7 ದಿನಗಳಲ್ಲಿ 700 ಕೋಟಿ ಗಡಿ ದಾಟಿದ 'ಕೆಜಿಎಫ್ 2': ಆಂಧ್ರದಲ್ಲಿ 100 ಕೋಟಿ, ಕರ್ನಾಟಕದಲ್ಲೆಷ್ಟು?
ರೆಕಾರ್ಡ್.. ರೆಕಾರ್ಡ್.. ರೆಕಾರ್ಡ್.. ಕಲೆಕ್ಷನ್.. ಕಲೆಕ್ಷನ್.. ಕಲೆಕ್ಷನ್.. 'ಕೆಜಿಎಫ್ 2' ಬಿಡುಗಡೆಯಾಗಿ 7 ದಿನಗಳಾಗಿದ್ದರೂ, ರೆಕಾರ್ಡ್ ಬ್ರೇಕ್ ಆಗುತ್ತಲೇ ಇದೆ. ಕಲೆಕ್ಷನ್ ಏರಿಕೆ ಆಗುತ್ತಲೇ ಇದೆ. ಆಂಧ್ರ, ತೆಲಂಗಾಣ, ಕರ್ನಾಟಕ ಸೇರಿದಂತೆ ಹಿಂದಿ ಬೆಲ್ಟ್‌ಗಳಲ್ಲಿ 'ಕೆಜಿಎಫ್ 2' ಕಲೆಕ್ಷನ್ ಇನ್ನೂ ಜೋರಾಗಿಯೇ ಇದೆ.
Recommended Video

ಒಂದು ವಾರದಲ್ಲಿ 'ಕೆಜಿಎಫ್ 2' 700 ಕೋಟಿಯ ಗಡಿ ದಾಟಿದೆ. ಇನ್ನೂ ಒಂದು ವಾರದಲ್ಲಿ ಸಿನಿಮಾ ಇದೇ ವೇಗದಲ್ಲಿ ಗಳಿಕೆ ಕಂಡರೆ, ಇನ್ನೂ ಹಲವು ದಾಖಲೆಗಳನ್ನು ಉಡೀಸ್ ಮಾಡುವುದು ಗ್ಯಾರೆಂಟಿ. ಏಳನೇ ದಿನ ಯಶ್ ಹಾಗೂ ಪ್ರಶಾಂತ್ ನೀಲ್ ಸಿನಿಮಾ ಹೊಸ ಮೈಲಿಗಲ್ಲು ತಲುಪಿದೆ. ಸಿನಿಮಾ ತೆರೆಕಂಡ ಕಡೆಗಳಲ್ಲೆಲ್ಲಾ ಯಶ್ ಸಿನಿಮಾ ಕ್ರೇಜ್ ಹೆಚ್ಚಾಗಿದೆ.

7ನೇ ದಿನವೂ ನಿಂತಿಲ್ಲ 'ಕೆಜಿಎಫ್ 2' ಆರ್ಭಟ
ಹಿಂದಿ ಏರಿಯಾಗಳಲ್ಲಿ, ತಮಿಳುನಾಡು, ಕೇರಳದಲ್ಲಿ 'ಕೆಜಿಎಫ್ 2' ಸಿನಿಮಾ ಆರ್ಭಟ ಮತ್ತಷ್ಟು ಹೆಚ್ಚಾಗುತ್ತಿದೆ. ಸಿನಿಮಾ ನೋಡಿದವರಿಗೆ 'ಕೆಜಿಎಫ್ 2' ಇಷ್ಟ ಆಗಿದೆ. ತಮಿಳುನಾಡಿನಲ್ಲಿ 'ಬೀಸ್ಟ್' ಸಿನಿಮಾ ರಿಲೀಸ್ ಆಗಿದ್ದರೂ, ದಳಪತಿ ವಿಜಯ್ ಸಿನಿಮಾಗಿಂತಲೂ ಹೆಚ್ಚು ಗಳಿಕೆ ಕಂಡಿದೆ. ಇನ್ನೊಂದು ಕಡೆ ಕೇರಳದಲ್ಲೂ ಮಾಸ್ ಸಿನಿಮಾವನ್ನು ಇಷ್ಟಪಡುತ್ತಿದ್ದಾರೆ. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, 'ಕೆಜಿಎಫ್ 2' ಹಲವು ಮೈಲಿಗಲ್ಲುಗಳನ್ನು ತಲುಪಿದೆ. ಅಂದ್ಹಾಗೆ 7ನೇ ದಿನ 'ಕೆಜಿಎಫ್ 2' ವಿಶ್ವದಾದ್ಯಂತ 42.50 ಕೋಟಿ ರೂಪಾಯಿ ಗಳಿಕೆ ಕಂಡಿದೆ.

'ಕೆಜಿಎಫ್ 2' 7 ದಿನಗಳ ಒಟ್ಟು ಗಳಿಕೆ ಎಷ್ಟು?
'ಕೆಜಿಎಫ್ 2' ಸಿನಿಮಾ ರಿಲೀಸ್ ಆದ ದಿನದಿಂದಲೂ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಿದೆ. ರಜೆ ಹಾಗೂ ವೀಕೆಂಡ್‌ಗಳನ್ನು ಹೊರತುಪಡಿಸಿಯೂ, ಉಳಿದ ದಿನಗಳಲ್ಲೂ 'ಕೆಜಿಎಫ್ 2' ಕಲೆಕ್ಷನ್ ಜೋರಾಗಿದೆ. ಈ ಏಳು ದಿನಗಳಲ್ಲಿ 'ಕೆಜಿಎಫ್ 2' 700 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಈ 7 ದಿನಗಳಲ್ಲಿ ಗಳಿಸಿದ ಕಲೆಕ್ಷನ್ ವಿವರ ಹೀಗಿದೆ.
1ನೇ ದಿನ ₹ 165.37 cr
2ನೇ ದಿನ ₹ 139.25 cr
3ನೇ ದಿನ ₹ 115.08 cr
4ನೇ ದಿನ ₹ 132.13 cr
5ನೇ ದಿನ ₹ 73.29 cr
6ನೇ ದಿನ ₹ 51.68 cr
7ನೇ ದಿನ ₹ 42.50 cr
Total ₹ 719.30 cr

ಕರ್ನಾಟಕದಲ್ಲಿ 'ಕೆಜಿಎಫ್ 2' ಗಳಿಸಿದ್ದೆಷ್ಟು?
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಕರ್ನಾಟಕಕ್ಕಿಂತ ಹಿಂದಿ ಬೆಲ್ಟ್‌ಗಳಲ್ಲಿ ಹಾಗೂ ತೆಲುಗು ರಾಜ್ಯಗಳಲ್ಲಿ ಹೆಚ್ಚು ಕ್ರೇಜ್ ಇತ್ತು. ಅದರಂತೆ 'ಕೆಜಿಎಫ್ 2' ಆಂಧ್ರ ಹಾಗೂ ತೆಲಂಗಾಣದಲ್ಲಿ 100 ಕೋಟಿ ಕ್ಲಬ್ ಸೇರಿದೆ. 7 ದಿನಗಳಲ್ಲಿ 102.60 ಕೋಟಿ ಕಲೆಕ್ಷನ್ ಆಗಿದೆ. ತೆಲುಗು ಸ್ಟೇಟ್‌ಗಳಲ್ಲಿ 100 ಕೋಟಿ ಗಳಿಕೆ ಕಂಡ ಮೊದಲ ಕನ್ನಡ ಸಿನಿಮಾ 'ಕೆಜಿಎಫ್ 2' ಎನ್ನಲಾಗಿದೆ. ಇನ್ನು ಕರ್ನಾಟಕದಲ್ಲಿ 'ಕೆಜಿಎಫ್ 2' ಎಂದಿನಂತೆಯೇ ಇದೆ. ಈಗಾಗಲೇ ಗ್ರಾಸ್ ಕಲೆಕ್ಷನ್ 115.30 ಕೋಟಿ ದಾಟಿದೆ ಎಂದು ಹೇಳಲಾಗುತ್ತಿದೆ.
ಬಾಲಿವುಡ್ ಕಲೆಕ್ಷನ್ 250 ಕೋಟಿ
'ಕೆಜಿಎಫ್ 2' ಸಿನಿಮಾ ಬಾಲಿವುಡ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಹಿಂದಿ ಏರಿಯಾಗಳಲ್ಲಿ ಅತಿ ವೇಗವಾಗಿ 250 ಕೋಟಿ ಗಡಿ ಮುಟ್ಟಿದ ಸಿನಿಮಾ ಎಂಬ ಹೆಗ್ಗಳಿಕೆ ಗಳಿಸಿದೆ. ಅಂದ್ಹಾಗೇ ಏಳನೆ ದಿನ ಬಾಲಿವುಡ್‌ನಲ್ಲಿ 19.17 ಕೋಟಿ ಗಳಿಕೆ ಕಂಡಿದ್ದು, ಇದೂವರೆಗೂ 254.97 ಕೋಟಿ ಲೂಟಿ ಮಾಡಿದೆ. ತೆಲುಗು ರಾಜ್ಯಗಳು ಹಾಗೂ ಯುಎಸ್ ಅನ್ನು ಹೊರತು ಪಡಿಸಿದರೆ, ಬೇರೆ ಎಲ್ಲಾ ಕಡೆಗಳಲ್ಲಿಯೂ 'ಕೆಜಿಎಫ್ 2' ಸಿನಿಮಾ RRR ಸಿನಿಮಾವನ್ನು ಓವರ್‌ಟೇಕ್ ಮಾಡಿದೆ ಎನ್ನಲಾಗಿದೆ.


Click it and Unblock the Notifications











