'ಮ್ಯಾಂಗೋ ಪಚ್ಚ'ನಾದ ಕಿಚ್ಚ ಸುದೀಪ್ ಅಕ್ಕನ ಮಗ; ಸಂಚಿತ್ ವಯಸ್ಸೆಷ್ಟು? ಶಿಕ್ಷಣವೇನು?

ಕಿಚ್ಚ ಸುದೀಪ್ ಕುಟುಂಬದಿಂದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದೆ. ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಹೊಸ ಸಿನಿಮಾ ಅನೌನ್ಸ್ ಆಗಿದೆ. ಇಂದು (ಫೆಬ್ರವರಿ 5) ಅವರ ಹುಟ್ಟುಹಬ್ಬ ಇದೇ ಸಂದರ್ಭದಲ್ಲಿ ಹೊಸ ಸಿನಿಮಾದ ಟೈಟಲ್ ಕೂಡ ಅನೌನ್ಸ್ ಆಗಿದೆ. ಈ ಶೀರ್ಷಿಕೆ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಹೀರೋ ಸಿಗೋದು ಗ್ಯಾರಂಟಿ ಅನ್ನೋ ಭರವಸೆ ನೀಡಿದಂತಿದೆ.

ಇತ್ತೀಚಿಗಷ್ಟೆ ಸುದೀಪ್ ಅಕ್ಕನ ಮಗನ ಹೊಸ ಸಿನಿಮಾದ ಮುಹೂರ್ತ ನಡೆದಿತ್ತು. ಆ ವೇಳೆ ಟೈಟಲ್ ಬಗ್ಗೆ ಮಾಹಿತಿ ಕೊಟ್ಟಿರಲಿಲ್ಲ. ಈಗ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಂಚಿತ್ ಸಂಜೀವ್ ಸಿನಿಮಾದ ಪ್ರೋಮೋ ರಿಲೀಸ್ ಮಾಡಲಾಗಿದೆ. ಇದರೊಂದಿಗೆ ಟೈಟಲ್ ಕೂಡ ಅನಾವರಣ ಮಾಡಲಾಗಿದೆ. ಅಂದ್ಹಾಗೆ, ಸಂಚಿತ್ ಚೊಚ್ಚಲ ಸಿನಿಮಾಗೆ 'ಮ್ಯಾಂಗೋ ಪಚ್ಚ' ಎಂಬ ಟೈಟಲ್ ಫಿಕ್ಸ್ ಮಾಡಲಾಗಿದೆ.

Kiccha sudeep Nephew Sanchith Sanjeev age education debut film Pachcha and more

'ಮ್ಯಾಂಗೋ ಪಚ್ಚ'ಗೂ ಮುನ್ನವೇ ಸಂಚಿತ್ ಸಂಜೀವ್ 'ಜಿಮ್ಮಿ' ಅನ್ನೋ ಸಿನಿಮಾದಲ್ಲಿ ನಟಿಸಬೇಕಿತ್ತು. ಲಹರಿ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿತ್ತು. ಆದರೆ, ಕಾರಣಾಂತರಗಳಿಂದ ಈ ಸಿನಿಮಾ ಟೇಕಾಫ್ ಆಗಲಿಲ್ಲ. ಈಗ ಕೆಆರ್‌ಜಿ ಹಾಗೂ ಕಿಚ್ಚ ಸುದೀಪ್ ನಿರ್ಮಾಣದಲ್ಲಿ 'ಮ್ಯಾಂಗೋ ಪಚ್ಚ' ಸಿನಿಮಾ ಸೆಟ್ಟೇರುತ್ತಿದೆ. ಚೊಚ್ಚಲ ಸಿನಿಮಾ ಮೂಲಕ ಸದ್ದು ಮಾಡುತ್ತಿರುವ ಸಂಚಿತ್ ವಯಸ್ಸು, ಶಿಕ್ಷಣದ ಬಗೆಗಿನ ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ.

ಸಂಜಿತ್ ನಾಯಕನಾಗಿ ನಟಿಸುತ್ತಿರುವ ಚೊಚ್ಚಲ ಸಿನಿಮಾ 'ಮ್ಯಾಂಗೋ ಪಚ್ಚ' ಇರಬಹುದು. ಆದರೆ, ಇವರಿಗೆ ಸಿನಿಮಾರಂಗವೇನು ಹೊಸತೇನು ಅಲ್ಲ. ಈಗಾಗಲೇ ಕಿಚ್ಚ ಸುದೀಪ್ ನಟನೆಯ ಹಲವು ಸಿನಿಮಾಗಳಿಗೆ ಸಂಚಿತ್ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಸಹಾಯಕ ನಿರ್ದೇಶಕನಾಗಿ ಮೊದಲು ಎಂಟ್ರಿ ಕೊಟ್ಟ ಸಿನಿಮಾ 'ಮಾಣಿಕ್ಯ' ಎಂದು ಈ ಹಿಂದೆನೇ ಹೇಳಿಕೊಂಡಿದ್ದರು.

Kiccha sudeep Nephew Sanchith Sanjeev age education debut film Pachcha and more

ಇನ್ನು ಸಂಚಿತ್ ಪಿಯುಸಿ ಮುಗಿಯುತ್ತಿದ್ದಂತೆ ಕಿಚ್ಚ ಸುದೀಪ್ ಓದಿದ್ದು ಸಾಕು ಚಿತ್ರರಂಗಕ್ಕೆ ಬಾ ಎಂದು ಸಲಹೆ ನೀಡಿದ್ದರಂತೆ. ಅದರಂತೆ ಕಿಚ್ಚ ಸುದೀಪ್ ನಟಿಸುತ್ತಿದ್ದ 'ಮಾಣಿಕ್ಯ' ಸಿನಿಮಾದಲ್ಲಿ ಸಂಚಿತ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು. ಇಲ್ಲಿಂದ ಸ್ಯಾಂಡಲ್‌ವುಡ್‌ ಜೊತೆಗೆ ಅವರ ಜರ್ನಿ ಶುರುವಾಗಿತ್ತು. ಸಿನಿಮಾದಲ್ಲಿ ಆಸಕ್ತಿ ಇದ್ದಿದ್ದರಿಂದ ಓದಿದನ್ನು ಮುಂದುವರೆಸುವುದಕ್ಕೆ ಹೋಗಿರಲಿಲ್ಲ. ಸಿನಿಮಾ ಸಂಬಂಧಿಸಿದ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದರು.

ಸಂಚಿತ್ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ನಟನೆಗೆ ಸಂಬಂಧಿಸಿದ ಕೋರ್ಸ್ ಮಾಡಿದ್ದಾರೆ. ಹಾಗೇ ಮಾರ್ಷಲ್ ಆರ್ಟ್ಸ್ ಅನ್ನು ಕಲಿತಿದ್ದಾರೆ ಎಂದು ಈಗಾಗಲೇ ವರದಿಯಾಗಿದೆ. ಹೀಗಾಗಿ ಕನ್ನಡ ಚಿತ್ರರಂಗಕ್ಕೆ ಪೂರ್ಣ ಪ್ರಮಾಣದಲ್ಲಿ ತಯಾರಿ ಮಾಡಿಕೊಂಡೇ ಎಂಟ್ರಿ ಕೊಟ್ಟಿದ್ದಾರೆ. ಇಂದು (ಫೆಬ್ರವರಿ 5) 30ನೇ ವರ್ಷಕ್ಕೆ ಕಾಲಿಟ್ಟಿರುವ ಸಂಚಿತ್ ಮಾವನಂತೆ ಸ್ಟಾರ್ ಆಗಬೇಕು ಅನ್ನೋ ಕನಸು ಕಂಡಿದ್ದಾರೆ.

ಹೆಚ್ಚು ಕಡಿಮೆ ಕಿಚ್ಚ ಸುದೀಪ್ ಎತ್ತರವಿರುವ ಸಂಚಿತ್ 'ಮ್ಯಾಂಗೋ ಪಚ್ಚ' ಪ್ರೋಮೊ ಹಾಗೂ ಟೈಟಲ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ರಗಡ್ ಗೆಟಪ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ನಿದ್ದೆ ಕದ್ದಿದ್ದಾರೆ. ಇನ್ನು ಇವರಿಗೆ ನಾಯಕಿಯಾಗಿ ಪೆಪೆ ಸಿನಿಮಾ ಖ್ಯಾತಿಯ ನಟಿ ಕಾಜಲ್ ಕುಂದರ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗೆ ವಿವೇಕ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕೆಆರ್‌ಜಿ ಮತ್ತು ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದೆ.

'ಮ್ಯಾಂಗೋ ಪಚ್ಚ' ಸಿನಿಮಾ ಮೈಸೂರು ಭಾಗದ ಕ್ರೈಂ ಥ್ರಿಲ್ಲರ್ ಕಥೆಯನ್ನು ಹೊಂದಿದೆ. 2001 ರಿಂದ 2011ರ ಕಾಲಾವಧಿಯಲ್ಲಿ ನಡೆದ ಪ್ರಮುಖ ಘಟನೆಗಳನ್ನು ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ. ಇದರಲ್ಲಿ ನಟ ಮಯೂರ್ ಪಟೇಲ್, ವಿಜಯ ರಾಘವೇಂದ್ರ ಅಕ್ಕನ ಮಗ ಜೇಯ್, ಬಿಗ್ ಬಾಸ್ ಖ್ಯಾತಿಯ ಹಂಸ, ಕನಸಿನ ರಾಣಿ ಮಾಲಾಶ್ರೀ ನಟಿಸುತ್ತಿದ್ದು, ಚರಣ್ ರಾಜ್ ಸಂಗೀತವಿದೆ.

More from Filmibeat

English summary
Kiccha Sudeep Nephew Sanchith Sanjeev age, education, debut movie Pachcha and more;
Read more about: sudeep sandalwood movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X