6ನೇ ದಿನವೂ ಬಾಕ್ಸಾಫೀಸ್‌ನಲ್ಲಿ ನಿಲ್ಲದ 'ಕೆಜಿಎಫ್ 2' ಓಟ: ಎಲ್ಲೆಲ್ಲಿ ಎಷ್ಟೆಷ್ಟು ಗಳಿಕೆ?
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ವಿಶ್ವದ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುವುದಕ್ಕೆ ಹೊರಟಿದೆ. ವೀಕೆಂಡ್‌ನಲ್ಲಷ್ಟೇ ಅಲ್ಲ. ವಾರದ ಆರಂಭದ ದಿನದಲ್ಲೂ 'ಕೆಜಿಎಫ್ 2' ಸಿನಿಮಾದ ವೇಗದ ಮಾತ್ರ ನಿಲ್ಲುತ್ತಿಲ್ಲ. ಪ್ರತಿ ದಿನ ಗಲ್ಲಾಪೆಟ್ಟಿಗೆಯಲ್ಲಿ ಸ್ಟಡಿಯಾಗಿ ಸಾಗುತ್ತಿದೆ. ಕಳೆದ 5 ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ ಇಡೀ ವಿಶ್ವದಲ್ಲಿಯೇ ಟಾಕ್ ಆಫ್ ದಿ ಟೌನ್ ಆಗಿದೆ.
Recommended Video

'ಕೆಜಿಎಫ್ 2' ಪ್ರತಿ ದಿನ ಎಷ್ಟು ಕಲೆಕ್ಷನ್ ಮಾಡುತ್ತೆ? ರಾಜಮೌಳಿ ನಿರ್ದೇಶನದ RRR ಸಿನಿಮಾದ ದಾಖಲೆಯನ್ನು ಹಿಂದಕ್ಕೆ ಹಾಕುತ್ತಾ? ದಂಗಲ್ ಗಳಿಕೆಯನ್ನು ಬೀಟ್ ಮಾಡುತ್ತಾ? ಅನ್ನೋ ಕುತೂಹಲದಲ್ಲೇ ಮುಳುಗಿ ಹೋಗಿದ್ದಾರೆ. ಹಾಗಿದ್ದರೆ, 'ಕೆಜಿಎಫ್ 2' ಸಿನಿಮಾ 6ನೇ ದಿನ ಎಷ್ಟು ಮಾಡಿದೆ?. ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಮಾಡಿದೆ? ಎನ್ನುವುದನ್ನು ತಿಳಿಯಲು ಮುಂದೆ ಓದಿ.

'ಕೆಜಿಎಫ್ 2' 6ನೇ ದಿನ ಗಳಿಸಿದ್ದು ಎಷ್ಟು?
'ಕೆಜಿಎಫ್ 2' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ. 5 ಭಾಷೆಗಳಲ್ಲೂ 'ಕೆಜಿಎಫ್ 2' ಸಿನಿಮಾದ ಕ್ರೇಜ್ ಹೆಚ್ಚಾಗುತ್ತಿದೆ. ಕೆಲವೆಡೆ ಸಿನಿಮಾ ಬಿಡುಗಡೆಯಾದ ದಿನದಿಂದಲೇ ಕಲೆಕ್ಷನ್ ಜೋರಾಗಿದೆ. ಇನ್ನು ಕೆಲವು ರಾಜ್ಯಗಳಲ್ಲಿ ಮೌತ್ ಟಾಕ್‌ನಿಂದ ಥಿಯೇಟರ್ ಕಡೆಗಳಲ್ಲಿ ಜನರು ನುಗ್ಗುತ್ತಿದ್ದಾರೆ. 'ಕೆಜಿಎಫ್ 2' ವಿಶ್ವದಾದ್ಯಂತ 5ನೇ ದಿನ 66.35 ಕೋಟಿ ಗಳಿಸಿತ್ತು. ಅದೇ 6ನೇ ದಿನ 52.35 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ. 6ನೇ ದಿನದಲ್ಲಿ ಗಳಿಕೆ ಪ್ರಮಾಣ ತಗ್ಗಿದ್ದರೂ, ವೀಕ್ ಡೇಸ್‌ನಲ್ಲಿ ಇದೂ ಕೂಡ ಉತ್ತಮ ಕಲೆಕ್ಷನ್ ಎನ್ನುತ್ತಾರೆ ಸಿನಿಮಾ ಪಂಡಿತರು.

'ಕೆಜಿಎಫ್ 2' 6 ದಿನಗಳ ಗಳಿಕೆ ಎಷ್ಟು?
'ಕೆಜಿಎಫ್ 2' 6 ದಿನಗಳಲ್ಲಿ ಗಳಿಕೆ 700 ಕೋಟಿ ಸಮೀಸುತ್ತಿದೆ. 6 ನೇ ದಿನ ಗಳಿಸಿದ 52 ಕೋಟಿಯನ್ನು ಸೇರಿಸಿ ಸುಮಾರು 676.15 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಅಧಿಕೃತವಾಗಿ 'ಕೆಜಿಎಫ್' ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಮಾಹಿತಿಯನ್ನು ನೀಡಬೇಕಿದೆ.
KGF 2 6 days worldwide boxoffice collection (Gross)
Day 1 Rs 164.20cr (ಅಂದಾಜು)
Day 2 Rs 128.90cr (ಅಂದಾಜು)
Day 3 Rs 137.10cr (ಅಂದಾಜು)
Day 4 Rs 127.25cr (ಅಂದಾಜು)
Day 5 Rs 66.35cr (ಅಂದಾಜು)
Day 6 Rs 52.35cr (ಅಂದಾಜು)
Total Rs 676.15cr (ಅಂದಾಜು)

ಐದು ಭಾಷೆಗಳಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು?
ಪ್ರಶಾಂತ್ ನೀಲ್ ಹಾಗೂ ಯಶ್ ಇಬ್ಬರೂ ಬಾಕ್ಸಾಫೀಸ್‌ನಲ್ಲಿ ಜಾದು ಮಾಡಿದ್ದಾರೆ. ಸಿನಿಮಾ ಎಲ್ಲೆಲ್ಲಿ ಬಿಡುಗಡೆಯಾಗಿದೆಯೋ ಅಲ್ಲೆಲ್ಲಾ ಲೂಟಿ ಮಾಡುತ್ತಲೇ ಇದೆ. ಹಿಂದಿ ಬೆಲ್ಟ್, ಕರ್ನಾಟಕ, ಆಂಧ್ರ-ತೆಲಂಗಾಣ, ತಮಿಳುನಾಡು, ಕೇರಳ ಸೇರಿದಂತೆ ಹಲವೆಡೆ ಕೆಲಕ್ಷನ್ ಜೋರಾಗಿದೆ. ತೆಲುಗು ರಾಜ್ಯಗಳಲ್ಲಿ ಇಂದು ( ಏಪ್ರಿಲ್ 20) 100 ಕೋಟಿ ದಾಟಲಿದೆ. ತಮಿಳುನಾಡು ಹಾಗೂ ಕೇರಳದಲ್ಲಿ ಗಳಿಕೆ ಹೆಚ್ಚಾಗಿದೆ. ಹಿಂದಿ ಹಾಗೂ ಓವರ್‌ಸೀನ್‌ನಲ್ಲೂ 'ಕೆಜಿಎಫ್' ರೆಸ್ಪಾನ್ಸ್ ಅದ್ಭುತವಾಗಿದೆ.
KGF Chapter 2 Six Days World Wide Gross Collections
ಕರ್ನಾಟಕ 108.80Cr
ತೆಲುಗು ರಾಜ್ಯಗಳು 98.50Cr
ತಮಿಳುನಾಡು 41.50Cr
ಕೇರಳ 37.15Cr
ಹಿಂದಿ ಹಾಗೂ ಆಓಐ 280Cr
ಓವರ್‌ಸೀಸ್ 110.20Cr (ಅಂದಾಜು)
Total 676.15Cr (ಅಂದಾಜು)

100 ಕೋಟಿ ದಾಟಿತಾ ಕರ್ನಾಟಕದ ಗಳಿಕೆ?
ಕರ್ನಾಟಕದಲ್ಲಿ ಕಳೆದ 6 ದಿನಗಳಿಂದ ಹೌಸ್‌ಫುಲ್ ಪ್ರದರ್ಶನವೇನೋ ಕಾಣುತ್ತಿದೆ. ಸುಮಾರು 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ 'ಕೆಜಿಎಫ್ 2' ಚಿತ್ರವನ್ನು ರಿಲೀಸ್ ಮಾಡಲಾಗಿದೆ. ಹೀಗಾಗಿ ಸಿನಿಮಾದ ಗಳಿಕೆ ಕೂಡ ಅದ್ಭುತವಾಗಿಯೇ ಇರುತ್ತೆ. ಆದರೆ,ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ 100 ಕೋಟಿ ಗಳಿಕೆ ದಾಟಿದ್ಯಾ ಅನ್ನೋ ಬಗ್ಗೆ ಪ್ರೊಡಕ್ಷನ್ ಹೌಸ್ ಮಾಹಿತಿ ನೀಡಿಲ್ಲ. ಆದರೆ, ಸಿನಿಮಾ ಪಂಡಿತರ ಲೆಕ್ಕಾಚಾರದ ಪ್ರಕಾರ, ಕರ್ನಾಟಕದಲ್ಲಿ 108 ಕೋಟಿ ಗ್ರಾಸ್ ಕೆಲಕ್ಷನ್ ಆಗಿದೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಹೊಂಬಾಳೆ ಫಿಲ್ಮ್ಸ್ ನೀಡುವ ರಿಪೋರ್ಟ್ ಅಧಿಕೃತವಾಗಿರುತ್ತೆ.


Click it and Unblock the Notifications











