ರಂಜಾನ್ ಹಬ್ಬದಂದು 'ಕೆಜಿಎಫ್ 2' ದಾಖಲೆ ಕಲೆಕ್ಷನ್ ಗ್ಯಾರಂಟಿ: 'ದಂಗಲ್' ರೆಕಾರ್ಡ್ ಬ್ರೇಕ್ ಆಗುತ್ತಾ?
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ವೇಗಕ್ಕೆ ಅದು ಯಾರೇ ಬಂದರೂ ಕಡಿವಾಣ ಹಾಕೋದಕ್ಕೆ ಸಾಧ್ಯವಾಗುತ್ತಿಲ್ಲ. ವೀಕೆಂಡ್‌ನಲ್ಲಂತೂ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಧೂಳೆಬ್ಬಿಸುತ್ತಲೇ ಇದೆ. ಇನ್ನೊಂದೆರಡು ದಿನಗಳಲ್ಲಿ 'ಕೆಜಿಎಫ್ 2' ಬಾಲಿವುಡ್‌ನಲ್ಲಿ ಹೊಸ ದಾಖಲೆಯನ್ನು ಮಾಡಬಹುದು. ಇಲ್ಲಾ ರಂಜಾನ್ ದಿನದಂದೇ ಹೊಸ ಇತಿಹಾಸ ಬರೆಯಬಹುದು.
ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ರಂಜಾನ್ ಮಹತ್ವದ ಪಾತ್ರವಹಿಸುತ್ತಿದೆ. ಈದ್ ವೇಳೆ ಬಿಡುಗಡೆಯಾದ ಸಿನಿಮಾಗಳು ಗಲ್ಲಾಪಟ್ಟಿಗೆಯಲ್ಲಿ ಹೊಸ ಹೊಸ ರೆಕಾರ್ಡ್‌ಗಳನ್ನು ಸೃಷ್ಟಿ ಮಾಡಿದೆ. 'ಕೆಜಿಎಫ್ 2' ಸಿನಿಮಾ ಕೂಡ ಈ ದಾಖಲೆಯನ್ನು ಮಾಡಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ. ಹಾಗಿದ್ದರೆ, ರಂಜಾನ್ ಹಬ್ಬದಂದು 'ಕೆಜಿಎಫ್ 2' ಸಿನಿಮಾ ಎಷ್ಟು ಕಲೆಕ್ಷನ್ ಮಾಡಬಹುದು? 'ದಂಗಲ್' ಲೈಫ್ ಟೈಮ್ ಕಲೆಕ್ಷನ್ ಅನ್ನು ಮೀರಿಸುಸುತ್ತಾ? ಅನ್ನೋದು ಕುತೂಹಲ ಎದ್ದಿದೆ.

ರಂಜಾನ್‌ನಲ್ಲಿ 'ಕೆಜಿಎಫ್ 2' ಕಿಕ್
'ಕೆಜಿಎಫ್ 2' ಮೂರು ವಾರಗಳಿಂದ ಗಳಿಕೆಯಲ್ಲಿ ಹಿಂದೆ ಬಿದಿಲ್ಲ. ಅದರಲ್ಲೂ ಹಿಂದಿ ಬೆಲ್ಟ್‌ನಲ್ಲಿ ದಾಖಲೆ ಗಳಿಕೆ ಮಾಡಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಈಗ ರಂಜಾನ್ ಹಬ್ಬ 'ಕೆಜಿಎಫ್ 2' ಪ್ಲಸ್ ಆಗುತ್ತಾ? ಮೈನಸ್ ಆಗುತ್ತಾ? ಅನ್ನೋದು ಕುತೂಹಲದಲ್ಲಿದೆ ಬಾಲಿವುಡ್. ರಂಜಾನ್ ಹಬ್ಬದಂದು 'ಕೆಜಿಎಫ್ 2' 15 ರಿಂದ 20 ಕೋಟಿ ಗಳಿಕೆ ಮಾಡಿದ್ರೆ, ದಂಗಲ್ ಕಲೆಕ್ಷನ್ ಅನ್ನು ಬೀಟ್ ಮಾಡುತ್ತೆ. ಈ ಮೂಲಕ ಬಾಲಿವುಡ್‌ನ ಎರಡನೇ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಪಟ್ಟಿಗೆ ಸೇರುತ್ತೆ.

19ನೇ ದಿನದ ಗಳಿಕೆ ಎಷ್ಟು?
ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ಸಿನಿಮಾವನ್ನು ಹಿಂದಿಕ್ಕಲು ಬಾಲಿವುಡ್ ನಟರೇ ಹರಸಾಹಸ ಪಡುತ್ತಿದ್ದಾರೆ. ಈ ಮಧ್ಯೆ ಸೋಮವಾರ(ಮೇ 2) ದಂದು 'ಕೆಜಿಎಫ್ 2' ಸಿನಿಮಾ ಮೂರು ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಈ ಮೂಲಕ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಈ 19 ದಿನಗಳಲ್ಲಿ 'ಕೆಜಿಎಫ್ 2' ಸಿನಿಮಾ 373.33 ಕೋಟಿ ಲೂಟಿ ಮಾಡಿದೆ ಎಂದು ತರನ್ ಆದರ್ಶ್ ಟ್ವೀಟ್ ಮಾಡಿದ್ದು, ರಂಜಾನ್ ಕಲೆಕ್ಷನ್ ಮೇಲೆ ಎಲ್ಲರ ಕಣ್ಣಿದೆ.
ರಂಜಾನ್ ಮೇಲೆ 'ಕೆಜಿಎಫ್ 2' ಕಣ್ಣು
ರಂಜಾನ್ ಹಬ್ಬದಂದು ಬಾಲಿವುಡ್ ಬಾಕ್ಸಾಫೀಸ್ ಫುಲ್ ಆಕ್ಟಿವ್ ಆಗುತ್ತೆ. ಈ ವೇಳೆ ಹೊಸ ಹೊಸ ದಾಖಲೆಗಳು ಬರೆಯುತ್ತವೆ. ಈ ಬಾರಿ ತೆರೆಕಂಡ 'ರನ್ ವೇ 34' ಹಾಗೂ 'ಹೀರೊಪಂತಿ 2' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿವೆ. ಹೀಗಾಗಿ ರಂಜಾನ್‌ನಲ್ಲಿ 'ಕೆಜಿಎಫ್ 2' ಸಿನಿಮಾ ಗಳಿಕೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಈ ಸಿನಿಮಾ ಮಂಗಳವಾರ (ಮೇ 3) 20 ಕೋಟಿಗೂ ಅಧಿಕ ಗಳಿಕೆ ಕಂಡರೆ ಸಿನಿಮಾ ಬಾಲಿವುಡ್ ದಂಗಲ್ ಗಳಿಸಿದ್ದ 387. 38 ಕೋಟಿ ಗಳಿಕೆಯನ್ನು ಮೀರಿಸಲಿದೆ.

ರಂಜಾನ್ ಮೇಲೆ 'ಕೆಜಿಎಫ್ 2' ಕಣ್ಣು
ರಂಜಾನ್ ಹಬ್ಬದಂದು ಬಾಲಿವುಡ್ ಬಾಕ್ಸಾಫೀಸ್ ಫುಲ್ ಆಕ್ಟಿವ್ ಆಗುತ್ತೆ. ಈ ವೇಳೆ ಹೊಸ ಹೊಸ ದಾಖಲೆಗಳು ಬರೆಯುತ್ತವೆ. ಈ ಬಾರಿ ತೆರೆಕಂಡ 'ರನ್ ವೇ 34' ಹಾಗೂ 'ಹೀರೊಪಂತಿ 2' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿವೆ. ಹೀಗಾಗಿ ರಂಜಾನ್‌ನಲ್ಲಿ 'ಕೆಜಿಎಫ್ 2' ಸಿನಿಮಾ ಗಳಿಕೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಈ ಸಿನಿಮಾ ಮಂಗಳವಾರ (ಮೇ 3) 20 ಕೋಟಿಗೂ ಅಧಿಕ ಗಳಿಕೆ ಕಂಡರೆ ಸಿನಿಮಾ ಬಾಲಿವುಡ್ ದಂಗಲ್ ಗಳಿಸಿದ್ದ 387. 38 ಕೋಟಿ ಗಳಿಕೆಯನ್ನು ಮೀರಿಸಲಿದೆ.
19ದಿನಗಳಲ್ಲಿ ಕೆಜಿಎಫ್ 2 ಗಳಿಸಿದ್ದು ಎಷ್ಟು?
'ಕೆಜಿಎಫ್ 2' ಕೇವಲ ಹಿಂದಿ ಬೆಲ್ಟ್‌ನಲ್ಲಿ ಅಷ್ಟೇ ಅಲ್ಲ. ಕನ್ನಡ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿಯೂ ಜೋರಾಗೇ ಕಲೆಕ್ಷನ್ ಮಾಡಿದೆ. 'ಕೆಜಿಎಫ್ 2' ಕನ್ನಡ ವರ್ಷನ್ ಬರೋಬ್ಬರಿ 100 ಕೋಟಿ ಶೇರ್ ಪಡೆದುಕೊಂಡಿದೆ. ತೆಲುಗಿನ ಎರಡೂ ರಾಜ್ಯಗಳಿಂದ 128 ಕೋಟಿ ಗಳಿಸಿದೆ. ಎಲ್ಲಾ ಕಡೆ ಒಂದೊಂದು ಮೈಲಿಗಲ್ಲು ದಾಟಿರುವ 'ಕೆಜಿಎಫ್ 2' ವಿಶ್ವದಾದ್ಯಂತ 19 ದಿನಗಳಲ್ಲಿ ಸುಮಾರು 1034.85 ಕೋಟಿ ಲೂಟಿ ಮಾಡಿದೆ.


Click it and Unblock the Notifications











