KGF 2 Day 4 Box Office Collection: 4 ದಿನಗಳಲ್ಲೇ ಅತಿ ಹೆಚ್ಚು ಗಳಿಕೆ ಕಂಡ ವಿಶ್ವದ 2ನೇ ಚಿತ್ರ 'ಕೆಜಿಎಫ್ 2'

'ಕೆಜಿಎಫ್ 2' ಬಾಕ್ಸಾಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ವಿಶ್ವದಾದ್ಯಂತ ಈ ಸಿನಿಮಾ ಕಲೆಕ್ಷನ್‌ಗೆ ಬ್ರೇಕ್ ಹಾಕುವುದಕ್ಕೆ ಸಾಧ್ಯವಾಗುತ್ತಿಲ್ಲ. ಕೇವಲ 4 ದಿನಗಳಲ್ಲಿಯೇ 'ಕೆಜಿಎಫ್ 2' ಭರ್ಜರಿ ಗಳಿಕೆ ಕಂಡಿದೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಮೂರು ದಿನಗಳಿಗೆ 400 ಕೋಟಿ ಲೂಟಿ ಮಾಡಿತ್ತು. ಹೀಗಾಗಿ 4ನೇ ದಿನದ ಗಳಿಕೆ ಮೇಲೆ ಎಲ್ಲರೂ ಕಣ್ಣಿಟ್ಟಿದ್ದರು.

ನಾಲ್ಕನೇ ದಿನ ಅಂದ್ರೆ, ಭಾನುವಾರ (ಏಪ್ರಿಲ್ 17) ರಂದು 'ಕೆಜಿಎಫ್ 2' ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡಿದೆ. ನಾಲ್ಕು ದಿನಗಳಲ್ಲಿಯೇ ಹಿಂದೆಂದೂ ಮಾಡದ ಸಾಧನೆಯನ್ನು ಕನ್ನಡ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದೆ. ಬಾಲಿವುಡ್, ಟಾಲಿವುಡ್, ಕಾಲಿವುಡ್, ಸಿನಿಮಾಗಳ ದಾಖಲೆಗೆ ಪೈಫೋಟಿ ನೀಡಿದೆ.

'ಕೆಜಿಎಫ್ 2' ಮೊದಲ ನಾಲ್ಕು ದಿನಗಳ ರಜೆಯನ್ನು ಸಂಪೂರ್ಣವಾಗಿ ಬಳಸಿಕೊಂಡಿದೆ. ವಿಶ್ವದ ಹಲವೆಡೆ 'ಕೆಜಿಎಫ್ 2' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಮೂಲಕ RRR ಗಳಿಕೆಗೆ 'ಕೆಜಿಎಫ್ 2' ಟಕ್ಕರ್ ಕೊಡುವ ಎಲ್ಲಾ ಸಾಧ್ಯತೆಗಳು ಕೂಡ ಇದೆ. ಹಾಗಿದ್ರೆ, ನಾಲ್ಕು ದಿನಗಳಲ್ಲಿ ಈ ಸಿನಿಮಾ ಗಳಿಸಿದ್ದೆಷ್ಟು? ತಿಳಿಯಲು ಮುಂದೆ ಓದಿ.

ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ದರೋಡೆ

ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ದರೋಡೆ

ಕೆಜಿಎಫ್.. ಕೆಜಿಎಫ್.. ಕೆಜಿಎಫ್.. ಬೇಡ ಅಂದುಕೊಂಡರೂ ಕೆಜಿಎಫ್ ಸಿನಿಮಾನೇ ಬಿಡುತ್ತಿಲ್ಲ. ವಿಶ್ವದ ಮೂಲೆ ಮೂಲೆಯಲ್ಲೂ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್' ಬೇಜಾನ್ ಸದ್ದು ಮಾಡುತ್ತಿದೆ. ರಾಜ್ಯ ಅಲ್ಲ. ದೇಶ ಅಲ್ಲ. ಇಡೀ ವಿಶ್ವದ ಬಾಕ್ಸಾಫೀಸ್ ಅನ್ನೇ ದರೋಡೆ ಮಾಡಿದೆ. ಕನ್ನಡದ ಸಿನಿಮಾವೊಂದು ಹಿಂದೆಂದೂ ಈ ಮಟ್ಟಿಗೆ ಸದ್ದು ಮಾಡಿರಲಿಲ್ಲ. 'ಕೆಜಿಎಫ್' ಮೆಗಾ ಸಕ್ಸಸ್‌ಗೆ ಇಡೀ ಸ್ಯಾಂಡಲ್‌ವುಡ್‌ ಹಿರಿ ಹಿರಿ ಹಿಗ್ಗಿದೆ. ಕೇವಲ 4 ದಿನಗಳಲ್ಲಿ 'ಕೆಜಿಎಫ್ 2' ಸಿನಿಮಾ 550 ಕೋಟಿ ಗಳಿಸಿದೆ.

'ಕೆಜಿಎಫ್ 2' 4 ದಿನದ ಗಳಿಕೆ ಎಷ್ಟು?

'ಕೆಜಿಎಫ್ 2' 4 ದಿನದ ಗಳಿಕೆ ಎಷ್ಟು?

'ಕೆಜಿಎಫ್ 2' ಸಿನಿಮಾ 4 ದಿನಗಳಲ್ಲಿ ಹೊಸ ಹೊಸ ದಾಖಲೆಗಳನ್ನು ಮಾಡುತ್ತಿದೆ. ಮೊದಲ ನಾಲ್ಕು ದಿನಗಳಲ್ಲಿ ಈ ಸಿನಿಮಾ 500 ಕೋಟಿ ಕ್ಲಬ್ ಸೇರಿಕೊಂಡಿದೆ. ವಿದೇಶದಿಂದಲೇ, ಅದೂ 3 ದಿನಗಳಲ್ಲಿ 81 ಕೋಟಿ ಕಲೆಹಾಕಿದೆ. ಇದು ಕನ್ನಡ ಚಿತ್ರರಂಗದ ಪಾಲಿಗೆ ಹೊಸ ದಾಖಲೆಯೇ. ಅಸಲಿಗೆ ಕಳೆದ 4 ದಿನಗಳಲ್ಲಿ 'ಕೆಜಿಎಫ್ 2' ಬಾಕ್ಸಾಫೀಸ್‌ನಲ್ಲಿ ಎಷ್ಟು ಗಳಿಸಿದೆ ಅನ್ನುವುದರ ಡಿಟೈಲ್ಸ್ ಇಲ್ಲಿದೆ.KGF 2 Movie 4 Days Collection

Day 1 165.37 Crore
Day 2 139.25 Crore
Day 3 115.08 Crore
Day 4 132.12 Crore

Total 551.83 Crore

ಅತಿ ಹೆಚ್ಚು ಗಳಿಕೆ ಕಂಡ 2ನೇ ಸಿನಿಮಾ

'ಕೆಜಿಎಫ್ 2' ಸಿನಿಮಾ ಈ ನಾಲ್ಕು ದಿನಗಳಲ್ಲಿ ಹಲವು ದಾಖಲೆಗಳನ್ನು ಮಾಡಿದೆ. ಏಪ್ರಿಲ್ 15 ರಿಂದ 17ರವರೆಗೆ ಅತೀ ಹೆಚ್ಚು ಗಳಿಕೆ ಕಂಡ ವಿಶ್ವದ ಎರಡನೇ ಸಿನಿಮಾ ಎಂದು ಕಾಮ್‌ಸ್ಕೋರ್ ವರದಿ ಮಾಡಿದೆ. ಕೇವಲ 19 ದೇಶಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಇಷ್ಟರಲ್ಲೇ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಟ್ರೇಡ್ ಅನಲಿಸ್ಟ್ ರಮೇಶ್ ಬಾಲ ಈ ಮಾಹಿತಿಯನ್ನು ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹಿಂದಿ ಬೆಲ್ಟ್‌ನಲ್ಲಿ ಗಳಿಸಿದ್ದೆಷ್ಟು?

ಹಿಂದಿ ಬೆಲ್ಟ್‌ನಲ್ಲಿ ಗಳಿಸಿದ್ದೆಷ್ಟು?

ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ಸೂಪರ್ ಕಲೆಕ್ಷನ್ ಮಾಡಿದೆ. ಮೊದಲ ದಿನವೇ 53 ಕೋಟಿ, ಎರಡನೇ ದಿನ 45.7 ಕೋಟಿ, ಮೂರನೇ ದಿನ 42.50 ಕೋಟಿ, ನಾಲ್ಕನೇ ದಿನವೂ 45 ರಿಂದ 50 ಕೋಟಿ ಗಳಿಕೆ ಗಳಿಸಿರಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಕೇವಲ ಬಾಲಿವುಡ್‌ನಲ್ಲಿಯೇ 180 ರಿಂದ 190 ಕೋಟಿ ಗಳಿಕೆ ಕಂಡಿರಬಹುದು ಎಂದು ಅಂದಾಜಿಸಲಾಗಿದೆ. ಕೆಲವೇ ಕ್ಷಣಗಳಲ್ಲಿ ಬಾಲಿವುಡ್‌ನ ಅಧಿಕೃತ ಕಲೆಕ್ಷನ್ ಹೊಸ ಬೀಳುವ ಸಾಧ್ಯತೆಯಿದೆ.

More from Filmibeat

English summary
KGF Chapter 2 day 4 worldwide box office collection report. Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X