ಕೆಜಿಎಫ್ ತಾತನ ಈಗ 'ನ್ಯಾನೋ ನಾರಾಯಣ್ಣಪ್ಪ': ಟ್ರೈಲರ್‌ನಲ್ಲಿ ಅಡಗಿದೆ ರಹಸ್ಯ!

ಕೆಜಿಎಫ್ ಸಿನಿಮಾ ನೋಡಿರೋರಿಗೆ ಈ ತಾತಾ ಗೊತ್ತಿರಲೇ ಬೇಕು. ಪಾತ್ರ ಚಿಕ್ಕದಿದ್ದರೂ ಅದ್ಭುತವಾಗಿ ನಟಿಸಿ ಈ ತಾತಾ ಜನರ ಮಗೆದ್ದಿದ್ದರು. ಅದೇ ಕೆಜಿಎಫ್ ತಾತಾ ಅಲಿಯಾಸ್ ಕೃಷ್ಣ ಜಿ ರಾವ್ ಈ ಹೀರೊ ಆಗಿದ್ದು ಗೊತ್ತೇ ಇದೆ. ಸದ್ಯಕ್ಕೀಗ ಸ್ಯಾಂಡಲ್‌ವುಡ್‌ನಲ್ಲಿ ಆ ಸಿನಿಮಾ ಬಗ್ಗೆನೇ ಟಾಕ್.

'ಕೆಜಿಎಫ್' ಸಿನಿಮಾದಲ್ಲಿ ಕೃಷ್ಣ ಜಿ ರಾವ್ ದೃಷ್ಟಿ ಇಲ್ಲದ ಮುದುಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಪಾತ್ರ ಸಿನಿಮಾದಲ್ಲಿ ಬರೋ ಪ್ರಮುಖ ಪಾತ್ರಗಳಲ್ಲಿ ಒಂದಾಗಿತ್ತು. ಅಲ್ಲಿಂದ ಇವರು ಕೆಜಿಎಫ್ ತಾತಾ ಅಂತಲೇ ಫೇಮಸ್ ಆಗಿದ್ದರು. ಕೃಷ್ಣ ಜಿ ರಾವ್ ಹೀರೊ ಆಗಿ ನಟಿಸಿರೋ ಹೊಸದ ಟ್ರೈಲರ್ ಈಗ ರಿಲೀಸ್ ಆಗಿದೆ.

ನ್ಯಾನೋ ನಾರಾಯಣಪ್ಪ ಟ್ರೈಲರ್ ರಿಲೀಸ್

'ಕೆಜಿಎಫ್ ತಾತಾ' ಅಂತ ಖ್ಯಾತಿ ಪಡೆದಿರೋ ಕೃಷ್ಣ ಜಿ ರಾವ್ ನಟಿಸುತ್ತಿರೋ ಸಿನಿಮಾ 'ನ್ಯಾನೋ ನಾರಾಯಣಪ್ಪ'. ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಹಾಸ್ಯ ಪ್ರಿಯರಿಗೆ ಇಷ್ಟ ಆಗುತ್ತಿದೆ. ಹಾಗಂತ ಕೇವಲ ಹಾಸ್ಯ ಅಷ್ಟೇ ಅಲ್ಲ. ತಾತಾನ ಲವ್ ಸ್ಟೋರಿ ಇದೆ. ಪತ್ನಿಗಾಗಿ ಮಾಡುವ ಹೋರಾಟವಿದೆ.

KGF Actor Krishna G Rao New Movie Nano Narayanappa Trailer Released

'ಕೆಮಿಸ್ಟ್ರೀ ಆಫ್ ಕರಿಯಪ್ಪ' ಸಿನಿಮಾ ನಿರ್ದೇಶಿಸಿದ್ಧ ಕುಮಾರ್ 'ನ್ಯಾನೋ ನಾರಾಯಣಪ್ಪ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಕೃಷ್ಣ ಜಿ ರಾವ್ ಅಭಿನಯದ ಈ ಸಿನಿಮಾದ ಟ್ರೈಲರ್ ಸಿನಿಪ್ರಿಯರಿಗೆ ಸಖತ್ ಕಿಕ್ ಕೊಡುತ್ತಿದೆ.

ಟ್ರೈಲರ್‌ನಲ್ಲಿರೋ ಸೀಕ್ರೆಟ್ ಏನು?

'ನ್ಯಾನೋ ನಾರಾಯಣಪ್ಪ' ಟ್ರೈಲರ್ ಕೇವಲ ಕಾಮಿಡಿ ಅಷ್ಟೇ ಅಲ್ಲ. ಸೆಂಟಿಮೆಂಟ್ ಕೂಡ ಇದೆ. ಆದರೆ, ಕೆಜಿಎಫ್ ತಾತನನ್ನು ಹೀರೊ ಮಾಡಿ ಸಿನಿಮಾ ಮಾಡುವ ಈ ಪ್ರಯೋಗಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. 'ಕೆಜಿಎಫ್' ಸಿನಿಮಾದಲ್ಲಿ ತಾತನ ಡೈಲಾಗ್ ಕೇಳಿ ಥ್ರಿಲ್ ಆಗಿದ್ದವರು 'ನ್ಯಾನೋ ನಾರಾಯಣಪ್ಪ'ನ ಖದರ್ ನೋಡಲು ಹಿಂದೇಟು ಹಾಕೋದಿಲ್ಲ.

ನಿರ್ದೇಶಕ ಕುಮಾರ್ ಈಗಾಗಲೇ ವಿಭಿನ್ನ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ಭರವಸೆ ಮೂಡಿಸಿದ್ದಾರೆ. ಈಗಾಗಲೇ ನಿರ್ದೇಶಿಸಿದ್ದ 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಕಾಮಿಡಿ ಸಿನಿಮಾ ಆಗಿತ್ತು. ಇದರ ಹಿಂದೆನೇ 'ಕ್ರಿಟಿಕಲ್ ಕೀರ್ತನೆಗಳು' ಸಿನಿಮಾ ಬೆಟ್ಟಿಂಗ್ ದಂಧೆಯನ್ನು ಆಧರಿಸಿತ್ತು. ಈಗ 'ನ್ಯಾನೋ ನಾರಾಯಣಪ್ಪ' ಸಿನಿಮಾ ಮೂಲಕ ಕಾಮಿಡಿ ಜೊತೆಯಲ್ಲಿಯೇ ಎಮೋಷನ್ಸ್ ಹೇಳುವುದಕ್ಕೆ ಹೊರಟಿದ್ದಾರೆ.

KGF Actor Krishna G Rao New Movie Nano Narayanappa Trailer Released

ನ್ಯಾನೋ ಕಾರು ಕೂಡ ಒಂದು ಪಾತ್ರ

ಸಿನಿಮಾದ ಟೈಟಲ್ ಹೇಳುವಂತೆ ಇಲ್ಲಿ ನ್ಯಾನೋ ಕಾರು ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದೆ. ಕೃಷ್ಣ ಜಿ ರಾವ್ ಜೊತೆ ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ಕಲಾವಿದರು ನಟಿಸಿದ್ದಾರೆ. ಕಾಕ್ರೋಚ್ ಸುಧಿ, ಗಿರೀಶ್ ಶಿವಣ್ಣ, ಪ್ರಶಾಂತ್ ಸಿದ್ದಿ, ಆನಂತು ಸೇರಿದಂತೆ ಕಲಾವಿದರ ದಂಡೇ ಇದೆ.

ಈಗಾಗಲೇ 'ನ್ಯಾನೀ ನಾರಾಯಣಪ್ಪ' ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ಚಿತ್ರತಂಡ ಅಂದುಕೊಂಡಂತೆ ಆಗಸ್ಟ್ ತಿಂಗಳಿನಲ್ಲಿಯೇ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಆಗಸ್ಟ್‌ನಲ್ಲಿ ಸಿನಿಮಾ ರಿಲೀಸ್ ಆಗಿಲ್ಲ. ಹೀಗಾಗಿ ಅತೀ ಶೀಘ್ರದಲ್ಲಿಯೇ ಈ ಸಿನಿಮಾ ಥಿಯೇಟರ್‌ಗೆ ಇಡಬಹುದು. ಸಿನಿಮಾ ತಂಡ ಇನ್ನೂ ಅಧಿಕೃತ ಮಾಹಿತಿಯನ್ನು ಹೊರಹಾಕಿಲ್ಲ.

More from Filmibeat

English summary
KGF Actor Krishna G Rao New Movie Nano Narayanappa Trailer Released, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X