KGF 2 Day 2 Collection: ಯಶ್ ಇನ್ಮುಂದೆ ರಾಕಿಂಗ್ ಸ್ಟಾರ್ ಅಲ್ಲ.. ಬಾಕ್ಸಾಫೀಸ್ ಡಾನ್: 2 ನೇ ದಿನ ರಿಪೋರ್ಟ್ ಏನು?

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ನಿರೀಕ್ಷೆಯಂತೆ 'ಕೆಜಿಎಫ್ 2' ವಿಶ್ವದಾದ್ಯಂತ ಮೊದಲ ದಿನವೇ ದಾಖಲೆ ಗಳಿಕೆ ಮಾಡಿತ್ತು. ಈ ಬಾಕ್ಸಾಫೀಸ್ ರಿಪೋರ್ಟ್ ನೋಡಿ ಇಡೀ ವಿಶ್ವವೇ ಶಾಕ್ ಆಗಿದೆ. ಮೊದಲ ನಾಲ್ಕು ದಿನ ಎಷ್ಟು ಕಲೆಕ್ಷನ್ ಮಾಡುತ್ತೆ ಅನ್ನುವುದರ ಮೇಲೆ 'ಕೆಜಿಎಫ್ 2' ಬೇರೆ ಯಾವ್ಯಾವ ಸಿನಿಮಾದ ದಾಖಲೆ ಮುರಿದಿದೆ ಅನ್ನೋದನ್ನು ಗೆಸ್ ಮಾಡಬಹುದು.

ಅದೆಷ್ಟೆ ದೊಡ್ಡ ಸಿನಿಮಾ ಆಗಿದ್ದರೂ, ಫಸ್ಟ್ ಡೇ ಕಲೆಕ್ಷನ್‌ಗಿಂತ ಎರಡನೇ ದಿನದ ಕಲೆಕ್ಷನ್ ಕೊಂಚ ಕಡಿಮೆ ಆಗುತ್ತೆ. 'ಕೆಜಿಎಫ್ 2' ಮೊದಲ ದಿನದ ಗಳಿಕೆಗಿಂತ ಎರಡನೇ ದಿನದ ಗಳಿಕೆ ಮೇಲೆ ಕೊಂಚ ಹಿನ್ನೆಲೆ ಆಗಿರಬಹುದು. ಆದರೆ, ಭಾರತದ ಬಾಕ್ಸಾಫೀಸ್‌ಗೆ ಎರಡನೇ ದಿನವೂ ಭರ್ಜರಿ ಗಳಿಕೆ ಎನ್ನಲಾಗಿದೆ.

ಕನ್ನಡಕ್ಕಿಂತ ಹಿಂದಿ ಹಾಗೂ ತೆಲುಗಿನಲ್ಲಿ ಕ್ರೇಜ್ ಹೆಚ್ಚಾಗಿದೆ. ಹೀಗಾಗಿ ಕನ್ನಡ, ಹಿಂದಿ ಹಾಗೂ ತೆಲುಗು ಬಾಕ್ಸಾಫೀಸ್‌ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಕೆಲವು ಟ್ರೇಡ್ ಅನಲಿಸ್ಟ್ ಪ್ರಕಾರ, ಎರಡನೇ ದಿನ ಹಿಂದಿ ಮಾರ್ಕೆಟ್‌ನಲ್ಲಿ ದೊಡ್ಡ ಕಲೆಕ್ಷನ್ ಆಗಿದೆ. ಹಾಗಿದ್ದರೆ, ಉಳಿದ ಕಡೆಗಳಲ್ಲಿ ಎಷ್ಟು ಕಲೆಕ್ಷನ್ ಆಗಿದೆ? ತಿಳಿಯಲು ಮುಂದೆ ಓದಿ.

2ನೇ ದಿನ 'ಕೆಜಿಎಎಫ್ 2' ಗಳಿಸಿದ್ದೆಷ್ಟು?

2ನೇ ದಿನ 'ಕೆಜಿಎಎಫ್ 2' ಗಳಿಸಿದ್ದೆಷ್ಟು?

ವಿಶ್ವದಾದ್ಯಂತ 'ಕೆಜಿಎಫ್ 2' ಸಿನಿಮಾಗೆ ಪ್ರೇಕ್ಷಕರಿಂದ ಸೂಪರ್ ರೆಸ್ಪಾನ್ಸ್ ಸಿಗುತ್ತಿದೆ. ಮೊದಲ ದಿನ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವೊಂದು ದಾಖಲೆ ಗಳಿಕೆ ಮಾಡಿದ್ದು, ಎರಡನೇ ದಿನದ ಕಲೆಕ್ಷನ್ ಅನ್ನು ಎದುರು ನೋಡುವಂತೆ ಮಾಡುತ್ತಿದೆ. ಈ ಕಾರಣಕ್ಕೆ ಎರಡನೇ ದಿನವೂ ವಿಶ್ವದಾದ್ಯಂತ ಅದ್ಭುತ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಒಂದು ಅಂದಾಜಿನ ಪ್ರಕಾರ, ಎರಡೂ ದಿನದ ಗಳಿಕೆ ಸುಮಾರು 230 ಕೋಟಿ ಆಗಬಹುದು ಎಂದು ಅಂದಾಜಿಸಲಾಗಿದೆ.

2ನೇ ದಿನದ 'KGF 2' ಹಿಂದಿ ಕಲೆಕ್ಷನ್ ಎಷ್ಟು?

'ಕೆಜಿಎಫ್ 2' ಓಟ ಹಿಂದಿ ಮಾರ್ಕೆಟ್‌ನಲ್ಲಿ ಜೋರಾಗಿದೆ. ಮೊದಲ ದಿನ ಈ ಸಿನಿಮಾ 53.95 ಕೋಟಿ ಗಳಿಕೆ ಕಂಡಿತ್ತು. ಎರಡನೇ ದಿನ 45 ಕೋಟಿ ನೆಟ್ ಕಲೆಕ್ಷನ್ ಆಗಿದೆ ಎಂದು ಟ್ರೇಡ್ ಅನಲಿಸ್ಟ್ ರಮೇಶ್ ಬಾಲ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಈ ಮೂಲಕ ಎರಡನೇ ದಿನ 'ಕೆಜಿಎಫ್ 2' ಕಲೆಕ್ಷನ್ 55 ರಿಂದ 60 ಕೋಟಿ ದಾಟಿರುವ ಸಾಧ್ಯತೆ ಇದೆ. ಹೀಗಾಗಿ 'ಕೆಜಿಎಫ್ 2' ಮಾರ್ಕೆಟ್‌ನಲ್ಲಿ ಎರಡೇ ದಿನಕ್ಕೆ 100 ಕ್ಲಬ್ ಸೇರಿದೆ. ಉತ್ತರ ಪ್ರದೇಶ, ಬಿಹಾರ ಹಾಗೂ ಇನ್ನು ಹಲವೆಡೆ ಸಿನಿಮಾದ ಕಲೆಕ್ಷನ್ ಜೋರಾಗೇ ಇದೆ.

ವಿದೇಶದಲ್ಲೂ 'ಕೆಜಿಎಫ್ 2' ಹವಾ

ವಿದೇಶದಲ್ಲೂ 'ಕೆಜಿಎಫ್ 2' ಹವಾ

'ಕೆಜಿಎಫ್ 2' ಸಿನಿಮಾ ವಿಶ್ವದ ಹಲವೆಡೆ ರಿಲೀಸ್ ಆಗಿದೆ. ಬಹುತೇಕ ಕಡೆ ಕನ್ನಡ ಸಿನಿಮಾ ಬಿಡುಗಡೆನೇ ಆಗಿರಲಿಲ್ಲ. ಈ ಎಲ್ಲಾ ಕಡೆಯಿಂದಲೂ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಉತ್ತರ ಅಮೆರಿಕದಲ್ಲಿ 'ಕೆಜಿಎಫ್ 2' ಸಿನಿಮಾ ಗಳಿಕೆ ಕೂಡ ಜೋರಾಗೇ ಇದೆ. ಎರಡೇ ದಿನಕ್ಕೆ ಸಿನಿಮಾ ಸುಮಾರು 18 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ದೇಶದ ಮೂಲೆ ಮೂಲೆಯಲ್ಲೂ ಕಲೆಕ್ಷನ್ ಎಚ್ಚಾಗುತ್ತಲೇ ಇದೆ.

ಬಾಹುಬಲಿ 2 ಹಿಂದಿಕ್ಕಿದ್ದ 'ಕೆಜಿಎಫ್ 2'

ಬಾಹುಬಲಿ 2 ಹಿಂದಿಕ್ಕಿದ್ದ 'ಕೆಜಿಎಫ್ 2'

ಮೊದಲ ದಿನ ಹಿಂದಿ ಬಾಕ್ಸಾಫೀಸ್‌ನಲ್ಲಿ 'ಬಾಹುಬಲಿ 2' ಕೆಲೆಕ್ಷನ್ ಆನ್ನು ಸೈಡಿಗಟ್ಟಿದೆ. ಬಾಹುಬಲಿ 2 ಫಸ್ಟ್ ಡೇ 58 ಕೋಟಿ ಲೂಟಿ ಮಾಡಿತ್ತು. ಆದರೆ, 'ಕೆಜಿಎಫ್ 2' ಮೊದಲ ದಿನ 61 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಹೀಗಾಗಿ ಎರಡನೇ ದಿನವೂ ದೊಡ್ಡ ಮೊತ್ತ ಕಲೆ ಹಾಕಿರುತ್ತೆ. ಆದರೆ, ಇನ್ನೂ ಸಿನಿಮಾ ಬಾಕ್ಸಾಫೀಸ್ ಗಳಿಕೆಯ ಕಂಪ್ಲೀಟ್ ರಿಪೋರ್ಟ್ ಹೊರಬೀಳಬೇಕಿದೆ.

More from Filmibeat

English summary
KGF Chapter 2 day 2 worldwide box office collection report. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X