'ಕೆಜಿಎಫ್ 2' ಭರ್ಜರಿ 50 ದಿನ: ಯಶ್-ಪ್ರಶಾಂತ್ ನೀಲ್ ಬರೆದ ದಾಖಲೆಯೇನು?

ಕನ್ನಡದ ಬಲು ದುಬಾರಿ ಸಿನಿಮಾ 'ಕೆಜಿಎಫ್ ಚಾಪ್ಟರ್ 2'. ಈ ಸಿನಿಮಾ ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ ಸುಂಟರಗಾಳಿ ಎಬ್ಬಿಸಿದೆ. ಭಾರತದಲ್ಲಂತೂ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸಿ ಮುನ್ನುಗ್ಗುತ್ತಿದೆ. ಇದೇ ವೇಳೆ 'ಕೆಜಿಎಫ್ 2' ಸಿನಿಮಾ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ.

'ಕೆಜಿಎಫ್ 2' ಸಾಧನೆ ಒಂದೆರಡಲ್ಲ. ಈ ಸಿನಿಮಾ ಕನ್ನಡ ಚಿತ್ರರಂಗವನ್ನು ವಿಶ್ವವೇ ಗುರುತಿಸುವಂತೆ ಮಾಡಿದೆ. ಈ ಸಿನಿಮಾ ಭಾರತದ ಎಲ್ಲಾ ಪ್ರಮುಖ ಚಿತ್ರರಂಗದಲ್ಲಿಯೂ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ. ಬಹುತೇಕ ಪ್ರಮುಖ ನಗರಗಳ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ.

'ಕೆಜಿಎಫ್ 2' ಏಪ್ರಿಲ್ 14ರಂದು ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಅಲ್ಲಿಂದ ಚಿತ್ರಮಂದಿರಗಳಲ್ಲಿ ನಾನ್‌ ಸ್ಟಾಫ್ ಪ್ರದರ್ಶನ ಕಾಣುತ್ತಲೇ ಇದೆ. ಸದ್ಯ 50 ದಿನಗಳ ಸಂಭ್ರಮದಲ್ಲಿರುವ 'ಕೆಜಿಎಫ್ 2' ಇಷ್ಟು ದಿನಗಳಲ್ಲಿ ಗಳಿಸಿದ್ದೆಷ್ಟು? ಯಶ್-ಪ್ರಶಾಂತ್ ನೀಲ್ ಬರೆದ ದಾಖಲೆಗಳೇನು? ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

 'ಕೆಜಿಎಫ್ 2' 50 ಡೇಸ್ ಕಲೆಕ್ಷನ್ ಎಷ್ಟು

'ಕೆಜಿಎಫ್ 2' 50 ಡೇಸ್ ಕಲೆಕ್ಷನ್ ಎಷ್ಟು

'ಕೆಜಿಎಫ್ 2' ಬಿಡುಗಡೆಯಾದಲ್ಲಿಂದ ಬಾಕ್ಸಾಫೀಸ್‌ನಲ್ಲಿ ಬಿರುಗಾಳಿಯೇ ಎದ್ದಿದೆ. ಮೊದಲ ದಿನದಿಂದ 48ನೇ ದಿನದವರೆಗೂ ಗಲ್ಲಾಪೆಟ್ಟಿಗೆಯಲ್ಲಿ 1 ಕೋಟಿಗಿಂತ ಕಡಿಮೆ ಇಳಿದಿದ್ದೇ ಇಲ್ಲ. 50ನೇ ದಿನ ಸಮೀಸುತ್ತಿದ್ದಂತೆ ಒಂದು ಕೋಟಿಗಿಂತ ಕಡಿಮೆ ಕಲೆಕ್ಷನ್ ಮಾಡಿದೆ. 50ನೇ ದಿನ 'ಕೆಜಿಎಫ್ 2' ಸಿನಿಮಾ ₹85 ಲಕ್ಷ ಕಲೆಕ್ಷನ್ ಮಾಡಿದೆ. ಈ ಮೂಲಕ ಕಳೆದ 50 ದಿನಗಳಲ್ಲಿ ಸುಮಾರು ₹1239.97 ಕೋಟಿ ಗಳಿಸಿದೆ.

 'ಕೆಜಿಎಫ್ 2' ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ?

'ಕೆಜಿಎಫ್ 2' ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ?


'ಕೆಜಿಎಫ್ 2' ಬಾಕ್ಸಾಫೀಸ್‌ ಕಲೆಕ್ಷನ್ ಹೊಸ ದಾಖಲೆಯನ್ನೇ ಬರೆದಿದೆ. ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಷನ್ ಕ್ಲಿಕ್ ಆಗಿದೆ. ಈ 50 ದಿನಗಳಲ್ಲಿ ಎಲ್ಲೆಲ್ಲಿ ರಿಲೀಸ್ ಆಗಿದೆಯೋ ಅಲ್ಲೆಲ್ಲಾ ದಾಖಲೆ ಗಳಿಕೆಯನ್ನೇ ಮಾಡಿದೆ. ಸ್ಯಾಂಡಲ್‌ವುಡ್‌ ಬಾಕ್ಸಾಫೀಸ್‌ನಲ್ಲೂ 'ಕೆಜಿಎಫ್ 2' ಹೊಸ ಮೈಲಿಗಲ್ಲನ್ನೇ ಸೃಷ್ಟಿಸಿದೆ. 'ಕೆಜಿಎಫ್ 2' ಈ 50 ದಿನಗಳಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಮಾಡಿದೆ? ಅನ್ನುವುದರ ಪಟ್ಟಿ ಇಲ್ಲಿದೆ.

ವಿಶ್ವದಾದ್ಯಂತ 50 ದಿನಗಳಲ್ಲಿ 'ಕೆಜಿಎಫ್ 2' ಕಲೆಕ್ಷನ್

ಕರ್ನಾಟಕ- ₹189.50 ಕೋಟಿ
ಆಂಧ್ರ-ತೆಲಂಗಾಣ ₹139.50 ಕೋಟಿ
ತಮಿಳುನಾಡು ₹115.50 ಕೋಟಿ
ಕೇರಳ ₹ 69.15 ಕೋಟಿ
ಹಿಂದಿ+ROI ₹520.60 ಕೋಟಿ
ವಿದೇಶ ₹205.72 ಕೋಟಿ

ಒಟ್ಟು ₹1239.97 ಕೋಟಿ

'ಕೆಜಿಎಫ್ 2' 50 ದಿನ ಆಗಿದ್ದು ಎಲ್ಲೆಲ್ಲಿ?

'ಕೆಜಿಎಫ್ 2' ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದು ಮೊದಲ ಸಾಧನೆ. ಉತ್ತರ ಭಾರತದ ಬಹುತೇಕ ಎಲ್ಲಾ ಕಡೆಗಳಲ್ಲೂ ಸೂಪರ್‌ ರೆಸ್ಪಾನ್ಸ್ ಸಿಕ್ಕಿದೆ. ವಿದೇಶದಲ್ಲಿಯೂ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗೆ ಅದ್ಭುತ ಗಳಿಕೆ ಕಂಡಿದೆ. ಉಳಿದಂತೆ ಎಲ್ಲಾ ಐದು ಭಾಷೆಯಲ್ಲೂ 'ಕೆಜಿಎಫ್ 2' ಸೂಪರ್‌ ಹಿಟ್ ಅಂತ ಸಾಬೀತಾಗಿದೆ. ಹಾಗಿದ್ದರೆ. 'ಕೆಜೆಎಫ್ 2' ಎಷ್ಟು ಕಡೆ 50 ದಿನಗಳನ್ನು ಪೂರೈಸಿದೆ ಅನ್ನುವ ಡಿಟೈಲ್ಸ್ ಇಲ್ಲಿದೆ. 'ಕೆಜಿಎಫ್ 2' ಮಾನ್‌ಸ್ಟರ್ ಹಿಟ್ ಅನ್ನೋದು ಸಾಬೀತಾಗಿದೆ. ಭಾರತದಲ್ಲಿ ಸುಮಾರು 390ಕ್ಕೂ ಅಧಿಕ ಸೆಂಟರ್‌ಗಳಲ್ಲಿ 50 ದಿನಗಳನ್ನು ಪೂರೈಸಿದೆ. ಇನ್ನು ವಿದೇಶದ 10ಕ್ಕೂ ಅಧಿಕ ಸೆಂಟರ್‌ಗಳಲ್ಲಿ 50 ದಿನ ರಿಲೀಸ್ ಆಗಿದೆ.

 'ಕೆಜಿಎಫ್ 3' ಬರುವುದು ಯಾವಾಗ?

'ಕೆಜಿಎಫ್ 3' ಬರುವುದು ಯಾವಾಗ?

'ಕೆಜಿಎಫ್ 2' ಕಲೆಕ್ಷನ್ ನೋಡಿ ಭಾರತದ ಎಲ್ಲಾ ಚಿತ್ರರಂಗವೂ ಶಾಕ್ ಆಗಿದೆ. ಕನ್ನಡ ಮೋಸ್ಟ್ ಎಕ್ಸ್‌ಪೆನ್ಸಿವ್ ಸಿನಿಮಾವನ್ನು ಎಲ್ಲಾ ಭಾಷೆಯಲ್ಲೂ ಮೆಚ್ಚಿಕೊಂಡಾಡಿದ್ದರು. ಈ ಕಾರಣಕ್ಕೆ 'ಕೆಜಿಎಫ್ 3' ಸಿನಿಮಾ ಬಗ್ಗೆನೂ ಕುತೂಹಲ ದುಪ್ಪಟ್ಟಾಗಿದೆ. ಆದರೆ, ಸದ್ಯಕ್ಕಂತೂ 'ಕೆಜಿಎಫ್ 3' ಸೆಟ್ಟೇರುವ ಸಾಧ್ಯತೆಯಿಲ್ಲ. ಕಮ್ಮಿ ಅಂದರೂ ಇನ್ನೂ ಮೂರರಿಂದ- ನಾಲ್ಕು ವರ್ಷ ಅನುಮಾನ ಎನ್ನಲಾಗುತ್ತಿದೆ.

More from Filmibeat

English summary
KGF Chapter 2 50 Days Box Office Collection Report, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X