'ಸರ್ಕಾರು ವಾರಿ ಪಾಟ' ರಿಲೀಸ್ ಆಗಿದ್ದರೂ 29ನೇ ದಿನವೂ ಜಗ್ಗಿಲ್ಲ 'ಕೆಜಿಎಫ್ 2'!

ಹಂಗೂ ಹಿಂಗೂ ವೀಕೆಂಡ್ ಬಂದೇ ಬಿಟ್ಟಿದೆ. ಈ ವೀಕೆಂಡ್‌ನಲ್ಲೂ 'ಕೆಜಿಎಫ್ 2' ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ. ಇನ್ನೊಂದು ಕಡೆ ವರ್ಕಿಂಗ್‌ ಡೇಸ್‌ನಲ್ಲೂ 'ಕೆಜಿಎಫ್ 2' ಬಾಕ್ಸಾಫೀಸ್‌ನಲ್ಲಿ ಅದ್ಭುತ ಪರ್ಫಾರ್ಮೆನ್ಸ್ ಕೊಟ್ಟಿದೆ. ಇದೂವರೆಗೂ 'ಕೆಜಿಎಫ್ 2' ಸಿನಿಮಾಗೆ ಟಕ್ಕರ್ ಕೊಡಲು ಬಂದು ಸೋತು ಸುಣ್ಣವಾಗಿವೆ.

ಈ ವಾರ ದಕ್ಷಿಣ ಭಾರತದ ಮತ್ತೊಂದು ಸೂಪರ್‌ಸ್ಟಾರ್ ಸಿನಿಮಾ ರಿಲೀಸ್ ಆಗಿದೆ. ಅದುವೇ ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ.' ಈ ಸಿನಿಮಾ 'ಕೆಜಿಎಫ್ 2' ಸಿನಿಮಾದ ಬಾಕ್ಸಾಫೀಸ್‌ ಗಳಿಕೆಯ ಮೇಲೆ ಪರಿಣಾಮ ಬೀರುತ್ತಾ? ಅನ್ನೋ ಕುತೂಹಲವಿದೆ. ಕಾರಣ ಏನಂದ್ರೆ, 'ಸರ್ಕಾರು ವಾರಿ ಪಾಟ' ಮೊದಲ ಕಲೆಕ್ಷನ್ ಕೂಡ ಸೂಪರ್‌ ಆಗಿಯೇ ಇದೆ.

ಕನ್ನಡ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ವಿಶ್ವದಾದ್ಯಂತ ಬಿಡುಗಡೆಯಾಗಿ 29 ದಿನಗಳಾಗಿವೆ. ಈ 29 ದಿನಗಳಲ್ಲಿ 'ಕೆಜಿಎಫ್ 2' ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಸ್ಟಡಿಯಾಗಿಯೇ ಇದೆ. ಹಾಗಿದ್ದರೆ, ಈ 29 ದಿನಗಳಲ್ಲಿ ಕೆಜಿಎಫ್ ಗಳಿಕೆ ಎಷ್ಟು? 1200 ಕೋಟಿಗೆ ಇನ್ನೆಷ್ಟು ಬೇಕು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

29ನೇ ದಿನ 'ಕೆಜಿಎಫ್ 2' ಎಷ್ಟು?

29ನೇ ದಿನ 'ಕೆಜಿಎಫ್ 2' ಎಷ್ಟು?

'ಕೆಜಿಎಫ್ ಚಾಪ್ಟರ್ 2' ವಿಶ್ವದಾದ್ಯಂತ ಸಂಚಲನ ಸೃಷ್ಟಿಸಿತ್ತು. ಬಿಡುಗಡೆಯಾದ ದಿನದಿಂದ 'ಕೆಜಿಎಫ್ 2' ಸಿನಿಮಾ ಕಲೆಕ್ಷನ್ ಕಮ್ಮಿಯಾಗಿದ್ದರೂ, ಬಾಕ್ಸಾಫೀಸ್‌ನಲ್ಲಿ ಮಾತ್ರ ಸದ್ದು ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ. ಕಳೆದ 29 ದಿನಗಳಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ಒಂದಲ್ಲಾ ಒಂದು ದಾಖಲೆಗಳನ್ನು ಮಾಡುತ್ತಲೇ ಇದೆ. ಈಗ 29ನೇ ದಿನವೂ ಸಿನಿಮಾ ಗಳಿಕೆ ಸ್ಟಡಿಯಾಗಿಯೇ ಇದ್ದು, 5.95 ಕೋಟಿ ಕಲೆಕ್ಷನ್ ಮಾಡಿದೆ.

'ಕೆಜಿಎಫ್ 2' 29 ದಿನಗಳ ಗಳಿಕೆಯೆಷ್ಟು?

'ಕೆಜಿಎಫ್ 2' 29 ದಿನಗಳ ಗಳಿಕೆಯೆಷ್ಟು?

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ವಿಶ್ವದಾದ್ಯಂತ ಹಲ್‌ಚಲ್ ಎಬ್ಬಿಸಿತ್ತು. ಕಳೆದ 29 ದಿನಗಳಲ್ಲಿ 'ಕೆಜಿಎಫ್ 2' ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ದಿನದಿಂದ ದಿನಕ್ಕೆ ಗಳಿಕೆಯಲ್ಲಿ ಕೊಂಚ ಕಮ್ಮಿಯಾಗಿದ್ದರೂ, ಅದು ಬೇರೆ ಸಿನಿಮಾಗಳಿಗೆ ಹೋಲಿಸಿದರೆ ಉತ್ತಮ ಗಳಿಕೆ ಎಂದೇ ಹೇಳಬಹುದು. ಈ 29 ದಿನಗಳಲ್ಲಿ ಸಿನಿಮಾದ ಒಟ್ಟು ಗಳಿಕೆ 1175.63 ಕೋಟಿ ಗಳಿಸಿದೆ. ಈ 29 ದಿನಗಳಲ್ಲಿ 'ಕೆಜಿಎಫ್ 2' ಗಳಿಕೆ ಹೀಗಿದೆ.

ವಿಶ್ವದಾದ್ಯಂತ 'ಕೆಜಿಎಫ್ 2' ಬಾಕ್ಸಾಫೀಸ್ ಕಲೆಕ್ಷನ್

ಮೊದಲ ವಾರ ₹ 720.31 ಕೋಟಿ
ಎರಡನೇ ವಾರ ₹ 223.51 ಕೋಟಿ
ಮೂರನೇ ವಾರ ₹ 140.55 ಕೋಟಿ

4ನೇ ವಾರ

ಮೊದಲ ದಿನ ₹ 11.46 ಕೋಟಿ
ಎರಡನೇ ದಿನ ₹ 8.90 ಕೋಟಿ
ಮೂರನೇ ದಿನ ₹ 24.65 ಕೋಟಿ
ನಾಲ್ಕನೇ ದಿನ ₹ 25.42 ಕೋಟಿ
ಐದನೇ ದಿನ ₹ 08.07 ಕೋಟಿ
ಆರನೇ ದಿನ ₹ 06.84 ಕೋಟಿ
ಏಳನೇ ದಿನ ₹ 05.92 ಕೋಟಿ

ಒಟ್ಟು ₹ 1175.63 ಕೋಟಿ

ಇಂಡಿಯನ್ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?

ಇಂಡಿಯನ್ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?

'ಕೆಜಿಎಫ್ 2' ಸಿನಿಮಾ ಈಗ ಮತ್ತೊಂದು ಸಾಧನೆ ಮಾಡಿದೆ. ಭಾರತದ ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ಗಳಿಸಿದ ಎರಡನೇ ಭಾರತದ ಸಿನಿಮಾ ಎಂಬ ಮೈಲಿಗಲ್ಲು ತಲುಪಿದೆ. ರಾಜಮೌಳಿ ನಿರ್ದೇಶನದ 'ಬಾಹುಬಲಿ 2 ಇಂಡಿಯಾನ್ ಬಾಕ್ಸಾಫೀಸ್‌ನಲ್ಲಿ 1000 ಕೋಟಿ ತಲುಪಿದ ಮೊದಲ ಸಿನಿಮಾವಾಗಿತ್ತು. ಈಗ 'ಕೆಜಿಎಫ್ 2' ಆ ಮೈಲಿಗಲ್ಲನ್ನು ತಲುಪಿದ್ದು, ಸಾವಿರ ಕೋಟಿ ಕ್ಲಬ್ ಸೇರಿದೆ.

ಮಹೇಶ್ ಬಾಬು Vs ಯಶ್

ಮಹೇಶ್ ಬಾಬು Vs ಯಶ್

'ಕೆಜಿಎಫ್ 2' ಸಿನಿಮಾ ಟಾಲಿವುಡ್‌ನಲ್ಲೇ ಸಿಕ್ಕಾಪಟ್ಟೆ ಗಳಿಕೆ ಕಂಡಿತ್ತು. ಸಿನಿಮಾ ಕಲೆಕ್ಷನ್ ಹೆಚ್ಚು ಕಡಿಮೆ 150 ಕೋಟಿ ಸಮೀಪಿಸಿದೆ. ಇನ್ನೊಂದು ಕಡೆ ತಮಿಳುನಾಡಿನಲ್ಲೂ 100 ಕೋಟಿ ಕಲೆಕ್ಷನ್ ಮಾಡಿದೆ. ಆಂಧ್ರ-ತೆಲಂಗಾಣದಲ್ಲಿ ಇನ್ನೊಂದು ವಾರನಾದರೂ, 'ಸರ್ಕಾರು ವಾರಿ ಪಾಟ' ಡಾಮಿನೇಟ್ ಮಾಡೇ ಮಾಡುತ್ತೆ. ಇನ್ನೊಂದು ಕಡೆ ತಮಿಳುನಾಡಿನಲ್ಲಿ ಶಿವಕಾರ್ತಿಕೇಯ ನಟನೆಯ 'ಡಾನ್', ಹಿಂದಿಯಲ್ಲಿ ರಣ್‌ವೀರ್ ಸಿಂಗ್ ಸಿನಿಮಾ 'ಜಯೇಶ್ ಬಾಯ್ ಜೋರ್‌ದಾರ್' ರಿಲೀಸ್ ಆಗಿದೆ. ಹೀಗಾಗಿ ಈ ವೀಕೆಂಡ್‌ನಲ್ಲೂ 'ಕೆಜಿಎಫ್ 2' ಕಲೆಕ್ಷನ್ ಅದ್ಭುತವಾಗಿದ್ದರೆ, 1500 ಕೋಟಿ ವರೆಗೂ ತಡೆಯೋರು ಇರುವುದಿಲ್ಲ.

More from Filmibeat

English summary
KGF Chapter 2 Day 29 Worldwide Box Office Collection And Sarkaru Vaari Paata Release, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X