ದೀಪಾವಳಿಗೆ ಕಲರ್‌ಫುಲ್ ಲುಕ್ ಕೊಟ್ಟ 'ಕೆಜಿಎಫ್' ಮದರ್: ಸಖತ್ತಾಗೈತೆ ಹೊಸ ಫೋಟೊಶೂಟ್!
ಬೆಳಕಿನ ಹಬ್ಬ ದೀಪಾವಳಿ ಎಲ್ಲೆಡೆ ಸಂಭ್ರಮ ಸಡಗರದಿಂದ ನಡೆಯುತ್ತಿದೆ. ಸ್ಯಾಂಡಲ್‌ವುಡ್‌ನ ತಾರೆಯರ ಮನೆಯಲ್ಲಿಯೂ ಬೆಳಕಿನ ಹಬ್ಬದ ಆಚರಣೆ ಅದ್ದೂರಿಯಾಗಿಯೇ ಇದೆ. ಎಂದಿನಂತೆ ಹಬ್ಬದ ಆಚರಣೆಯಲ್ಲಿ ಮುಳುಗಿದ್ದಾರೆ.
ಈ ಬಾರಿ 'ಕೆಜಿಎಫ್' ಸಿನಿಮಾದಲ್ಲಿ ಅಮ್ಮನ ಪಾತ್ರದಲ್ಲಿ ನಟಿಸಿದ್ದ ಅರ್ಚನಾ ಜೋಯಿಸ್ ಹಬ್ಬವನ್ನುವಿಶಿಷ್ಟವಾಗಿ ಆಚರಿಸಿದ್ದಾರೆ. ಹೊಸ ಫೋಟೊಶೂಟ್ ಮಾ ಅರ್ಚನಾ ಜೋಯಿಸ್ ದೀಪಾವಳಿ ಸಂಭ್ರಮದಲ್ಲಿದ್ದು, ಹೊಸದೊಂದು ಫೋಟೊಶೂಟ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ದೀಪಾವಳಿ ಹಬ್ಬಕ್ಕೆ ಅರ್ಚನಾ ಜೋಯಿಸ್ ಮಾಡಿಸಿರೋ ಫೋಟೊಶೂಟ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬೆಳಕಿನ ಮಧ್ಯೆ ಕಲರ್‌ಫುಲ್ ಆಗಿ ಮಿಂಚಿರೋ ನಟಿ ಲುಕ್ ಕಂಡು ಅಭಿಮಾನಿಗಳಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೀಪಾವಳಿ ಕಾನ್ಸೆಪ್ಟ್‌ನಲ್ಲಿ ಫೋಟೊಶೂಟ್
ದೀಪಾವಳಿ ಹಬ್ಬವನ್ನು ಸಂಭ್ರಮವನ್ನು ಸೆರೆಹಿಡಿದು ಶೇರ್ ಮಾಡಿಕೊಳ್ಳುವುದು ಬೇರೆ ಮಾತು. ಆದರೆ, ಅರ್ಚನಾ ಜೋಯಿಸ್ ಬೆಳಕಿನ ಹಬ್ಬಕ್ಕೆ ತಮ್ಮ ಅಭಿಮಾನಿಗಳು ಸರ್ಪ್ರೈಸ್ ಕೊಡಲು ಫೋಟೊಶೂಟ್ ಮಾಡಿಸಿದ್ದಾರೆ. ಸೆಲೆಬ್ರೆಟಿ ಫೋಟೋಗ್ರಾಫರ್ ನಾಗರಾಜ್ ಸೋಮಯಾಜಿ ದೀಪಾವಳಿ ಕಾನ್ಸೆಪ್ಟ್ ಇಟ್ಟು ಅರ್ಚನಾ ಅವರ ಫೋಟೊಗಳನ್ನು ಸೆರೆ ಹಿಡಿದಿದ್ದಾರೆ. ನಾಗರಾಜ್ ಸೋಮಯಾಜಿ ಪೋಟೊಶೂಟ್ ಮಾಡಿದ್ರೆ, ಅರ್ಚನಾ ಜೋಯಿಸ್‌ಗೆ ಯೋಗಿತ ಕಾಸ್ಟ್ಯೂಮ್ ಡಿಸೈನ್, ರೇಣುಕ ಹೇರ್ ಸ್ಟೈಲ್ ಮತ್ತು ಮೇಕಪ್ ಮಾಡಿದ್ದಾರೆ.

ಬೆಳಕಿನಲ್ಲಿಯೇ ಫೋಟೊಶೂಟ್
ಅರ್ಚನಾ ಜೋಯಿಸ್ 'ಕೆಜಿಎಫ್' ಸಿನಿಮಾದಲ್ಲಿ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಮೆಗಾ ಬ್ಲಾಕ್‌ಬಸ್ಟರ್ ಪ್ಯಾನ್ ಇಂಡಿಯಾ ಸಿನಿಮಾ ಇವರಿಗೆ ಒಳ್ಳೆ ಹೆಸರು ತಂದುಕೊಟ್ಟಿದೆ. ಆದರೆ, ಈ ಸಿನಿಮಾ ಡಿ ಗ್ಲಾಮರ್ ರೋಲ್‌ನಲ್ಲಿ ನಟಿಸಿದ ನಟಿ. ಮುಂದೆ ಗ್ಲಾಮರ್ ಲುಕ್‌ನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಅದರ ಒಂದು ಝಲಕ್ ಈ ಫೋಟೊಶೂಟ್‌ನಲ್ಲಿದೆ. ಈ ಫೋಟೊಶೂಟ್ ಬಗ್ಗೆ ಪ್ರತಿಕ್ರಿಯಿಸಿದ್ದು, "ದೀಪಾವಳಿ ಪ್ರಯುಕ್ತ ಈ ಫೋಟೊಶೂಟ್ ಮಾಡಲಾಗಿದೆ. ದೀಪಾವಳಿ ಅಂದ್ರೆ ಬೆಳಕು ಅದನ್ನೇ ಥೀಮ್ ಆಗಿಸಿಕೊಂಡು ನಾಗರಾಜ್ ಸೋಮಯಾಜಿ ಫೋಟೊಶೂಟ್ ಮಾಡಿದ್ದಾರೆ" ತಮ್ಮ ಹೊಸ ಫೋಟೊಶೂಟ್ ಬಗ್ಗೆ ಹೇಳಿದ್ದಾರೆ.

'ಪಟಾಕಿ ಹೊಡೆಯೋ ಅಭ್ಯಾಸ ಇಲ್ಲ'
ಬೆಳಕಿನ ಹಬ್ಬದಲ್ಲಿ ಫೋಟೊಶೂಟ್ ಅಷ್ಟೇ ಅಲ್ಲ. ದೀಪಾವಳಿ ಹಬ್ಬದ ಬಗ್ಗೆನೂ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. "ಪಟಾಕಿ ಹೊಡೆಯೋ ಅಭ್ಯಾಸ ಹೊರಟು ಹೋಗಿದೆ. ದೀಪಗಳ ಮೂಲಕವೇ ದೀಪಾವಳಿ ಸೆಲೆಬ್ರೆಟ್ ಮಾಡುತ್ತಿದ್ದೇವೆ. ನನಗೆ ಈ ಬಾರಿ ದೀಪಾವಳಿ ತುಂಬಾ ಸ್ಪೆಷಲ್. ಯಾಕಂದ್ರೆ 'ಹೊಂದಿಸಿ ಬರೆಯಿರಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾ ಪ್ರಚಾರ ಕೂಡ ಜೋರಾಗಿ ನಡೆಯುತ್ತಿದೆ." ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

'ಕೆಜಿಎಫ್' ಬಳಿಕ ಬ್ಯುಸಿ
'ಕೆಜಿಎಫ್' ಸಿನಿಮಾ ಅರ್ಚನಾ ಜೋಯಿಸ್ ಕರಿಯರ್‌ಗೆ ಟರ್ನಿಂಗ್ ಪಾಯಿಂಟ್. ಈ ಸಿನಿಮಾ ರಿಲೀಸ್ ಆಗಿದ್ದೇ ಆಗಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಅರ್ಚನಾ ಜೋಯಿಸ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸದ್ಯ ಇವರ ಹೊಸ ಸಿನಿಮಾ 'ಹೊಂದಿಸಿ ಬರೆಯಿರಿ' ಇದೇ ನವೆಂಬರ್ 18ರಂದು ಬಿಡುಗಡೆಯಾಗುತ್ತಿದೆ. ಹಾಗೆ 'ಕ್ಷೇತ್ರಪಾಲ' ಅನ್ನೋ ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ. ಹೀಗಾಗಿ ಎರಡು ಸಿನಿಮಾಗಳನ್ನು ಎದುರು ನೋಡುತ್ತಿದ್ದಾರೆ.


Click it and Unblock the Notifications











