ಕೋರ್ಟ್ ಕಟಕಟೆಯಲ್ಲಿ ನಿಂತ ರಾಧಿಕಾ ಪಂಡಿತ್‌ಗಾಗಿ ಕಪ್ಪು ಕೋಟ್ ತೊಟ್ಟ ರಾಕಿಭಾಯ್; ವಿಷಯ ಏನು?

ಮದುವೆ ಬಳಿಕ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಒಟ್ಟಿಗೆ ನೋಡುವುದಕ್ಕೆ ಸಿಗುತ್ತಾರೆ. ಇತ್ತೀಚೆಗಷ್ಟೇ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪತ್ನಿಯೊಂದಿಗೆ ರಾಕಿ ಭಾಯ್ ಕಾಣಿಸಿಕೊಂಡಿದ್ದರು. ಹಾಗಂತ ಇದೊಂದೇ ಸಂದರ್ಭ ಅಲ್ಲ. ಹಲವು ಕಾರ್ಯಕ್ರಮಗಳಲ್ಲೂ ಯಶ್ ಹಾಗೂ ರಾಧಿಕಾ ಪಂಡಿತ್ ಒಟ್ಟಿಗೆ ಕಂಡಿದ್ದು ಇದೆ.

ಇದು ಬಿಟ್ಟರೆ ವಿವಾಹಕ್ಕೂ ಮುನ್ನ ಯಶ್ ಹಾಗೂ ರಾಧಿಕಾ ಪಂಡಿತ್ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಕೆಲವು ವರ್ಷಗಳ ಹಿಂದೆ ಈ ಜೋಡಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿತ್ತು. ಆಗ ಅಭಿಮಾನಿಗಳು ಒಟ್ಟಿಗೆ ಸಿನಿಮಾ ಮಾಡಿ ಅಂತ ಬೇಡಿಕೆ ಇಟ್ಟಿದ್ದರು. ರಾಧಿಕಾ ಪಂಡಿತ್‌ಗಂತೂ ಮತ್ತೆ ಸಿನಿಮಾ ಮಾಡಿ ಅಂತ ಒತ್ತಾಯ ಮಾಡುತ್ತಲೇ ಇದ್ದಾರೆ. ಆ ಬಗ್ಗೆ ರಾಧಿಕಾ ಪಂಡಿತ್ ಏನೂ ಹೇಳಿರಲಿಲ್ಲ.

KGF star Yash and Radhika Pandit acted in court scene for commercial Ad here is details

ಇದೀಗ ಮತ್ತೆ ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರೂ ಒಂದೇ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಪತ್ನಿಯ ಪರವಾಗಿ ಸ್ವತ: ಯಶ್ ವಾದಕ್ಕೆ ಇಳಿದಿರುವ ದೃಶ್ಯದಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಹಾಗಂತ ಇದು ಸಿನಿಮಾದ ದೃಶ್ಯವೇನೂ ಅಲ್ಲ. ಇದೂ ಕೂಡ ಜಾಹೀರಾತಿನ ಒಂದು ತುಣುಕು. ಇಬ್ಬರು ಒಟ್ಟಿಗೆ ಸಿನಿಮಾ ಮಾಡದೇ ಹೋದರೂ, ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಖುಷಿಗೆ ಕಾರಣವಾಗಿದ್ದಾರೆ.

ಸ್ಟಾರ್‌ಗಳು ಕೇವಲ ಸಿನಿಮಾದಿಂದ ಅಷ್ಟೇ ಅಲ್ಲ. ಜಾಹೀರಾತಿನಿಂದಲೂ ಹಣವನ್ನು ಸಂಪಾದನೆ ಮಾಡುತ್ತಾರೆ. ದಕ್ಷಿಣ ಭಾರತದ ನಟರು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದು ತೀರಾ ಕಡಿಮೆಯಿತ್ತು. ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾಗಳು ಸದ್ದು ಮಾಡುವುದಕ್ಕೆ ಶುರು ಮಾಡಿದ ದಿನದಿಂದ ಸ್ಟಾರ್‌ಗಳು ಜಾಹೀರಾತಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

KGF star Yash and Radhika Pandit acted in court scene for commercial Ad here is details

ಈಗ ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ ಅಡುಗೆ ಎಣ್ಣೆಯ ಜಾಹೀರಾತಿನಲ್ಲಿ ನಟಿಸಿದ್ದಾರೆ. ಕೆಲವು ದಿನಗಳ ಹಿಂದೆ ಯಶ್ ಕರೀ ಕೋರ್ಟ್ ಧರಿಸಿದ್ದ ಫೋಟೋಗಳು ವೈರಲ್ ಆಗಿದ್ದವು. ಅದು ಇದೇ ಜಾಹೀರಾತಿನ ದೃಶ್ಯಗಳಾಗಿದ್ದವು. ಯಶ್ ಹಾಗೂ ರಾಧಿಕಾ ಈ ಹಿಂದೆ ಕೂಡ ಇದೇ ಅಡುಗೆ ಎಣ್ಣೆ ಜಾಹೀರಾತಿನಲ್ಲಿ ನಟಿಸಿದ್ದರು. ಈ ಬಾರಿ ಕಾನ್ಸೆಪ್ಟ್ ಕೊಂಚ ಬದಲಾಗಿದೆ ಅಷ್ಟೇ.

ಪತ್ನಿ ರಾಧಿಕಾ ಪಂಡಿತ್‌ಗಾಗಿ ಕೋರ್ಟ್‌ನಲ್ಲಿ ಯಶ್ ವಾದ ಮಾಡುತ್ತಿರುವ ದೃಶ್ಯ ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಸಿನಿಮಾ ಒಟ್ಟಿಗೆ ನೋಡಿ ಹಲವು ದಿನಗಳಾಗಿತ್ತು. ಸದ್ಯಕ್ಕೆ ಆ ಬೇಡಿಕೆ ಈಡೇರುವುದಿಲ್ಲ ಅನ್ನೋದು ಅವರ ಫ್ಯಾನ್ಸ್‌ಗೆ ಕೂಡ ಗೊತ್ತಿದೆ. ಹೀಗಾಗಿ ಜಾಹೀರಾತಿನಲ್ಲಿಯೇ ಈ ಜೋಡಿಯನ್ನು ನೋಡಿ ಖುಷಿ ಪಟ್ಟಿದ್ದಾರೆ. ಸೋಶಿಯಲ್ ಆ ವಿಡಿಯೋವನ್ನೇ ವೈರಲ್ ಮಾಡುತ್ತಿದ್ದಾರೆ.

ರಾಕಿ ಭಾಯ್ ಸದ್ಯ 'ಟಾಕ್ಸಿಕ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಆದ ಬಳಿಕ ಮೆಗಾ ಬಜೆಟ್ ಸಿನಿಮಾಗಳ ಕಡೆಗೆ ಹೆಚ್ಚು ಒಲವು ತೋರಿದ್ದಾರೆ. ಇನ್ನೊಂದು ಕಡೆ ರಾಧಿಕಾ ಪಂಡಿತ್ ಮದುವೆ ಬಳಿಕ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಸಂಸಾರದ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಸದ್ಯ ಈ ಜೋಡಿಯ ಜಾಹೀರಾತು ವೈರಲ್ ಆಗುತ್ತಿದೆ.

More from Filmibeat

English summary
KGF star Yash and Radhika Pandit acted in court scene for commercial Ad here is details;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X