ಇರುವುದೊಂದೇ ದಾರಿ, ಅದು ಕ್ರೌರ್ಯ ಮಾರ್ಗ!: ಬರಲಿದೆ ಕೆಜಿಎಫ್‌ನ 'ಕ್ರೂರ' ಉಡುಗೊರೆ

ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣ ಸದ್ಯಕ್ಕೆ ಪುನಃ ಆರಂಭವಾಗುವ ಸೂಚನೆಯಿಲ್ಲ. ಆದರೆ ಸಿನಿಮಾದ ಬಗ್ಗೆ ಅಪ್‌ಡೇಟ್ ಕೊಡಿ ಎಂದು ಅಭಿಮಾನಿಗಳಿಂದ ಪದೇ ಪದೇ ಒತ್ತಾಯ ಕೇಳಿಬರುತ್ತಿದೆ. ಇದಕ್ಕೆ ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದ ನಿರ್ದೇಶಕ ಪ್ರಶಾಂತ್ ನೀಲ್, ಶೀಘ್ರದಲ್ಲಿಯೇ ಹೊಸ ಅಪ್‌ಡೇಟ್ ನೀಡುವುದಾಗಿ ತಿಳಿಸಿದ್ದರು.

Recommended Video

KGF 2 : 29ಕ್ಕೆ ರಿಲೀಸ್ ಆಗಲಿದೆ KGF 2 ಭಯಂಕರ ಅಪ್ಡೇಟ್ | Yash | PrashanthNeel | Filmibeat Kannada

ಜುಲೈ 29 ಸಂಜಯ್ ದತ್ ಜನ್ಮದಿನ. ಈ ವಿಶೇಷ ಸಂದರ್ಭದಲ್ಲಿ ಸಿನಿಮಾದ ಕುರಿತು ಹೊಸ ಅಪ್‌ಡೇಟ್ ನೀಡಲಾಗುತ್ತೆ ಎಂಬ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿತ್ತು. ಅದು ನಿಜ ಎಂಬುದನ್ನು ಪ್ರಶಾಂತ್ ನೀಲ್ ಖಚಿತಪಡಿಸಿದ್ದಾರೆ. ಆದರೆ ಕೆಜಿಎಫ್‌ನ 'ಅಧೀರ' ಸಂಜಯ್ ದತ್ ಲುಕ್ ಹೇಗೆ ಇರಲಿದೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಆ ಕುತೂಹಲವನ್ನು ಚಿತ್ರತಂಡ ದುಪ್ಪಟ್ಟುಗೊಳಿಸಿದೆ.

ಕೆಜಿಎಫ್ ಚಿತ್ರತಂಡ ಸಂಜಯ್ ದತ್ ಜನ್ಮದಿನಕ್ಕೆ ನೀಡುವ ಉಡುಗೊರೆ ಹೇಗಿರಲಿದೆ? ಅದನ್ನು ತಿಳಿಯಲು ಜುಲೈ 29ರವರೆಗೆ ಕಾಯಬೇಕು. ಆದರೆ ಅದು ಭಯಾನಕವಾಗಿರಲಿದೆ ಎನ್ನುವುದಂತೂ ಸತ್ಯ, ಮುಂದೆ ಓದಿ...

ಜನ್ಮದಿನಕ್ಕೆ ಉಡುಗೊರೆ

ಜನ್ಮದಿನಕ್ಕೆ ಉಡುಗೊರೆ

'ಕೆಜಿಎಫ್ ಚಾಪ್ಟರ್ 2' ಚಿತ್ರತಂಡ ಸಂಜಯ್ ದತ್ ಜನ್ಮದಿನಕ್ಕೆ ವಿಶೇಷ ಲುಕ್ ಬಿಡುಗಡೆ ಮಾಡಲಿದೆ ಎಂಬ ಸುಳಿವನ್ನು ಪ್ರಶಾಂತ್ ನೀಲ್ ನೀಡಿದ್ದಾರೆ. ಆದರೆ ಅದು ಪೋಸ್ಟರ್ ರೂಪದಲ್ಲಿ ಇರಲಿದೆಯೇ, ಟೀಸರ್ ರೂಪದಲ್ಲಿ ಬರಲಿದೆಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ.

ಕ್ರೂರ ಮಾರ್ಗ!

ಕ್ರೂರ ಮಾರ್ಗ!

ಕೆಜಿಎಫ್ ಚಿತ್ರದ ಈ ಉಡುಗೊರೆ ಬಗ್ಗೆ ಜನರ ಕುತೂಹಲ ಹೆಚ್ಚಲು ಕಾರಣ ಪ್ರಶಾಂತ್ ನೀಲ್ ನೀಡಿರುವ ಮಾಹಿತಿ. 'ಇರುವುದೊಂದೇ ದಾರಿ, ಕ್ರೂರ ಮಾರ್ಗ!' ಎಂಬ ಕ್ಯಾಪ್ಷನ್ ಮೂಲಕ ಅವರು ಸಂಜಯ್ ದತ್ ಪಾತ್ರ ಕೆಜಿಎಫ್‌ನಲ್ಲಿ ಬಹಳ ಕ್ರೂರವಾಗಿರಲಿದೆ ಎಂದು ತಿಳಿಸಿದ್ದಾರೆ.

ಕ್ರೌರ್ಯದ ಅನಾವರಣ

ಕ್ರೌರ್ಯದ ಅನಾವರಣ

ಜುಲೈ 29ರ ಬೆಳಿಗ್ಗೆ 10 ಗಂಟೆಗೆ ಕ್ರೌರ್ಯವನ್ನು ಅನಾವರಣಗೊಳಿಸಲಾಗುತ್ತದೆ ಎಂದು ಕೆಜಿಎಫ್ ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ಪೋಸ್ಟರ್‌ನಲ್ಲಿ ಮಾಹಿತಿ ನೀಡಲಾಗಿದೆ. ಇದನ್ನು ಸಂಜಯ್ ದತ್ ಕೂಡ ಶೇರ್ ಮಾಡಿಕೊಂಡಿದ್ದಾರೆ.

ಟ್ವಿಟ್ಟರ್‌ನಲ್ಲಿ ಟಾಪ್ ಟ್ರೆಂಡ್

ಟ್ವಿಟ್ಟರ್‌ನಲ್ಲಿ ಟಾಪ್ ಟ್ರೆಂಡ್

ಕೆಜಿಎಫ್ ತಂಡ ಈ ಮಾಹಿತಿ ಹಂಚಿಕೊಳ್ಳುತ್ತಿದ್ದಂತೆಯೇ ಅಭಿಮಾನಿಗಳ ರೋಮಾಂಚಿತರಾಗಿದ್ದಾರೆ. ಕೆಲವೇ ನಿಮಿಷಗಳಲ್ಲಿ ಟ್ವಿಟ್ಟರ್‌ನಲ್ಲಿ ಕೆಜಿಎಫ್ ಚಾಪ್ಟರ್ 2 ನಂಬರ್ ಒನ್ ಸ್ಥಾನದಲ್ಲಿ ಟ್ರೆಂಡ್ ಆಗಲು ಶುರುವಾಗಿದೆ. 'ಅಧೀರ'ನ ಅನಾವರಣ ಯಾವ ರೀತಿಯಲ್ಲಿ ಇರಲಿದೆ ಎಂಬ ಚರ್ಚೆ ನಡೆಯುತ್ತಿದೆ.

More from Filmibeat

English summary
KGF Chapter 2 team will unveil the look of Adheera Sanjay Dutt on Juy 29 for his birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X