ಯಶ್ ಹಳೆ ಫೋಟೊ ಶೇರ್ ಮಾಡಿ ಭೋಜ್‌ಪುರಿ ನಟ ಎಂದ KRK: ನೆಟ್ಟಿಗರಿಂದ ತರಾಟೆ!

ರಾಕಿಂಗ್ ಸ್ಟಾರ್ ಯಶ್ ಈಗ ವಿಶ್ವದ ಮೂಲೆ ಮೂಲೆಯಲ್ಲಿರೋ ಭಾರತೀಯರಿಗೂ ಚಿರಪರಿಚಿತ. 'ಕೆಜಿಎಫ್ 2' ಸಿನಿಮಾ ರಿಲೀಸ್ ಆದಲ್ಲಿಂದ ಯಶ್ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಕನ್ನಡದ ನಟ ಈಗ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗುರುತಿಸಿಕೊಂಡಿದ್ದು, ಕೆಲವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಆದರೂ, ಬಾಲಿವುಡ್‌ನಲ್ಲಿ ಹಲವು ಮಂದಿ ಒಳಗೊಳಗೆ ಕಿಡಿ ಕಾರುತ್ತಿದ್ದಾರೆ.

'ಕೆಜಿಎಫ್ ಚಾಪ್ಟರ್ 2' ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದ್ದಂತೆ ಕಿಡಿಕಾರಿದವರಲ್ಲಿ ಬಾಲಿವುಡ್‌ನ ಸೆಲ್ಫ್ ಮೇಡ್ ಕ್ರಿಟಿಕ್ ಕೆಆರ್‌ಕೆ ಉರ್ಫ್ ಕಮಲ್ ರಶೀದ್ ಖಾನ್. 'ಕೆಜಿಎಫ್ 2' ರಿಲೀಸ್ ಆದಲ್ಲಿಂದ ಕೆಆರ್‌ಕೆ ಒಂದಲ್ಲ ಒಂದು ವಿಷಯಕ್ಕೆ ಖ್ಯಾತೆ ತೆಗೆಯುತ್ತಲೇ ಇದ್ದಾರೆ. ಸಿನಿಮಾ ಆಗಿರಬಹುದು, ಇಲ್ಲಾ ಯಶ್ ಆಗಿರಬಹುದು, ಏನಾದರೂ ಒಂದು ಕಮೆಂಟ್ ಮಾಡೇ ಮಾಡುತ್ತಾರೆ.

ಈಗ ಯಶ್ ಹಳೆ ಫೋಟೊವೊಂದನ್ನು ಶೇರ್ ಮಾಡಿ ಕಮೆಂಟ್ ಮಾಡಿದ್ದಾರೆ. ಇದನ್ನು ನೋಡಿ ರಾಕಿ ಭಾಯ್ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. ಕೆಆರ್‌ಕೆಗೆ ಟ್ವಿಟರ್‌ನಲ್ಲಿ ಡಿಸೈನ್ ಡಿಸೈನ್ ಆಗಿ ಉಗಿದು ಉಪ್ಪಿನ ಕಾಯಿ ಹಾಕುತ್ತಿದ್ದಾರೆ. ಅಷ್ಟಕ್ಕೂ ಬಾಲಿವುಡ್‌ನ ಕೆಆರ್‌ಕೆ ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಬಗ್ಗೆ ಮಾಡಿದ ಕಮೆಂಟ್ ಏನು? ಅದಕ್ಕೆ ನೆಟ್ಟಿಗರು ಹೇಳಿದ್ದೇನು? ತಿಳಿಯಲು ಮುಂದೆ ಓದಿ.

ಭೋಜ್‌ಪುರಿ ನಟನಿಗೆ ಹೋಲಿಸಿದ KRK

'ಕೆಜಿಎಫ್ 2' ಸಿನಿಮಾ ಮೇಲೆ ಕೆಆರ್‌ಕೆಗೆ ಅದ್ಯಾಕೆ ಇಷ್ಟು ಕೋಪವೋ ಏನೋ ಗೊತ್ತಿಲ್ಲ. ಸಿನಿಮಾ ಬಿಡುಗಡೆಯಾದ ದಿನವೇ 'ಕೆಜಿಎಫ್ 2' ಸಿನಿಮಾವನ್ನು ಉಗಿದು ಕೆಮೆಂಟ್ ಮಾಡಿದ್ದರು. ಈಗ ಮತ್ತೆ ಕಾಲು ಕೆರೆದುಕೊಂಡು ಜಗಳಕ್ಕೆ ಬಂದಿದ್ದಾರೆ. ಯಶ್ ಹಳೆಯ ಫೋಟೊವೊಂದನ್ನು ಟ್ವಿಟರ್‌ ಖಾತೆಯಲ್ಲಿ ಶೇರ್ ಮಾಡಿಕೊಂಡು ಭೋಜ್‌ಪುರಿ ನಟನಿಗೆ ಹೋಲಿಸಿದ್ದಾರೆ. "ಬ್ರೋ.. ಯಶ್, ಗಡ್ಡವಿಲ್ಲದೆ ನೀವು ಭೋಜ್‌ಪುರಿ ನಟರಂತೆ ಕಾಣುತ್ತೀರ. ಅದ್ಭುತ, ಸೂಪರ್." ಎಂದು ಟ್ವೀಟ್ ಮಾಡಿದ್ದಾರೆ.

ಕೆಆರ್‌ಕೆ ತರಾಟೆ ತೆಗೆದುಕೊಂಡ ನೆಟ್ಟಿಗರು

ಕೆಆರ್‌ಕೆ ತರಾಟೆ ತೆಗೆದುಕೊಂಡ ನೆಟ್ಟಿಗರು

ಯಶ್ ಹಳೆಯ ಫೋಟೊ ಹಂಚಿಕೊಂಡು ಭೋಜ್‌ಪುರಿ ನಟರಂತೆ ಕಾಣುತ್ತೀರ ಎಂದಿರೋ ಕೆಆರ್‌ಕೆಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ಕೆಆರ್‌ಕೆ ಹಳೆಯ ಫೋಟೊ ಶೇರ್ ಮಾಡಿ, "ನಿನ್ನ ತಲೆಯಲ್ಲಿ ವಿಗ್ ಇಲ್ಲದಿದ್ದರೆ, ನೀನು ಹೇಗೆ ಕಾಣಿಸುತ್ತೀಯಾ ಅಂತ ನೋಡಿಕೋ." ಒಂದು ಕೆಆರ್‌ಕೆಯ ಹಳೆಯ ಫೋಟೊ ಶೇರ್ ಮಾಡಿದ್ದಾರೆ. ಇನ್ನೊಬ್ಬರು " ಯಶ್ ಹಳೆಯ ಫೋಟೊ ಶೇರ್ ಮಾಡಿ, ಹಾಲಿವುಡ್ ಮೆಟಿರಿಯಲ್ ಕಣೊ." ಅಂತ ಕಿಡಿಕಾರಿದ್ದಾರೆ.

ಬೋಜ್‌ಪುರಿ ನಟರ ಕೆಂಗಣ್ಣಿಗೆ ಕೆಆರ್‌ಕೆ ಗುರಿ

ಬೋಜ್‌ಪುರಿ ನಟರ ಕೆಂಗಣ್ಣಿಗೆ ಕೆಆರ್‌ಕೆ ಗುರಿ

ಕೆಆರ್‌ಕೆ, ಯಶ್ ಹಾಗೂ 'ಕೆಜಿಎಫ್ 2' ಸಿನಿಮಾವನ್ನು ಕಮೆಂಟ್ ಮಾಡುವ ಆತುರದಲ್ಲಿ ಭೋಜ್‌ಪುರಿ ನಟರನ್ನು ಎಳೆದು ತಂದಿದ್ದಾರೆ. ಈ ಕಮೆಂಟ್ ನೋಡಿ ಭೋಜ್‌ಪುರಿ ನಟರನ್ನು ಸುಖಾ ಸುಮ್ಮನೆ ಕೆಣಕಿದಂತಾಗಿದೆ. ಕಮಲ್ ಖಾನ್ ಕಮೆಂಟ್ ನೋಡಿ ಭೋಜ್‌ಪುರಿ ನಟರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದು ಕಾದು ನೋಡುತ್ತಿದ್ದಾರೆ.

'ಕೆಜಿಎಫ್ 2' ಚೆನ್ನಾಗಿಲ್ಲ ಎಂದ ಕೆಆರ್‌ಕೆ

'ಕೆಜಿಎಫ್ 2' ಚೆನ್ನಾಗಿಲ್ಲ ಎಂದ ಕೆಆರ್‌ಕೆ

'ಕೆಜಿಎಫ್ 2' ಸಿನಿಮಾ ನೋಡಿ ಕೆಆರ್‌ಕೆ ಕಿಡಿಕಾಡಿದ್ದಾರೆ. ಸಿನಿಮಾ ದೊಡ್ಡ ಟಾರ್ಚರ್ ಎಂದಿದ್ದರು. " ಕೆಜಿಎಫ್ 2 ಬರೋಬ್ಬರಿ 3 ಗಂಟೆ ಟಾಪ್ ಕ್ಲಾಸ್ ಟಾರ್ಚರ್. ಫಿಲ್ಮ್ ಮೇಕಿಂಗ್ ನೆಪದಲ್ಲಿ ಹಣ ಹಾಗೂ ಸಮಯ ಎರಡೂ ವ್ಯರ್ಥವಾಗಿದೆ. ಈ ಸಿನಿಮಾ ಏನಾದರೂ, ಬಾಲಿವುಡ್‌ನಲ್ಲಿ ವರ್ಕ್ ಆದರೆ, ಬಾಲಿವುಡ್ ಕಥೆ ಮುಗಿದಂತೆ. ಯಾಕೆಂದರೆ, ಬಾಲಿವುಡ್ ಇಂತಹ ಸಿನಿಮಾಗಳನ್ನು ಮಾಡಿದರೆ, ಇದು ಗ್ಯಾರಂಟಿ ದುರಂತ." ಎಂದು ಟ್ವೀಟ್ ಮಾಡಿದ್ದರು.

More from Filmibeat

English summary
KGF Chapter 2 Star Yash Criticized By KRK As Looks Like 'Bhojpuri Actor', Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X