KGF 2 Day 5 Box Office Collection: ವಾರದ ಆರಂಭದಲ್ಲಿ 'ಕೆಜಿಎಫ್ 2' ಕಲೆಕ್ಷನ್ ಹೇಗಿದೆ? 5ನೇ ದಿನದ ಗಳಿಸಿದ್ದೆಷ್ಟು?

ಪ್ರಶಾಂತ್ ನೀಲ್- ಯಶ್ ಕಾಂಬಿನೇಷನ್ ವರ್ಕ್ ಔಟ್ ಆಗಿದೆ. ಒಂದಕ್ಕೊಂದು ದಾಖಲೆಗಳನ್ನು ಬರೆದು ಮುನ್ನುಗ್ಗುತ್ತಿದೆ. 4 ದಿನಕ್ಕೆ 500 ಕೋಟಿ ಕ್ಲಬ್ ಸೇರಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಈಗ ವಾರದ ಮೊದಲ ದಿನ ಗಳಿಕೆ ಮೇಲೆ ಎಲ್ಲರ ಕಣ್ಣಿಟ್ಟಿದ್ದರು. ಗಳಿಕೆ ಕಡಿಮೆ ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಈ ಲೆಕ್ಕಾಚಾರ ಕೂಡ ಉಲ್ಟಾ ಹೊಡೆದಿದೆ.

Recommended Video

KGF 2 day 5 collection | ಕಲೆಕ್ಷನ್ ವಿಚಾರದಲ್ಲಿ ದಾಖಲೆ ಬರೆಯುತ್ತಿದೆ 'KGF 2' | Yash | RaveenaTandon

ಮೊದಲ ನಾಲ್ಕು ದಿನ ಬ್ಯಾಕ್ ಟು ಬ್ಯಾಕ್ ರಜೆಗಳಿತ್ತು. ಹೀಗಾಗಿ ಸಿನಿಮಾ ನೋಡಲು ಜನರು ಥಿಯೇಟರ್‌ಗೆ ನುಗ್ಗಿ ಬಂದಿದ್ದರು. ಆದರೆ, 5ನೇ ದಿನ ಸೋಮವಾರ( ಏಪ್ರಿಲ್ 18), ಜನರು ರಜೆ ಕಳೆದು, ಮಾಮೂಲಿ ಜೀವನಕ್ಕೆ ಒಗ್ಗಿಕೊಳ್ಳುತ್ತಾರೆ. ಈ ವೇಳೆ ಸಿನಿಮಾದ ಗಳಿಕೆ ಸಹಜವಾಗಿ ಕಡಿಮೆ ಆಗುತ್ತೆ. ಎಲ್ಲಾ ಸಿನಿಮಾಗಳಂತೆ 'ಕೆಜಿಎಫ್ 2' ಕೂಡ ಕಡಿಮೆ ಆಗಿದೆ. ಆದರೆ, ಊಹೆ ಮಾಡಿದಷ್ಟು ಕಮ್ಮಿ ಆಗಿಲ್ಲ.

'ಕೆಜಿಎಫ್ 2' ರಿಲೀಸ್ ಆದಲ್ಲಿಂದ ಮೊದಲು 4 ದಿನವೂ 100 ಕೋಟಿಯಂತೆ ಕಲೆಕ್ಷನ್ ಮಾಡಿದೆ. ಈ ಕಾರಣಕ್ಕೆ 'ಕೆಜಿಎಫ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ 4 ದಿನಗಳಲ್ಲಿಯೇ 500 ಕೋಟಿ ಕ್ಲಬ್ ಸೇರಿತ್ತು. ಆದರೆ, ಈ ತಂಡಕ್ಕೆ 5ನೇ ದಿನ ಸವಾಲಿನದ್ದಾಗಿತ್ತು. ಆದರೂ ಈ ಎಲ್ಲಾ ಸವಾಲುಗಳನ್ನು 'ಕೆಜಿಎಫ್ 2' ಮೆಟ್ಟಿನಿಂತಿದೆ.

5ನೇ ದಿನ ಕೆಜಿಎಫ್ 2 ಗಳಿಸಿದ್ದೆಷ್ಟು?

5ನೇ ದಿನ ಕೆಜಿಎಫ್ 2 ಗಳಿಸಿದ್ದೆಷ್ಟು?

ಮೊದಲ ವೀಕೆಂಡ್ ಮುಗಿದಿದೆ. 4 ದಿನಗಳಲ್ಲಿಯೇ 550 ಕೋಟಿನೂ ಲೂಟಿ ಮಾಡಿದೆ. ಈಗ ಎರಡನೇ ವಾರದ ಮೊದಲ ದಿನವೂ ನಾಗಾಲೋಟ ಮುಂದುವರೆದಿದೆ. 'ಕೆಜಿಎಫ್ 2' ಸೋಮವಾರ (ಏಪ್ರಿಲ್ 18) ದಂದು ವಿಶ್ವದದಾದ್ಯಂತ ಸುಮಾರು 60 ಕೋಟಿ ಗಳಿಕೆ ಕಂಡಿದೆ. ಎರಡನೇ ವಾರದ ಆರಂಭದಲ್ಲಿ ಇಷ್ಟು 60 ಕೋಟಿ ಗಳಿಸಿದ್ದು, ಉತ್ತಮ ಗಳಿಕೆ ಎಂದೇ ಹೇಳಾಗುತ್ತಿದೆ. ಹಿಂದಿ ಬೆಲ್ಟ್, ಆಂಧ್ರ-ತೆಲಂಗಾಣ, ತಮಿಳುನಾಡು, ಕೇರಳಗಳಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

'ಕೆಜಿಎಫ್ 2' 5ನೇ ದಿನ ಗಳಿಕೆ ಎಷ್ಟು?

'ಕೆಜಿಎಫ್ 2' 5ನೇ ದಿನ ಗಳಿಕೆ ಎಷ್ಟು?

'ಕೆಜಿಎಫ್ 2' ಆರಂಭದಿಂದಲೂ ಕಲೆಕ್ಷನ್ ಜೋರಾಗಿದೆ. ಒಂದೊಂದು ರೆಕಾರ್ಡ್‌ ಅನ್ನು ಬ್ರೇಕ್ ಮಾಡುತ್ತಾ ಮುನ್ನುಗ್ಗುತ್ತಿದೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವೊಂದು ಐದೇ ದಿನಕ್ಕೆ 619 ಕೋಟಿಗೂ ಅಧಿಕ ಗಳಿಕೆ ಕಂಡಿದ್ದು ಸಾಧನೆಯೇ ಸರಿ. ಮೊದಲ ಐದು ದಿನಗಳ ಗಳಿಕೆ ಹೀಗಿದೆ.

'KGF 2' 5 Days Collection

Day 1- ₹ 164.20 ಕೋಟಿ (ಅಂದಾಜು)
Day 2- ₹ 128.90 ಕೋಟಿ (ಅಂದಾಜು)
Day 3- ₹ 137.10 ಕೋಟಿ (ಅಂದಾಜು)
Day 4- ₹ 127.25 ಕೋಟಿ (ಅಂದಾಜು)
Day 5- ₹ 60.00 ಕೋಟಿ (ಅಂದಾಜು)
Total ₹ 617.45 ಕೋಟಿ (ಅಂದಾಜು)

200 ಕೋಟಿ ಲೂಟಿ ಮಾಡಿದ 'ಕೆಜಿಎಫ್ 2'

ಬಾಲಿವುಡ್‌ನಲ್ಲಿ 'ಕೆಜಿಎಫ್ 2' ಹವಾ ಜೋರಾಗಿದೆ. ಕನ್ನಡಕ್ಕಿಂತದಲ್ಲೂ ಹಿಂದಿ ಬೆಲ್ಟ್ ಏರಿಯಾಗಳಲ್ಲಿ 'ಕೆಜಿಎಫ್ 2' ವೇಗಕ್ಕೆ ಸ್ಪೀಡ್ ಬ್ರೇಕರ್ ಹಾಕುವವರೇ ಇಲ್ಲದಂತಾಗಿದೆ. ಸೋಮವಾರ (ಏಪ್ರಿಲ್ 18)ರಂದು 'ಕೆಜಿಎಫ್ 2' ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 25.57 ಕೋಟಿ ಗಳಿಸಿದೆ. ಒಟ್ಟು 5 ದಿನಗಳಲ್ಲಿ 200 ಕೋಟಿ ಕ್ಲಬ್ ಸೇರುವಲ್ಲಿ ಯಶಸ್ವಿಯಾಗಿದೆ.

KGF 2 Bollywood Boxoffice

Day 1- ₹ 53.95 ಕೋಟಿ (ಅಂದಾಜು)
Day 2- ₹ 46.67 ಕೋಟಿ (ಅಂದಾಜು)
Day 3- ₹ 42.90 ಕೋಟಿ (ಅಂದಾಜು)
Day 4- ₹ 50.35 ಕೋಟಿ (ಅಂದಾಜು)
Day 5- ₹ 25.57 ಕೋಟಿ (ಅಂದಾಜು)
Total- ₹ 219.56 ಕೋಟಿ (ಅಂದಾಜು)

ತಮಿಳು-ಮಲಯಾಳಂನಲ್ಲೂ 'ಕೆಜಿಎಫ್ 2' ದರ್ಬಾರ್

ತಮಿಳು-ಮಲಯಾಳಂನಲ್ಲೂ 'ಕೆಜಿಎಫ್ 2' ದರ್ಬಾರ್

ಹಿಂದೆ ಬೆಲ್ಟ್ ಅಂತಯೇ ತಮಿಳು ಹಾಗೂ ಕೇರಳದಲ್ಲಿಯೂ 'ಕೆಜಿಎಫ್ 2' ಕಲೆಕ್ಷನ್ ಜೋರಾಗಿಯೇ ಇದೆ. ತಮಿಳುನಾಡಿನಲ್ಲಿ 'ಕೆಜಿಎಫ್ 2' ಗಳಿಕೆ 5 ದಿನಕ್ಕೆ 50 ಕೋಟಿ ದಾಟಿದೆ.

Day 1 - ₹ 8.24 ಕೋಟಿ
Day 2 - ₹ 10.61 ಕೋಟಿ
Day 3 - ₹ 11.50 ಕೋಟಿ
Day 4 - ₹ 12.38 ಕೋಟಿ
Day 5 - ₹ 7.54 ಕೋಟಿ

Total - ₹ 50.27 ಕೋಟಿ.

ಅದೇ ಕೇರಳದಲ್ಲಿಯೂ 35 ಕೋಟಿ ದಾಟಿದೆ ಎಂದು ಅಂದಾಜಿಸಲಾಗಿದೆ. ಇನ್ನೂ ಆಂಧ್ರ-ತೆಲಂಗಾಣ ಹಾಗೂ ಕರ್ನಾಟಕದ ಕಲೆಕ್ಷನ್ ಎಷ್ಟು ಅನ್ನೋದು ರಿವೀಲ್ ಆಗಬೇಕಿದೆ. ತಮಿಳುನಾಡಿನಲ್ಲಿ ಕಳೆದ 5 ದಿನಗಳ ಕಲೆಕ್ಷನ್ ಹೀಗಿದೆ.

More from Filmibeat

English summary
KGF Chapter 2 day 5 worldwide box office collection report. Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X