For Quick Alerts
  ALLOW NOTIFICATIONS  
  For Daily Alerts

  ತೆಲುಗಿನ ಸಿನಿಮಾ ನಿರ್ದೇಶನ: ಟೀಕಾಕಾರರಿಗೆ ನಿರ್ದೇಶಕ ಪ್ರಶಾಂತ್ ನೀಲ್ ಕೊಟ್ಟ ಉತ್ತರವೇನು?

  |

  'ಉಗ್ರಂ' ಎಂಬ ಹಿಟ್ ಚಿತ್ರ ನೀಡಿದ ಬಳಿಕ 'ಕೆಜಿಎಫ್' ಚಿತ್ರ ನೀಡಿ ಇಡೀ ಭಾರತೀಯ ಚಿತ್ರರಂಗವನ್ನು ಕನ್ನಡ ಚಿತ್ರರಂಗವನ್ನು ಅಚ್ಚರಿಯಿಂದ ನೋಡುವಂತೆ ಮಾಡಿರುವ ನಿರ್ದೇಶಕ ಪ್ರಶಾಂತ್ ನೀಲ್, ಸದ್ಯ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಬಿಜಿಯಾಗಿದ್ದಾರೆ.

  ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡೋ ಸುಳಿವು ಕೊಟ್ರಾ ಅಪ್ಪು | Puneeth & Neel Together | Appu Birthday

  ಈ ನಡುವೆ ಪ್ರಶಾಂತ್ ನೀಲ್, 'ಕೆಜಿಎಫ್ 2' ಮುಗಿದ ನಂತರ ತೆಲುಗು ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ಅಲ್ಲಿ ಜೂನಿಯರ್ ಎನ್‌ಟಿಆರ್ ಅವರಿಗೆ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಮಹೇಶ್ ಬಾಬು ಕೂಡ ತಮಗಾಗಿ ಸಿನಿಮಾ ನಿರ್ದೇಶಿಸಲು ಪ್ರಶಾಂತ್ ನೀಲ್ ಅವರಿಗೆ ಆಫರ್ ನೀಡಿದ್ದರು. ಆದರೆ ಈಗ ಜೂ. ಎನ್‌ಟಿಆರ್ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಇದೆ. ಮುಂದೆ ಓದಿ...

  ಶುಭಾಶಯ ನೀಡಿದ ಪುಷ್ಟಿ

  ಶುಭಾಶಯ ನೀಡಿದ ಪುಷ್ಟಿ

  ಜೂ. ಎನ್‌ಟಿಆರ್ ಜನ್ಮದಿನವಾದ ಬುಧವಾರ ಪ್ರಶಾಂತ್ ನೀಲ್ ಮಾಡಿದ್ದ ಶುಭಾಶಯದ ಟ್ವೀಟ್, ಊಹಾಪೋಹಗಳಿಗೆ ಪುಷ್ಟಿ ನೀಡಿದ್ದವು. 'ನ್ಯೂಕ್ಲಿಯರ್ ಪ್ಲಾಂಟ್‌ನಲ್ಲಿ ಕುಳಿತರೆ ಯಾವ ಅನುಭವ ಆಗುತ್ತದೆ ಎಂದು ನನಗೆ ಕೊನೆಗೂ ಗೊತ್ತಾಯಿತು. ಈ ರೀತಿ ಕ್ರೇಜಿ ಎನರ್ಜಿ ಸುತ್ತಲೂ ಇರುವಾಗ ಮುಂದಿನ ಬಾರಿ ನಾನು ರೇಡಿಯೇಷನ್ ಸೂಟ್ ತರುತ್ತೇನೆ' ಎಂದು ಜೂ. ಎನ್‌ಟಿಆರ್ ಅವರಿಗೆ ಜನ್ಮದಿನದ ಶುಭ ಹಾರೈಸಿದ್ದ ಪ್ರಶಾಂತ್ ನೀಲ್ ಟ್ವೀಟ್ ಇಬ್ಬರೂ ಜತೆಗೆ ಸಿನಿಮಾ ಮಾಡುತ್ತಾರೆ ಎಂಬ ವದಂತಿಗೆ ಮತ್ತಷ್ಟು ತುಪ್ಪ ಸುರಿದಿತ್ತು.

  Jr.NTR ಜೊತೆ ಪ್ರಶಾಂತ್ ನೀಲ್ ಸಿನಿಮಾ ಖಚಿತ: ಕಥೆಯ ಸುಳಿವು ಬಿಟ್ಟುಕೊಟ್ಟ ಬರ್ತಡೇ ವಿಶ್?Jr.NTR ಜೊತೆ ಪ್ರಶಾಂತ್ ನೀಲ್ ಸಿನಿಮಾ ಖಚಿತ: ಕಥೆಯ ಸುಳಿವು ಬಿಟ್ಟುಕೊಟ್ಟ ಬರ್ತಡೇ ವಿಶ್?

  ಅಭಿಮಾನಿಗಳ ಆಕ್ರೋಶ

  ಅಭಿಮಾನಿಗಳ ಆಕ್ರೋಶ

  ಪ್ರಶಾಂತ್ ನೀಲ್ ತೆಲುಗಿನಲ್ಲಿ ಸಿನಿಮಾ ನಿರ್ದೇಶಿಸುತ್ತಾರೆ ಎನ್ನುವುದು ಕನ್ನಡ ಚಿತ್ರ ಅಭಿಮಾನಿಗಳಲ್ಲಿ ಅಸಮಾಧಾನ ಉಂಟುಮಾಡಿದೆ. ಕೆಲವರು ಕನ್ನಡದ ನಿರ್ದೇಶಕ ಅಲ್ಲಿಯೂ ಮಿಂಚಲಿ ಎಂದಿದ್ದರೆ, ಇನ್ನು ಅನೇಕರು ಈಗ ಕನ್ನಡದಲ್ಲಿ ಹೆಸರು ಮಾಡಿ ತೆಲುಗಿಗೆ ಹೋಗುವುದು ಸರಿಯಲ್ಲ. ಇದು ಕನ್ನಡ ಚಿತ್ರರಂಗಕ್ಕೆ ಮಾಡುವ ದ್ರೋಹ ಎಂದು ಟೀಕಿಸಿದ್ದಾರೆ. ಈ ಟೀಕೆಗಳಿಗೆ ಪ್ರಶಾಂತ್ ನೀಲ್ ಉತ್ತರಿಸಿದ್ದಾರೆ.

  ಅನ್ನ ನೀಡಿರುವುದು ಕನ್ನಡ

  ಅನ್ನ ನೀಡಿರುವುದು ಕನ್ನಡ

  'ನನಗೆ ಉದ್ಯಮದಲ್ಲಿ ಹೆಸರು ನೀಡಲು ಸಹಾಯ ಮಾಡಿರುವುದು ಮತ್ತು ಅನ್ನ ನೀಡಿರುವುದು ಕನ್ನಡಿಗರು. ಈಗ ನನ್ನ ಡಿಎನ್‌ಎಯಲ್ಲಿಯೂ ಕನ್ನಡವಿದೆ. ನನ್ನ ಸಂಪೂರ್ಣ ಗಮನ ಈಗ ಕೆಜಿಎಫ್ ಚಾಪ್ಟರ್ 2 ಮೇಲೆ ಇದೆ' ಎಂದು ಜೂ. ಎನ್‌ಟಿಆರ್ ಜತೆಗಿನ ಚಿತ್ರದ ವದಂತಿಗೆ ತೆರೆ ಎಳೆದಿದ್ದಾರೆ.

  'ಕೆಜಿಎಫ್ 2' ಸ್ಯಾಟಲೈಟ್ ಹಕ್ಕು ದಾಖಲೆಯ ಮೊತ್ತಕ್ಕೆ ಮಾರಾಟ?

  ಮುಂದಿನ ಸಿನಿಮಾಗಳೆಲ್ಲವೂ ಕನ್ನಡದ್ದೇ

  ಮುಂದಿನ ಸಿನಿಮಾಗಳೆಲ್ಲವೂ ಕನ್ನಡದ್ದೇ

  'ನನ್ನ ಭವಿಷ್ಯದ ಸಿನಿಮಾಗಳ ಬಗ್ಗೆ ನಾನೇನೂ ಖಾತರಿಪಡಿಸಲು ಸಾಧ್ಯವಿಲ್ಲ. ಆದರೆ ನಾನು ಮುಂದೆ ಮಾಡುವ ಪ್ರತಿ ಸಿನಿಮಾಗಳೂ ಕನ್ನಡ ಚಿತ್ರವೇ ಆಗಿರುತ್ತದೆ' ಎಂದು ಅವರು ಇಂಗ್ಲಿಷ್ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ.

  ರೀ ರೆಕಾರ್ಡಿಂಗ್ ಕೆಲಸ

  ರೀ ರೆಕಾರ್ಡಿಂಗ್ ಕೆಲಸ

  ಕೆಜಿಎಫ್ 2 ಚಿತ್ರದ ಚಿತ್ರೀಕರಣಗೊಂಡಿರುವ ಭಾಗದ ಸಂಕಲನ ಕಾರ್ಯ ಮುಕ್ತಾಯಗೊಂಡಿದೆ. ಈಗ ಸಂಗೀತ ನಿರ್ದೇಶಕರ ಜತೆಗೂಡಿ ಅವರು ರೀ ರೆಕಾರ್ಡಿಂಗ್ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನೂ ಸುಮಾರು 30 ದಿನಗಳ ಚಿತ್ರೀಕರಣ ಬಾಕಿ ಉಳಿದಿದ್ದು, ಸರ್ಕಾರದಿಂದ ಅನುಮತಿ ದೊರಕಿದ ಕೂಡಲೇ ಶೂಟಿಂಗ್ ಆರಂಭವಾಗಲಿದೆ.

  ಕೆಜಿಎಫ್ ಚಾಪ್ಟರ್ 2 ಡಿಜಿಟಲ್ ಹಕ್ಕಿಗೆ ಭಾರಿ ಮೊತ್ತದ ಆಫರ್ ಕೊಟ್ಟ ಅಮೆಜಾನ್?ಕೆಜಿಎಫ್ ಚಾಪ್ಟರ್ 2 ಡಿಜಿಟಲ್ ಹಕ್ಕಿಗೆ ಭಾರಿ ಮೊತ್ತದ ಆಫರ್ ಕೊಟ್ಟ ಅಮೆಜಾನ್?

  English summary
  KGF fame director Prashanth Neel has clarified the rumors around his Telugu movie for Jr NTR and said his every project will be a Kannada movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X