KGF 2 Day 1 Collection: ಅಂದುಕೊಂಡಂತೆ 150 ಕೋಟಿ ಸಮೀಪಿಸಿದ 'ಕೆಜಿಎಫ್ 2' ಗಳಿಕೆ, ಆದರೂ RRR ದಾಖಲೆ ಅಳಿಸಲಿಲ್ಲ

ನಾಲ್ಕು ವರ್ಷ 'ಕೆಜಿಎಫ್ 2' ಸಿನಿಮಾಗಾಗಿ ಕಾದು ಕೂತಿದ್ದ ಫ್ಯಾನ್ಸ್ ಸಿನಿಮಾವನ್ನು ಕಣ್ತುಂಬಿಕೊಂಡಿದ್ದಾರೆ. ಮಧ್ಯರಾತ್ರಿಯಿಂದಲೇ 'ಕೆಜಿಎಫ್ 2' ಸಿನಿಮಾವನ್ನು ಮುಗಿಬಿದ್ದು ನೋಡಿದ್ದರು. ಕೆಲವಡೆ ಒಂದು-ಎರಡು ಎಕ್ಸ್‌ಟ್ರಾ ಶೋಗಳನ್ನು ಹಾಕಲಾಗಿತ್ತು. ಮೊದಲ ದಿನ ಸಿನಿಮಾ ಬಿಡುಗಡೆಯಾದ ಬಹುತೇಕ ಕಡೆ 'ಕೆಜಿಎಫ್ 2' ಹೌಸ್‌ಫುಲ್ ಪ್ರದರ್ಶನ ಕಂಡಿದೆ.

'ಕೆಜಿಎಫ್ 2' ಬಿಡುಗಡೆ ಆಗೋವರೆಗೂ ಸಿನಿಮಾ ಬಗ್ಗೆ ಕುತೂಹಲವಿತ್ತು. ಈಗ ಸಿನಿಮಾ ರಿಲೀಸ್ ಆಗಿದ್ದು, 'ಕೆಜಿಎಫ್ 2' ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಎಲ್ಲರ ಕಣ್ಣು ಬಿದ್ದಿದೆ. ಯಶ್ ಸಿನಿಮಾ ಯಾವ್ಯಾವ ಸಿನಿಮಾದ ದಾಖಲೆಯನ್ನು ಉಡೀಸ್ ಮಾಡುತ್ತೆ? ಬಾಕ್ಸಾಫೀಸ್‌ನಲ್ಲಿ ಯಾವ್ಯಾವ ಹೊಸ ದಾಖಲೆ ಸೃಷ್ಟಿಸುತ್ತೆ? ಎಂದು ತಿಳಿಯಲು ಕಾತುರರಾಗಿದ್ದಾರೆ.

'ಕೆಜಿಎಫ್ 2' ಸಿನಿಮಾಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ದಿನ ಸಿನಿಮಾ ನೋಡಿದ ಬಹುತೇಕ ಮಂದಿಗೆ 'ಕೆಜಿಎಫ್ 2' ಇಷ್ಟ ಆಗಿದೆ. ಆದರೆ ಈ ಸಿನಿಮಾ ರಾಜಮೌಳಿ ನಿರ್ದೇಶಿಸಿದ RRR ಚಿತ್ರದ ಮೊದಲ ದಿನದ ಗಳಿಕೆಯನ್ನು ಬೀಟ್ ಮಾಡುತ್ತಾ ಎಂಬ ಕುತೂಹಲವಿದೆ. ಆದರೆ, ಅದು ಸಾಧ್ಯವಾಗಿಲ್ಲ. ಹಾಗಿದ್ದರೆ, ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಮೊಲದ ವಿಶ್ವದಾದ್ಯಂತ ಗಳಿಸಿದ್ದು ಎಷ್ಟು ತಿಳಿಯಲು ಮುಂದೆ ಓದಿ.

Recommended Video

KGF 2 Collection | KGF 2 ಸಿನಿಮಾ ಕಲೆಕ್ಷನ್ ಬಗ್ಗೆ ವಿತರಕರು ಹೇಳೋದು ಏನು?

'ಕೆಜಿಎಫ್ 2' ಕರ್ನಾಟಕ ಕಲೆಕ್ಷನ್ ಎಷ್ಟು?

'ಕೆಜಿಎಫ್ 2' ಕರ್ನಾಟಕ ಕಲೆಕ್ಷನ್ ಎಷ್ಟು?

'ಕೆಜಿಎಫ್ 2' ಕರ್ನಾಟಕದಲ್ಲಿ ಫಸ್ಟ್ ಡೇ ಫುಲ್ ಪ್ಯಾಕ್ ಪ್ರದರ್ಶನ ಕಂಡಿದೆ. ಶೇ. 90ರಷ್ಟು ಚಿತ್ರಮಂದಿರಗಳು ಮೊದಲ ಉತ್ತಮ ಕಲೆಕ್ಷನ್ ಮಾಡಿದೆ ಎಂಬುದನ್ನು ವಿತರಕರು ಹೇಳುತ್ತಾರೆ. ಸುಮಾರು 400ಕ್ಕೂ ಹೆಚ್ಚು ಸಿಂಗಲ್‌ ಸ್ಕ್ರೀನ್‌ಗಳಲ್ಲಿ 'ಕೆಜಿಎಫ್ 2' ಬಿಡುಗಡೆಯಾಗಿತ್ತು. ಜೊತೆಗೆ ಮಲ್ಟಿಪ್ಲೆಕ್ಸ್‌ನಲ್ಲೂ ರಿಲೀಸ್ ಆಗಿದ್ದು, ಎಲ್ಲಾ ಕಡೆ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಈ ಕಾರಣಕ್ಕೆ ಕರ್ನಾಟಕದಲ್ಲಿ ಮೊದಲ ದಿನ ಬರೋಬ್ಬರಿ 38 ಕೋಟಿ ಗಳಿಸಿದೆ ಎಂದು ವಿತರಕರ ವಲಯ ಹೇಳುತ್ತಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಗಳಿಕೆ?

ಎಲ್ಲೆಲ್ಲಿ ಎಷ್ಟೆಷ್ಟು ಗಳಿಕೆ?

'ಕೆಜಿಎಫ್ 2' ಸಿನಿಮಾ ಬೇರೆ ಬೇರೆ ಭಾಷೆಗಳಲ್ಲೂ ಅದ್ಭುತ ಗಳಿಕೆ ಕಂಡಿದೆ. ಬಿಡುಗಡೆಗೂ ಮುನ್ನ ಕನ್ನಡಕ್ಕಿಂತ ಹಿಂದಿ, ತೆಲುಗು ಭಾಷೆಯಲ್ಲಿ ಹೆಚ್ಚು ಕ್ರೇಜ್ ಇದೆ ಎಂದು ಅಂದಾಜಿಸಲಾಗಿತ್ತು. ಅದಂತೆ ಉಳಿದ ನಾಲ್ಕು ಭಾಷೆಗಳಲ್ಲಿ ಕೆಜಿಎಫ್ ಕಲೆಕ್ಷನ್ 80 ಕೋಟಿ ದಾಟಿದೆ ಎನ್ನಲಾಗಿದೆ. ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಸುಮಾರು 40 ರಿಂದ 45 ಕೋಟಿ ಗಳಿಕೆ ಆಗಿದೆ ಎನ್ನಲಾಗುತ್ತಿದೆ. ತೆಲುಗು ಬಾಕ್ಸಾಫೀಸ್‌ನಲ್ಲಿ 25 ಕೋಟಿ, ತಮಿಳಿನಲ್ಲಿ 6 ರಿಂದ 7 ಹಾಗೂ ಮಲಯಾಳಂನಲ್ಲಿ 5 ಕೋಟಿ ದಾಟಿದೆ ಎನ್ನಲಾಗಿದೆ.

'ಕೆಜಿಎಫ್ 2' ಹವಾ ವಿದೇಶದಲ್ಲೂ ಜೋರು

'ಕೆಜಿಎಫ್ 2' ಹವಾ ವಿದೇಶದಲ್ಲೂ ಜೋರು

ಭಾರತದ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ದಾಖಲೆ ಬರೆದಿದೆ. ಕೇವಲ ಭಾರತದಲ್ಲೇ 100 ಕೋಟಿ ಕ್ಲಬ್ ಸೇರಿದೆ. ಹಾಗೇ ವಿದೇಶದಲ್ಲೂ 'ಕೆಜಿಎಫ್ 2' ರಿಲೀಸ್ ಆಗಿತ್ತು. ಅದ್ಧೂರಿಯಾಗಿ ಬಿಡುಗಡೆಯಾಗಿದ್ದ ಈ ಸಿನಿಮಾ ವಿದೇಶದಲ್ಲಿ ಸುಮಾರು 25 ಕೋಟಿ ಗಳಿಕೆ ಕಂಡಿದೆ ಎನ್ನಲಾಗಿದೆ. ಕರ್ನಾಟಕದ ವಿತರಕರ ಪ್ರಕಾರ, 'ಕೆಜಿಎಫ್ 2' ಮೊದಲ ಗಳಿಸಿದ ಒಟ್ಟು ಲೆಕ್ಕಚಾರ ಹೀಗಿದೆ.

KGF 2 Day 1 Worldwide Boxoffice Collection

ಕರ್ನಾಟಕ 38 ಕೋಟಿ (ಅಂದಾಜು)
ಹಿಂದಿ 40-45 ಕೋಟಿ (ಅಂದಾಜು)
ಆಂಧ್ರ, ತೆಲಂಗಾಣ 25 ಕೋಟಿ (ಅಂದಾಜು)
ತಮಿಳು ನಾಡು 6-7 ಕೋಟಿ (ಅಂದಾಜು)
ಕೇರಳ 5 ಕೋಟಿ (ಅಂದಾಜು)
ವಿದೇಶ 25 ಕೋಟಿ (ಅಂದಾಜು)
ಒಟ್ಟು 139-145 ಕೋಟಿ (ಅಂದಾಜು)

RRR ದಾಖಲೆ ಮುರಿಯಲಿಲ್ಲ

RRR ದಾಖಲೆ ಮುರಿಯಲಿಲ್ಲ

'ಕೆಜಿಎಫ್ 2' ರಾಜಮೌಳಿ ನಿರ್ದೇಶನದ RRR ಸಿನಿಮಾದ ದಾಖಲೆಯನ್ನು ಮುರಿಯುತ್ತೆ ಎಂದು ನಂಬಲಾಗಿತ್ತು. ಆದರೆ, ವಿತರಕರು ನೀಡಿದ ಅಂಕಿ ಅಂಶಗಳ ಪ್ರಕಾರ, RRR ದಾಖಲೆ ಮುರಿಯಲು ಸಾಧ್ಯವಾಗಿಲ್ಲ. ಜೂ.ಎನ್‌ಟಿಆರ್ ಹಾಗೂ ರಾಮ್‌ಚರಣ್ ಅಭಿನಯದ RRR ಮೊದಲ 223 ಕೋಟಿ ಗಳಿಕೆ ಮಾಡಿತ್ತು. ಅಸಲಿಗೆ 'ಕೆಜಿಎಫ್ 2' ಹಲವು ವಿತರಕರಿಂದ ಪಡೆದ ಮಾಹಿತಿಯಾಗಿದ್ದು, ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಕಲೆಕ್ಷನ್ ಬಗ್ಗೆ ಇನ್ನೂ ಮಾಹಿತಿ ಹೊರ ಹಾಕಬೇಕಿದೆ.

More from Filmibeat

English summary
Yash Starrer KGF 2 Day 1 worldwide Box Office Collection Distributor Count. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X