ಕೊನೆಗೂ 'ಕೆಜಿಎಫ್ 3' ಸುಳಿವು ಕೊಟ್ಟ ರಾಕಿ ಭಾಯ್: ಸೀಕ್ವೆಲ್ ಬಗ್ಗೆ ಹೇಳಿದ್ದೇನು?

ಇಡೀ ವಿಶ್ವದಲ್ಲಿ ಪ್ರತಿ ದಿನ 'ಕೆಜಿಎಫ್ ಚಾಪ್ಟರ್ 2' ಸಿನಿಮಾ ಬಗ್ಗೆನೇ ಚರ್ಚೆಯಾಗುತ್ತಿದೆ. ಇಲ್ಲಿವರೆಗೂ 'ಕೆಜಿಎಫ್ 2' ಸಿನಿಮಾ ವರ್ಲ್ಡ್‌ ವೈಡ್ ಸುಮಾರು 930 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಈ ಸಿನಿಮಾದ ಮುಂದಿನ ಟಾರ್ಗೆಟ್ ಏನಿದ್ದರೂ, ಸಾವಿರ ಕೋಟಿ. ಈ ಬಾಕ್ಸಾಫೀಸ್‌ ನಂಬರ್ ನೋಡಿದರೆ, ಗಲ್ಲಾಪೆಟ್ಟಿಗೆಯಲ್ಲಿ ಎರಡು ವಾರ ಅದ್ಯಾವ ಮಟ್ಟಿಗೆ ಸುನಾಮಿ ಎದ್ದಿದೆ ಎಂಬುದನ್ನು ಗೆಸ್ ಮಾಡಬಹುದು.

ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್' ಸೀಕ್ವೆಲ್ ಎಲ್ಲಾ ಕಡೆ ಸದ್ದು ಮಾಡುತ್ತಿರೋದನ್ನು ನೋಡಿದರೆ, ಇನ್ನೂ ಒಂದಿಷ್ಟು ದಾಖಲೆಗಳನ್ನು ಅಳಿಸಿ ಹಾಕುವುದರಲ್ಲಿ ಡೌಟೇ ಇಲ್ಲ. ಈ ಮಧ್ಯೆ ಸಿನಿಪ್ರಿಯರ ಮನಸ್ಸಿನಲ್ಲಿ 'ಕೆಜಿಎಫ್ ಚಾಪ್ಟರ್ 3' ನೂ ಬರುತ್ತಾ? ಅನ್ನುವ ಪ್ರಶ್ನೆ ಸಿನಿಮಾ ಬಿಡುಗಡೆಯಾದ ದಿನದಿಂದಲೇ ಎದ್ದಿದೆ.

'ಕೆಜಿಎಫ್ ಚಾಪ್ಟರ್ 3' ಬಗ್ಗೆ ಚಿತ್ರತಂಡ ಎಲ್ಲೂ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಆದ್ರೀಗ ಯಶ್ ಸಿನಿಮಾ ಬಗ್ಗೆ ಸಣ್ಣದೊಂದು ಸುಳಿವು ನೀಡಿದ್ದಾರೆ. 'ಕೆಜಿಎಫ್ 3' ಸಿನಿಮಾ ಬಗ್ಗೆ ಯಶ್ ಏನು ಹೇಳಿದ್ದಾರೆ? ಸುಳಿವು ಬಿಟ್ಟುಕೊಟ್ಟಿದ್ದೆಲ್ಲಿ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

Recommended Video

KGF 2 Collection | KGF2 ಖಜಾನೆಗೆ ಶೀಘ್ರದಲ್ಲಿಯೇ 1000 ಕೋಟಿ | Yash | Prashanth Neel | Srinidhi Shetty
ಕೆಜಿಎಫ್ 3 ಸುಳಿವು ಮುಂದೇನು?

ಕೆಜಿಎಫ್ 3 ಸುಳಿವು ಮುಂದೇನು?

'ಕೆಜಿಎಫ್ ಚಾಪ್ಟರ್ 1' ಸಕ್ಸಸ್ 'ಕೆಜಿಎಫ್ ಚಾಪ್ಟರ್ 2'ಗೆ ಪ್ರೇರಣೆಯಾಗಿತ್ತು. ಈಗ 'ಕೆಜಿಎಫ್ 2' ಬಾಕ್ಸಾಫೀಸ್‌ನಲ್ಲಿ ಲೂಟಿ ಮಾಡಿದ್ದು ನೋಡಿದರೆ, 'ಕೆಜಿಎಫ್ 3' ಬಗ್ಗೆ ಚಿತ್ರತಂಡ ಒಮ್ಮೆ ಆಲೋಚನೆ ಮಾಡದೆ ಇರೋದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ 'ಕೆಜಿಎಫ್ 2' ಕ್ಲೈಮ್ಯಾಕ್ಸ್ ಮುಗಿದ ಬಳಿಕ ಕೂಡಲೇ 'ಕೆಜಿಎಫ್ 3' ಬಗ್ಗೆ ಚಿತ್ರತಂಡ ಸುಳಿವು ನೀಡಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದ್ದರೂ, ಚಿತ್ರತಂಡ ಮಾತ್ರ ಒಂದೇ ಒಂದು ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಸ್ವತ: ಯಶ್ 'ಕೆಜಿಎಫ್ 3' ಬಗ್ಗೆ ಹಿಂಟ್ ಕೊಟ್ಟಿದ್ದಾರೆ.

'ಕೆಜಿಎಫ್ 3' ಬಗ್ಗೆ ಸುಳಿವು ಬಿಟ್ಟುಕೊಟ್ಟ ಯಶ್

'ಕೆಜಿಎಫ್ 3' ಬಗ್ಗೆ ಸುಳಿವು ಬಿಟ್ಟುಕೊಟ್ಟ ಯಶ್

'ಕೆಜಿಎಫ್ ಚಾಪ್ಟರ್ 3' ಬರುತ್ತಾ? ಇಂತಹದ್ದೊಂದು ಪ್ರಶ್ನೆಗೆ ರಾಕಿ ಭಾಯ್ ಕೊನೆಗೂ ಸುಳಿವು ನೋಡಿದ್ದಾರೆ. ಅಂತರಾಷ್ಟ್ರೀಯ ನ್ಯೂಸ್ ಪೋರ್ಟಲ್‌ಗೆ ಯಶ್ ಪ್ರತಿಕ್ರಿಯೆ ನೀಡಿದ್ದಾರೆ. "ಈಗಾಗಲೇ ನಾನು ಹಾಗೂ ಪ್ರಶಾಂತ್ ಇಬ್ಬರೂ ಹಲವು ದೃಶ್ಯಗಳ ಬಗ್ಗೆ ಚರ್ಚಿಸಿದ್ದೇವೆ. 'ಚಾಪ್ಟರ್ 2'ನಲ್ಲಿ ನಾವು ಇನ್ನೂ ಸಾಕಷ್ಟು ವಿಷಯಗಳನ್ನು ಹೇಳುವುದಿತ್ತು. 'ಚಾಪ್ಟರ್ 3' ನಿರ್ಮಿಸಲು ಹಲವು ಸಾಧ್ಯಗಳಿವೆ ಎಂಬುದು ನಮಗೆ ಗೊತ್ತಿದೆ. ಕಿಕ್ ಕೊಡುವಂತಹ ಸಾಕಷ್ಟು ಸೀನ್‌ಗಳು ಇನ್ನೂ ಇವೆ. ಆದರೆ ಇದು ಕೇವಲ ಒಂದು ಐಡಿಯಾ ಅಷ್ಟೆ. ಆದರೆ, ಸದ್ಯಕ್ಕೆ ಈ ವಿಚಾರವನ್ನು ಅಲ್ಲಿಗೆ ಬಿಟ್ಟಿದ್ದೇವೆ." ಎಂದು ಯಶ್ ಹೇಳಿದ್ದಾರೆ.

'ಕೆಜಿಎಫ್ 3' ಯಶ್ ಮುಂದಿನ ಸಿನಿಮಾನಾ?

'ಕೆಜಿಎಫ್ 3' ಯಶ್ ಮುಂದಿನ ಸಿನಿಮಾನಾ?

'ಕೆಜಿಎಫ್ ಚಾಪ್ಟರ್ 2' ಸಿನಿಮಾ ರಿಲೀಸ್ ಆದರೂ, ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಇದೂವರೆಗೂ ಸುಳಿವು ಬಿಟ್ಟುಕೊಟ್ಟಿಲ್ಲ. ಈಗ ಅಂತರಾಷ್ಟ್ರೀಯ ಮಾಧ್ಯಮವೊಂದರಲ್ಲಿ 'ಕೆಜಿಎಫ್ 3' ಸುಳಿವು ನೀಡಿದ್ದಾರೆ. ಈ ಮೂಲಕ ಯಶ್ ಮುಂದಿನ ಸಿನಿಮಾ 'ಕೆಜಿಎಫ್ 3' ಅನ್ನೋ ಅನುಮಾನ ಮೂಡಿದೆ. ಆದರೆ, 'ಕೆಜಿಎಫ್ 3' ಟೇಕ್ ಆಫ್ ಮಾಡುವುದಕ್ಕೆ ಪ್ರಶಾಂತ್ ನೀಲ್ ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಂಡಿದ್ದಾರೆ. 'ಸಲಾರ್', ಜೂ.ಎನ್‌ಟಿಆರ್ ಸಿನಿಮಾ ಮುಗಿಸಿದ ಬಳಿಕವೇ 'ಕೆಜಿಎಫ್ 3' ಸೆಟ್ಟೇರುತ್ತಾ? ಇಲ್ಲಾ ಅದಕ್ಕೂ ಮುನ್ನವೇ ಟೇಕ್ ಆಫ್ ಆಗುತ್ತಾ? ಅಸಲಿಗೆ 'ಕೆಜಿಎಫ್ 3' ಪ್ರಶಾಂತ್ ನೀಲ್ ಪ್ಲ್ಯಾನ್ ಏನಿದೆ ? ಅನ್ನೋ ಕುತೂಹಲ ಎದ್ದಿದೆ.

'ಚಾಪ್ಟರ್ 1' ಬಗ್ಗೆ ಭಯ ಹುಟ್ಟಿತ್ತು

'ಚಾಪ್ಟರ್ 1' ಬಗ್ಗೆ ಭಯ ಹುಟ್ಟಿತ್ತು

'ಕೆಜಿಎಫ್' ಸಿನಿಮಾ ಮಾಡುವಾಗ ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಬಗ್ಗೆ ಆಲೋಚನೆ ಇರಲಿಲ್ಲ. ಅಲ್ಲದೆ ಇದನ್ನು ಪಾರ್ಟು 2 ಮಾಡುವ ಆಲೋಚನೆ ಕೂಡ ಇರಲಿಲ್ಲ. ಆದರೆ ಎರಡು ಪಾರ್ಟ್ ಮಾಡಲು ನಿರ್ಧರಿಸಿದ ಬಳಿಕ ಚಾಪ್ಟರ್ 1 ಬಗ್ಗೆ ಯಶ್‌ಗೆ ಚಿಂತೆ ಶುರುವಾಗಿತ್ತು. " ಬೆಸ್ಟ್ ಪಾರ್ಟ್ ಅನ್ನೋದು ಸೆಕೆಂಡ್ ಹಾಫ್‌ನಲ್ಲಿ ಇತ್ತು. ಅದುವೇ 'ಚಾಪ್ಟರ್ 2'. ಒಂದು ವೇಳೆ 'ಚಾಪ್ಟರ್ 1' ಗೆಲ್ಲದೆ ಹೋದರೆ, 'ಚಾಪ್ಟರ್ 2' ಮಾಡಲು ಸಾಧ್ಯವೇ ಇರುತ್ತಿರಲಿಲ್ಲ. ಹೀಗಾಗಿ 'ಚಾಪ್ಟರ್ 1' ಬಗ್ಗೆ ತುಂಬಾನೇ ತಲೆಕೆಡಿಸಿಕೊಂಡಿದ್ದೆ." ಎಂದು ಯಶ್ ಹೇಳಿದ್ದಾರೆ.

More from Filmibeat

English summary
After KGF 2 Blockbuster Yash gave hint about KGF Chaper 3. Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X