KGF 3: 'ಕೆಜಿಎಫ್ 2' ರಿಲೀಸ್ ಆಯ್ತು.. 'ಕೆಜಿಎಫ್ 3'ಗೆ ಸಿಕ್ಕ ಸುಳಿವು ಏನು?
ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕೆಜಿಎಫ್ 2' ಸಿನಿಮಾ ರಿಲೀಸ್ ಆಗಿದೆ. ನಾಲ್ಕು ವರ್ಷ ಕಾದೂ ಜನರು ಸಿನಿಮಾ ನೋಡುತ್ತಿರುವುದರಿಂದ ರಾಕಿ ಭಾಯ್ ಪ್ರಪಂಚ ನೋಡಲು ದಂಗಾಗಿದ್ದಾರೆ. ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗಿರೋ 'ಕೆಜಿಎಫ್ ಚಾಪ್ಟರ್ 2' ಸಿನಿಮಾವನ್ನು ಸಿನಿಪ್ರಿಯರು ಕಿಕ್ಕಿರಿದು ನೋಡಿದ್ದಾರೆ.
'ಕೆಜಿಎಫ್ 2' ಸಿನಿಮಾ ನೋಡುವುದಕ್ಕೂ ಮುನ್ನ ಸಿನಿಪ್ರಿಯರನ್ನು ಹಲವು ಪ್ರಶ್ನೆಗಳು ಕಾಡುತ್ತಿದ್ದವು. ಅದರಲ್ಲೊಂದು 'ಕೆಜಿಎಫ್ 2' ಬಳಿಕ ಮುಂದೇನು? 'ಕೆಜಿಎಫ್ ಚಾಪ್ಟರ್ 3' ಬರುತ್ತಾ? ಅನ್ನೋದನ್ನು ಕನ್ಫರ್ಮ್ ಮಾಡಿಕೊಳ್ಳುವ ದೃಷ್ಟಿಯಿಂದಲೇ ಚಿತ್ರಮಂದಿರಕ್ಕೆ ತೆರಳಿದಿದ್ದರು. ಆ ಕುತೂಹಲಕ್ಕೀಗ 'ಕೆಜಿಎಫ್ ಚಾಪ್ಟರ್ 2' ಚಿತ್ರತಂಡ ಒಂದು ಸುಳಿವು ನೀಡಿದೆ. ಅದರ ಬಗ್ಗೆನೇ ಈಗ ಟ್ವಿಟರ್‌ನಲ್ಲಿ ಚರ್ಚೆ ಮಾಡಲಾಗುತ್ತಿದೆ.

'ಕೆಜಿಎಫ್ 2' ಕ್ಲೈಮ್ಯಾಕ್ಸ್ ರಿವೀಲ್ ಆಗಿದ್ದೇನು?
'ಕೆಜಿಎಫ್ ಚಾಪ್ಟರ್ 2' ಸಿನಿಮಾ ನೋಡಿದವರಿಗೆ ಕ್ಲೈಮ್ಯಾಕ್ಸ್ ಹೇಗಿರುತ್ತೆ ಅನ್ನುವ ಕೌತುಕ ಹೆಚ್ಚಾಗಿತ್ತು. ಇಡೀ ಸಿನಿಮಾ ಎಂಜಾಯ್ ಮಾಡಿದವರಿಗೆ ಸಿನಿಮಾದ ಕ್ಲೈಮ್ಯಾಕ್ಸ್ ಶಾಕ್ ಕೊಟ್ಟಿತ್ತು. ಇದೇ ಹ್ಯಾಂಗೋವರ್‌ನಲ್ಲಿ ಎದ್ದು ಬರುವಾಗಲೇ ಚಿತ್ರದ ಕೊನೆಯಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಮತ್ತೊಂದು ಶಾಕ್ ಕೊಟ್ಟಿದ್ದಾರೆ. ಇದು 'ಕೆಜಿಎಫ್ 3' ಸಿನಿಮಾಗೆ ಹಾಕಿರುವ ಪೀಠಿಕೆ ಅಂತಲೇ ಭಾವಿಸಲಾಗುತ್ತಿದೆ. ಕ್ರೆಡಿಟ್ ಕಾರ್ಡ್ ಪ್ಲೇ ಆಗುವುದಕ್ಕೂ ಮುನ್ನ ಕ್ಲೈಮ್ಯಾಕ್ಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ಸದ್ದು ಮಾಡಿದೆ.
'ಕೆಜಿಎಫ್ 3' ಬಗ್ಗೆ ಏನಿದೆ ಸುಳಿವು?
'ಕೆಜಿಎಫ್ ಚಾಪ್ಟರ್ 2' ಕ್ಲೈಮ್ಯಾಕ್ಸ್ ಬಳಿಕ ಕ್ರೆಡಿಟ್ ಕಾರ್ಡ್ ಪ್ಲೇ ಆಗುವುದಕ್ಕೂ ಮುನ್ನ ಒಂದು ಸೀನ್ ಇಡಲಾಗಿದೆ. ಇದು ರವೀನಾ ಟಂಡನ್ ಹಾಗೂ ಜಿಜಿ ನಡುವಿನ ದೃಶ್ಯ. ರವೀನಾ ಟಂಡನ್ ಹಾಗೂ ಜಿಜಿ ಇಬ್ಬರೂ ಒಂದೊಂದು ಫೈಲ್ ಮೇಲೆ ಕಣ್ಣಾಯಿಸುತ್ತಾರೆ. ಜಿಜಿ ಎದುರಿಗೆ 'ಕೆಜಿಎಫ್'ನ ಮತ್ತೊಂದು ಚಾಪ್ಟರ್ ಕಾಣಿಸಿದರೆ, ರವೀನಾ ಟಂಡನ್ ಮುಂದೆ ಸಿಐಎ ಫೈಲ್ ತೆರೆದುಕೊಳ್ಳುತ್ತದೆ. ಇದು 'ಕೆಜಿಎಫ್ 3'ಗೆ ನಾಂದಿ ಎಂದು ಟ್ವಿಟ್ಟರ್‌ನಲ್ಲಿ ನೆಟ್ಟಿಗರು ವಾದ ಮಂಡಿಸುತ್ತಿದ್ದಾರೆ.
Recommended Video


'ಕೆಜಿಎಫ್ 3' ನೆಕ್ಸ್ಟ್ ಲೆವೆಲ್ ಸಿನಿಮಾ?
ಟ್ವಿಟರ್‌ನಲ್ಲಿ 'ಕೆಜಿಎಫ್ 2' ಆಫ್ಟರ್ ಕ್ಲೈಮ್ಯಾಕ್ಸ್ ವಿಡಿಯೋ ಬೇಜಾನ್ ಸದ್ದು ಮಾಡುತ್ತಿದೆ. ಇನ್ನೊಂದು ಕಡೆ ನೆಟ್ಟಿಗರು ಇದೇ ವಿಡಿಯೋವನ್ನು ಇಟ್ಟುಕೊಂಡು ತಮ್ಮದೇ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದಾರೆ. 'ಕೆಜಿಎಫ್ 2' ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರೆ, 'ಕೆಜಿಎಫ್ 3' ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿರುತ್ತೆ ಎಂದು ಹೇಳುತ್ತಿದ್ದಾರೆ. 'ಕೆಜಿಎಫ್ 3' ಮತ್ತೊಂದು ಲೆವೆಲ್‌ನಲ್ಲಿ ಇರುತ್ತೆ ಎನ್ನುವುದನ್ನು ನೆಟ್ಟಿಗರೇ ಊಹೆ ಮಾಡುತ್ತಿದ್ದಾರೆ.

'ಕೆಜಿಎಫ್ 2' ಗಳಿಕೆ ಮೇಲೆ ನಿರ್ಧಾರ?
'ಕೆಜಿಎಫ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಬೇಕು. RRR ಸಿನಿಮಾದಂತೆ 1000 ಕೋಟಿ ಗಳಿಕೆ ದಾಟಬೇಕು. ಆಗ ಮಾತ್ರ ಚಿತ್ರತಂಡ ಇನ್ನೊಂದು ಲೆವೆಲ್‌ನಲ್ಲಿ 'ಕೆಜಿಎಫ್ 3' ಬಗ್ಗೆ ಆಲೋಚನೆ ಮಾಡಬಹುದು. ಅದು ಪ್ಯಾನ್ ವರ್ಲ್ಡ್ ಲೆವೆಲ್‌ನಲ್ಲಿ ಸಿನಿಮಾ ಮಾಡುವ ಆಲೋಚನೆ ಮಾಡಬಹುದು. ಆದರೆ, ಪ್ರಶಾಂತ್ ನೀಲ್, ಯಶ್ ಹಾಗೂ ಹೊಂಬಾಳೆ ಫಿಲ್ಮ್ಸ್ 'ಕೆಜಿಎಫ್ 2' ಬಳಿಕ ಈ ಸಾಹಸಕ್ಕೆ ಕೈ ಹಾಕುತ್ತಾ? ಮತ್ತೆ ಫ್ಯಾನ್ಸ್‌ಗೆ ಸರ್ಪ್ರೈಸ್ ನೀಡುತ್ತಾ? ಅನ್ನೋದು ಸದ್ಯಕ್ಕೆ ಕುತೂಹಲ.


Click it and Unblock the Notifications











