ಯಶ್ 36ನೇ ಹುಟ್ಟುಹಬ್ಬಕ್ಕೆ ಬಿಡುಗಡೆ ಆಯ್ತು ಕಾಮನ್ ಡಿಪಿ: ಹುಟ್ಟುಹಬ್ಬದ ವಿಶೇಷತೆಯೇನು?
ಸ್ಯಾಂಡಲ್‌ವುಡ್ ನಟ ಯಶ್‌ಗೆ ಕರ್ನಾಟಕದಲ್ಲಷ್ಟೇ ಅಲ್ಲ ಭಾರತದಾದ್ಯಂತ ದೊಡ್ಡ ಅಭಿಮಾನಿ ಬಳಗವೇ ಇದೆ. ಪ್ರತಿದಿನ ತಮ್ಮ ನೆಚ್ಚಿನ ನಟನನ್ನು ಭೇಟಿ ಮಾಡುವುದಕ್ಕೆ ಅಭಿಮಾನಿಗಳು ಕಾತುರದಿಂದ ಕಾದು ಕೂತಿರುತ್ತಾರೆ. ವರ್ಷಕ್ಕೆ ಒಂದು ಬಾರಿಯಾದರೂ ಯಶ್ ಭೇಟಿ ಮಾಡಲು ಕಾದು ಕೂತಿರುತ್ತಾರೆ. ಹುಟ್ಟುಹಬ್ಬ ಬಂತು ಅಂದರೆ, ವಾರದಿಂದಲೇ ರಾಕಿಂಗ್ ಫ್ಯಾನ್ಸ್ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾರೆ. ಆದರೆ ಕಳೆದ ಎರಡು ವರ್ಷಗಳಿಂದ ಯಶ್ ಭೇಟಿ ಮಾಡಲಾಗದೆ ಫ್ಯಾನ್ಸ್ ನಿರಾಶರಾಗಿದ್ದಾರೆ.
Recommended Video
ಜನವರಿ 08 ರಂದು ಯಶ್ 36ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಪ್ರತಿ ಬಾರಿ ಅಭಿಮಾನಿಗಳ ಸಮ್ಮುಖದಲ್ಲಿಯೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ರಾಕಿಂಗ್ ಸ್ಟಾರ್ ಕೊರೊನಾದಿಂದಾಗಿ ದೂರ ಉಳಿದಿದ್ದಾರೆ. ಈ ಬಾರಿ ಕೂಡ ಯಶ್ ಬರ್ತ್‌ಡೇ ಆಚರಿಸದೆ ಇರಲು ನಿರ್ಧರಿಸಿದ್ದಾರೆ. ಈ ಮಧ್ಯೆ ಅಭಿಮಾನಿಗಳು ಆನ್‌ಲೈನ್‌ನಲ್ಲಿ ಯಶ್ ಹುಟ್ಟುಹಬ್ಬವನ್ನು ಟ್ರೆಂಡ್ ಮಾಡಲು ಸಜ್ಜಾಗಿದ್ದಾರೆ. ಇನ್ನೊಂದು ಕಡೆ ಕಾಮ್ ಡಿಪಿಯನ್ನು ಬಿಡುಗಡೆ ಮಾಡಲಾಗಿದೆ.

ನಿರ್ದೇಶಕ ಪವನ್‌ರಿಂದ ಕಾಮನ್ ಡಿಪಿ
ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಒಂದು ದಿನವಿರುವಾಗಲೇ ಅಭಿಮಾನಿಗಳ ಸಂಭ್ರಮ ಆರಂಭ ಆಗಿದೆ. ಯಶ್‌ಗಾಗಿ 'ಗೂಗ್ಲಿ' ಸಿನಿಮಾ ನಿರ್ದೇಶಿಸಿದ್ದ ಪವನ್ ಒಡೆಯರ್ ಈ ಬಾರಿ ಅಭಿಮಾನಿಗಳಿಗಾಗಿ ಕಾಮನ್ ಡಿಪಿಯನ್ನು ಬಿಡುಗಡೆ ಮಾಡಿದ್ದಾರೆ. ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಕಾಮನ್ ಡಿಪಿಯನ್ನು ಬಿಡುಗಡೆ ಮಾಡಿದ್ದಾರೆ. " ನಮ್ಮ ನ್ಯಾಶನಲ್ ಸ್ಟಾರ್ ಹುಟ್ಟುಹಬ್ಬದ ಈ ಸುಸಂದರ್ಭದಲ್ಲಿ ಯಶ್ ಬಳಗ ಸೃಷ್ಟಿಸಿದ ಕಾಮನ್ ಡಿಪಿಯನ್ನು ಬಿಡುಗಡೆ ಮಾಡಲು ಖುಷಿಯಾಗುತ್ತದೆ." ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಬರ್ತ್‌ಡೇ ಟ್ರೆಂಡ್ ಮಾಡಲು ಹೊರಟ ಫ್ಯಾನ್ಸ್
ನೆಚ್ಚಿನ ಹುಟ್ಟುಹಬ್ಬದ ಪ್ರಯುಕ್ತ ಜನವರಿ 07 ರ ಸಂಜೆ 7 ಗಂಟೆಯ ಬಳಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆರಂಭಿಸಿದ್ದಾರೆ. ಇದು ಜನವರಿ 08 ರಂದು ಸಂಜೆ 7 ಗಂಟೆಯವರೆಗೂ ಯಶ್ ಬರ್ತ್‌ಡೇಯನ್ನು ಟ್ರೆಂಡ್ ಮಾಡಲು ಮುಂದಾಗಿದ್ದಾರೆ. ಈ ಮಧ್ಯೆ ಅಭಿಮಾನಿಯೊಬ್ಬ ರಾಕಿಂಗ್ ಸ್ಟಾರ್ ಹುಟ್ಟುಹಬ್ಬವನ್ನು ಆಚರಿಸಲು ರಜೆ ಕೋರಿ ಮಾಡಿಕೊಂಡಿದ್ದ. ಬಳ್ಳಾರಿಯ ವಿದ್ಯಾರ್ಥಿ ಶಿವಕುಮಾರ್ ಎಂಬುವ ವಿದ್ಯಾರ್ಥಿ ಪ್ರಾಂಶುಪಾಲರಿಗೆ ಮನವಿ ಮಾಡಿಕೊಂಡಿದ್ದನು. ಜನವರಿ 8ನೇ ತಾರೀಕಿನಂದು ಯಶ್ ಹುಟ್ಟುಹಬ್ಬವಿದೆ. ಹೀಗಾಗಿ ಯಶ್ ಅಭಿಮಾನಿಗಳು 24 ಗಂಟೆ ಹುಟ್ಟುಹಬ್ಬವನ್ನು ಟ್ರೆಂಡ್ ಮಾಡಲು ಮುಂದಾಗಿದ್ದಾರೆ. ಈ ಟ್ರೆಂಡಿಂಗ್‌ನಲ್ಲಿ ಭಾಗವಹಿಸಬೇಕು. ಹೀಗಾಗಿ ಜನವರಿ 7ನೇ ತಾರೀಕು ರಜೆ ಕೊಡಿ ಎಂದು ಪ್ರಿನ್ಸಿಪಾಲ್‌ಗೆ ಮನವಿ ಮಾಡಿಕೊಂಡಿದ್ದನು. ಇದರೊಂದಿಗೆ ತನ್ನ ಸ್ನೇಹಿತರಿಗೂ ರಜೆಯನ್ನು ನೀಡುವಂತೆ ಕೇಳಿಕೊಂಡಿದ್ದು, ನಾವೆಲ್ಲರೂ ಒಟ್ಟಿಗೆ ಸೇರಿ ಮನೆಯಲ್ಲಿ ಯಶ್ ಬರ್ತ್‌ಡೇ ಆಚರಿಸುತ್ತೇವೆ ಎಂದು ಪತ್ರದಲ್ಲಿ ಬರೆದಿದ್ದನು.

ಅಭಿಮಾನಿಯಿಂದ 'ರಾಕಿ ಭಾಯಿ ಹವಾ' ಸಾಂಗ್
ಯಶ್ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದ ಮಾತ್ರಕ್ಕೆ ಅಭಿಮಾನಿಗಳು ಸುಮ್ಮನೆ ಕೂರುವ ಮಾತೇ ಇಲ್ಲ. ಅವರು ತಮಗೆ ತೋಚಿದ ಹಾಗೆ ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಯಶ್ ಬರ್ತ್‌ಡೇಗೆ ಇನ್ನೂ ಮೂರು ದಿನಗಳು ಇರುವಾಗಲೇ 'ರಾಕಿ ಬಾಯ್ ಹವಾ' ಅನ್ನುವ ರಾಪ್ ಸಾಂಗ್ ಅನ್ನು ರಿಲೀಸ್ ಮಾಡಿ, ಯಶ್‌ಗೆ ಡೆಡಿಕೇಟ್ ಮಾಡಿದ್ದಾರೆ. ಹೀಗೆ ಒಬ್ಬೊಬ್ಬ ಅಭಿಮಾನಿ ಒಂದೊಂದು ರೀತಿಯಲ್ಲಿ ಹುಟ್ಟುಹಬ್ಬವನ್ನು ಸೆಲೆಬ್ರೆಟ್ ಮಾಡಲು ಮುಂದಾಗಿದ್ದಾರೆ.

ಯಶ್ ಬರ್ತ್‌ಡೇಗೆ ವೀಕೆಂಡ್ ಕರ್ಫ್ಯೂ ಅಡ್ಡಿ
ಕೊರೊನಾ ಹಾಗೂ ಓಮಿಕ್ರಾನ್ ಸೋಂಕಿತರ ಸಂಖ್ಯೆ ಪ್ರತಿ ದಿನ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ವೀಕೆಂಡ್ ಕರ್ಪ್ಯೂ ಜಾರಿಗೆ ಮಾಡಿದ್ದಾರೆ. ಯಶ್ ಬರ್ತ್‌ಡೇ ಶನಿವಾರ ಬಂದಿದ್ದರಿಂದ ಮನೆಯಿಂದ ಹೊರಬರುವಂತಿಲ್ಲ. ಯಶ್ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುವುದಿಲ್ಲ ಎಂದು ಈ ಮೊದಲೇ ಹೇಳಿದ್ದರೂ, ಅಭಿಮಾನಿ ಸುಮ್ಮನೆ ಕೂರುತ್ತಿರಲಿಲ್ಲ. ತಾವಿದ್ದಲ್ಲೇ ಬರ್ತ್‌ಡೇ ಸೆಲೆಬ್ರೆಟ್ ಮಾಡಲು ಅಭಿಮಾನಿಗಳಿಗೆ ವೀಕೆಂಡ್ ಕರ್ಫ್ಯೂ ಅಡ್ಡಿಯಾಗಿದೆ.


Click it and Unblock the Notifications











