ಯೋಗ ದಿನದಂದು ವಿವಿಧ ಆಸನ ಪ್ರದರ್ಶಿಸಿದ ಶ್ರೀನಿಧಿ ಶೆಟ್ಟಿ, ಆರಾಧನಾ ರಾಮ್ : ನಟಿಯರ ಫೋಟೊಗಳು ವೈರಲ್!

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಇಂದು(ಜೂನ್ 21) ರಾಜ್ಯಾದ್ಯಂತ ಆಚರಿಸಲಾಗಿದೆ. ರಾಜ್ಯದ ಮೂಲೆ ಮೂಲೆಯಲ್ಲಿ ಯೋಗ ದಿನಾಚರಣೆಯ ಜೊತೆಗೆ ಜಾಗೃತಿಯನ್ನು ಮೂಡಿಸಲಾಗಿದೆ. ಈ ಯೋಗ ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡರು, ಸಿನಿಮಾ ನಟಿಯರು ಸೇರಿದಂತೆ ಹಲವು ಭಾಗವಹಿಸಿ ಗಮನ ಸೆಳೆದಿದ್ದಾರೆ.

ಅದರಲ್ಲೂ ಕನ್ನಡದ ನಟಿಯಾದ 'ಕೆಜಿಎಫ್' ಸಿನಿಮಾದ ನಾಯಕಿ ಶ್ರೀನಿಧಿ ಶೆಟ್ಟಿ, 'ಕಾಟೇರ' ಸಿನಿಮಾದ ನಾಯಕಿ ಆರಾಧನಾ ರಾಮ್, ಶ್ರೀಲೀಲಾ ಸೇರಿದಂತೆ ಹಲವರು ಯೋಗ ಕಾರ್ಯಕ್ರಮಗಳಲ್ಲಿ ಭಾಗಯಾಗಿ ಗಮನ ಸೆಳೆದಿದ್ದಾರೆ. ನಟಿ ಶ್ರೀನಿಧಿ ಶೆಟ್ಟಿ ಈಶಾ ಫೌಂಡೇಷನ್‌ನಲ್ಲಿ ಯೋಗ ಪ್ರದರ್ಶನ ಮಾಡಿದರು.

KGF actress Srinidhi Shetty and Kaatera Actress Aradhana Ram Yoga Photos goes viral

ಚಿಕ್ಕಬಳ್ಳಾಪುರದ ಆವಲಗುರ್ಕಿಯಲ್ಲಿರುವ ಈಶಾ ಫೌಂಡೇಶನ್‌ನಲ್ಲಿ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲಿನ ಆದಿಯೋಗಿಯ ಪ್ರತಿಮೆಯ ಮುಂಭಾಗದಲ್ಲಿ ಯೋಗಾಭ್ಯಾಸಕ್ಕೆ ಅವಕಾಶ ಮಾಡಿಕೊಡಲಾಗಿತ್ತು. 10ನೇ ಅಂತಾರಾಷ್ಟ್ರೀಯ ಯೋಗ ದಿನವಾಗಿದ್ದರಿಂದ ಇಲ್ಲಿ ವಿಶೇಷವಾಗಿ ಯೋಗವನ್ನು ಆಚರಿಸಲಾಯಿತು. ಇದರಲ್ಲಿ 'ಕೆಜಿಎಫ್' ನಟಿ ಶ್ರೀನಿಧಿ ಶೆಟ್ಟಿ ಕೂಡ ಭಾಗವಹಿಸಿ, ವಿವಿಧ ಆಸನಗಳನ್ನು ಪ್ರದರ್ಶನ ಮಾಡಿದರು.

ಶ್ರೀನಿಧಿ ಶೆಟ್ಟಿ ಜೊತೆ ಯೋಗ ಅಭ್ಯಾಸದಲ್ಲಿ ಭಾರತೀಯ ಸೇನೆ, ರಾಷ್ಟ್ರೀಯ ಸೈನಿಕ ಪಡೆ, ಎನ್‌ಸಿಸಿ ವಿದ್ಯಾರ್ಥಿಗಳು ಸೇರಿದಂತೆ ಈಶಾ ಸಂಸ್ಥೆಯ ಸ್ವಯಂ ಸೇವಕರು ಭಾಗಿಯಾಗಿದ್ದರು. ಈ ವೇಳೆ ಶ್ರೀನಿಧಿ ಶೆಟ್ಟಿ ಸೂರ್ಯ ನಮಸ್ಕಾರ, ಪ್ರಾಣಾಯಾಮ ಹಾಗೂ ವಿವಿಧ ಸರಳ ಆಸನಗಳನ್ನು ಮಾಡಿದ್ದಾರೆ.

KGF actress Srinidhi Shetty and Kaatera Actress Aradhana Ram Yoga Photos goes viral

ಇನ್ನೊಂದು ಕಡೆ ಕನಸಿನ ರಾಣಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಕೂಡ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 'ಕಾಟೇರ' ಸಿನಿಮಾ ಮೂಲಕ ಸದ್ದು ಮಾಡಿರುವ ನಟಿ ಯೋಗ ಮಾಡಿ ಹಲವರಿಗೆ ಸ್ಪೂರ್ತಿಯಾಗಿದ್ದಾರೆ. ಆರಾಧನಾ ರಾಮ್ ಯೋಗ ಮಾಡುತ್ತಿರುವ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.

ಇಂದಿರಾ ನಗರದ ಕ್ಲಬ್‌ನಲ್ಲಿ ಅಥಾಯೋಗ್ ಲಿವಿಂಗ್ ಆಯೋಜಿಸಿದ ಅಂತರಾಷ್ಟ್ರೀಯ ಯೋಗ ಕಾರ್ಯಕ್ರಮದಲ್ಲಿ ಆರಾಧನಾ ರಾಮ್ ಭಾಗಿಯಾಗಿದ್ದರು. ಈ ವೇಳೆ ಎಲ್ಲರ ಜೊತೆಗೆ ಯೋಗ ಮಾಡಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಣೆ ಮಾಡಿದರು.

ಸುಮಾರು ಒಂದು‌ ಗಂಟೆಗಳ‌ ಕಾಲ ಆರಾಧಾನಾ ಯೋಗ‌ ಮಾಡಿ ಹಲವರಿಗೆ ಸ್ಪೂರ್ತಿಯಾಗಿದ್ದಾರೆ. ಇದೇ ಸಮಯದಲ್ಲಿ "ಯೋಗ ಕೇವಲ ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಶಾಂತಿ ನೀಡುತ್ತೆ ಪ್ರತಿಯೊಬ್ಬರು ಯೋಗ ಮಾಡಬೇಕು" ಎಂದು ಆರಾಧನಾ ರಾಮ್ ಹೇಳಿದ್ದಾರೆ. ಇನ್ನೊಂದು ಕಡೆ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕನ್ನಡದ ನಟಿ ಶ್ರೀಲೀಲಾ ಕೂಡ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

More from Filmibeat

English summary
Actress Srinidhi Shetty and Aradhana Ram are in a yoga mood:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X