KGF Chapter 2 Twitter Review: 'ಕೆಜಿಎಫ್ 2' ಸಿನಿಮಾ ನೋಡಿ ಟ್ವಿಟರ್‌ನಲ್ಲಿ ನೆಟ್ಟಿಗರು ಏನಂದ್ರು?

ಭಾರತದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'KGF 2' ಅದ್ಧೂರಿಯಾಗಿ ರಾಕಿ ಭಾಯ್ ಸ್ಟೈಲ್‌ನಲ್ಲಿ ಥಿಯೇಟರ್‌ಗೆ ಎಂಟ್ರಿ ಕೊಟ್ಟಿದೆ. ಮಧ್ಯರಾತ್ರಿಯೊಂದಲೇ ರಾಕಿಬಾಯ್ ಅಭಿಮಾನಿಗಳು ಸಿನಿಮಾ ನೋಡುತ್ತಿದ್ದಾರೆ. ಕಳೆದ ಮೂರುವರೆ ವರ್ಷಗಳಿಂದ ಇದೊಂದು ಸಿನಿಮಾಗಾಗಿ ಕಾದು ಕೂತಿದ್ದ ಅಭಿಮಾನಿಗಳಿಗೆ ಕೊನೆಗೂ ತೆರೆಮೇಲೆ ರಾಕಿ ಭಾಯ್ ಪ್ರತ್ಯಕ್ಷ ಆಗಿದೆ.

Recommended Video

KGF 2 Review In TAMILNADU V/S BEAST Review In KARNATAKA | Yash | Vijay | KGF 2 Public Opinion

'ಕೆಜಿಎಫ್ ಚಾಪ್ಟರ್ 1'ರ ಬಳಿಕ 'ಕೆಜಿಎಫ್ ಚಾಪ್ಟರ್ 2' ಬಗ್ಗೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿರುತ್ತೆ. ಈ ಕಾರಣಕ್ಕೆ ಸಿನಿಮಾ ಇಷ್ಟೊಂದು ಹೈಪ್ ಪಡೆದುಕೊಂಡಿದೆ. ನರಾಚಿ ಕೋಟೆಯೊಳಗೆ ರಾಕಿ ಭಾಯ್ ದರ್ಬಾರ್ ಹೇಗಿದೆ ಅಂತ ನೋಡುವ ತವಕ. ಕೆಜಿಎಫ್ ಒಳಗೆ ತನ್ನದೇ ಕೋಟೆ ಕಟ್ಟಿಕೊಂಡ ಕಥೆಯನ್ನು ಕೇಳುವ ಆತುರ. ಇವೆಲ್ಲವೂ ಸೇರಿ 'ಕೆಜಿಎಫ್ 2' ವಿಶ್ವದೆಲ್ಲೆಡೆ ಬೇಜಾನ್ ಸದ್ದು ಮಾಡುತ್ತಿದೆ. ಹಾಗಿದ್ದರೆ, ಇಷ್ಟು ದಿನ ಸಿನಿಮಾ ನೋಡಲು ಕಾದು ಕೂತಿದ್ದವರು ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಿ ಏನಂದ್ರು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ರಾಕಿ ಭಾಯ್ ತೂಫಾನ್ ಎಂಟ್ರಿ

ಮಧ್ಯರಾತ್ರಿಯಿಂದಲೇ ನೆಟ್ಟಿಗರು 'ಕೆಜಿಎಫ್ 2' ಸಿನಿಮಾದ ಬಗ್ಗೆ ಟ್ವಿಟರ್‌ನಲ್ಲಿ ವಿಮರ್ಶೆ ಮಾಡುವುದಕ್ಕೆ ಆರಂಭಿಸಿದ್ದಾರೆ. ಅದಿತ್ ಕರ್ಮಾಕೆರ್ 'ಕೆಜಿಎಫ್ 2' ಫಸ್ಟ್ ಹಾಫ್ ಬಗ್ಗೆ ಹೀಗೆ ಹೇಳಿದ್ದಾನೆ. " ಫಸ್ಟ ಹಾಫ್ ಈಗತಾನೇ ಮುಗೀತು. ಹೀರೊ ಇಂಟ್ರುಡಕ್ಷನ್ ಅದ್ಭುತವಾಗಿದೆ. ಆದರೆ, ಸಿಕ್ಕಾಪಟ್ಟೆ ಬಿಲ್ಡಪ್ ಇದೆ. ವಾವ್ಹ್ ಎಂಥಾ ಸಿನಿಮಾ. ಇಂಟರ್‌ವಲ್ ಅಂತೂ ಬೆಂಕಿ ಹತ್ತಿಸುವಂತಿದೆ. ಮದರ್ ಸೆಂಟಿಮೆಂಟ್ ಇಲ್ಲೂ ಬಂದಿದೆ." ಎಂದು ಟ್ವೀಟ್ ಮಾಡಿದ್ದಾರೆ.

ಫ್ಲ್ಯಾಶ್ ಬ್ಯಾಕ್ ಸಿನಿಮಾದ ಹೈಲೈಟ್

" ಈ ಸಿನಿಮಾದ ಬಗ್ಗೆ ಕೆಟ್ಟದಾಗಿ ಹೇಳುವುದಕ್ಕೆ ಸಾಧ್ಯವೇ ಇಲ್ಲ. ಯಾಕೆಂದರೆ, ಇಲ್ಲಿವರೆಗೂ ಸಿನಿಮಾ ಸೂಪರ್ ಆಗಿದೆ. ಅದ್ಭುತವಾದ ಸಿನಿಮಾ. ಈ ಚಿತ್ರ ತಾಯಿ ಪ್ಲ್ಯಾಶ್ ಬ್ಯಾಕ್‌ನಿಂದ ಆರಂಭ ಆಗುತ್ತದೆ." ಎಂದು ರಾಜು ಎಂಬುವವರು ಬರೆದುಕೊಂಡಿದ್ದಾರೆ. 'ಕೆಜಿಎಫ್ 2' ಸಿನಿಮಾ ನೋಡಿದವರಿಗೆ ಫಸ್ಟ್ ಹಾಫ್ ಅಂತೂ ಸಿಕ್ಕಾಪಟ್ಟೆ ಇಷ್ಟ ಆಗಿದೆ.

ಅಧೀರ ತೀರಾ ಭಯಂಕರ

ರಾಕಿ ಭಾಯ್ ಜೊತೆ ಅಧೀರ ಎಂಟ್ರಿ ಕೂಡ ತೀರಾ ಭಯಂಕರವಾಗಿದೆ ಎನ್ನುತ್ತಿದ್ದಾರೆ. ರಾಕಿ ಭಾಯ್‌ ಸರಿಯಾದ ಎದುರಾಳಿ ಎನ್ನುತ್ತಿದ್ದಾರೆ. " ಸಿನಿಮಾದ ತೀವ್ರತೆಗೆ 3 ಸ್ಟಾರ್, ಕಥೆಯಲ್ಲಿ ಗ್ರಿಪ್ ಇದೆ. ಬಿಜಿಎಂ ಅಂತೂ ಸೂಪರ್. ರಾಕಿ ಭಾಯ್‌ಗೆ ಖಡಕ್ ಆದ ಎದುರಾಳಿ ಅಧೀರ. ಸಿನಿಮಾದ ಮೊದಲಾರ್ಧ ಸೂಪರ್ 5ಕ್ಕೆ 3.15 ಅಂಕ." ಎನ್ನುತ್ತಾರೆ ಮತ್ತೊಬ್ಬ ನೆಟ್ಟಿಗ. ನೆಟ್ಟಿಗರಿಗೆ ಸಿನಿಮಾದ ಫಸ್ಟ್ ಹಾಫ್ ಅಂತೂ ಮಸ್ತ್ ಆಗಿದೆ.

ರವಿ ಬಸ್ರೂರು ಹಿನ್ನೆಲೆ ಸಂಗೀತ ಸೂಪರ್

ರಾಕಿ ಭಾಯ್, ಸ್ಟೋರಿ, ಪ್ರಶಾಂತ್ ನೀಲ್ ನಿರ್ದೇಶನದಂತೆ ಸಿನಿಮಾದ ಮತ್ತೊಂದು ಹೈಲೈಟ್ ಅಂದ್ರೆ, ಅದು ರವಿ ಬಸ್ರೂರು ಹಿನ್ನೆಲೆ ಸಂಗೀತ. ಫಸ್ಟ್ ಹಾಫ್ ನೋಡಿದ ಸಿನಿಪ್ರಿಯರಿಗೆ ಹಿನ್ನೆಲೆ ಸಂಗೀತ ತುಂಬಾನೇ ಇಷ್ಟ ಆಗಿದೆ. ಇಂಟ್ರುಡಕ್ಷನ್ ಹಾಗೂ ಇಂಟರ್‌ವಲ್ ಸೀಕ್ವೆನ್ಸ್ ತುಂಬಾನೇ ಇಷ್ಟ ಆಗಿದೆ ಎನ್ನುತ್ತಿದ್ದಾರೆ.

ನೆಗೆಟಿವ್ ಕಮೆಂಟ್ ಯಾಕೆ?

ನೆಗೆಟಿವ್ ಕಮೆಂಟ್ ಯಾಕೆ?

ಟ್ವಿಟರ್‌ನಲ್ಲಿ 'ಕೆಜಿಎಫ್ 2' ಸಿನಿಮಾ ಬಗ್ಗೆ ನೆಗೆಟಿವ್ ಕಮೆಂಟ್ ಕೂಡ ಇದೆ. ಅದಕ್ಕೆ ಕೆಲ ನೆಟ್ಟಿಗರು ಫೇಕ್ ಅಕೌಂಟ್ ಸೃಷ್ಟಿಸಿ, ಅದರ ಮೂಲಕ ನೆಗೆಟಿವ್ ಕಮೆಂಟ್ ಮಾಡುತ್ತಿದ್ದಾರೆ ಎಂಬ ಆರೋಪ ಮಾಡಲಾಗುತ್ತಿದೆ. ಅಸಲಿಗೆ ಸಿನಿಮಾ ಹೇಗಿದೆ? ಅನ್ನೋದು ಏಪ್ರಿಲ್ 14ರ ಮಧ್ಯಾಹ್ನದ ವೇಳೆಗೆ ಗೊತ್ತಾಗಲಿದೆ.

More from Filmibeat

English summary
Yash Starrer Most Expected Pan India Movie KGF 2 Twitter Review. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X