ಆಪ್ತ ಸಹಾಯಕನ ಹುಟ್ಟುಹಬ್ಬಕ್ಕೆ ವಿಶೇಷ ರೀತಿಯಲ್ಲಿ ಶುಭ ಕೋರಿದ ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಲೋಚನೆ, ಅನಿಸಿಕೆಗಳನ್ನು ಹಂಚಿಕೊಳ್ಳುವುದು ವಿರಳವಾದರೂ, ಅದರಲ್ಲಿ ಸಕ್ರಿಯರಾಗಿರುತ್ತಾರೆ. ಅಭಿಮಾನಿಗಳ ಹುಟ್ಟುಹಬ್ಬ, ಮದುವೆ ಮುಂತಾದ ಸಂತಸದ ಕ್ಷಣಗಳಲ್ಲಿ ಶುಭ ಹಾರೈಸುವ ಮೂಲಕ ಅವರ ಸಂಭ್ರಮದಲ್ಲಿ ತಾವೂ ಭಾಗಿಯಾಗಿ ಖುಷಿ ಹೆಚ್ಚಿಸುತ್ತಾರೆ.
Recommended Video
ತಮ್ಮ ಆಪ್ತ ನಟ, ನಟಿಯರು, ತಂತ್ರಜ್ಞರ ಜನ್ಮದಿನದ ಸಂದರ್ಭದಲ್ಲಿ ಸುದೀಪ್ ಅವರ ಶುಭಾಶಯ ವಿಶೇಷವಾಗಿರುತ್ತದೆ. ಮಗಳು ಸಾನ್ವಿ ಹುಟ್ಟುಹಬ್ಬದಂದು ಆಕೆಯ ಚಿಕ್ಕಂದಿನಿಂದ ಬೆಳೆದ ಫೋಟೊಗಳನ್ನು ಹಂಚಿಕೊಂಡು 'ಮತ್ತೆ ಮಗುವಾಗು ನೀನು' ಎಂದು ಸುಂದರ ಪದ್ಯ ಬರೆದಿದ್ದರು. ಅವರ ಭಾವುಕ ಸಾಲುಗಳು ಮೆಚ್ಚುಗೆಗೆ ಒಳಗಾಗಿದ್ದವು. ಕುಟುಂಬದವರು ಮತ್ತು ಗಣ್ಯರಿಗೆ ಮಾತ್ರವಲ್ಲ ಸುದೀಪ್, ತಮ್ಮ ಜತೆ ಕೆಲಸ ಮಾಡುವವರನ್ನೂ ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಎನ್ನುವುದು ಮತ್ತೆ ಸಾಬೀತಾಗಿದೆ. ಮುಂದೆ ಓದಿ..

ಪಿಯಾನೋ ನುಡಿಸಿದ ಸುದೀಪ್
ತಮ್ಮ ಆಪ್ತ ಸಹಾಯಕ ಮಹದೇವ್ ಅವರ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರುವ ಮೂಲಕ ಸುದೀಪ್ ಗಮನ ಸೆಳೆದಿದ್ದಾರೆ. ಸುದೀಪ್ ಅವರ ಸಂಗೀತ ಒಲವು ಎಲ್ಲರಿಗೂ ಗೊತ್ತಿರುವುದೇ. ಗಿಟಾರ್ ಹಿಡಿದು ಅವರು ತಮ್ಮ ಕಂಚಿನ ಕಂಠದಲ್ಲಿ ಹಾಡುತ್ತಾರೆ. ಆದರೆ ಪಿಯಾನೋ ನುಡಿಸುವ ಕಲೆಯೂ ಗೊತ್ತಿದೆ ಎನ್ನುವುದು ಬಹಿರಂಗವಾಗಿದೆ.

ಮಹದೇವ್‌ಗೋಸ್ಕರ ಇದು
ಈಗ ಏನೋ ಪ್ಲೇ ಮಾಡುತ್ತೇನೆ. ನನಗೆ ಬೇಕಾಗಿರುವ, ನನ್ನೊಟ್ಟಿಗೆ ಇರುವ ಮಹದೇವ್ ಹುಟ್ಟುಹಬ್ಬ. ನಮ್ಮ ಮಹದೇವ್‌ಗೋಸ್ಕರ ಇದು ಎಂದು ಸುದೀಪ್, ಕೀಬೋರ್ಡ್‌ನಲ್ಲಿ ಹ್ಯಾಪಿ ಬರ್ಥಡೇ ಟೂ ಯೂ ಟ್ಯೂನ್ ನುಡಿಸಿದ್ದಾರೆ.
ವಿಡಿಯೋ ವೈರಲ್
ಸುದೀಪ್ ಅವರ ಪಕ್ಕದಲ್ಲಿಯೇ ನಿಂತಿದ್ದ ಮಹದೇವ್ ಸಂಕೋಚದಿಂದಲೇ ಈ ಖುಷಿಯಲ್ಲಿ ಭಾಗಿಯಾಗಿದ್ದಾರೆ. ಕೀಬೋರ್ಡ್ ನುಡಿಸಿದ ಬಳಿಕ ಸುದೀಪ್, 'ಹ್ಯಾಪಿ ಬರ್ಥಡೇ ಮಹದೇವ್' ಎಂದು ಅವರನ್ನು ಆಲಂಗಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಮತ್ತಷ್ಟು ಎಚ್ಚರಿಕೆ ವಹಿಸಿ
ಇದರ ಜತೆಗೆ ಸುದೀಪ್, ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಎಲ್ಲರಿಗೂ ಶುಭ ಹಾರೈಸಿದ್ದಾರೆ. ಹಾಗೆಯೇ ಇಂದಿನಿಂದ ಅನೇಕ ನಿರ್ಬಂಧಗಳನ್ನು ತೆರವುಗೊಳಿಸುತ್ತಿರುವುದರಿಂದ ಕೋವಿಡ್ ಎಲ್ಲರಿಗೂ ಮತ್ತಷ್ಟು ಸಮೀಪವಾಗಲಿದೆ. ಎಲ್ಲರೂ ಇನ್ನೂ ಹೆಚ್ಚು ಎಚ್ಚರಿಕೆ ವಹಿಸಿ ಎಂದು ಕಿವಿಮಾತು ಹೇಳಿದ್ದಾರೆ.


Click it and Unblock the Notifications











