CCL 2025: ಮೊದಲ ಪಂದ್ಯಕ್ಕೂ ಮುನ್ನ ಹೈದರಾಬಾದ್‌ನಲ್ಲಿ ಕಿಚ್ಚ & ಟೀಮ್ ಭರ್ಜರಿ ಪ್ರಾಕ್ಟೀಸ್

ಸಿಸಿಎಲ್ 2025 ಮೊದಲ ಸೀಸನ್ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಅದಕ್ಕೂ ಮುನ್ನ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಭರ್ಜರಿ ಅಭ್ಯಾಸ ಮಾಡಿತ್ತಿದೆ. ಇತ್ತೀಚೆಗೆ ಕಿಚ್ಚ ಸುದೀಪ್ ಹಾಗೂ ತಂಡ ಬೆಂಗಳೂರಿನಲ್ಲಿ ಅಭ್ಯಾಸ ಪಂದ್ಯಗಳನ್ನು ಆಡಿದ್ದರು. ಈಗ ಇಡೀ ತಂಡ ಹೈದರಾಬಾದ್‌ನಲ್ಲಿ ಬೀಡು ಬಿಟ್ಟಿದೆ. ಕಿಚ್ಚ ಸುದೀಪ್ ಸೇರಿದಂತೆ ಪ್ರಮುಖ ಆಟಗಾರರು ಹೈದರಾಬಾದ್‌ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಈ ಬಾರಿ ಯಾರೆಲ್ಲ ಆಟ ಆಡುತ್ತಾರೆ ಅನ್ನೋ ಮಾಹಿತಿಯನ್ನು ಹಂಚಿಕೊಂಡಿದ್ದರು. ನಾಯಕನಾಗಿ ಕಿಚ್ಚ ಸುದೀಪ್ ಮತ್ತೆ ಮೈದಾನಕ್ಕೆ ಇಳಿಯುತ್ತಿದ್ದಾರೆ. ಹೀಗಾಗಿ ಈ ಬಾರಿ ಸಿಸಿಎಲ್ ಕಪ್‌ ಅನ್ನು ಗೆಲ್ಲಲೇ ಬೇಕು ಅಂತ ಪಟ್ಟು ಹಿಡಿದು ಕೂತಿದ್ದಾರೆ. ಅದಕ್ಕೆ ಬಹಳ ದಿನಗಳಿಂದ ಅಭ್ಯಾಸವನ್ನು ಆರಂಭ ಮಾಡಿದ್ದರು.

Kiccha Sudeep and Karnataka Bulldozers team practicing in hyderabad for first ccl 2025 match

ಜನವರಿ 31ರಿಂದ ಕಿಚ್ಚ ಸುದೀಪ್ ಅಭ್ಯಾಸ ಮಾಡುವ ಸ್ಥಳವನ್ನು ಬದಲಾಯಿಸಿದ್ದಾರೆ. ಇಡೀ ತಂಡವನ್ನು ಹೈದರಾಬಾದ್‌ಗೆ ಶಿಫ್ಟ್ ಮಾಡಿದ್ದಾರೆ. ಅಷ್ಟಕ್ಕೂ ಬೆಂಗಳೂರು ಬಿಟ್ಟು ಹೈದರಾಬಾದ್‌ಗೆ ಯಾಕೆ ಶಿಫ್ಟ್ ಮಾಡಿದರು? ಅಲ್ಲಿ ಯಾಕೆ ಪ್ರಾಕ್ಟೀಸ್ ಮಾಡಲಾಗುತ್ತಿದೆ? ಎಷ್ಟು ದಿನ ಅಭ್ಯಾಸ ಮಾಡುತ್ತಾರೆ? ಕಿಚ್ಚನ ಐಡಿಯಾ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ..

ಕಿಚ್ಚ ಸುದೀಪ್ ತಮ್ಮ ತಂಡದ ಸದಸ್ಯರನ್ನು ಹೈದರಾಬಾದ್‌ ಕರೆದುಕೊಂಡು ಹೋಗಿದ್ದಕ್ಕೆ ಕಾರಣವಿದೆ. ಪಂದ್ಯ ಆರಂಭಕ್ಕೂ ಮುನ್ನ ಆಟಗಾರರು ಯಾವುದೇ ಕಾರಣಕ್ಕೂ ಡೈವರ್ಟ್ ಆಗಿದೆ ಅಭ್ಯಾಸ ಮಾಡಲಿ ಅನ್ನುವ ಕಾರಣಕ್ಕೆ ಹೈದರಾಬಾದ್‌ಗೆ ಶಿಫ್ಟ್ ಮಾಡಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಹೈದರಾಬಾದ್‌ನಲ್ಲಿ ನಾಲ್ಕು ದಿನಗಳ ಕಾಲ ಅಭ್ಯಾಸ ನಡೆಯಲಿದೆ. ಅಲ್ಲಿನ ಸ್ಟೇಡಿಯಂನ ಹೊನಲು ಬೆಳಕಿನಲ್ಲಿ ಅಭ್ಯಾಸ ಪಂದ್ಯಗಳನ್ನು ಆಡಿಸುತ್ತಿದ್ದಾರೆ. ಈ ಕಾರಣಕ್ಕೆ ಹೈದರಾಬಾದ್‌ಗೆ ಶಿಫ್ಟ್ ಆಗಿದ್ದಾರೆ ಅನ್ನೋ ಕರ್ನಾಟಕ ಬುಲ್ಡೋಜರ್ಸ್ ತಂಡದಿಂದ ಸಿಕ್ಕಿರುವ ಮಾಹಿತಿ.

Kiccha Sudeep and Karnataka Bulldozers team practicing in hyderabad for first ccl 2025 match

ಇನ್ನು ಕಿಚ್ಚ ಸುದೀಪ್ ಅವರೇ ಹೈದರಾಬಾದ್‌ನ ಅಭ್ಯಾಸ ಪಂದ್ಯಗಳನ್ನು ಅರೇಂಜ್ ಮಾಡಿದ್ದಾರೆ. ಹೀಗಾಗಿ ಕಳೆದೆರಡು ದಿನಗಳಿಂದ ಪ್ರಾಕ್ಟೀಸ್ ಜೊತೆ ಜೊತೆಗೆ ಹೊನಲು ಬೆಳಕಿನಲ್ಲಿ ಅಭ್ಯಾಸ ಪಂದ್ಯಗಳನ್ನು ಆಡುತ್ತಿದ್ದಾರೆ. ಫೆಬ್ರವರಿ ಮೂರನೇ ತಾರೀಕನ ವರೆಗೂ ಕರ್ನಾಟಕ ಬುಲ್ಡೋಜರ್ಸ್ ತಂಡ ಹೈದರಾಬಾದ್‌ನಲ್ಲಿಯೇ ಉಳಿದುಕೊಳ್ಳಲಿದೆ. ಫೆಬ್ರವರಿ 4ನೇ ತಾರೀಕಿನಂದು ಬೆಂಗಳೂರಿಗೆ ಹಿಂತಿರುಗಲಿದೆ. ತಂಡದ ಸದಸ್ಯರು ಬೆಂಗಳೂರಿಗೆ ಬಂದ ಬಳಿಕ ಇನ್ನು ಉಳಿದ ಆಟಗಾರರು ಸೇರಿಕೊಳ್ಳಲಿದ್ದಾರೆ.

ಕೆಲ ಆಟಗಾರರಿಗೆ ಹೈದರಾಬಾದ್ ಅಭ್ಯಾಸ ಪಂದ್ಯಗಳಿದ ವಿನಾಯಿತಿ ನೀಡಲಾಗಿದೆ ಎನ್ನಲಾಗಿದೆ. ಫೆಬ್ರವರಿ 4 ರಂದು ಹೈದರಾಬಾದ್‌ನಿಂದ ಹಿಂತಿರುಗಿದ ಬಳಿಕ ಇಡೀ ತಂಡ ಸೀದಾ ರೆಸಾರ್ಟ್‌ಗೆ ಸೇರಿಕೊಳ್ಳಲಿದ್ದು, ಅಲ್ಲಿ ಮತ್ತೆ ಪ್ರಾಕ್ಟೀಸ್ ಮಾಡಲಿದೆ. ಈ ಬಾರಿ ಕರ್ನಾಟಕ ಬುಲ್ಡೋಜರ್ ತಂಡದ ಪ್ರಮುಖ ಆಟಗಾರ ಪ್ರದೀಪ್ ವೈಯಕ್ತಿಕ ಕಾರಣಗಳಿಂದ ಹಿಂದೆ ಸರಿದಿದ್ದಾರೆ. ಈ ಕಾರಣಕ್ಕೆ ತಂಡದಲ್ಲಿ ಒಂದಿಷ್ಟು ಬದಲಾವಣೆಯಾಗುವ ಸಾಧ್ಯತೆಯಿದೆ.

ಫೆಬ್ರವರಿ ಆರಂಭಿಕ ಎರಡು ಪಂದ್ಯಗಳು ಇವೆ. ಬೆಂಗಳೂರಿನಲ್ಲಿಯೇ ಸಿಸಿಎಲ್ 2025 ಪಂದ್ಯಗಳು ಉದ್ಘಾಟನೆಯಾಗಲಿದೆ. ಮೊದಲ ಪಂದ್ಯವನ್ನು ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆನ್ನೈ ರೈನೋಸ್ ಹಾಗೂ ಬೆಂಗಾಲ್ ಟೈಗರ್ಸ್ ಮಧ್ಯೆ ನಡೆಯಲಿದೆ. ಈ ಪಂದ್ಯದ ಬಳಿಕ ಸಂಜೆ 6 ಗಂಟೆಯ ಬಳಿಕ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ತಂಡದ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ.

More from Filmibeat

English summary
Kiccha Sudeep and Karnataka Bulldozers team practicing in hyderabad for first CCL 2025 match;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X