ಸ್ಯಾಂಡಲ್‌ವುಡ್‌ನಲ್ಲಿ ಈಗಲೇ ಶುರುವಾಯ್ತು 'ಕಿಚ್ಚೋತ್ಸವ'ದ ಸಂಭ್ರಮ
ದೇಶದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿರುವ ನಟರಲ್ಲಿ ಕಿಚ್ಚ ಸುದೀಪ್ ಒಬ್ಬರು. ಆ ಅಭಿಮಾನಿಗಳು ಹಬ್ಬದ ಸಂಭ್ರಮದಲ್ಲಿ ತೊಡಗಿದ್ದಾರೆ. ಈಗ ಯಾವುದು ಹಬ್ಬ ಎನ್ನುತ್ತೀರಾ? ಅದು ಅಭಿನಯ ಚಕ್ರವರ್ತಿಯ ಹುಟ್ಟುಹಬ್ಬ. ಸುದೀಪ್ ಜನ್ಮದಿನ ಇರುವುದು ಸೆ. 2ರಂದು. ಮತ್ಯಾಕೆ ಈಗಲೇ ಆಚರಣೆ ಎನ್ನುವ ಪ್ರಶ್ನೆ ಮೂಡಬಹುದು.
Recommended Video
ಇದನ್ನೇ ಅಭಿಮಾನಿಗಳ ಕ್ರೇಜ್ ಎನ್ನುವುದು. ಸುದೀಪ್ ಜನ್ಮದಿನಕ್ಕೆ ಇನ್ನೂ ನೂರು ದಿನ ಬಾಕಿ ಇರುವ ಸಂದರ್ಭದಿಂದಲೇ ಕಿಚ್ಚನ ಅಭಿಮಾನಿಗಳು ಅದರ ಸಂಭ್ರಮದ ಸ್ವಾಗತಕ್ಕೆ ಸಿದ್ಧತೆ ನಡೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ 'ಕಿಚ್ಚೋತ್ಸವ' ಶುರುವಾಗಿದೆ. ಮುಂದೆ ಓದಿ...

ನಿರೂಪ್ ಭಂಡಾರಿ ಚಾಲನೆ
ಶನಿವಾರದಿಂದ ಈ ಸಂಭ್ರಮಕ್ಕೆ ಚಾಲನೆ ಸಿಕ್ಕಿದೆ. ನಟ ನಿರೂಪ್ ಭಂಡಾರಿ ಸುದೀಪ್ ಜನ್ಮದಿನದ ಅಂಗವಾಗಿ ವಿನ್ಯಾಸಗೊಳಿಸಲಾಗಿರುವ 'ಕಿಚ್ಚೋತ್ಸವ 2020'ಯ ವಿಶೇಷ ಸಿಡಿಪಿ ಮತ್ತು 100DaysForKicchotsava ಎಂಬ ಹ್ಯಾಷ್ ಟ್ಯಾಗ್‌ಅನ್ನು ಬಿಡುಗಡೆ ಮಾಡಿದ್ದಾರೆ.

ಮಿಲಿಯನ್ ದಾಟಿದ ಟ್ವೀಟ್
ಮತ್ತೊಂದು ವಿಶೇಷವೆಂದರೆ ಈ ಉತ್ಸವಕ್ಕೆ ಚಾಲನೆ ದೊರಕಿದ ಕೇವಲ 20 ಗಂಟೆಯ ಒಳಗೇ 100DaysForKicchotsava ಎಂಬ ಹ್ಯಾಷ್ ಟ್ಯಾಗ್‌ನಡಿ ಒಂದು ಮಿಲಿಯನ್‌ಗೂ ಅಧಿಕ ಟ್ವೀಟ್‌ಗಳು ಸೃಷ್ಟಿಯಾಗಿವೆ.

ದಾಖಲೆಯ ಟ್ವೀಟ್
ನಟನೊಬ್ಬರ ಜನ್ಮದಿನಕ್ಕೆ ನೂರು ದಿನ ಮುಂಚಿತವಾಗಿಯೇ ಶುಭಾಶಯ ಕೋರುವ ಮೂಲಕ ದಾಖಲೆಯ ಪ್ರಮಾಣದಲ್ಲಿ ಟ್ವೀಟ್ ಮಾಡಿರುವುದು ಕಿಚ್ಚ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಕನ್ನಡ ಚಿತ್ರರಂಗದಲ್ಲಿ ಇದೊಂದು ವಿಶಿಷ್ಟ ದಾಖಲೆ ಎಂದು ಅಭಿಮಾನಿಗಳು ಹೇಳಿಕೊಂಡಿದ್ದಾರೆ.

1.5 ಮಿಲಿಯನ್‌ಗೂ ಹೆಚ್ಚು ಟ್ವೀಟ್
ಕಿಚ್ಚೋತ್ಸವ ಆರಂಭಿಸಿದ ಅಭಿಮಾನಿಗಳಲ್ಲಿ 100 ದಿನ ಮುಂಚಿನ ಸಂಭ್ರಮವನ್ನು ಟ್ವಿಟ್ಟರ್‌ನಲ್ಲಿ ಟ್ರೆಂಡ್ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುವ ಗುರಿ ಇತ್ತು. 24 ಗಂಟೆ ಕಳೆಯುವುದರೊಳಗೇ 1.5 ಮಿಲಿಯನ್‌ಗೂ ಹೆಚ್ಚು ಟ್ವೀಟ್ ಆಗಿರುವುದು ಅವರ ಸಂಭ್ರಮವನ್ನು ಹೆಚ್ಚಿಸಿದೆ.


Click it and Unblock the Notifications











