KGF Verse: ನಾನಾ ಅವತಾರದಲ್ಲಿ ಎಂಟ್ರಿ ಕೊಟ್ಟ ರಾಕಿ ಭಾಯ್ ದಾಖಲೆ ಬರೆಯೋದನ್ನು ಮಾತ್ರ ಮರೆತಿಲ್ಲ

'ಕೆಜಿಎಫ್ ಚಾಪ್ಟರ್ 2' ಸಿನಿಮಾ ಏಪ್ರಿಲ್ 14ರಂದು ತೆರೆಮೇಲೆ ಬರುವುದಕ್ಕೆ ಸಜ್ಜಾಗಿದೆ. ಯಶ್, ಸಂಜಯ್ ದತ್, ರವೀನಾ ಟಂಡನ್ ಹಾಗೂ ಶ್ರಿನಿಧಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಕೆಜಿಎಫ್ 2' ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಒಂದು. ಭಾರತೀಯ ಚಿತ್ರರಂಗಕ್ಕೆ ರಾಕಿ ಭಾಯ್ ರೂಪದಲ್ಲಿ ಮತ್ತೊಬ್ಬ ಪ್ಯಾನ್ ಇಂಡಿಯಾ ಹೀರೊ ಪಡೆದುಕೊಂಡಿದೆ.

ಯಶ್ ಫ್ಯಾನ್ಸ್ 'ಕೆಜಿಎಫ್ 2' ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ. ಈ ಕ್ರೇಜ್ ಅನ್ನು ಮತ್ತಷ್ಟು ಉತ್ತಮಗೊಳಿಸಲು 'KGF Verse' ಅನ್ನು ಪರಿಚಯಿಸುತ್ತಿದ್ದಾರೆ. ಇಲ್ಲಿ ಯಶ್ ಅಭಿಮಾನಿಗಳು ರಾಕಿ ಭಾಯ್ ದುನಿಯಾವನ್ನು ಮತ್ತಷ್ಟು ಅನ್ವೇಷಣೆ ಮಾಡಲು ಅನುವು ಮಾಡಿಕೊಟ್ಟಿದೆ. ಮೊದಲೇ ತಿಳಿಸಿದಂತೆ, 'ಕೆಜಿಎಫ್ ವರ್ಸ್' ಸೇಲ್ ಆರಂಭ ಮಾಡಲಾಗಿದೆ.

'ಮೆಟಾವರ್ಸ್'ನಲ್ಲಿ 'ಕೆಜಿಎಫ್ ವರ್ಸ್'

'ಮೆಟಾವರ್ಸ್'ನಲ್ಲಿ 'ಕೆಜಿಎಫ್ ವರ್ಸ್'

'ಕೆಜಿಎಫ್ 2' ಟ್ರೈಲರ್ ರಿಲೀಸ್ ಆದಲ್ಲಿಂದ 'ಕೆಜಿಎಫ್ ವರ್ಸ್' ಬಗ್ಗೆ ನಿರ್ಮಾಣ ಸಂಸ್ಥೆ ಅನಾವರಣ ಮಾಡಿತ್ತು. ಅಲ್ಲಿಂದ ಇಲ್ಲಿವರೆಗೂ ಕೆಜಿಎಫ್ ವರ್ಸ್ ಬಗ್ಗೆನೇ ಪ್ರೇಕ್ಷಕರಿಗೆ ಇನ್ನಿಲ್ಲದ ಕುತೂಹಲವಿದೆ. ವಿಶ್ವದಲ್ಲಿ ಮೆಟಾವರ್ಸ್ ಅನ್ನುವ ಹೊಸದೊಂದು ಡಿಜಿಟಲ್ ಪ್ರಪಂಚದಲ್ಲಿ ಜನರು ತಮಗೆ ತೋಚಿದ ಹಾಗೆ ಇರಬಹುದು. ಇಲ್ಲಿ ಗೇಮ್ಸ್ ಆಡಬಹುದು, ಶಾಪಿಂಗ್ ಮಾಡಬಹುದು. ಬೇರೆ ಎಲ್ಲೋ ಇರುವ ಸ್ನೇಹಿತರನ್ನು ಭೇಟಿ ಮಾಡಬಹುದು. ಹೀಗೆ ಹಲವು ಆಕ್ಟಿವಿಟಿಸ್‌ಗಳು ನಡೆಯುತ್ತವೆ. ಇಂತಹದ್ದೇ ಒಂದು ಪ್ರಪಂಚದೊಳಗೆ 'ಕೆಜಿಎಫ್ ವರ್ಸ್' ಎಂಟ್ರಿಕೊಟ್ಟಿದೆ.

ಕೆಜಿಎಫ್ ವರ್ಸ್ ಹೊಸ ದಾಖಲೆ

ಕೆಜಿಎಫ್ ವರ್ಸ್ ಹೊಸ ದಾಖಲೆ

'ಕೆಜಿಎಫ್ ವರ್ಸ್' ಬಿಡುಗಡೆಗೂ ಮುನ್ನವೇ 'ಕೆಜಿಎಫ್ 2' ಹೊಸ ದಾಖಲೆಗಳನ್ನು ಬರೆದಿದೆ. ರಾಕಿ ಭಾಯಿಯ ಹೊಸ ಅವತಾರಗಳು ರಿಲೀಸ್ ಆಗಿದೆ. ರಾಕಿ ಬಾಯ್ ಪ್ರಪಂಚದಲ್ಲಿ ಈಗಾಗಲೇ 1000 ಎನ್‌ಎಫ್‌ಟಿ ಟೋಕನ್‌ಗಳನ್ನು ಭಾರತದಲ್ಲಿ ಸೇಲ್ ಆಗಿದೆಯಂತೆ. ಹೀಗೆ ಹೊಸ ಹೊಸ ದಾಖಲೆಗಳನ್ನು ಬರೆಯಲು 'ಕೆಜಿಎಫ್ 2' ತಂಡ ಸಜ್ಜಾಗಿ ನಿಂತಿದೆ. ಏಪ್ರಿಲ್ 7 ರಿಂದ 'ಕೆಜಿಎಫ್ ವರ್ಸ್' ಸೇಲ್ ಆರಂಭ ಆಗಿದ್ದು, ಇನ್ಯಾವ ದಾಖಲೆ ಬರೆಯಲಿದೆ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಕೆಜಿಎಫ್ ವರ್ಸ್ ಡಿಜಿಟರ್ ಅವತಾರ

ಕೆಜಿಎಫ್ ವರ್ಸ್ ಡಿಜಿಟರ್ ಅವತಾರ

'ಕೆಜಿಎಫ್ ವರ್ಸ್' ಅನ್ನೋದು ಒಂದು ಡಿಜಿಟಲ್ ಅವತಾರ. ಯಶ್ ಅಭಿಮಾನಿಗಳಿಗಾಗಿಯೇ ಹೊಸ ಪ್ರಪಂಚವೊಂದನ್ನು ಸೃಷ್ಟಿ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರಪಂಚದಲ್ಲಿ ಅಭಿಮಾನಿಗಳು ವರ್ಚುವಲ್ ವಾತಾವರಣದಲ್ಲಿ ಗೇಮ್ಸ್ ಆಡಲು ಅವಕಾಶ ಮಾಡಿಕೊಡಲಿದ್ದಾರೆ. ಇದರ ಮೊದಲ ಭಾಗವಾಗಿ 'ಎಲ್‌ಡೊರಾಡೋ' ಟೋಕನ್‌ಗಳನ್ನು ಖರೀದಿ ಮಾಡಬೇಕಿದೆ. 'ಎಲ್‌ಡೋರಾಡೊ' ಅನ್ನೋದು ಕೆಜಿಎಫ್ ಸರಣಿಯನ್ನು ಆಧರಿಸಿದ ಒಂದು ಬುಕ್. ಕೆಜಿಎಫ್ ವರ್ಸ್‌ ಕ್ಲಬ್‌ನ ಸದಸ್ಯರಿಗೆ ರಾಕಿ ಅವತಾರಗಳು ಸೇರಿದಂತೆ ಸಿನಿಮಾ ಸಂಬಂಧಿಸಿದ ಹಲವು ನೆನಪುಗಳನ್ನು ಎನ್‌ಎಫ್‌ಟಿ ಮೂಲಕ ನೀಡಲಿದೆ. ಇದರ ಅಸಲಿ ಅನುಭವವನ್ನು ಪಡೆಯಲು ಇನ್ನು ಕೆಲವು ದಿನ ಕಾಯಬೇಕಿದೆ.

Recommended Video

KGF 2 | Yash | ಸಿನಿಮಾ ಕಾಂಪಿಟೇಷನ್ ಹೇಗಿರಬೇಕು ಎಂದು ಹೇಳಿದ ಯಶ್ | Watch with Kannada Subtitles
'ಕೆಜಿಎಫ್ 2' ತಂಡದಿಂದ ಭರ್ಜರಿ ಪ್ರಚಾರ

'ಕೆಜಿಎಫ್ 2' ತಂಡದಿಂದ ಭರ್ಜರಿ ಪ್ರಚಾರ

'ಕೆಜಿಎಫ್ 2' ಏಪ್ರಿಲ್ 14ಕ್ಕೆ ಬಿಡುಗಡೆಯಾಗುತ್ತಿದೆ. ಹೀಗಾಗಿ ಇಡೀ ತಂಡ ಭರ್ಜರಿ ಪ್ರಚಾರದಲ್ಲಿ ಭಾಗಿಯಾಗಿದೆ. ದೆಹಲಿ, ಮುಂಬೈ ಎಲ್ಲಾ ಸುತ್ತಿ ಬಂದಿರುವ ತಂಡ, ಸದ್ಯ ಚೆನ್ನೈನಲ್ಲಿ ಬೀಡುಬಿಟ್ಟಿದೆ. ಮುಂದಿನ ವಾರ 'ಕೆಜಿಎಫ್ 2' ತಂಡ ಕರ್ನಾಟಕದಲ್ಲಿ ಭರ್ಜರಿ ಪ್ರಚಾರದಲ್ಲಿ ಭಾಗಿಯಾಗಲಿದೆ.

More from Filmibeat

English summary
KGF Verse: Here's the tutorial to enter the world of Rocky Bhai in Metaverse. Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X