25ನೇ ದಿನದ ಬಳಿಕ ಮತ್ತೆ ಚಿಗುರಿದ 'ಕೆಜಿಎಫ್ 2' ಕಲೆಕ್ಷನ್ : 26ನೇ ದಿನವೂ ಭರ್ಜರಿ ಗಳಿಕೆ!

ಯಾರಿಗೂ ಜಗ್ಗುತ್ತಿಲ್ಲ.. ಯಾವ ಸಿನಿಮಾಗೂ ಅಂಜುತ್ತಿಲ್ಲ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಮತ್ತೆ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ಬಳಿಕವೂ ಗಲ್ಲಾಪಟ್ಟಿಗೆ ದೋಚುವುದನ್ನು ನಿಲ್ಲಿಸಿಲ್ಲ. 'ಕೆಜಿಎಫ್' ನಾಗಾಲೋಟ 26ನೇ ದಿನವೂ ಭರ್ಜರಿಯಾಗಿದೆ.

Recommended Video

'KGF 2' 26th day collection|ಟ್ರೇಡ್ ಅನಾಲಿಸ್ಟ್‌ಗಳ ಲೆಕಾಚಾರ ಉಲ್ಟ ಮಾಡಿದ 'KGF 2' | Filmibeat Kannada

'ಕೆಜಿಎಫ್ 2' ಬಾಕ್ಸಾಫೀಸ್‌ ಲೆಕ್ಕಾಚಾರದ ವಿಚಾರದಲ್ಲಿ ಟ್ರೇಡ್ ಅನಲಿಸ್ಟ್‌ಗಳ ಲೆಕ್ಕಾಚಾರವೆಲ್ಲಾ ತಲೆಕೆಳಗಾಗಿದೆ. ದಿನದಿಂದ ದಿನಕ್ಕೆ ಬಾಕ್ಸಾಫೀಸ್ ಕಲೆಕ್ಷನ್ ಕೋಟಿ ಕೋಟಿ ಲೂಟಿ ಮಾಡಿದ್ದು, 26ನೇ ದಿನವೂ ದಾಖಲೆ ಗಳಿಕೆ ಮಾಡಿದೆ. ಸಿನಿಮಾ ಬಿಡುಗಡೆಗೊಂಡು 26ನೇ ದಿನವೂ ಭಾರತದ ಯಾವುದೇ ಸಿನಿಮಾ ಮಾಡದಷ್ಟು ಕಲೆಕ್ಷನ್ 'ಕೆಜಿಎಫ್ 2' ಮಾಡಿದೆ.

'ಬಾಹುಬಲಿ 2' ಸಿನಿಮಾ ಕೂಡ 26ನೇ ದಿನದಲ್ಲಿ ಈ ಮಟ್ಟಿಗೆ ಗಳಿಕೆ ಮಾಡಿರಲಿಲ್ಲ. ಹಿಂದಿ ಬೆಲ್ಟ್‌ನಲ್ಲಿ ಶೇ . 3.67 ಕುಸಿತ ಕಂಡು ಕೇವಲ 2.8 ಕೋಟಿ ಗಳಿಸಿತ್ತು. ಇನ್ನು ವಿಶ್ವದಾದ್ಯಂತ ಬಾಹುಬಲಿ ಕ್ರೇಜ್ ಹೆಚ್ಚಿದ್ದರೂ, ಇಷ್ಟೊತ್ತಿಗಾಗಲೇ 'ಕೆಜಿಎಫ್‌ 2'ಗಿಂತ ಹೆಚ್ಚು ಲೂಟಿ ಮಾಡಿತ್ತು. ಹೀಗಾಗಿ 'ಕೆಜಿಎಫ್ 2' ಸಿನಿಮಾ 'ಬಾಹುಬಲಿ 2' ದಾಖಲೆಯನ್ನು ಇನ್ನೆಷ್ಟು ದಿನಗಳಲ್ಲಿ ಮುರಿಯಬಹುದೆಂಬ ಲೆಕ್ಕಾಚಾರ ಶುರುವಾಗಿದೆ.

'ಕೆಜಿಎಫ್ 2' 26ನೇ ದಿನದ ಗಳಿಕೆ ಎಷ್ಟು?

'ಕೆಜಿಎಫ್ 2' 26ನೇ ದಿನದ ಗಳಿಕೆ ಎಷ್ಟು?

ಮೇ 8 ಭಾನುವಾರದಂದು 'ಕೆಜಿಎಫ್ 2' ಸಿನಿಮಾ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿತ್ತು. 25 ದಿನನೇ ದಿನ 'ಕೆಜಿಎಫ್ 2' ಗಳಿಕೆ ದಿಢೀರನೇ ಗಗನಕ್ಕೇರಿತ್ತು. 25ನೇ ದಿನವೂ ಕೂಡ 24.65 ಕೋಟಿ ಲೂಟಿ ಮಾಡಿತ್ತು. ಆದರೆ, ಸೋಮವಾರ ಕೂಡ 'ಕೆಜಿಎಫ್ 2' ಕಲೆಕ್ಷನ್ ಕಮ್ಮಿಯಾಗಲಿಲ್ಲ. 5ನೇ ವಾರದ ಮೊದಲ ದಿನವೂ ವಿಶ್ವದಾದ್ಯಂತ 'ಕೆಜಿಎಫ್ 2' ಗಳಿಕೆ ಭರ್ಜರಿಯಾಗಿಯೇ ಇದೆ. ಟ್ರೇಡ್ ಅನಲಿಸ್ಟ್ ಮನೊಬಾಲ ವಿಜಯಬಾಲನ್ ಪ್ರಕಾರ, 26ನೇ ದಿನದ 'ಕೆಜಿಎಫ್ 2' ಕಲೆಕ್ಷನ್ ಭಾನುವಾರಕ್ಕಿಂತ ಹೆಚ್ಚಿದ್ದು, 25.42 ಕೋಟಿ ಮಾಡಿದೆ. 26ನೇ ದಿನ ಇಷ್ಟೊಂದು ಏರಿಕೆ ಕಂಡಿದ್ದು ಸಿನಿಮಾ ಮಂದಿಗೆ ಶಾಕ್ ಕೊಟ್ಟಂತಾಗಿದೆ.

26 ದಿನಗಳಲ್ಲಿ 'ಕೆಜಿಎಫ್ 2' ಒಟ್ಟು ಗಳಿಕೆ ಎಷ್ಟು?

'ಕೆಜಿಎಫ್ 2' ಸಿನಿಮಾ 26 ದಿನಗಳಲ್ಲಿ ವಿಶ್ವದಾದ್ಯಂತ 1200 ಕೋಟಿ ಕ್ಲಬ್ ಸೇರುವ ಗುರಿ ಹೊಂದಿದೆ. ಕಳೆದ ಎರಡು ದಿನಗಳ ಕಲೆಕ್ಷನ್ ನೋಡಿದರೆ, ಇನ್ನು ಎರಡು ಮೂರು ದಿನಗಳಲ್ಲಿ 1200 ಕೋಟಿಯನ್ನು ಸುಲಭವಾಗಿ ಲೂಟಿ ಮಾಡಲಿದೆ. 26ನೇ ದಿನದ 25 ಕೋಟಿ ಗಳಿಕೆಯನ್ನೂ ಸೇರಿ, ವಿಶ್ವದಾದ್ಯಂತ ಸುಮಾರು 1154.20 ಕೋಟಿ ಲೂಟಿ ಮಾಡಿದೆ. ಟ್ರೇಡ್ ಅನಲಿಸ್ಟ್ ಮನೊಬಾಲ ವಿಜಯಬಾಲನ್ ಕೊಟ್ಟ ಲೆಕ್ಕಾಚಾರ ಹೀಗಿದೆ.

'ಕೆಜಿಎಫ್ 2', 'ಬಾಹುಬಲಿ 2'ಗಿರುವ ಸಾಮ್ಯತೆಯೇನು?

'ಕೆಜಿಎಫ್ 2', 'ಬಾಹುಬಲಿ 2'ಗಿರುವ ಸಾಮ್ಯತೆಯೇನು?

'ಕೆಜಿಎಫ್ 2' 26 ದಿನಗಳಿಗೆ 1154 ಕೋಟಿ ಲೂಟಿ ಮಾಡಿದೆ. ಅದೇ 'ಬಾಹುಬಲಿ 2' 26ನೇ ದಿನ 1600 ಕೋಟಿ ಲೂಟಿ ಮಾಡಿತ್ತು. ಹೀಗಾಗಿ 26 ದಿನಗಳಲ್ಲಿ ಎರಡು ಸಿನಿಮಾಗಳ ಗಳಿಕೆಯಲ್ಲಿ ದೊಡ್ಡ ಅಂತರವೇ ಇದೆ. ಆದರೆ, 'ಕೆಜಿಎಫ್ 2' ಪ್ಲಾಸ್ ಪಾಯಿಂಟ್ ಏನೆಂದರೆ, ಇದರ ಬಾಕ್ಸಾಫೀಸ್‌ ದರ್ಬಾರ್ ಇನ್ನೂ ಕಮ್ಮಿಯಾಗಿಲ್ಲ. ಇಷ್ಟೊತ್ತಿಗಾಗಲೇ 'ಬಾಹುಬಲಿ 2' ಬಾಕ್ಸಾಫೀಸ್ ಓಟ ಗಣನೀಯವಾಗಿ ಇಳಿಮುಖವಾಗಿತ್ತು. ಆದರೆ, 'ಕೆಜಿಎಫ್ 2' ಗಳಿಕೆ ಮೇಲ್ಮುಖವಾಗಿದೆ.

'ಕೆಜಿಎಫ್ 2' ಚೀನಾದಲ್ಲಿ ರಿಲೀಸ್ ಆಗಿಲ್ಲ

'ಕೆಜಿಎಫ್ 2' ಚೀನಾದಲ್ಲಿ ರಿಲೀಸ್ ಆಗಿಲ್ಲ

ವಿಶ್ವದಾದ್ಯಂತ ಅತಿ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ 'ದಂಗಲ್' ಹಾಗೂ 'ಬಾಹುಬಲಿ 2 ಇದೆ. ಚೀನಾ ಬಾಕ್ಸಾಫೀಸ್‌ನಲ್ಲಿ 'ದಂಗಲ್' 1450 ಕೋಟಿಗೂ ಅಧಿಕ ಗಳಿಕೆ ಕಂಡಿದ್ದರೆ, ಇನ್ನೊಂದು ಕಡೆ 'ಬಾಹುಬಲಿ 2' ಚೀನಾದಲ್ಲೂ ಮಕಾಡೆ ಮಲಗಿತ್ತು. ಅತೀ ಹೆಚ್ಚು ಗಳಿಕೆ ಕಂಡ ಎರಡು ಸಿನಿಮಾಗಳ ಚೀನಾ ಬಾಕ್ಸಾಫೀಸ್‌ ರಿಸಲ್ಟ್ ಕೂಡ ವಿಭಿನ್ನವಾಗಿದೆ. ಈ ಮಧ್ಯೆ 'ಕೆಜಿಎಫ್ 2' ಚೀನಾದಲ್ಲಿ ರಿಲೀಸ್ ಆಗುತ್ತಾ? ಒಂದು ವೇಳೆ ಆದರೆ, ಎಷ್ಟು ಕಲೆಕ್ಷನ್ ಮಾಡಬಹುದು ಎಂಬ ಕುತೂಹಲ ಗರಿಗೆದರಿದೆ.

More from Filmibeat

English summary
KGF Chapter 2 Day 26 Worldwide Box Office Collection Report enters 1150Cr Club, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X