KGF Chapter 2 Collection : 'ಕೆಜಿಎಫ್ 2' ಮೊದಲ ದಿನದ ಗಳಿಕೆ ಲೆಕ್ಕ ಕೊಟ್ಟ ಹೊಂಬಾಳೆ ಫಿಲ್ಮ್ಸ್

'ಕೆಜಿಎಫ್ 2' ಬಿಡುಗಡೆಗೂ ಮುನ್ನವೇ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಾಕಿದ್ದ ಸಿನಿಮಾ. ಈ ಕಾರಣಕ್ಕೆ ಮೊದಲ ದಿನ ಗಳಿಕೆ ಯಾವ್ಯಾವ ದಾಖಲೆಗಳನ್ನು ಉಡೀಸ್ ಮಾಡುತ್ತೋ ಎಂದು ಎದುರು ನೋಡಿದ್ದರು. ಈ ಬೆನ್ನಲ್ಲೆ ಒಂದೊಂದು ಕಡೆಯಿಂದ ಒಂದೊಂದು ಲೆಕ್ಕಾಚಾರ ಹೊರ ಬಿದ್ದಿತ್ತು.

Recommended Video

KGF 2 OTT Release | ರಿಲೀಸ್ ಆದ ಕೆಲವೇ ದಿನಗಳಲ್ಲಿ OTT ಗೆ ಬರ್ತಿರೋದು ಯಾಕೆ 'KGF 2' ? | Yash

'ಕೆಜಿಎಫ್ 2' ಸಿನಿಮಾಗಿದ್ದ ಕ್ರೇಜ್, ಅಡ್ವಾನ್ಸ್ ಬುಕಿಂಗ್ ಹಾಗೂ ಪ್ರಿಮಿಯರ್ ಶೋಗಳನ್ನ ಆಧರಿಸಿ ವಿತರಕರ ಲೆಕ್ಕ ಬೇರೆನೇ ಇತ್ತು. ಈ ಸಿನಿಮಾ 150 ಕೋಟಿಯ ಆಸು-ಪಾಸಿನಲ್ಲಿ ಗಳಿಕೆ ಆಗುತ್ತೆ ಎಂದು ಅಂದಾಜು ಮಾಡಿದ್ದರು. ಅದರಂತೆ ಅವರ ಲೆಕ್ಕಚಾರದ ಸಮೀಪದಲ್ಲಿಯೇ ಮೊದಲ ದಿನ ಕಲೆಕ್ಷನ್ ಮಾಡಿದೆ. ಸ್ವತ: ಕೆಜಿಎಫ್ 2 ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಫಸ್ಟ್ ಡೇ ಕಲೆಕ್ಷನ್ ಎಷ್ಟು ಅನ್ನುವುದನ್ನು ಬಿಡುಗಡೆ ಮಾಡಿದೆ.

'KGF 2' ಮೊದಲ ದಿನ ಗಳಿಕೆ ಬಗ್ಗೆ ಹೊಂಬಾಳೆ ಕೊಟ್ಟ ಲೆಕ್ಕವೆಷ್ಟು?

'ಕೆಜಿಎಫ್ 2' ಮೊದಲ ದಿನ ಸುಮಾರು 10 ಸಾವಿರ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಹೀಗಾಗಿ ಫಸ್ಟ್ ಡೇನೇ ಒಂದಿಷ್ಟು ದಾಖಲೆಗಳು ಉಡೀಸ್ ಆಗೋದು ಗ್ಯಾರಂಟಿ ಅಂತಲೇ ಹೇಳಲಾಗಿತ್ತು. ಕರ್ನಾಟಕದ ವಿತರಕರೊಬ್ಬರ ಪ್ರಕಾರ 'ಕೆಜಿಎಫ್ 2' ಸಿನಿಮಾದ ಗಳಿಕೆ ಸುಮಾರು 139 ರಿಂದ 145 ಕೋಟಿ ಆಸುಪಾಸಿನಲ್ಲಿ ಗಳಿಕೆ ಆಗುತ್ತೆ ಎಂದು ಅಂದಾಜು ಮಾಡಲಾಗಿತ್ತು. ಆದ್ರೀಗ ಫಸ್ಟ್ ಡೇ ಎಷ್ಟು ಗಳಿಕೆ ಕಂಡಿದೆ ಎಂಬುದನ್ನು ಸ್ವತ: ಹೊಂಬಾಳೆ ಫಿಲ್ಮ್ಸ್ ಹೊರಹಾಕಿದೆ.

KGF Chapter 2 day 1 worldwide box office collection report by Hombale Films

'ಕೆಜಿಎಫ್ 2' ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಫಸ್ಟ್ ಡೇ ಕಲೆಕ್ಷನ್ ರಿಪೋರ್ಟ್ ಅನ್ನು ರಿವೀಲ್ ಮಾಡಿದೆ. ಹೊಂಬಾಳೆ ರಿವೀಲ್ ಮಾಡಿರುವ ಲೆಕ್ಕಾಚಾರದ ಪ್ರಕಾರ ಮೊದಲ ದಿನ ಸುಮಾರು 134.5 ಕೋಟಿ ಗಳಿಕೆಯಾಗಿದೆ ಎಂದು ಹೇಳಿದೆ. ಈ ಮೂಲಕ ಕರ್ನಾಟಕದ ವಿತರಕರು ಗೆಸ್ ಮಾಡಿದ ಸಮೀಪದಲ್ಲಿಯೇ ಕೆಜಿಎಫ್ ಕಲೆಕ್ಷನ್ ಆಗಿದೆ.

ಸ್ಟಾರ್ ಸಿನಿಮಾಗಳಿಗೆ 'ಕೆಜಿಎಫ್ 2' ಸೆಡ್ಡು

ಪ್ರಶಾಂತ್ ನೀಲ್ ನಿರ್ದೇಶಿಸಿದ 'ಕೆಜಿಎಫ್ 2' ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿದೆ. 10 ಸಾವಿರ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದ್ದರಿಂದ ಸಿನಿಮಾ ಆರಂಭದಲ್ಲಿಯೇ ದಾಖಲೆ ಗಳಿಕೆ ಮಾಡಲಿದೆ ಎಂಬುದು ಖಾತ್ರಿಯಾಗಿತ್ತು. ಅದರಂತೆಯೇ 'ಕೆಜಿಎಫ್ 2' ಸಿನಿಮಾ ದೊಡ್ಡ ಯಶಸ್ಸನ್ನು ಗಳಿಸಿದೆ.

ದಳಪತಿ ವಿಜಯ್ ಅಭಿನಯದ 'ಬೀಸ್ಟ್' ಸಿನಿಮಾದ ಕಲೆಕ್ಷನ್ ಅನ್ನೂ ಹಿಂದಿಕ್ಕಿದೆ. ಬಾಲಿವುಡ್‌ನಲ್ಲಿ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಮೊದಲ ದಿನವೇ 53 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಹೀಗೆ ಒಂದಿಷ್ಟು ದಾಖಲೆಗಳನ್ನಂತೂ ಮೊದಲ ದಿನವೇ ಮಾಡಿದೆ.

ಬ್ಯಾಕ್ ಟು ಬ್ಯಾಕ್ ರಜೆ ಇರುವುದರಿಂದ 'ಕೆಜಿಎಫ್ 2' ಸಿನಿಮಾ ಶುಕ್ರವಾರ, ಶನಿವಾರ ಹಾಗೂ ಭಾನುವಾರದ ಗಳಿಕೆ ಮೇಲೆ ಸಿನಿಮಾ ಅದೆಷ್ಟು ದಾಖಲೆಗಳನ್ನು ತಲೆಕೆಳಗೆ ಮಾಡಿದೆ ಎಂಬುದು ತಿಳಿಯಲಿದೆ. ಇನ್ನು ಎರಡು ವಾರಗಳ ಕಾಲ 'ಕೆಜಿಎಫ್ 2' ಓಟಕ್ಕೆ ಅಡೆ-ತಡೆ ಇಲ್ಲದೆ ಇದ್ದಿದ್ದರಿಂದ ಬಾಕ್ಸಾಫೀಸ್ ದಾಖಲೆ ಮೇಲೆ ಎಲ್ಲರ ಕಣ್ಣಿದೆ.

More from Filmibeat

English summary
KGF Chapter 2 day 1 worldwide box office collection report by Hombale Films. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X