For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ 2 ಬಿಗ್ ಅಪ್‌ಡೇಟ್: ಬಿಡುಗಡೆ ದಿನಾಂಕ ಅಧಿಕೃತ ಘೋಷಣೆ

  |

  ದೇಶದ ಗಮನ ಸೆಳೆದ ಕೆಜಿಎಫ್ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂದು ಕನ್ನಡಿಗರು ಮಾತ್ರವಲ್ಲ, ಬೇರೆ ಬೇರೆ ಭಾಷೆಗಳ ಪ್ರೇಕ್ಷಕರೂ ಪ್ರಶ್ನಿಸುತ್ತಿದ್ದರು. ಕೆಜಿಎಫ್ 1 ಹುಟ್ಟುಹಾಕಿದ ನಿರೀಕ್ಷೆಗಳು, ಕ್ರೇಜ್ ಮತ್ತು ಕುತೂಹಲ ಆ ಮಟ್ಟಕ್ಕಿತ್ತು. ಈಗ ಈ ಕುತೂಹಲಗಳಿಗೆ ಉತ್ತರ ಸಿಕ್ಕಿದೆ. ಕೆಜಿಎಫ್‌ 2 ಯಾವಾಗ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಬಹಿರಂಗವಾಗಿದೆ.

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರೀಕರಣ ಭರದಿಂದ ಸಾಗಿತ್ತು. ಮೊದಲ ಭಾಗದ ಅಂತ್ಯದಲ್ಲಿ ಎರಡನೆಯ ಅಧ್ಯಾಯ ಇನ್ನೂ ರೋಚಕವಾಗಿರಲಿದೆ ಎಂಬ ಸುಳಿವು ನೀಡಲಾಗಿತ್ತು. ಪ್ರೇಕ್ಷಕರೂ ಮುಂದಿನ ಭಾಗಕ್ಕಾಗಿ ಸಾಕಷ್ಟು ನಿರೀಕ್ಷೆಗಳಿಂದ ಕಾದಿದ್ದಾರೆ. ಅವರ ಕುತೂಹಲ ತಣಿಸುವ ಸುದ್ದಿಯನ್ನು ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ನೀಡಿದೆ.

  ದಿನಾಂಕ ಪಕ್ಕಾ

  'ಕೆಜಿಎಫ್ ಚಾಪ್ಟರ್ 2' ಚಿತ್ರ 2020ರ ಅಕ್ಟೋಬರ್ 23ರಂದು ವಿಶ್ವವ್ಯಾಪಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ ಎಂದು ಹೊಂಬಾಳೆ ಫಿಲಂ ತಿಳಿಸಿದೆ. ಇದರಿಂದ ಬಹು ನಿರೀಕ್ಷಿತ ಕೆಜಿಎಫ್ ಚಿತ್ರದ ಬಿಡುಗಡೆಯ ದಿನಾಂಕ ಪಕ್ಕಾ ಆದಂತಾಗಿದೆ. ದಸರಾ ಹಬ್ಬದ ಸಂದರ್ಭದ ಸಿನಿಮಾ ಬಿಡುಗಡೆಯಾಗಲಿದೆ ಎಂಬ ಸುದ್ದಿ ಹರಡಿತ್ತು. ಅದೀಗ ಅಧಿಕೃತವಾಗಿದೆ.

  'ಕೆಜಿಎಫ್-2' ಸಿನಿಮಾ ತಂಡಕ್ಕೆ ಇಂದು ವಿಶೇಷ ದಿನ: ಯಾಕೆ?'ಕೆಜಿಎಫ್-2' ಸಿನಿಮಾ ತಂಡಕ್ಕೆ ಇಂದು ವಿಶೇಷ ದಿನ: ಯಾಕೆ?

  ಮೇ ಐ ಕಮ್ ಇನ್...

  ಮೇ ಐ ಕಮ್ ಇನ್...

  ದಿನಾಂಕ ಘೋಷಣೆಯನ್ನು ಆಕರ್ಷಕ ಪೋಸ್ಟರ್‌ನೊಂದಿಗೆ ಚಿತ್ರತಂಡ ಮಾಡಿದೆ. ಕೆಂಪು ಬಣ್ಣದ ಹಿನ್ನೆಲೆಯಲ್ಲಿ ಯಶ್ ಗನ್ ಹಿಡಿದು ಸಾಗುತ್ತಿರುವಂತೆ ತೋರಿಸಲಾಗಿದೆ. ಅಕ್ಟೋಬರ್ 23ರಂದು ಬಿಡುಗಡೆಯಾಗಲಿದೆಎಂಬ ಮಾಹಿತಿಯ ಜತೆಗೆ 'ಮೇ ಐ ಕಮ್ ಇನ್...' ಎಂದು ಪ್ರೇಕ್ಷಕರನ್ನು ಕೇಳುತ್ತಿರುವಂತೆ ಶೀರ್ಷಿಕೆ ನೀಡಲಾಗಿದೆ.

  ವಿವಿಧ ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆಗೆ

  ವಿವಿಧ ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆಗೆ

  ವಿಜಯ್ ಕಿರಗಂದೂರು ನಿರ್ಮಾಣದ, ಪ್ರಶಾಂತ್ ನೀಲ್ ನಿರ್ದೇಶನದ ಈ ಪ್ಯಾನ್ ಇಂಡಿಯಾ ಚಿತ್ರವು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲದಲ್ಲಿ ತೆರೆಕಾಣಲಿದೆ. ಇದರಿಂದ ಕನ್ನಡ ಮಾತ್ರವಲ್ಲದೇ, ಕೆಜಿಎಫ್ ಅಭಿಮಾನಿಗಳಿಗೆ ರಸದೌತಣ ಸಿಗುವುದು ಖಾತರಿಯಾಗಿದೆ.

  'KGF-2' ನಿರ್ದೇಶಕ ಪ್ರಶಾಂತ್ ನೀಲ್ ಗೆ ದುಬಾರಿ ಉಡುಗೊರೆ ನೀಡಿದ ಯಶ್'KGF-2' ನಿರ್ದೇಶಕ ಪ್ರಶಾಂತ್ ನೀಲ್ ಗೆ ದುಬಾರಿ ಉಡುಗೊರೆ ನೀಡಿದ ಯಶ್

  ಟ್ರೆಂಡಿಂಗ್ ಆದ ಕೆಜಿಎಫ್

  ಟ್ರೆಂಡಿಂಗ್ ಆದ ಕೆಜಿಎಫ್

  ಹೊಂಬಾಳೆ ಫಿಲಂಸ್ ಈ ಮಾಹಿತಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಕೆಲವೇ ನಿಮಿಷಗಳಲ್ಲಿ ಸಾವಿರಾರು ರೀಟ್ವೀಟ್‌ಗಳಾಗಿದ್ದು, ಭಾರತದಲ್ಲಿ ಟ್ರೆಂಡಿಂಗ್ ಆಗಿದೆ. ಕೊರೊನಾ ವೈರಸ್ ಭೀತಿ ಹಾಗೂ ರಾಜಕೀಯ ವಿದ್ಯಮಾನಗಳ ನಡುವೆ, ಕೆಜಿಎಫ್ ಚಾಪ್ಟರ್2 ಟ್ರೆಂಡಿಂಗ್ ಆಗಿರುವುದು ಚಿತ್ರದ ಕುರಿತಾದ ಜನರ ಕುತೂಹಲ ಯಾವ ಮಟ್ಟಕ್ಕೆ ಇದೆ ಎಂಬುದನ್ನು ಬಿಂಬಿಸಿದೆ.

  ಇದೆ ದಿನ ಸೆಟ್ಟೇರಿದ್ದು

  ಇದೆ ದಿನ ಸೆಟ್ಟೇರಿದ್ದು

  ಕೆಜಿಎಫ್ 2 ಸಿನಿಮಾ ಸೆಟ್ಟೇರಿದ್ದು 2019ರ ಮಾರ್ಚ್ 13ರಂದು. 2020ರ ಮಾರ್ಚ್ 13ರಂದು ಮೊದಲ ದೃಶ್ಯದ ಚಿತ್ರೀಕರಣಕ್ಕೆ ಒಂದು ವರ್ಷ ತುಂಬಿದ ಸಂದರ್ಭದಲ್ಲಿಯೇ ಸಿನಿಮಾ ಬಿಡುಗಡೆಯ ದಿನಾಂಕ ಪ್ರಕಟಿಸಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲಾಗಿದೆ.

  English summary
  KGF Chapter 2 will be released on 23 October, 2020. Hombale Films officially announced the date of release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X