ಶ್ರೀಮುರಳಿ 25ನೇ ಸಿನಿಮಾಗೆ ಪ್ರಶಾಂತ್ ನೀಲ್ ಆಕ್ಷನ್ ಕಟ್? 'ಬಘೀರ' ರೋರಿಂಗ್ ಸ್ಟಾರ್ ಎಷ್ಟನೇ ಸಿನಿಮಾ?
ಕನ್ನಡದ ಮತ್ತೊಂದು ಎಕ್ಸ್‌ಪೆಕ್ಟೆಡ್ ಸಿನಿಮಾ 'ಬಘೀರ' ಟ್ರೇಲರ್ ರಿಲೀಸ್ ಆಗಿದೆ. ಶ್ರೀಮುರಳಿ ಕೂಡ ಕಳೆದ ಮೂರು ವರ್ಷಗಳಿಂದ ಈ ಸಿನಿಮಾ ಬಿಟ್ಟು ಬೇರೆ ಪ್ರಾಜೆಕ್ಟ್‌ಗೆ ಕೈ ಹಾಕಿಲ್ಲ. 'ಬಘೀರ' ಸಿನಿಮಾಗಾಗಿಯೇ ತನ್ನೆಲ್ಲ ಶ್ರಮವನ್ನು ಹಾಕಿದ್ದರು. ಕೊನೆಗೂ ಈ ಸಿನಿಮಾ ರಿಲೀಸ್‌ಗೆ ಮುಹೂರ್ತ ಕೂಡಿ ಬಂದಿದೆ. ರೋರಿಂಗ್ ಸ್ಟಾರ್ ಸಿನಿಮಾ ಇದೇ ಅಕ್ಟೋಬರ್ 31ಕ್ಕೆ ರಿಲೀಸ್ ಆಗುತ್ತಿದೆ.
ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ. 'ಕೆಜಿಎಫ್', 'ಕಾಂತಾರ', 'ಸಲಾರ್' ಅಂತಹ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಹೊಂಬಾಳೆ ಫಿಲ್ಮ್ಸ್ 'ಬಘೀರ' ಸಿನಿಮಾಗೂ ಹಣ ಹೂಡಿದೆ. ಈ ಸಿನಿಮಾ ಇಷ್ಟೊಂದು ಸದ್ದು ಮಾಡುವುದಕ್ಕೆ ಕಾರಣ ಏನಂದ್ರೆ, ಇದು ಪ್ರಶಾಂತ್ ನೀಲ್ ಹೆಣೆದ ಕಥೆ.

'ಬಘೀರ' ಟ್ರೇಲರ್ ನೋಡಿದ ಬಳಿಕ ಇದು ಒಬ್ಬ ಸೂಪರ್ ಹೀರೋ ಸಿನಿಮಾ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತೆ. 'ಬಘೀರ' ಕನ್ನಡದ ಸೂಪರ್ ಹೀರೋ ಸಿನಿಮಾ ಅನ್ನೋದು ಸಿನಿಮಾ ಪ್ರೇಮಿಗಳಿಗೆ ಕುತೂಹಲ ಕೆರಳಿಸಿದೆ. ಇದೇ ಗ್ಯಾಪ್‌ನಲ್ಲಿ ಮತ್ತೊಂದು ಸುದ್ದಿ ಕೂಡ ಟ್ರೆಂಡಿಂಗ್‌ನಲ್ಲಿದೆ. ಶ್ರೀಮುರಳಿ 25ನೇ ಸಿನಿಮಾಗೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ ಅನ್ನೋ ಸುದ್ದಿ ಮತ್ತೆ ಟ್ರೆಂಡಿಂಗ್‌ನಲ್ಲಿದೆ.
ಶ್ರೀಮುರಳಿ-ಪ್ರಶಾಂತ್ ಸಿನಿಮಾ ಯಾವಾಗ?
ಶ್ರೀಮುರಳಿಗೆ ಮತ್ತೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳುವುದು ಯಾವಾಗ? ಇಂತಹದ್ದೊಂದು ಪ್ರಶ್ನೆ 'ಕೆಜಿಎಫ್ 2' ರಿಲೀಸ್ ಆದ ದಿನದಿಂದ ಸದ್ದು ಮಾಡುತ್ತಲೇ ಇದೆ. ಈ ಬಗ್ಗೆ ಈ ಹಿಂದೆ ಕೂಡ ಶ್ರೀ ಮುರಳಿ ಮಾಧ್ಯಮಗಳಿಗೆ ಉತ್ತರ ಕೂಡ ಕೊಟ್ಟಿದ್ದರು. ಶ್ರೀಮುರಳಿ ಮತ್ತು ಪ್ರಶಾಂತ್ ನೀಲ್ ಇಬ್ಬರೂ ಸೇರಿ 'ಉಗ್ರಂ' ಮಾಡಿದ್ದರು. ಆ ಬಳಿಕ ಮತ್ಯಾವುದೇ ಸಿನಿಮಾದಲ್ಲಿ ಈ ಜೋಡಿ ಒಟ್ಟಿಗೆ ಕೆಲಸ ಮಾಡಿಲ್ಲ. ಹೀಗಾಗಿ ಶ್ರೀಮುರಳಿ 25ನೇ ಸಿನಿಮಾ ಮೇಲೆ ಎಲ್ಲರ ಕಣ್ಣು ಬಿದ್ದಿದೆ.
ರೋರಿಂಗ್ ಸ್ಟಾರ್ 25ನೇ ಸಿನಿಮಾ?
ಶ್ರೀಮುರಳಿ 25ನೇ ಸಿನಿಮಾವನ್ನು ಪ್ರಶಾಂತ್ ನೀಲ್ ಅವರೇ ಹೇಳಬೇಕು ಅನ್ನೋದು ಸಿನಿಪ್ರಿಯರ ಆಸೆ. ಆದರೆ, 'ಕೆಜಿಎಫ್', 'ಸಲಾರ್' ಬಳಿಕ ಪ್ರಶಾಂತ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಆದರೆ, ರೋರಿಂಗ್ ಸ್ಟಾರ್ 25ನೇ ಸಿನಿಮಾವನ್ನು ಅವರೇ ನಿರ್ದೇಶನ ಮಾಡುತ್ತಿದ್ದಾರ ಅನ್ನೋದು ಅಭಿಮಾನಿಗಳ ಆಸೆ. ಅದಕ್ಕೆ ಹಿಂದೊಮ್ಮೆ ಸ್ವತ: ಅವರೇ ಶ್ರೀಮುರಳಿಯವರೇ ತಮ್ಮ 25ನೇ ಸಿನಿಮಾದ ಹೇಳಿಕೊಂಡಿದ್ದರು.

ಶ್ರೀಮುರಳಿ ಹೇಳಿದ್ದಿದ್ದೇನು?
"ಆ ಸಿನಿಮಾ ಬಗ್ಗೆ ಕೆಲಸ ನಡೆಯುತ್ತೆ. ನಾವಿಬ್ಬರೂ ಸಿನಿಮಾ ಮಾಡಲೇ ಬೇಕು. ಮಾಡೇ ಮಾಡುತ್ತೇವೆ. ಎಲ್ಲಾ ಟೈಮ್ ಕೂಡ ಬರಬೇಕು. ಅವರೂ ಸ್ವಲ್ಪ ಬ್ಯುಸಿಯಾಗಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದಾರೆ. ಎಲ್ಲಾ ಮುಗಿಸಿಕೊಂಡು ಮ್ಯಾಚ್ ಮಾಡಿಕೊಳ್ಳಬೇಕು. ನನಗೂ ತುಂಬಾನೇ ಇಷ್ಟ. 25ನೇ ಸಿನಿಮಾ ಮಾಡಬೇಕು ಅಂತ ಈಗಾಗಲೇ ಹೇಳಿದ್ದೇನೆ." ಎಂದು ರೋರಿಂಗ್ ಸ್ಟಾರ್ ಹೇಳಿದ್ದರು. ಅದೇ ವಿಡಿಯೋ ಈಗ ಮತ್ತೆ ವೈರಲ್ ಆಗುತ್ತಿದೆ.
ಸಿಕ್ಕಾಪಟ್ಟೆ ಬ್ಯುಸಿ ಪ್ರಶಾಂತ್ ನೀಲ್
ರೋರಿಂಗ್ ಸ್ಟಾರ್ ಶ್ರೀಮುರಳಿ 'ಬಘೀರ' ಸಿನಿಮಾ ರಿಲೀಸ್‌ಗಾಗಿ ಎದುರು ನೋಡುತ್ತಿದ್ದಾರೆ. ಈ ಬೆನ್ನಲ್ಲೇ ಇನ್ನೊಂದು ಸಿನಿಮಾ 'ನಂದೇ' ಅನ್ನೋ ಟೈಟಲ್ ಬಗ್ಗೆ ಸಿಕ್ಕಾಪಟ್ಟೆ ಓಡಾಡುತ್ತಿದೆ. ಅಂದ್ಹಾಗೆ 'ಬಘೀರ' ಶ್ರೀಮುರಳಿಯ 22ನೇ ಸಿನಿಮಾ. ಇನ್ನೂ ಎರಡು ಸಿನಿಮಾ ಬಳಿಕ ಪ್ರಶಾಂತ್ ನೀಲ್ ಅಖಾಡಕ್ಕೆ ಇಳಿಯಬಹುದು. ಅದೇ ಪ್ರಶಾಂತ್ ನೀಲ್ ಅತ್ತ ಜೂ.ಎನ್‌ಟಿಆರ್, ರಾಮ್ ಚರಣ್ ಸಿನಿಮಾವನ್ನು ಮಾಡಬೇಕಿದೆ. ಹಾಗೇ 'ಕೆಜಿಎಫ್ 3' ಕೂಡ ನಿರ್ದೇಶನ ಮಾಡಬೇಕಿದೆ. ಹೀಗಾಗಿ 'ಬಘೀರ' ಸಕ್ಸಸ್ ಮೇಲೆ ಶ್ರೀಮುರಳಿ 25ನೇ ಸಿನಿಮಾ ಎಷ್ಟು ಬೇಗ ಸೆಟ್ಟೇರಬಹುದು ಅನ್ನೋದು ಗೊತ್ತಾಗಲಿದೆ.


Click it and Unblock the Notifications











