KGF 3: ಡಿಸೆಂಬರ್‌ನಿಂದ 'ಕೆಜಿಎಫ್ 3' ಕೆಲಸ ಶುರು.. ರಿಲೀಸ್ ಡೇಟ್ ಕೂಡ ಫಿಕ್ಸ್.. 'ಯಶ್ 19' ಕಥೆಯೇನು?
'KGF' ಪ್ರಾಂಚೈಸಿ ಕನ್ನಡ ಚಿತ್ರರಂಗಕ್ಕೆ ಹೊಸ ಇಮೇಜ್ ಅನ್ನೇ ಕೊಟ್ಟಿದೆ. 'ಕೆಜಿಎಫ್ ಚಾಪ್ಟರ್ 1' ಹಾಗೂ 'ಕೆಜಿಎಫ್ ಚಾಪ್ಟರ್ 2' ಎರಡೂ ಸಿನಿಮಾಗಳು ಮೆಗಾ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿವೆ. ಈ ಸಿನಿಮಾ ಮೂಲಕ ಯಶ್, ಪ್ರಶಾಂತ್ ನೀಲ್ ಹಾಗೂ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದರು.
'ಕೆಜಿಎಫ್ ಚಾಪ್ಟರ್ 2' ಬಾಕ್ಸಾಫೀಸ್‌ನಲ್ಲಿ ಸಾವಿರಾರು ಕೋಟಿ ಲೂಟಿ ಮಾಡುತ್ತಿದ್ದಂತೆ 'ಕೆಜಿಎಫ್ ಚಾಪ್ಟರ್ 3' ಬಗ್ಗೆ ಚರ್ಚೆ ಆರಂಭ ಆಗಿತ್ತು. ಅದಕ್ಕೆ ಕಾರಣ 'ಕೆಜಿಎಫ್ 2' ಸಿನಿಮಾದ ಕ್ಲೈಮ್ಯಾಕ್ಸ್ ಸೀನ್. ಇನ್ನೇನು ಸಿನಿಮಾ ಮುಗೀತು ಅನ್ನುವಾಗಲೇ ಚಿಕ್ಕದೊಂದು ಹಿಂಟ್ ಕೊಟ್ಟಿದ್ದರು. ಅಲ್ಲಿಂದ ಚಾಪ್ಟರ್ 3ನೂ ಬರುತ್ತೆ ಅನ್ನೋದು ಅಭಿಮಾನಿಗಳಿಗೆ ಕನ್ಫರ್ಮ್ ಆಗಿತ್ತು.

ಹಿಂದೊಮ್ಮೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಪಕ ವಿಜಯ್ ಕಿರಗಂದೂರು 'ಕೆಜಿಎಫ್ ಚಾಪ್ಟರ್ 3' ಶೀಘ್ರದಲ್ಲಿಯೇ ಆರಂಭ ಆಗುತ್ತೆ ಎಂದು ಸುಳಿವು ನೀಡಿದ್ದರು. ಆ ವೇಳೆ ನಿರ್ಮಾಣ ಸಂಸ್ಥೆ ಸದ್ಯಕ್ಕೆ ಸಿನಿಮಾ ಆರಂಭ ಆಗುತ್ತಿಲ್ಲ ಎಂದು ಅಭಿಮಾನಿಗಳಿಗೆ ನಿರಾಸೆ ಮಾಡಿದ್ದರು. ಆದ್ರೀಗ ಖುಷಿ ಪಡುವ ಸುದ್ದಿಯೊಂದಿದೆ. 'ಕೆಜಿಎಫ್ 3' ಪ್ರೀ ಪ್ರೊಡಕ್ಷನ್ ಕೆಲಸ ಇದೇ ವರ್ಷದಿಂದ ಆರಂಭ ಆಗುತ್ತಿದೆ.
'ಕೆಜಿಎಫ್ 3' ಶೀಘ್ರದಲ್ಲೇ ಆರಂಭ
'ಕೆಜಿಎಫ್ ಚಾಪ್ಟರ್ 3'ಗೆ ಯಾರೆಲ್ಲ ಕಾಯುತ್ತಿದ್ದರೋ ಅವರಿಗೆಲ್ಲ ಖುಷಿ ವಿಷಯವೊಂದಿದೆ. 'ಕೆಜಿಎಫ್ 3'ಗಾಗಿ ಇನ್ನೂ ಐದಾರು ವರ್ಷ ಕಾಯಬೇಕಿಲ್ಲ. ಇನ್ನು ಕೆಲವೇ ತಿಂಗಳಲ್ಲಿ ಸಿನಿಮಾ ಆರಂಭ ಆಗುತ್ತಿದೆ. ಇದೇ ಡಿಸೆಂಬರ್‌ನಿಂದ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸ ಆರಂಭ ಆಗಲಿದ್ದು, ಪ್ರಶಾಂತ್ ನೀಲ್ ಸ್ಕ್ರಿಪ್ಟ್‌ಗೆ ಕೈ ಹಾಕುತ್ತಿದ್ದಾರೆ ಎನ್ನಲಾಗಿದೆ. ಈ ವಿಷಯವನ್ನು ಅಧಿಕೃತ ಎಂದು ರಾಷ್ಟ್ರೀಯ ಮಾಧ್ಯಮಗಳು ಪ್ರಕಟಿಸಿವೆ.
ಶೂಟಿಂಗ್ ಯಾವಾಗ? ರಿಲೀಸ್ ಯಾವಾಗ?
'ಕೆಜಿಎಫ್ ಚಾಪ್ಟರ್ 3' ಸಿನಿಮಾ ಸ್ಕ್ರಿಪ್ಟ್ ಕೆಲಸ ಇದೇ 2023 ಡಿಸೆಂಬರ್‌ನಿಂದ ಆರಂಭ ಆಗುತ್ತಿದ್ದರೆ, ಸಿನಿಮಾದ ಶೂಟಿಂಗ್ 2024ರಲ್ಲಿ ಶುರುವಾಗುತ್ತಿದೆ. ಯಶ್ ಮುಂದಿನ ವರ್ಷ 'ಕೆಜಿಎಫ್ 3' ಚಿತ್ರತಂಡದೊಂದಿಗೆ ಸೇರಿಕೊಳ್ಳಲಿದ್ದಾರೆ. ಅಲ್ಲದೆ ಸಿನಿಮಾವನ್ನು 2025ರಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡುವುದಕ್ಕೆ ಹೊಂಬಾಳೆ ಫಿಲ್ಮ್ಸ್ ನಿರ್ಧರಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಇಲ್ಲಿಂದ 'ಕೆಜಿಎಫ್' ಪ್ರಾಂಚೈಸಿ ಅಭಿಮಾನಿಗಳು ಖುಷಿ ವಿಷಯವೊಂದು ಸಿಕ್ಕಂತಾಗಿದೆ.

'ಸಲಾರ್' ರಿಲೀಸ್ ಬಳಿಕ 'ಕೆಜಿಎಫ್ 3' ಶುರು
ಪ್ರಶಾಂತ್ ನೀಲ್ ಸದ್ಯ ಪ್ರಭಾಸ್ ನಟಿಸಿರುವ 'ಸಲಾರ್' ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದು ಪ್ರಶಾಂತ್ ನೀಲ್, ಪ್ರಭಾಸ್ ಹಾಗೂ ಹೊಂಬಾಳೆ ಫಿಲ್ಮ್ಸ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಮೊದಲ ಸಿನಿಮಾ. 'ಕೆಜಿಎಫ್ 2' ಬಳಿಕ ಸೆಟ್ಟೇರಿದ್ದ ಸಿನಿಮಾವೀಗ ರಿಲೀಸ್‌ಗೆ ರೆಡಿಯಾಗಿದೆ. ಡಿಸೆಂಬರ್ 22ರಂದು ಸಿನಿಮಾ ಅದ್ಧೂರಿಯಾಗಿ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.
ಯಶ್ 19ನೇ ಸಿನಿಮಾದಲ್ಲಿ ಬ್ಯುಸಿ
ಇತ್ತ ಯಶ್ 19ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮೂಲಗಳ ಪ್ರಕಾರ, ಅಕ್ಟೋಬರ್ ತಿಂಗಳಲ್ಲಿ 'ಯಶ್ 19' ಸಿನಿಮಾ ಅನೌನ್ಸ್ ಆಗುತ್ತಿದೆ. ಡಿಸೆಂಬರ್ ತಿಂಗಳಿನಿಂದ ಸಿನಿಮಾದ ಶೂಟಿಂಗ್ ಶುರುವಾಗುತ್ತಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯಶ್ ಇನ್ನೂ ಅಧಿಕೃತವಾಗಿ ಹೇಳಿಕೆ ಕೊಟ್ಟಿಲ್ಲ. ಇಂಡಸ್ಟ್ರೀ ಲೆಕ್ಕಾಚಾರದ ಪ್ರಕಾರ, ಯಶ್ 19ನೇ ಸಿನಿಮಾವನ್ನು ಮುಗಿಸುತ್ತಿದ್ದಂತೆ 'ಕೆಜಿಎಫ್ ಚಾಪ್ಟರ್ 3' ಗ್ರ್ಯಾಂಡ್ ಆಗಿ ಸೆಟ್ಟೇರುತ್ತೆ ಅನ್ನೋ ಮಾತು ಕೇಳಿ ಬರುತ್ತಿದೆ.


Click it and Unblock the Notifications











