'KGF 2' 25 ದಿನಗಳ ಸಂಭ್ರಮ: ಈ 24 ದಿನಗಳಲ್ಲಿ ವಿಶ್ವದಾದ್ಯಂತ ಗಳಿಸಿದ್ದೆಷ್ಟು?

'ಕೆಜಿಎಫ್ ಚಾಪ್ಟರ್ 2' ಬಿಡುಗಡೆಯಾಗಿ ಇಂದಿಗೆ (ಮೇ 8) 25 ದಿನಗಳನ್ನು ಪೂರೈಸಿದೆ. ಕಳೆದ 24 ದಿನಗಳಲ್ಲಿ 'ಕೆಜಿಎಫ್ 2' ಸಿನಿಮಾ ಹಲವು ದಾಖಲೆಗಳನ್ನು ಮುರಿದಿದೆ. ಪ್ರೇಕ್ಷಕರು ಥಿಯೇಟರ್‌ನಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಬಾಕ್ಸಾಫೀಸ್‌ನಲ್ಲಿ ನಾಲ್ಕನೇ ವಾರವನ್ನು ಯಶಸ್ವಿಯಾಗಿ ಕಳೆದಿದ್ದು, 5ನೇ ವೀಕೆಂಡ್‌ಗೆ ಕಾಲಿಟ್ಟಿದೆ. ಶನಿವಾರ ಹಾಗೂ ಭಾನುವಾರ 'ಕೆಜಿಎಫ್‌ 2' ಬಿಡುಗಡೆಯಾದಲ್ಲಿಂದ ವರವಾಗುತ್ತಲೇ ಇದೆ.

ನಿನ್ನೆ( ಮೇ 07) ಕೂಡ 'ಕೆಜಿಎಫ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ತಕ್ಕ ಮಟ್ಟಿಗೆ ಉತ್ತಮ ಕಲೆಕ್ಷನ್ ಮಾಡಿದೆ. ಕಳೆದ ವಾರಕ್ಕೆ ಹೋಲಿಸಿದರೆ, ಹಿಂದಿ ಬೆಲ್ಟ್‌ನಲ್ಲಿ ಕೇವಲ 5 ಪರ್ಸೆಂಟ್‌ನಷ್ಟು ಕುಸಿತ ಕಂಡಿದೆ ಎನ್ನಲಾಗಿದೆ. ಹೀಗಾಗಿ ಇಂದು ಕೂಡ 'ಕೆಜಿಎಫ್ 2' ಕಲೆಕ್ಷನ್ ಭರ್ಜರಿಯಾಗಿಯೇ ಇರುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ.

'ಕೆಜಿಎಫ್ 2' ಸಿನಿಮಾ ಕನ್ನಡದ ಜೊತೆ ಜೊತೆಗೆ ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಕಲೆಕ್ಷನ್ ಭೇಟೆ ಮುಂದುವರೆಸಿದೆ. ಟ್ರೇಡ್ ಅನಲಿಸ್ಟ್ ಪ್ರಕಾರ, ಈ ವೀಕೆಂಡ್‌ನಲ್ಲೂ ಕಲೆಕ್ಷನ್ ಜೋರಾಗಿರುತ್ತೆ ಎಂದು ಲೆಕ್ಕಾಚಾರ ಹಾಕಿದ್ದಾರೆ. ಅದರಲ್ಲೂ ಹಿಂದಿ ಹಾಗೂ ತಮಿಳು ವರ್ಷನ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

'ಕೆಜಿಎಫ್ 2' ವರ್ಲ್ಡ್‌ವೈಡ್ ಕಲೆಕ್ಷನ್ ಎಷ್ಟು?

'ಕೆಜಿಎಫ್ 2' ಸಿನಿಮಾ ರಿಲೀಸ್ ಆಗಿ ಇಂದಿಗೆ (ಮೇ 8) 25 ದಿನಗಳಾಗಿವೆ. ಕಳೆದ 24 ದಿನಗಳಲ್ಲಿ 'ಕೆಜಿಎಫ್ 2' ಸಿನಿಮಾವನ್ನೂ ಯಾರಿಂದನೂ ಅಲ್ಲಾಡಿಸಲಾಗಲಿಲ್ಲ. ವಿಶ್ವದಾದ್ಯಂತ ಕನ್ನಡ ಪ್ಯಾನ್ ಇಂಡಿಯಾ ಸಿನಿಮಾವೊಂದು ನೂರೆಂಟು ದಾಖಲೆಗಳನ್ನು ಮಾಡುತ್ತಾ ಮುಂದಕ್ಕೆ ಹೋಗುತ್ತಲೇ ಇದೆ. ಈ 24 ದಿನಗಳಲ್ಲಿ 'ಕೆಜಿಎಫ್ 2' ಕಲೆಕ್ಷನ್ ಪಟ್ಟಿಗೆ ಇನ್ನೊಂದು ನೂರು ಕೋಟಿ ಸೇರ್ಪಡೆಯಾಗಿದೆ. ಹೌದು, 'ಕೆಜಿಎಫ್ 2' ಕಲೆಕ್ಷನ್ ಈಗ 1104 ಕೋಟಿ ದಾಟಿದೆ. ಅದರ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ.

ಹಿಂದಿ ಬೆಲ್ಡ್‌ನಲ್ಲಿ 400 ಕೋಟಿ ಕಲೆಕ್ಷನ್

ಹಿಂದಿ ಬೆಲ್ಡ್‌ನಲ್ಲಿ 400 ಕೋಟಿ ಕಲೆಕ್ಷನ್

ಹಿಂದಿ ಮಾರುಕಟ್ಟೆಯಲ್ಲಿ 'ಕೆಜಿಎಫ್ 2' ಸಾಧನೆ ಕಮ್ಮಿಯೇನಲ್ಲ. ಸಿನಿಮಾ ಬಿಡುಗಡೆಯಾದಲ್ಲಿಂದ 'ಕೆಜಿಎಫ್ 2' ಕಲೆಕ್ಷನ್ ಇಂತಿದ್ದೇ ಇಲ್ಲ. 25 ದಿನಗಳ ಹೊತ್ತಿಗೆ 'ಕೆಜಿಎಫ್ 2' ಕಲೆಕ್ಷನ್ ಕೊಂಚ ತಗ್ಗಿರಬಹುದು. ಆದರೆ, ಕಮ್ಮಿ ಅಂತೂ ಆಗಿಲ್ಲ. ಟ್ರೇಡ್ ಅನಲಿಸ್ಟ್‌ಗಳ ಲೆಕ್ಕಾಚಾರದ ಪ್ರಕಾರ, 'ಕೆಜಿಎಫ್ 2' ಬಾಕ್ಸಾಫೀಸ್‌ನಲ್ಲಿ ಇನ್ನೂ 3 ರಿಂದ 4 ಕೋಟಿ ಗಳಿಕೆ ಮಾಡುವಲ್ಲಿ ಯಶಸ್ವಿಯಾಗಿದೆ ಎನ್ನುತ್ತಿದ್ದಾರೆ. ಇವರ ಪ್ರಕಾರ, 'ಕೆಜಿಎಫ್ 2' ಹಿಂದಿ ಬೆಲ್ಟ್‌ನಲ್ಲಿ 403 ರಿಂದ 405 ಕೋಟಿ ಗಳಿಸಿರಬಹುದು ಎನ್ನಲಾಗುತ್ತಿದೆ.

'ಕೆಜಿಎಫ್ 2' ಮುಂದೆ 'ಬೀಸ್ಟ್' ಲೆಕ್ಕಕ್ಕಿಲ್ಲ

'ಕೆಜಿಎಫ್ 2' ಮುಂದೆ 'ಬೀಸ್ಟ್' ಲೆಕ್ಕಕ್ಕಿಲ್ಲ

'ಕೆಜಿಎಫ್ 2' ಸಿನಿಮಾ ಎಲ್ಲೆಲ್ಲಿ ಬಿಡುಗಡೆಯಾಗಿಯೋ ಅಲ್ಲೆಲ್ಲಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಲೇ ಇದೆ. 'ಬೀಸ್ಟ್' ನಿನ್ನೆನೇ 25 ದಿನಗಳನ್ನು ಪೂರೈಸಿದೆ. ಆದರೂ, 'ಕೆಜಿಎಫ್ 2' ಕಲೆಕ್ಷನ್ ಹತ್ತಿರಕ್ಕೂ ಬಂದಿಲ್ಲ. 'ಬೀಸ್ಟ್' 25ನೇ ದಿನ ತಮಿಳುನಾಡಿನಲ್ಲಿ 2.5 ಲಕ್ಷ ಗಳಿಕೆ ಕಂಡಿದೆ. ಅದೇ 'ಕೆಜಿಎಫ್ 2' ತಮಿಳುನಾಡಿನಲ್ಲಿ 96 ಲಕ್ಷ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಹಾಗೆ ನೋಡಿದರೆ, 'ಬೀಸ್ಟ್' ಹಾಗೂ 'ಕೆಜಿಎಫ್ 2' ನಡುವೆ ಅಜಗಜಾಂತರ ವ್ಯತ್ಯಾಸವಿದೆ.

ತಲೆಕೆಳಗಾಗುತ್ತಾ ಲೆಕ್ಕಾಚಾರ?

ತಲೆಕೆಳಗಾಗುತ್ತಾ ಲೆಕ್ಕಾಚಾರ?

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಹಿಂದೆ ಬೆಲ್ಟ್‌ನಲ್ಲಿ 400 ಕೋಟಿ ಕ್ಲಬ್ ಸೇರಿದ್ದು ಸಾಮಾನ್ಯ ಸಂಗತಿಯೇನಲ್ಲ. ಈಗಲೂ ಕೆಜಿಎಫ್ 2 ಸಿನಿಮಾ ದಾಖಲೆ ಗಳಿಕೆ ಮಾಡುತ್ತಿದೆ. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, 'ಕೆಜಿಎಫ್ 2' ಹಿಂದಿ ಬೆಲ್ಟ್‌ನಲ್ಲಿ ಲೈಫ್ ಟೈಮ್‌ನಲ್ಲಿ ಸುಮಾರು 430 ರಿಂದ 435 ಕೋಟಿ ಕಲೆಕ್ಷನ್ ಮಾಡಬಹುದು ಎಂದು ಅಂದಾಜಿಸಲಾಗಿದೆ. ಹಾಗಾದರೆ, 'ಬಾಹುಬಲಿ 2' ದಾಖಲೆಯನ್ನು ಬೀಟ್ ಮಾಡಲು ಸಾಧ್ಯವಾಗುವುದಿಲ್ಲ.

More from Filmibeat

English summary
Yash Starrer KGF Chapter 2 Day 24 Worldwide Box Office Collection Report. Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X