಾರೆ.

'ಕೆಜಿಎಫ್ ಚಾಪ್ಟರ್ 1' ಎಲ್ಲಿ ಮುಗಿದಿತ್ತೋ ಅಲ್ಲಿಂದಲೇ ಆರಂಭ. ಕೆಜಿಎಫ್ ಅಧಿಪತಿ, ಮಹಾಕ್ರೂರಿ ಗರುಡನ ರುಂಡ ಕತ್ತರಿಸಿದ ಬಳಿಕ ರಾಕಿ ನರಾಚಿ ಕೋಟೆಯ ಅಧಿಪತಿಯಾಗಿದ್ದಾರೆ. ನರಾಚಿ ಕೋಟೆಯನ್ನು ಕಬಳಿಸಿದ ಬಳಿಕ ರಾಕಿ ಭಾಯ್ ಏನಾದಾ? ಡೇಂಜರಸ್ ಗ್ಯಾಂಗ್​ಸ್ಟರ್ ಕೂಡ ಹೌದು.​ ಜೊತೆಗೆ ಬ್ಯುಸಿನೆಸ್ ಮ್ಯಾನ್ ಕೂಡ ಹೌದು.

'ಕೆಜಿಎಫ್ 2' ಟ್ರೈಲರ್ ಹೈಲೈಟ್ ಏನು?

'ಕೆಜಿಎಫ್ 2' ಟ್ರೈಲರ್ ಸಿಕ್ಕಾಪಟ್ಟೆ ಪವರ್‌ಫುಲ್ ಆಗಿದೆ. ರಾಕಿಯಾಗಿ ಬಾಲಿವುಡ್‌ಗೆ ಎಂಟ್ರಿಕೊಟ್ಟ ಸಂಜಯ್ ದತ್ ಈ ಸಿನಿಮಾದಲ್ಲಿ ಅಧೀರನಾಗಿ ರಾಕಿಯನ್ನು ಎದುರಿಸಲಿದ್ದಾರೆ. ಇಲ್ಲಿವರೆಗೂ ಅಧೀರರನ್ನು ರಗಡ್ ಲುಕ್ ಅನ್ನು ಗೌಪ್ಯವಾಗಿಯೇ ಇಟ್ಟಿದ್ದ ಚಿತ್ರತಂಡ, ಈಗ ಅಧೀರನನ್ನು ಟ್ರೈಲರ್‌ನಲ್ಲಿ ಇಂಟ್ರುಡ್ಯೂಸ್ ಮಾಡಿದ್ದಾರೆ. ಅಧೀರ ಎಷ್ಟು ಭಯಾನಕ ಅನ್ನುವುದನ್ನು ಈ ಟ್ರೈಲರ್‌ನಲ್ಲಿ ಒಂದು ಝಲಕ್ ತೋರಿಸಿದ್ದಾರೆ.

ರಾಕಿ ಭಾಯ್ ಎಂಟ್ರಿ ಕೂಡ ಸಖತ್ತಾಗಿದೆ. ವೈಲೆನ್ಸ್.. ವೈಲೆನ್ಸ್.. ವೈಲೆನ್ಸ್.. ಅಂತ ಎಂಟ್ರಿ ಕೊಡುವ ಯಶ್ ಖದರ್ ಇಷ್ಟ ಆಗುತ್ತೆ. ಈ ಬಾರಿ ಯಶ್ ಕೇವಲ ಗ್ಯಾಂಗ್‌ಸ್ಟರ್ ಅಷ್ಟೇ ಅಲ್ಲ. ಬದಲಾಗಿ, ಉದ್ಯಮಿಯಾಗಿಯೂ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಒಂದ್ಕಡೆ ವೈಲೆನ್ಸ್. ಇನ್ನೊಂದು ಕಡೆ ಸ್ಟೈಲೆಶ್ ಎಂಟ್ರಿ. ಎರಡೆರಡು ಲುಕ್‌ಗಳಲ್ಲಿ ಯಶ್ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಟ್ರೈಲರ್‌ಗಿಂತ ಸಿನಿಮಾ ಇನ್ನೂ ಖದರ್ ಆಗಿರುತ್ತೆ ಅನ್ನೋದ್ರಲ್ಲಿ ಡೌಟೇ ಇಲ್ಲ.

KGF 2 Trailer: Yash, Sanjay Dutt starrer KGF Chapter 2 Trailer Released

Recommended Video

Yash | ಸಂಜಯ್ ದತ್ ಕರೆಯೋದು ನೋಡಿ ಯಶ್ ಗೆ ಆಶ್ಚರ್ಯ ಆಗಿತ್ತು | KGF 2 | Sanjay Dutt | Raveena Tandon

'ರಕ್ತದಿಂದ ಬರೆದ ಕಥೆ ಇದು'

ಪ್ರಕಾಶ್ ರಾಜ್ ಹಾಗೂ ಮಾಳಿವಿಕಾ ನಡುವಿನ ಡೈಲಾಗ್ ಈ ಟ್ರೈಲರ್‌ನ ಹೈಲೈಟ್. 'ರಕ್ತದಿಂದ ಬರೆದ ಕಥೆ ಇದು, ಶಾಹಿಯಿಂದ ಮುಂದುವರಿಸೋಕೆ ಆಗಲ್ಲ. ಮುಂದುವರಿಸಬೇಕು ಎಂದರೆ ಮತ್ತೆ ರಕ್ತವನ್ನೇ ಕೇಳತ್ತೆ' ಎನ್ನುವ ಪ್ರಕಾಶ್ ರಾಜ್ ಡೈಲಾಗ್ ಕಿಕ್ ಕೊಟ್ಟಿದೆ. ಸಿನಿಮಾ ಡೈಲಾಗ್ ಮಾಸ್ ಅನಿಸದೇ ಹೋದರೂ ಯಶ್ ಸ್ಟೈಲ್‌ನಿಂದ ಮಾಸ್ ರೂಪ ಪಡೆದುಕೊಂಡಿದೆ.

ರಾಕಿ ಭಾಯ್ ಲವರ್ ಆಗಿ ಶ್ರೀನಿಧಿ ಶೆಟ್ಟಿ. ಪ್ರಧಾನಿಯಾಗಿ ರವೀನಾ ಟಂಡನ್, ತೆಲುಗು ನಟ ರಾವ್ ರಮೇಶ್ ಸೇರಿದಂತೆ ಹಲವು ದಿಗ್ಗಜರೇ ಈ ಸಿನಿಮಾದಲ್ಲಿ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ. ರವಿ ಬಸ್ರೂರ್ ಹಿನ್ನೆಲೆ ಸಂಗೀತ. ಭುವನ್ ಗೌಡ ಕ್ಯಾಮರಾ ಕೈ ಚಳಕ ಸಿನಿಮಾದ ಹೈಲೈಟ್.

More from Filmibeat

English summary
Yash Starrer Pan India movie KGF 2 trailer released. Know me.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X