ಹೇಗಿದ್ದಾನೆ ನೋಡಿ ಕೆಜಿಎಫ್‌ನ ಅಧೀರ: ಸಂಜಯ್ ದತ್ ಲುಕ್ ಅನಾವರಣ

'ಕೆಜಿಎಫ್ ಚಾಪ್ಟರ್ 2' ಚಿತ್ರದ ಮುಖ್ಯ ವಿಲನ್ ಪಾತ್ರದಲ್ಲಿ ಸಂಜಯ್ ದತ್ ನಟಿಸಲಿದ್ದಾರೆ ಎಂದಾಗಲೇ ಆ ಪಾತ್ರದ ಭೀಕರ ಸ್ವರೂಪ ಅನೇಕರ ಕಣ್ಣಮುಂದೆ ಬಂದಿತ್ತು. ಏಕೆಂದರೆ ಪಾತ್ರದ ಹೆಸರಿನಲ್ಲಿಯೇ ಒಂದು ಭಯಾನಕ ವ್ಯಕ್ತಿತ್ವದ ಸುಳಿವಿತ್ತು. 'ಅಗ್ನಿಪಥ್' ಚಿತ್ರ ನೋಡಿದವರಿಗೆ ಖಳನಾಯಕನ ಪಾತ್ರದಲ್ಲಿ ಸಂಜಯ್ ದತ್ ಎಷ್ಟು ಭಯ ಹುಟ್ಟಿಸಬಹುದು ಎನ್ನುವುದು ಗೊತ್ತಿತ್ತು.

Recommended Video

KGF Chapter 2 : Sanjay Dutt ಪಾತ್ರಕ್ಕೆ ಪ್ರೇರಣೆ ಈ ಪಾತ್ರ | Filmibeat Kannada

ಈಗ ಅವರ ಪಾತ್ರದ ಲುಕ್ ಬಹಿರಂಗವಾಗಿದೆ. ಸಂಜಯ್ ದತ್ ಅವರ ಜನ್ಮದಿನವಾದ ಜುಲೈ 29ರಂದು ಕೆಜಿಎಫ್ ಚಾಪ್ಟರ್ 2 ಚಿತ್ರತಂಡ, ಅವರ ಪಾತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡುವ ಮೂಲಕ ಶುಭಾಶಯ ಕೋರಿದೆ. ಈ ಫಸ್ಟ್ ಲುಕ್ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದೆ.

ವಿಕಿಂಗ್ಸ್‌ನ ಪ್ರೇರಣೆ

ವಿಕಿಂಗ್ಸ್‌ನ ಪ್ರೇರಣೆ

ಕೆಜಿಎಫ್ ಚಾಪ್ಟರ್ 2 ಚಿತ್ರದ ಭಾಗವಾಗಿರುವುದಕ್ಕೆ ಧನ್ಯವಾದಗಳು. ನಮ್ಮ ಹುಚ್ಚಾಟಿಕೆಯ ಚಿತ್ರೀಕರಣ ಶೀಘ್ರದಲ್ಲಿಯೇ ಶುರುವಾಗುವುದಕ್ಕೆ ಕಾಯುತ್ತಿದ್ದೇವೆ ಎಂದಿರುವ ನಿರ್ದೇಶಕ ಪ್ರಶಾಂತ್ ನೀಲ್, ಸಂಜಯ್ ದತ್ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಜತೆಗೆ ಈ ಪಾತ್ರವು ವಿಕಿಂಗ್ಸ್ ವೆಬ್ ಸೀರೀಸ್‌ನ ಕ್ರೌರ್ಯಗಳಿಂದ ಪ್ರಭಾವಿತವಾಗಿದೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ.

ಸಂಜಯ್ ದತ್ ಸಂತಸ

ಸಂಜಯ್ ದತ್ ಸಂತಸ

ತಮಗೆ ದೊರೆತ ಜನ್ಮದಿನದ ಉಡುಗೊರೆಯಿಂದ ಸಂಜಯ್ ದತ್ ಖುಷಿಯಾಗಿದ್ದಾರೆ. ಈ ಚಿತ್ರದಲ್ಲಿ ನಟಿಸುವುದು ನನಗೆ ಸಂತಸದ ವಿಷಯ. ಇದಕ್ಕಿಂತ ಉತ್ತಮವಾದ ಜನ್ಮದಿನದ ಉಡುಗೊರೆ ಸಿಗಲಾರದು ಎಂದು ಇಡೀ ಕೆಜಿಎಫ್ ಚಿತ್ರತಂಡಕ್ಕೆ ಅವರು ಧನ್ಯವಾದ ಸಲ್ಲಿಸಿದ್ದಾರೆ.

ನಕಲು ಅಥವಾ ಸ್ಫೂರ್ತಿ?

ನಕಲು ಅಥವಾ ಸ್ಫೂರ್ತಿ?

ಸಂಜಯ್ ದತ್ ಅವರ ಫಸ್ಟ್ ಲುಕ್‌ನಲ್ಲಿ ಅವರ ಪಾತ್ರವು ರಾಗ್ನರ್ ಲೋಥ್‌ಬ್ರೊಕ್ ಅವರ ಪಾತ್ರವನ್ನೇ ಹೋಲುವಂತಿದೆ. ಆ ಪಾತ್ರದ ಕೇಶ ವಿನ್ಯಾಸ, ಉಡುಪು, ಟ್ಯಾಟೂ ವಿನ್ಯಾಸ ಪ್ರತಿಯೊಂದೂ ಸಂಜಯ್ ದತ್ ಪಾತ್ರದಲ್ಲಿಯೂ ಇದೆ. ಇದನ್ನು ಸ್ಫೂರ್ತಿ ಎಂದು ಈಗಾಗಲೇ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ. ಆದರೆ ಇದು ಸ್ಫೂರ್ತಿಯಲ್ಲ, ಕಾಪಿ ಎಂದು ಕೆಲವರು ಟೀಕಿಸುತ್ತಿದ್ದಾರೆ.

ಅಧೀರ-ರಾಕಿಭಾಯ್ ಮುಖಾಮುಖಿ

ಅಧೀರ-ರಾಕಿಭಾಯ್ ಮುಖಾಮುಖಿ

ಸಂಜಯ್ ದತ್ ಅವರ ಫಸ್ಟ್ ಲುಕ್ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಸಿದೆ. ಅಧೀರ ಮತ್ತು ರಾಕಿ ಭಾಯ್‌ನ ಮುಖಾಮುಖಿ ಸಂಭಾಷಣೆಗಳು, ಆಕ್ಷನ್ ಸನ್ನಿವೇಶಗಳು ಯಾವ ರೀತಿ ಇರಬಹುದು ಎನ್ನುವ ಕಲ್ಪನೆ ರೋಮಾಂಚನ ಮೂಡಿಸಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.

More from Filmibeat

English summary
KGF Chapter 2: Sanjay Dutt’s look as the ‘brutal’ Adheera unveiled on his birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X