ನೋ ವೇ ಚಾನ್ಸೇ ಇಲ್ಲ: ಹಾಲಿವುಡ್ ಸಿನಿಮಾಗೂ ಜಗ್ಗುತ್ತಿಲ್ಲ 'ಕೆಜಿಎಫ್ 2'

'ಕೆಜಿಎಫ್ 2' ಜನರಿಗೆ ಅದೇನು ಮೋಡಿ ಮಾಡಿದೆಯೋ ಗೊತ್ತಿಲ್ಲ. ಸಿನಿಮಾ ಬಿಡುಗಡೆಯಾಗಿ 27 ದಿನಗಳಾಗಿದ್ದರೂ, ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದನ್ನು ನಿಲ್ಲಿಸುತ್ತಿಲ್ಲ. ಟ್ರೇಡ್ ಅನಲಿಸ್ಟ್‌ಗಳ ಲೆಕ್ಕಚಾರವನ್ನು ಉಲ್ಟಾಪಲ್ಟಾ ಮಾಡುತ್ತಿದೆ. ವಿಶ್ವ ಮಾರುಕಟ್ಟೆಯಲ್ಲಿ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' 5 ಕೋಟಿಗಿಂತ ಕೆಳಗೆ ಇಳಿಯುತ್ತಲೇ ಇಲ್ಲ.

Recommended Video

KGF 2 Collection | 27ನೇ ದಿನವು ಕಲೆಕ್ಷಷನ್ ವಿಚಾರದಲ್ಲಿ 'KGF 2' ಜಾದು | Doctor Strange

ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕಿದ್ದೇ ಸಿಕ್ಕಿದ್ದು. ಅಲ್ಲಿಂದ ಇಬ್ಬರೂ ಹಿಂತಿರುಗಿ ನೋಡಲೇ ಇಲ್ಲ. 'ಕೆಜಿಎಫ್ 2' ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಗಳನ್ನು ಉಡೀಸ್ ಮಾಡುತ್ತಾ ಮುನ್ನುಗ್ಗುತ್ತಲೇ ಇದೆ. 25 ದಿನಗಳು ಕಳೆದ ಬಳಿಕ 'ಕೆಜಿಎಫ್ 2' ಪ್ರದರ್ಶನ ಆಗುತ್ತಿರುವ ಚಿತ್ರಮಂದಿರಗಳ ಸಂಖ್ಯೆ ಕಡಿಮೆಯಾಗಿದೆ. ಹೀಗಿದ್ದರೂ, ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ.

ಕಳೆದ ವಾರ 'ಕೆಜಿಎಫ್ 2' ಸಿನಿಮಾಗೆ ಹಾಲಿವುಡ್ ಸಿನಿಮಾ 'ಡಾಕ್ಟರ್ ಸ್ಟ್ರೇಂಜ್' ಕಾಂಪಿಟೇಷನ್ ಕೊಟ್ಟಿತ್ತು. ಈ ವಾರ 'ಸರ್ಕಾರು ವಾರಿ ಪಾಟ' ಸಿನಿಮಾ ರಿಲೀಸ್ ಆಗುತ್ತಿದೆ. ಈ ಕಾರಣಕ್ಕೆ 'ಕೆಜಿಎಫ್ 2' ಈ ಬಾರಿ ಕೂಡ ತೆಲುಗು ಹಾಗೂ ತಮಿಳು ಏರಿಯಾಗಳಲ್ಲಿ ಕಾಂಪಿಟೇಷನ್ ಎದುರಾಗಬಹುದು. ಆದರೂ, 27ನೇ ದಿನ ಹಾಲಿವುಡ್‌ ಸಿನಿಮಾವನ್ನು ಪಕ್ಕಕ್ಕೆ ತಳ್ಳಿ ಅಚ್ಚರಿ ಮೂಡಿಸಿದೆ.

27ನೇ ದಿನವೂ 'ಕೆಜಿಎಫ್ 2' ಜಗ್ಗುತ್ತಿಲ್ಲ

27ನೇ ದಿನವೂ 'ಕೆಜಿಎಫ್ 2' ಜಗ್ಗುತ್ತಿಲ್ಲ

'ಕೆಜಿಎಫ್ 2' ಸಿನಿಮಾದ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. 27ನೇ ದಿನವೂ ಕಲೆಕ್ಷನ್ ವಿಚಾರದಲ್ಲಿ ಹಿಂದೆಬಿದ್ದಿಲ್ಲ. ಆದರೆ, 25ನೇ ದಿನ ಹಾಗೂ 26ನೇ ದಿನಕ್ಕೆ ಹೋಲಿಸಿದರೆ, 27ನೇ ದಿನ 'ಕೆಜಿಎಫ್ 2' ಕಲೆಕ್ಷನ್ ಇಳಿಕೆ ಕಂಡಿದೆ. 25 ಹಾಗೂ 26ನೇ ದಿನ ಬಾಕ್ಸಾಫೀಸ್‌ನಲ್ಲಿ ಬರೋಬ್ಬರಿ 24.65 ಹಾಗೂ 25.42 ಕೋಟಿ ಗಳಿಕೆ ಕಂಡಿತ್ತು. ಆದರೆ, 27ನೇ ದಿನ ಸಿನಿಮಾ ಕಲೆಕ್ಷನ್ 8.07 ಕೋಟಿ ಗಳಿಸಿದೆ. ಇದೂ ಕೂಡ ಉತ್ತಮ ಗಳಿಕೆ ಅಂತಲೇ ಸಿನಿಮಾ ಮಂದಿ ಹೇಳುತ್ತಿದ್ದಾರೆ.

'ಕೆಜಿಎಫ್ 2' ವರ್ಲ್ಡ್‌ವೈಡ್ ಕಲೆಕ್ಷನ್ ಎಷ್ಟು?

'ಕೆಜಿಎಫ್ 2' ಸಿನಿಮಾ ಈ 27 ದಿನಗಳಲ್ಲಿ ವಿಶ್ವದಾದ್ಯಂತ ಊಹೆಗೂ ಮೀರಿದ ಗಳಿಕೆ ಮಾಡಿದೆ. ಟ್ರೇಡ್ ಅನಲಿಸ್ಟ್ ಮನೊಬಾಲ ವಿಜಯಬಾಲನ್ ಪ್ರಕಾರ, 27ನೇ ದಿನ 8.07 ಕೋಟಿ ಗಳಿಸಿದೆ. ಇನ್ನು ವಿಶ್ವದಾದ್ಯಂತ ಈ ಸಿನಿಮಾ ಕಲೆಕ್ಷನ್ ಸುಮಾರು 1162.87 ಕೋಟಿ ಗಳಿಸಿದೆ ಎಂದಿದ್ದಾರೆ. ಈ ಮೂಲಕ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ಕಲೆಕ್ಷನ್ ದುರ್ಬಾರ್ ಇನ್ನೂ ಮುಂದುವರೆದಿದ್ದು, ಕಲೆಕ್ಷನ್ ಬೇಟೆ ಇನ್ನೂ ಮುಂದುವರೆದಿದೆ.

'ಕೆಜಿಎಫ್ 2' ಮುಂದೆ ಮಂಡಿಯೂರಿದ ಡಾಕ್ಟರ್ ಸ್ಟ್ರೇಂಜ್

'ಕೆಜಿಎಫ್ 2' ಮುಂದೆ ಮಂಡಿಯೂರಿದ ಡಾಕ್ಟರ್ ಸ್ಟ್ರೇಂಜ್

ಕಳೆದ ವಾರವಷ್ಟೇ ಹಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಡಾಕ್ಟರ್ ಸ್ಟ್ರೇಂಜ್' ರಿಲೀಸ್ ಆಗಿದೆ. ಮಾರ್ವಲ್ ಸಂಸ್ಥೆ ನಿರ್ಮಾಣದ ಸಿನಿಮಾಗಳಿಗೆ ಭಾರತದಲ್ಲಿ ಅಭಿಮಾನಿಗಳು ಹೆಚ್ಚಿದ್ದಾರೆ. 'ಡಾಕ್ಟರ್ ಸ್ಟ್ರೇಂಜ್' ಮೊದಲ ದಿನ ಭಾರತದಲ್ಲಿ 30 ಕೋಟಿ ಬಾಚಿಕೊಂಡಿತ್ತು. ಈ ಲೆಕ್ಕಾಚಾರದ ಪ್ರಕಾರ, 'ಡಾಕ್ಟರ್ ಸ್ಟ್ರೇಂಜ್' ಇಷ್ಟೊತ್ತಿಗಾಗಲೇ 100 ಕೋಟಿ ದಾಟಬೇಕಿತ್ತು. ಆದರೆ, ವರ್ಕಿಂಗ್ ಡೇಸ್‌ನಲ್ಲಿ ಸಿನಿಮಾ ಮೋಡಿ ಮಾಡುತ್ತಿಲ್ಲ. ಐದನೇ ದಿನ 'ಡಾಕ್ಟರ್ ಸ್ಟ್ರೇಂಜ್' ಗಳಿಸಿದ್ದು, 6.50 to 7.50 ಕೋಟಿ ಗಳಿಕೆ ಕಂಡಿದೆ. ಈ ಮೂಲಕ ಹಾಲಿವುಡ್ ಸಿನಿಮಾ 'ಕೆಜಿಎಫ್ 2' 27ನೇ ದಿನದ ಗಳಿಕೆಯನ್ನು ಹಿಂದಿಕ್ಕಲು ಸೋತಿದೆ.

ಪ್ರಿನ್ಸ್ ಸಿನಿಮಾ ಕಾಂಪಿಟೇಷನ್

ಪ್ರಿನ್ಸ್ ಸಿನಿಮಾ ಕಾಂಪಿಟೇಷನ್

'ಕೆಜಿಎಫ್ 2' ಮುಂದಿರುವ ಸವಾಲು ಎಂದರೆ, ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅಭಿನಯದ 'ಸರ್ಕಾರು ವಾರಿ ಪಾಟ'. ಈ ಸಿನಿಮಾ ತೆಲುಗು ಏರಿಯಾಗಳಲ್ಲಿ 'ಕೆಜಿಎಫ್ 2' ಟಕ್ಕರ್ ಕೊಡಬಹುದು. ಇನ್ನೊಂದು ವಾರ ಮಹೇಶ್ ಬಾಬು ಎಂಟ್ರಿಯಿಂದ 'ಕೆಜಿಎಫ್ 2' ಕಲೆಕ್ಷನ್ ಡ್ರಾಪ್ ಆದರೂ, ಆಗಬಹುದು. ಆದರೆ, ಈ ವಾರದ ಅಂತ್ಯದಲ್ಲಿ 1200 ಕೋಟಿ ಕ್ಲಬ್ ಅಂತೂ ಸೇರಲಿದೆ.

More from Filmibeat

English summary
KGF Chapter 2 Day 27 Worldwide Box Office Collection Report Beats Doctor Strange, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X