'ಗೆಸ್ ಮಾಡಿ' ಎಂದಿದ್ದ ಯಶ್, ಪ್ರಶಾಂತ್ ನೀಲ್ ಗುಟ್ಟು ರಟ್ಟು!

ಎರಡು ದಿನಗಳ ಹಿಂದಷ್ಟೇ ಪ್ರಶಾಂತ್ ನೀಲ್ ಎರಡು ಫೋಟೊಗಳನ್ನು ಹಂಚಿಕೊಂಡಿದ್ದರು. ಈ ಫೋಟೊಗಳು ಯಶ್ ಮತ್ತು ಪ್ರಶಾಂತ್ ನೀಲ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಒಂದು ಫೋಟೊದಲ್ಲಿ ಯಶ್ ಕ್ಯಾಮೆರಾ ಮುಂದೆ ಕುಳಿತು ಮಾತನಾಡುತ್ತಿದ್ದರೆ, ಇನ್ನೊಂದು ಚಿತ್ರದಲ್ಲಿ ಪ್ರಶಾಂತ್ ನೀಲ್ ಮಾತನಾಡುತ್ತಿದ್ದರು. ಈ ಎರಡೂ ಫೋಟೊಗಳಲ್ಲಿ ಪ್ರಶಾಂತ್ ನೀಲ್ ಪತ್ನಿ ಇದ್ದಾರೆ.

Recommended Video

ಆಟೋ ಡ್ರೈವರ್ ಅಭಿಮಾನಕ್ಕೆ ರಚಿತಾ ರಾಮ್ ಭಾವುಕ ಪೋಸ್ಟ್ | Rachitha Ram | Filmibeat Kannada

ಆದರೆ ಆ ಫೋಟೊಗಳ ಬಗ್ಗೆ ವಿವರಣೆ ನೀಡದ ಪ್ರಶಾಂತ್ ನೀಲ್, 'ಏನಾಗುತ್ತಿದೆ? ಗೆಸ್ ಮಾಡುತ್ತಾ ಇರಿ' ಎಂದು ಅಭಿಮಾನಿಗಳ ತಲೆಗೆ ಹುಳಬಿಟ್ಟಿದ್ದರು. ಅಭಿಮಾನಿಗಳು ಹತ್ತಾರು ಬಗೆಯ ಉತ್ತರಗಳನ್ನು ನೀಡಿದ್ದರೂ ಯಾವುದು ಸರಿ ಎಂದು ಮಾತ್ರ ಪ್ರಶಾಂತ್ ನೀಲ್ ಹೇಳಿರಲಿಲ್ಲ. ಆದರೆ ಅವರು ಒಂದು ಸುಳಿವನ್ನು ನೀಡಿದ್ದರು. ಕೆಜಿಎಫ್ ಚಾಪ್ಟರ್ 1 ಎಂಬ ಹ್ಯಾಷ್ ಟ್ಯಾಗ್, ಆ ಫೋಟೊಗಳು ಯಾವುದರ ಕುರಿತಾಗಿರಬಹುದು ಎಂಬ ಸಣ್ಣ ಹಿಂಟ್ ನೀಡಿತ್ತು. ಅದೀಗ ಬಹಿರಂಗವಾಗಿದೆ. ಮುಂದೆ ಓದಿ...

ತೆಲುಗು ಕಿರುತೆರೆಯಲ್ಲಿ ಪ್ರಸಾರ

ತೆಲುಗು ಕಿರುತೆರೆಯಲ್ಲಿ ಪ್ರಸಾರ

'ಕೆಜಿಎಫ್ ಚಾಪ್ಟರ್ 1' ಕನ್ನಡ ಮತ್ತು ಹಿಂದಿಯ ಕಿರುತೆರೆಯಲ್ಲಿ ಹಲವು ಸಮಯದಿಂದ ಪ್ರಸಾರವಾಗುತ್ತಿವೆ. ಆದರೆ ಚಿತ್ರಕ್ಕೆ ಅಮೋಘ ಪ್ರತಿಕ್ರಿಯೆ ದೊರಕಿದ್ದ ತೆಲುಗಿನಲ್ಲಿ ಇನ್ನೂ ಕಿರುತೆರೆ ವೀಕ್ಷಕರಿಗೆ 'ಕೆಜಿಎಫ್ 1' ಇನ್ನೂ ವೀಕ್ಷಣೆಗೆ ಲಭ್ಯವಾಗಿಲ್ಲ. ಇದೇ ಮೊದಲ ಬಾರಿಗೆ ತೆಲುಗಿನ ಟೆಲಿವಿಷನ್‌ನಲ್ಲಿ ಕೆಜಿಎಫ್ ಅಧಿಕೃತವಾಗಿ ಪ್ರಸಾರವಾಗಲಿದೆ.

ಭಾನುವಾರ ಸಂಜೆ ಪ್ರಸಾರ

ಭಾನುವಾರ ಸಂಜೆ ಪ್ರಸಾರ

ಬಹುನಿರೀಕ್ಷಿತ ಯಶ್ ಅವರ 'ಕೆಜಿಎಫ್ ಚಾಪ್ಟರ್ 1' ತೆಲುಗಿನ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ಭಾನುವಾರ ಸಂಜೆ 5.30ರಿಂದ ಪ್ರಸಾರವಾಗಲಿದೆ ಎಂದು ಸ್ಟಾರ್ ಮಾ ವಾಹಿನಿ ಮಾಹಿತಿ ನೀಡಿದೆ. ಪ್ರಶಾಂತ್ ನೀಲ್ ಕೂಡ ಈ ಮಾಹಿತಿ ನೀಡಿದ್ದಾರೆ.

ಬ್ರೇಕ್ ತೆಗೆದುಕೊಳ್ಳುವ ಮುನ್ನ...

ಬ್ರೇಕ್ ತೆಗೆದುಕೊಳ್ಳುವ ಮುನ್ನ...

'ಬ್ರೇಕ್ ತೆಗೆದುಕೊಳ್ಳುವುದು ಈ ಒಬ್ಬರಿಗೆ ಎಂದಿಗೂ ಆಯ್ಕೆಯೇ ಅಲ್ಲ. ಹೀಗಾಗಿ ಬ್ರೇಕ್ ತೆಗೆದುಕೊಳ್ಳುವ ಮುನ್ನ ಎರಡು ಬಾರಿ ಆಲೋಚಿಸಿ' ಎಂದು ಪ್ರಶಾಂತ್ ನೀಲ್ ತಿಳಿಸಿದ್ದಾರೆ. ಯಾವಾಗಲೂ ಕೆಲಸದಲ್ಲಿ, ಇದು ತಮ್ಮ ವಿಸ್ತೃತ ಕುಟುಂಬ ಎಂದು ಅವರು ಹೇಳಿಕೊಂಡಿದ್ದಾರೆ. ಈ ಮೂಲಕ ತಾವು ಮತ್ತು ಯಶ್ ಹಾಗೆ ಕ್ಯಾಮೆರಾ ಎದುರು ಕುಳಿತಿದ್ದ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಮೇಕಿಂಗ್ ಅನುಭವ ಪ್ರಸಾರ

ಮೇಕಿಂಗ್ ಅನುಭವ ಪ್ರಸಾರ

ಪ್ರಶಾಂತ್ ನೀಲ್ ಮತ್ತು ಯಶ್ ಇಬ್ಬರೂ ಕೆಜಿಎಫ್ ಚಾಪ್ಟರ್ 1ರ ಮೇಕಿಂಗ್‌ನ ಅನುಭವವನ್ನು ಕ್ಯಾಮೆರಾ ಮುಂದೆ ಹಂಚಿಕೊಂಡಿದ್ದಾರೆ. ಅವರು ನೀಡಿರುವ ಸುಳಿವಿನ ಪ್ರಕಾರ ಕಿರುತೆರೆಯಲ್ಲಿ ಚಿತ್ರದ ವಿರಾಮದ ನಡುವೆ ಈ ಮೇಕಿಂಗ್ ಅನುಭವದ ತುಣುಕುಗಳು ಪ್ರಸಾರವಾಗಲಿವೆ. ಇದರಿಂದ ಪ್ರೇಕ್ಷಕರಿಗೆ ಈ ಚಿತ್ರದ ಹಿಂದೆ ಇದ್ದ ಸವಾಲುಗಳು, ಕಷ್ಟಗಳು, ಸಿನಿಮಾ ಹಿಂದಿನ ಸ್ಫೂರ್ತಿ ಮುಂತಾದವುಗಳ ಮಾಹಿತಿ ಸಿಗಲಿದೆ.

ಅನಧಿಕೃತ ಪ್ರಸಾರ ಮಾಡಿದ್ದ ಚಾನೆಲ್

ಅನಧಿಕೃತ ಪ್ರಸಾರ ಮಾಡಿದ್ದ ಚಾನೆಲ್

ಕೆಜಿಎಫ್ ಚಾಪ್ಟರ್ 1ರ ಪ್ರಸಾರದ ಹಕ್ಕುಗಳನ್ನು ಸ್ಟಾರ್ ಮಾ ಭಾರಿ ಮೊತ್ತ ನೀಡಿ ಖರೀದಿಸಿದೆ ಎನ್ನಲಾಗಿದೆ. ಕೆಲವು ತಿಂಗಳ ಹಿಂದೆ ತೆಲುಗಿನ ಕೇಬಲ್ ಚಾನೆಲ್ ಒಂದು ಅನಧಿಕೃತವಾಗಿ ಕೆಜಿಎಫ್ ಚಿತ್ರ ಪ್ರಸಾರ ಮಾಡಿದ್ದು ವಿವಾದ ಸೃಷ್ಟಿಸಿತ್ತು. ಎವೆರಿ ಎಂಬ ಚಾನೆಲ್ ವಿರುದ್ಧ ಕೆಜಿಎಫ್ ಚಿತ್ರತಂಡ ಕಾನೂನು ಕ್ರಮಕ್ಕೆ ಮುಂದಾಗಿತ್ತು.

More from Filmibeat

English summary
KGF Chapter1 Telugu world television Premiere this Sunday at 5:30pm on Star Maa. Prashanth Neel and Yash to share their experiences between breaks.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X