'ಟಾಕ್ಸಿಕ್'ಗಾಗಿ ಯಶ್ ಹುಡುಕಿಕೊಂಡು ಬರಲಿರೋ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ, ಹುಮಾ ಖುರೇಶಿ

2025ರ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ರಾಕಿಂಗ್ ಸ್ಟಾರ್ ನಟಿಸುತ್ತಿರುವ 'ಟಾಕ್ಸಿಕ್'. ಇದೇ ವರ್ಷ ಈ ಸಿನಿಮಾ ರಿಲೀಸ್ ಆಗುತ್ತೆ ಅನ್ನೋ ನಂಬಿಕೆಯಲ್ಲಿ ಸಿನಿಮಾ ಮಂದಿ ಇರುವಾಗಲೇ ಅವರ ಅಭಿಮಾನಿಗಳಿಗೆ ಸೂಪರ್ ಸುದ್ದಿಯೊಂದು ಸಿಕ್ಕಿದೆ. ಅದೇನಂದ್ರೆ ಯಶ್ ಹುಡುಕಿಕೊಂಡು ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಶಿ ಬೆಂಗಳೂರಿಗೆ ಆಗಮಿಸುತ್ತಿದ್ದಾರಂತೆ.

'ಟಾಕ್ಸಿಕ್' ಸಿನಿಮಾ ಶೂಟಿಂಗ್ ಸಿಕ್ಕಾಪಟ್ಟೆ ವೇಗವಾಗಿ ನಡೆಯುತ್ತಿದೆ. ಈ ವರ್ಷ ಸಿನಿಮಾವನ್ನು ರಿಲೀಸ್ ಮಾಡಲೇಬೇಕು ಅಂತ ನಿರ್ಮಾಣ ಸಂಸ್ಥೆ ಎದುರು ನೋಡುತ್ತಿದೆ. ಈಗಾಗಲೇ ಮೂರು ಹಂತದ ಶೂಟಿಂಗ್ ಕೂಡ ಮುಗಿದಿದೆ ಅನ್ನೋದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ. 'ಕೆಜಿಎಫ್ 2' ಅಂತ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ ಬಳಿಕ 'ಟಾಕ್ಸಿಕ್‌'ಗಾಗಿ ಎದುರು ನೋಡುತ್ತಿರುವ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಸಿಕ್ಕಂತಾಗಿದೆ.

Kiara Advani Nayanthara Tara Sutaria Huma Qureshi are assembling in Bengaluru for Yash Toxic film

ಕಳೆದ ಕೆಲವು ದಿನಗಳಿಂದ ಯಶ್ 'ಟಾಕ್ಸಿಕ್' ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಮೊದಲು ಬೆಂಗಳೂರಿನಿಂದಲೇ ಶೂಟಿಂಗ್ ಆರಂಭಿಸಿದ್ದ ತಂಡ ಬಳಿಕ ಮುಂಬೈಗೆ ಶಿಫ್ಟ್ ಆಗಿತ್ತು. ಮುಂಬೈನಲ್ಲಿ ಬಿಗ್ ಶೆಡ್ಯೂಲ್ ಮುಗಿಸಿದ ಬಳಿಕ ಇಡೀ ತಂಡ ಗೋವಾ ಶಿಫ್ಟ್ ಆಗಿತ್ತು. ಅಲ್ಲಿಯೂ ಮೂರನೇ ಹಂತದ ಶೂಟಿಂಗ್ ಮುಗಿಸಿ ನಾಲ್ಕನೇ ಹಂತದ ಶೂಟಿಂಗ್‌ಗೆ ಸಜ್ಜಾಗುತ್ತಿದೆ. ಇದೇ ಹಂತದಲ್ಲಿ ನಾಲ್ಕು ಮಂದಿ ನಾಯಕಿಯರು ಒಟ್ಟಿಗೆ ನಟಿಸುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

ಮಲಯಾಳಂ ನಿರ್ದೇಶಕ ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿರುವ 'ಟಾಕ್ಸಿಕ್' ಸಿನಿಮಾದ ಶೂಟಿಂಗ್ ವೇಗವಾಗಿ ನಡೆಯುತ್ತಿದೆ. ಈ ಸಿನಿಮಾ ಈ ವರ್ಷದ ಬಿಗ್ ಸಿನಿಮಾ ಆಗಿದ್ದರಿಂದ ಎಲ್ಲಾ ಚಿತ್ರರಂಗದ ನಿರೀಕ್ಷೆ ಈ ತಂಡದ ಮೇಲಿದೆ. ಯಶ್ ಮತ್ತೆ 'ಕೆಜಿಎಫ್ 2'ಗಿಂತಲೂ ಬಿಗ್ ಹಿಟ್ ಕೊಡುತ್ತಾರಾ? ಮುಂದಿನ ಪ್ಲ್ಯಾನ್ ಏನು? ಅನ್ನೋದನ್ನು ಸಿನಿಮಾ ಮಂದಿನೇ ಕುತೂಹಲದಿಂದ ನೋಡುತ್ತಿದ್ದಾರೆ. ಅದರಲ್ಲೂ ನಾಲ್ಕು ಮಂದಿ ನಾಯಕಿಯರು ಒಟ್ಟಿಗೇ ನಟಿಸುತ್ತಿರುವುದು ಫಿಲ್ಮ್ ಮೇಕರ್ಸ್ ಕಣ್ಣುಗಳನ್ನು ಅರಳಿಸಿವೆ.

Kiara Advani Nayanthara Tara Sutaria Huma Qureshi are assembling in Bengaluru for Yash Toxic film

'ಟಾಕ್ಸಿಕ್' ಸಿನಿಮಾ ತಂಡ ಎಲ್ಲೂ ನಾಯಕಿಯರು ಯಾರು ಅನ್ನೋದನ್ನು ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ, ಈಗಾಗಲೇ ಕಿಯಾರಾ ಅಡ್ವಾಣಿ, ನಯನತಾರಾ, ತಾರಾ ಸುತಾರಿಯಾ ಹಾಗೂ ಹುಮಾ ಖುರೇಶಿ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆಂದು ವರದಿಗಳಾಗಿವೆ. ಈಗ ಈ ನಾಲ್ಕು ಮಂದಿ ನಾಯಕಿಯರು ಬೆಂಗಳೂರಿನಲ್ಲಿ ನಡೆಯಲಿರುವ ನಾಲ್ಕನೇ ಹಂತದ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಒಂದೇ ಫ್ರೇಮ್‌ನಲ್ಲಿ ನಾಲ್ಕು ಮಂದಿ ನಾಯಕಿಯರು ನಟಿಸಲಿದ್ದಾರೆ ಎಂದು ಸಿನಿಮಾ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದರ ಜೊತೆಗೆ ಕೆಲವು ತೆಲುಗು ವೆಬ್‌ ಸೈಟ್‌ಗಳು ಇನ್ನೊಂದು ವರದಿಯನ್ನು ಮಾಡಿವೆ. ಕಿಯಾರಾ ಅಡ್ವಾಣಿ ನಟನೆಯ ಬಗ್ಗೆ ಯಶ್ ಅಸಮಧಾನಗೊಂಡಿದ್ದಾರೆ ಎನ್ನಲಾಗಿದೆ. ಇದೂವರೆಗೂ ಕಿಯಾರಾ ಅಡ್ವಾಣಿ ನಟಿಸಿದ ದೃಶ್ಯಗಳನ್ನು ನೋಡಿರುವ ಯಶ್‌ಗೆ ಹಿಡಿಸಿಲ್ಲ. ಅದಕ್ಕೆ ನಿರ್ದೇಶಕಿ ಗೀತೂ ಮೋಹನ್‌ದಾಸ್ ಬಳಿ ಹಲವು ಬಾರಿ ಚರ್ಚೆ ಮಾಡಿದ್ದು, ತಮ್ಮ ಅಸಮಧಾನವನ್ನು ಹೊರ ಹಾಕಿದ್ದಾರೆ ಅಂತ ಬಿಗ್‌ ಟಿವಿ ತೆಲುಗು ವರದಿ ಮಾಡಿದೆ.

ಇದೇ ವೇಳೆ 'ಟಾಕ್ಸಿಕ್' ತಂಡದಿಂದ ಕಿಯಾರಾ ಅಡ್ವಾಣಿಗೂ ಹಿಂಸೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾರಾ ಇಲ್ಲವೋ ಅಂತನೂ ವರದಿಯಾಗಿದೆ. ಇಂತಹದ್ದೊಂದು ಸುದ್ದಿ ತೆಲುಗು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಸದ್ಯ ಕನ್ನಡ ಚಿತ್ರರಂಗದ ಮಟ್ಟಿಗೆ 'ಟಾಕ್ಸಿಕ್' ಮತ್ತೊಂದು ದಾಖಲೆ ಬರೆಯುವ ಸಿನಿಮಾ ಆಗುವುದರಲ್ಲಿ ಅನುಮಾನವಿಲ್ಲ. ಇನ್ನು ನಾಲ್ಕು ಮಂದಿ ನಾಯಕಿಯರ ಜೊತೆ ಯಶ್ ಸ್ಕ್ರೀನ್‌ನಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಅನ್ನೋದು ಸಿನಿಮಾ ರಿಲೀಸ್ ಆದ ಬಳಿಕ ತಿಳಿಯಲಿದೆ.

More from Filmibeat

English summary
Buzz: Kiara Advani, Nayanthara, Tara Sutaria, and Huma Qureshi are assembling in Bengaluru for Yash's movie Toxic
Read more about: yash toxic bengaluru
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X