ಮಲೇಷ್ಯಾದಲ್ಲಿ ಮೆಗಾ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿದ 'ಕೆಜಿಎಫ್ 2': 46ನೇ ದಿನದ ಕಲೆಕ್ಷನ್ ಎಷ್ಟು?
'ಕೆಜಿಎಫ್ 2' ವಿಶ್ವದಲ್ಲಿ ಹಲ್‌ಚಲ್ ಎಬ್ಬಿಸಿದ ಸಿನಿಮಾ. ಭಾರತದ ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡಿದ ಚಿತ್ರವಿದು. ಕಳೆದ ಒಂದೂವರೆ ತಿಂಗಳಿನಿಂದ 'ಕೆಜಿಎಫ್ 2' ಸಿನಿಮಾದ ಬಾಕ್ಸಾಫೀಸ್‌ನಲ್ಲಿ ನಡೆಸಿದ ದರ್ಬಾರ್‌ಗೆ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ಇಷ್ಟು ದಿನ 'ಕೆಜಿಎಫ್ 2' ಭಾರತದಲ್ಲಿ ಗಳಿಸಿದ ಗಳಿಕೆಯ ಬಗ್ಗೆನೇ ಸದ್ದು ಆಗುತ್ತಿತ್ತು. ಈಗ ಒಂದೊಂದೇ ದೇಶದಲ್ಲಿ 'ಕೆಜಿಎಫ್ 2' ಗಳಿಕೆ ರಿವೀಲ್ ಆಗುತ್ತಿದೆ.
'ಕೆಜಿಎಫ್ 2' ಏಕಕಾಲಕ್ಕೆ ವಿದೇಶಗಳಲ್ಲೂ ಬಿಡುಗಡೆಯಾಗಿತ್ತು. ಅಮೆರಿಕ, ಬ್ರಿಟನ್ ಅಷ್ಟೇ ಅಲ್ಲದೆ. ಮಲೇಷ್ಯಾದಲ್ಲೂ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಗ್ರ್ಯಾಂಡ್ ಆಗಿಯೇ ರಿಲೀಸ್ ಆಗಿತ್ತು. ನಿರೀಕ್ಷೆಯಂತೆ ಮಲೇಷ್ಯಾ ಬಾಕ್ಸಾಫೀಸ್‌ನಲ್ಲೂ ದಾಖಲೆ ಬರೆದಿದೆ.
'ಕೆಜಿಎಫ್ 2' ಏಪ್ರಿಲ್ 14ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಇಲ್ಲಿವರೆಗೂ ಸಿನಿಮಾ ಬಿಡುಗಡೆಯಾಗಿ ಸುಮಾರು 46 ದಿನಗಳೇ ಕಳೆದಿವೆ. ಈ 46 ದಿನಗಳಲ್ಲಿ ಇಂಡಿಯನ್ ಬಾಕ್ಸಾಫೀಸ್‌ನಲ್ಲಿ ಗಳಿಕೆ ಸಾವಿರ ಕೋಟಿ ದಾಟಿದೆ. ಅದರಂತೆ ಮಲೇಷ್ಯಾದಲ್ಲೂ ಮೆಗಾ ಬ್ಲಾಕ್‌ಬಸ್ಟರ್ ಅಂತ ಸಾಬೀತಾಗಿದೆ.
Recommended Video

'ಕೆಜಿಎಫ್ 2' ಮೆಗಾ ಬ್ಲಾಕ್‌ಬಸ್ಟರ್
'ಕೆಜಿಎಫ್ 2' ಮಲೇಷ್ಯಾದಲ್ಲೂ ಸಖತ್ ಆಗಿಯೇ ಸೌಂಡ್ ಮಾಡಿದೆ. ಮಲೇಷ್ಯಾದ ಥಿಯೇಟರ್‌ಗಳಲ್ಲೂ ಗ್ರ್ಯಾಂಡ್ ಆಗಿ ರಿಲೀಸ್ ಆಗಿದ್ದ ಸಿನಿಮಾ ಅಲ್ಲೂ ಮೆಗಾಬ್ಲಾಕ್‌ಬಸ್ಟರ್ ಎಂದು ಸಾಬೀತಾಗಿದೆ. ಕಳೆದ 46 ದಿನಗಳಲ್ಲಿ 'ಕೆಜಿಎಫ್ 2' ಮಲೇಷ್ಯಾದ ಕರೆನ್ಸಿಯಲ್ಲಿ RM 9,774,350 ಗಳಿಸಿದೆ. ಇದು ಭಾರತದಲ್ಲಿ ಸುಮಾರು 17.34 ಕೋಟಿ ರೂಪಾಯಿಗಳಾಗುತ್ತದೆ. ಈ ಕಾರಣಕ್ಕೆ ಮಲೇಷ್ಯಾ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ಅನ್ನು ಮೆಗಾ ಬ್ಲಾಕ್‌ಬಸ್ಟರ್ ಎಂದು ಘೋಷಣೆ ಮಾಡಿದೆ.

ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ
'ಕೆಜಿಎಫ್ 2' ಸಿನಿಮಾ ಮಲೇಷ್ಯಾದಲ್ಲಿ ಈ ವರ್ಷ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನಲಾಗಿದೆ. ಮಲೇಷ್ಯಾ ಟ್ವಿಟರ್ ಹ್ಯಾಂಡಲ್ ಪ್ರಕಾರ, ಈ ಸಿನಿಮಾ 46ನೇ ದಿನಕ್ಕೆ ಮೆಗಾ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿದೆ. 47ನೇದ ದಿನವೂ ಮಲೇಷ್ಯಾದಲ್ಲಿ 2 ಶೋಗಳನ್ನು ಮೀಸಲಿರಿಸಲಾಗಿದೆ ಎಂದು ಟ್ವೀಟ್ ಮಾಡಿದೆ. ಅಷ್ಟಕ್ಕೂ 'ಕೆಜಿಎಫ್ 2' ಈ ಮಟ್ಟಿಗೆ ಯಶಸ್ಸು ಕಾಣಲು ಕಾರಣವಿದೆ. ಮಲೇಷ್ಯಾದಲ್ಲಿ ತಮಿಳು ಸಿನಿಮಾಗಳನ್ನು ನೋಡುವ ಜನರು ಹೆಚ್ಚಿದ್ದಾರೆ. ಹೀಗಾಗಿ ಇಲ್ಲಿ 'ಕೆಜಿಎಫ್ 2' ತಮಿಳು ವರ್ಷನ್ ಅನ್ನು ರಿಲೀಸ್ ಮಾಡಲಾಗಿತ್ತು.

46ನೇ ದಿನ 'ಕೆಜಿಎಫ್ 2' ಗಳಿಸಿದ್ದೆಷ್ಟು?
ವರ್ಲ್ಡ್ ವೈಡ್ ಬಾಕ್ಸಾಫೀಸ್‌ನಲ್ಲಿ ವೀಕೆಂಡ್ ಕಲೆಕ್ಷನ್‌ನಲ್ಲಿ ಮತ್ತೆ ಏರಿಕೆಯಾಗಿದೆ. ಕಳೆದೊಂದು ವಾರದಿಂದ 'ಕೆಜಿಎಫ್ 2' ಸಿನಿಮಾದ ಕಲೆಕ್ಷನ್‌ನಲ್ಲಿ ಕೊಂಚ ಇಳಿಕೆ ಕಂಡಿತ್ತು. ಆದರೆ ವೀಕೆಂಡ್‌ನಲ್ಲಿ ಸಿನಿಮಾ ಮತ್ತೆ ಏರಿಕೆಯಾಗಿದೆ. ಈ ಮೂಲಕ 46ನೇ ದಿನ 2.41 ಕೋಟಿ ರೂಪಾಯಿ ಗಳಿಕೆಯಾಗಿದ್ದು, ಒಟ್ಟು 1235.14 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
'ಕೆಜಿಎಫ್ 2' ವಿಶ್ವದಾದ್ಯಂತ ಕಲೆಕ್ಷನ್ ರಿಪೋರ್ಟ್
1 ರಿಂದ 5ನೇ ವಾರದ ಗಳಿಕೆ ₹ 1210.53 ಕೋಟಿ
6ನೇ ವಾರ ₹ 19.84 ಕೋಟಿ
7ನೇ ವಾರ
ಮೊದಲನೇ ದಿನ ₹ 01.02 ಕೋಟಿ
ಎರಡನೇ ದಿನ ₹ 01.34 ಕೋಟಿ
ಮೂರನೇ ದಿನ ₹ 02.41 ಕೋಟಿ
ಒಟ್ಟು ₹ 1235.14 ಕೋಟಿ

ಯಾವ್ಯಾವ ರಾಜ್ಯದಲ್ಲಿ ಕೆಜಿಎಫ್ ದರ್ಬಾರ್?
'ಕೆಜಿಎಫ್ 2' ಸಿನಿಮಾ ಭಾರತದ ಕೆಲವು ಹಲವು ರಾಜ್ಯಗಳಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದೆ. ಭಾರತದ 5 ಪ್ರಮುಖ ರಾಜ್ಯಗಳಲ್ಲಿ ಈ ಸಿನಿಮಾ ಆಲ್ ಟೈಮ್ ರೆಕಾರ್ಡ್ ಮಾಡಿದೆ. ಕರ್ನಾಟಕ, ಬಿಹಾರ್, ಅಸ್ಸಾಂ ಒಡಿಶಾ ಹಾಗೂ ಜಾರ್ಖಂಡ್‌ನಲ್ಲಿ 'ಕೆಜಿಎಫ್ 2' ಆಲ್ ಟೈಂ ರೆಕಾರ್ಡ್ ಮಾಡಿದೆ.


Click it and Unblock the Notifications











