ನಮ್ಮದು ಅರೇಂಜ್ಡ್ ಮ್ಯಾರೇಜೋ, ಲವ್ ಮ್ಯಾರೇಜೋ?: ವಾದ ಮುಂದುವರಿಸೋಣ ಎಂದ ಪ್ರಶಾಂತ್ ನೀಲ್
ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಮದುವೆಯ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಅವರು ಪತ್ನಿ ಲಿಖಿತಾ ಜತೆಗೆ ವೈವಾಹಿಕ ಬಂಧನಕ್ಕೆ ಒಳಗಾಗಿ ಇಂದಿಗೆ (ಮೇ 5) ಒಂಬತ್ತು ವರ್ಷ. ಲಾಕ್ ಡೌನ್ ಕಾರಣದಿಂದ ಪ್ರಶಾಂತ್ ನೀಲ್ ಮನೆಯವರೊಂದಿಗೆ ಕಾಲ ಕಳೆಯಲು ಸಮಯ ಸಿಗುತ್ತಿದೆ. ಎಲ್ಲವೂ ಸರಿಯಾಗಿದ್ದರೆ ಅವರು ಈ ವೇಳೆ ಕೆಜಿಎಫ್ 2 ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಲ್ಲಿ ಬಿಜಿಯಾಗಿರುತ್ತಿದ್ದರು.
Recommended Video
ತಮ್ಮ ವಿವಾಹ ವಾರ್ಷಿಕೋತ್ಸವದ ಖುಷಿಯನ್ನು ಪ್ರಶಾಂತ್ ನೀಲ್ ಹಂಚಿಕೊಂಡಿದ್ದಾರೆ. ಪತ್ನಿಯನ್ನು 'ನಾನಾ' ಎಂದು ಪ್ರೀತಿಯಿಂದ ಕರೆದಿರುವ ಅವರು, ತಮ್ಮ ಮೊದಲ ಭೇಟಿಯ ನೆನಪನ್ನು ಒಂದು ಸಾಲಿನಲ್ಲಿ ಹಂಚಿಕೊಳ್ಳುವ ಮೂಲಕ, ಪತ್ನಿ ತೋರಿಸುತ್ತಿರುವ ಕಾಳಜಿಯನ್ನು ಹೇಳಿಕೊಂಡಿದ್ದಾರೆ. ಹಾಗೆಯೇ ತಮ್ಮ ಮದುವೆ ಯಾವ ರೀತಿಯದ್ದು ಎಂಬ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಮುಂದೆ ಓದಿ...

ಆ ಕಾಳಜಿ ಈಗಲೂ ಇದೆ
'ನಮ್ಮ ಬದುಕು ಆರಂಭವಾಗಿ 9 ವರ್ಷಗಳಾದವು. ಹ್ಯಾಪಿ ಆನಿವರ್ಸರಿ ನಾನಾ' ಎಂದು ಪತ್ನಿಗೆ ಪ್ರಶಾಂತ್ ನೀಲ್ ಶುಭ ಹಾರೈಸಿದ್ದಾರೆ. 'ನಾವು ಮೊದಲ ಬಾರಿ ಭೇಟಿಯಾದ ಸಂದರ್ಭದಲ್ಲಿ ಮಾಡಿದಂತೆಯೇ ನನ್ನ ಕೂದಲು ಸೆಟ್ ಮಾಡುವುದನ್ನು, ಕಾಳಜಿ ಮಾಡುವುದನ್ನು ಈಗಲೂ ಮಾಡುತ್ತೀಯ' ಎಂದು ಹೆಂಡತಿಯನ್ನು ಹೊಗಳಿದ್ದಾರೆ.

ಲವ್ ಮ್ಯಾರೇಜ್ ಅಥವಾ ಅರೇಂಜ್ಡ್?
'ನಮ್ಮಿಬ್ಬರದು ಅರೇಂಜ್ಡ್ ಮದುವೆಯೋ ಅಥವಾ ಪ್ರೇಮ ವಿವಾಹವೋ ಎಂಬ ನಮ್ಮ ಚರ್ಚೆಯನ್ನು ಮುಂದುವರಿಸೋಣ. ಏಕೆಂದರೆ ಅದರ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಅನೇಕ ಹುಚ್ಚು ನೆನಪುಗಳು ಮತ್ತು ಜಗಳಗಳಿವೆ' ಎಂದು ಪ್ರಶಾಂತ್ ನೀಲ್ ತಮಾಷೆಯಾಗಿ ಹೇಳಿದ್ದಾರೆ.

ನೀಲ್ ಗ್ಯಾಂಗ್ ಕಟ್ಟುವ ಕೆಲಸ
'ನಮ್ಮ ನೀಲ್ ಗ್ಯಾಂಗ್ ಅನ್ನು ಕಟ್ಟುವ ಕೆಲಸವನ್ನು ಮುಂದುವರಿಸೋಣ' ಎಂದಿದ್ದಾರೆ. ತಮ್ಮ ಕುಟುಂಬವನ್ನು ಅವರು ಅನೇಕ ಸಮಯದಿಂದ 'ನೀಲ್ ಗ್ಯಾಂಗ್' ಎಂದು ಕರೆದುಕೊಳ್ಳುತ್ತಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಹೆಂಡತಿ ಮತ್ತು ಮಕ್ಕಳೊಂದಿಗೆ ಖುಷಿಯಾಗಿ ಕಾಲ ಕಳೆಯುತ್ತಿರುವ ಅವರು ಅದನ್ನು ಅಭಿಮಾನಿಗಳ ಜತೆಗೆ ಹಂಚಿಕೊಳ್ಳುತ್ತಿದ್ದಾರೆ.

ಪ್ರಶಾಂತ್ ನೀಲ್ ಎರಡು ಮುಖ!
ಕೆಲವು ವಾರದ ಹಿಂದೆ ತಮ್ಮ ಇಬ್ಬರು ಮಕ್ಕಳೊಂದಿಗಿನ ಫೋಟೊವನ್ನು ಪ್ರಶಾಂತ್ ನೀಲ್ ಹಂಚಿಕೊಂಡಿದ್ದರು. ಮಿ. ನೀಲ್ ಅವರಿಗೆ ತೆರೆಯ ಮೇಲೆ ಅವರು ಸೃಷ್ಟಿಸುವ ಪಾತ್ರಗಳಿಗೆ ಇರುವಂತೆಯೇ ಎರಡು ಮುಖಗಳಿವೆ. ಜೀವನದುದ್ದಕ್ಕೂ ಬಡಪಾಯಿ ಮಗ ಹೆಣಗಾಡಬೇಕು ಎಂದು ಬರೆದುಕೊಂಡಿದ್ದರು. ಮಗಳನ್ನು ಮುದ್ದಿಸುವ ಮತ್ತು ಮಗನಿಗೆ ಕೀಟಲೆ ಮಾಡಿ ಅವನನ್ನು ಅಳಿಸುವ ಫೋಟೊಗಳನ್ನು ಅವರು ಪೋಸ್ಟ್ ಮಾಡಿದ್ದರು.


Click it and Unblock the Notifications











