'ಕೆಜಿಎಫ್ 2'ಗೆ ಒಂದು ವರ್ಷ.. NTR 31 ಪೋಸ್ಟ್‌ಪೋನ್..'ಕೆಜಿಎಫ್ 3' ಚಾಲನೆ ಸಿಗುತ್ತಾ? ಹೆಚ್ಚಿತು ನೆಟ್ಟಿಗರ ಒತ್ತಡ
'ಕೆಜಿಎಫ್ ಚಾಪ್ಟರ್ 1' ಹಾಗೂ 'ಕೆಜಿಎಫ್ ಚಾಪ್ಟರ್ 2' ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕು ತೋರಿಸಿಕೊಟ್ಟ ಸಿನಿಮಾ. ಈ ಎರಡೂ ಸಿನಿಮಾಗಳು ಪ್ರಶಾಂತ್ ನೀಲ್ ನಿರ್ದೇಶನದ ತಾಕತ್ತನ್ನು ಪರಿಚಯಿಸಿತ್ತು. ಇನ್ನೊಂದು ಕಡೆ ಯಶ್‌ಗೆ ನ್ಯಾಷನಲ್ ಸ್ಟಾರ್ ಪಟ್ಟವನ್ನೂ ಕೊಟ್ಟಿತ್ತು.
ಹೊಂಬಾಳೆ ಫಿಲ್ಮ್ಸ್‌ಗೆ 'ಕೆಜಿಎಫ್ ಚಾಪ್ಟರ್ 2' ಇನ್ನೊಂದಿಷ್ಟು ಸಿನಿಮಾ ಮಾಡುವುದಕ್ಕೆ ಶಕ್ತಿ ಕೊಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ಚಿತ್ರರಂಗವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಇದೇ ಸಿನಿಮಾ ರಿಲೀಸ್ ಆಗಿ ಇಂದಿಗೆ (ಏಪ್ರಿಲ್ 14) ಒಂದು ವರ್ಷ ಪೂರೈಸಿದೆ.

ಹೊಸ ಹೊಸ ದಾಖಲೆಗಳನ್ನು ಬರೆದ 'ಕೆಜಿಎಫ್ 2' ಕನ್ನಡ ಚಿತ್ರರಂಗದ ಹೆಮ್ಮೆಯ ಸಿನಿಮಾ ಅನ್ನೋದರಲ್ಲಿ ಡೌಟೇ ಇಲ್ಲ. ಇದೇ ಖುಷಿಯಲ್ಲಿ ಮತ್ತೆ ನೆಟ್ಟಿಗರು 'ಕೆಜಿಎಫ್ 3' ಬಗ್ಗೆ ಮಾತಾಡುತ್ತಿದ್ದಾರೆ. ಪ್ರಶಾಂತ್ ನೀಲ್ ಹಾಗೂ ಯಶ್ ಮತ್ತೆ ಯಾವಾಗ 'ಕೆಜಿಎಫ್ 3'ಗೆ ಒಂದಾಗುತ್ತಾರೋ ಕಾತುರದಲ್ಲಿ ಇದ್ದಾರೆ. ಹಾಗಿದ್ದರೆ, ಪ್ರಶಾಂತ್ ನೀಲ್ 'ಕೆಜಿಎಫ್ 3' ಕೈಗೆತ್ತಿಕೊಳ್ಳುತ್ತಾರಾ?
'ಕೆಜಿಎಫ್ 2'ಗೆ 1 ವರ್ಷ.. 'ಕೆಜಿಎಫ್ 3'ಯಾವಾಗ?
'ಕೆಜಿಎಫ್ ಚಾಪ್ಟರ್ 2' ರಿಲೀಸ್ ಆಗಿ ಒಂದು ವರ್ಷ ಆಗಿದೆ. ಇಡೀ ಚಿತ್ರತಂಡ ಈ ಸಿನಿಮಾ ಈ ಮಟ್ಟಿಗೆ ಸದ್ದು ಮಾಡಬಹುದು ಅನ್ನೋ ನಿರೀಕ್ಷೆ ಇರಲಿಲ್ಲ. ಆದರೆ, ಸಿನಿಮಾ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿದ ಮೇಲೆ 'ಕೆಜಿಎಫ್ 3'ಗೆ ಬೇಡಿಕೆ ಹೆಚ್ಚಾಗಿತ್ತು. ಆದರೆ, ಸದ್ಯಕ್ಕೆ 'ಕೆಜಿಎಫ್ 3' ಇಲ್ಲ ಅನ್ನೋ ಸುಳಿವನ್ನು ಹೊಂಬಾಳೆ ಫಿಲ್ಮ್ಸ್ ರವಾನೆ ಮಾಡಿತ್ತು.
ವಿಜಯ್ ಕಿರಗಂದೂರು ಶೀಘ್ರದಲ್ಲಿಯೇ 'ಕೆಜಿಎಫ್ 3' ಆರಂಭ ಮಾಡುತ್ತೇವೆ ಎಂದು ಹೇಳಿದ್ದರು. ಬಳಿಕ ಆ ನಿರ್ಧಾರದಿಂದ ಹಿಂದೆ ಸರಿದಿದ್ದರು. ಈಗ ನೆಟ್ಟಿಗರು ಮತ್ತೆ 'ಕೆಜಿಎಫ್ 3' ಸಿನಿಮಾ ಮಾಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಒತ್ತಡ ಹೇರಿದ್ದಾರೆ. ಹಾಗಿದ್ದರೆ 'ಕೆಜಿಎಫ್ 3' ಸಿನಿಮಾ ಆರಂಭ ಆಗುವ ಲಕ್ಷಣ ಏನಾದ್ರೂ ಇದೆಯಾ? ಈ ಪ್ರಶ್ನೆಗೆ ಚಿಕ್ಕದೊಂದು ಲೆಕ್ಕಾಚಾರ ಈಗಾಗಲೇ ಶುರುವಾಗಿದೆ.

NTR 31 ಪೋಸ್ಟ್‌ಪೋನ್.. 'ಕೆಜಿಎಫ್ 3' ಕಥೆಯೇನು?
'ಕೆಜಿಎಫ್ 3' ಬಳಿಕ ಪ್ರಶಾಂತ್ ನೀಲ್ ಒಂದರ ಹಿಂದೊಂದು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಸದ್ಯ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಸಲಾರ್'ದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮುಗಿಯುತ್ತಿದ್ದಂತೆ ಜೂ.ಎನ್‌ಟಿಆರ್ 31ನೇ ಸಿನಿಮಾವನ್ನು ಆರಂಭ ಮಾಡಬೇಕಿತ್ತು. ಆದ್ರೀಗ ಆ ಸಿನಿಮಾ ತಡವಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಜೂ.ಎನ್‌ಟಿಆರ್ ಹಾಗೂ ಕೊರಟಾಲ ಶಿವ ಕಾಂಬಿನೇಷನ್ ಸಿನಿಮಾ 'NTR 30' ಅಂದ್ಕೊಂಡಿದ್ದಕ್ಕಿಂತ ತಡವಾಗಿ ಸೆಟ್ಟೇರಿದೆ. ಈ ಸಿನಿಮಾ ಮುಗಿಯೋದು ತಡವಾಗುತ್ತೆ. ಈ ಮಧ್ಯೆನೇ ಬಾಲಿವುಡ್ ಸಿನಿಮಾಗೂ ಎನ್‌ಟಿಆರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'NTR 30' ಮುಗಿಯುತ್ತಿದ್ದಂತೆ ಅಯನ್ ಮುಖರ್ಜಿ ನಿರ್ದೇಶಿಸುತ್ತಿರುವ 'ವಾರ್ 2' ತಂಡ ಸೇರಿಕೊಳ್ಳಲಿದ್ದಾರೆ. ಈ ಗ್ಯಾಪ್‌ನಲ್ಲಿ 'ಕೆಜಿಎಫ್ 3' ಸೆಟ್ಟೇರಬಹುದಾ? ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ.
'ಕೆಜಿಎಫ್ 3'ಗೆ ಪ್ರಶಾಂತ್ ನೀಲ್ ಮನಸ್ಸು ಮಾಡಬಹುದಾ?
'ಕೆಜಿಎಫ್ 3' ಇಡೀ ದೇಶವೇ ಕಾದು ಕೂತಿರೋ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಈಗ 'NTR 31' ಪೋಸ್ಟ್‌ಪೋನ್ ಆಗಿರೋದ್ರಿಂದ ಗ್ಯಾಪ್‌ನಲ್ಲಿ 'ಕೆಜಿಎಫ್ 3' ಮಾಡಬಹುದಲ್ಲ ಅನ್ನೋ ಸಲಹೆಯನ್ನು ನೆಟ್ಟಿಗರು ನೀಡುತ್ತಿದ್ದಾರೆ. ಆದ್ರೀಗ ಯಶ್ ಮುಂದಿನ ಸಿನಿಮಾದ ತಯಾರಿಯಲ್ಲಿದ್ದು, ಶೀಘ್ರದಲ್ಲಿಯೇ 19ನೇ ಸಿನಿಮಾ ಸೆಟ್ಟೇರಿಸಲು ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಪ್ರಶಾಂತ್ ನೀಲ್, ಯಶ್ ಇಬ್ಬರೂ ಬೇರೆ ಬೇರೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆ ಸಿನಿಮಾ ಬಳಿಕ 'ಕೆಜಿಎಫ್ 3' ಬಗ್ಗೆ ಚಿಂತನೆ ಮಾಡಬಹುದು. ಆದರೆ, ಪ್ರಶಾಂತ್ ನೀಲ್ ಫ್ರೀ ಇದ್ದಾಗ ಯಶ್ ಬ್ಯುಸಿ, ಯಶ್ ಫ್ರೀ ಇದ್ದಾಗ ಪ್ರಶಾಂತ್ ನೀಲ್ ಬ್ಯುಸಿಯಾಗುವ ಸಾಧ್ಯತೆಯಿದೆ. ಆದ್ರೆ, ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಯಶ್, ಪ್ರಶಾಂತ್ ನೀಲ್ 'ಕೆಜಿಎಫ್ 3' ಅನೌನ್ಸ್ ಮಾಡುತ್ತಾರಾ? ಇಲ್ಲಾ ಇನ್ನೂ ಐದಾರು ವರ್ಷ ಕಾಯಬೇಕಾ? ಅನ್ನೋ ಪ್ರಶ್ನೆಯಂತೂ ಇದ್ದೇ ಇದೆ.


Click it and Unblock the Notifications











