ಗೆಳೆಯನ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ 'ರನ್ನ': ವಿಜಯ್ ಆಂಟೋನಿಯ 'ಭಿಕ್ಷುಕ 2'ಗೆ ಕಿಚ್ಚ ಸಾಥ್

ಕಾಲಿವುಡ್‌ನಲ್ಲಿ ಸದ್ದು ಮಾಡಿದ್ದ ಸಿನಿಮಾ 'ಪಿಚ್ಚೈಕಾರನ್'. ಖ್ಯಾತ ನಟ, ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕ ವಿಜಯ್ ಆಂಟೋನಿ ಈ ಸಿನಿಮಾದಲ್ಲಿ ನಟಿಸಿದ್ದರು. ಇದು ಕಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡಿತ್ತು.

ಈಗ ಇದೇ ಸಿನಿಮಾದ ಸೀಕ್ಷೆಲ್ 'ಪಿಚ್ಚೈಕಾರನ್ 2' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ವಿಶೇಷ ಅಂದ್ರೆ, ಈ ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ. 'ಭಿಕ್ಷುಕ 2' ಅನ್ನೋ ಹೆಸರಲ್ಲಿ ಕನ್ನಡದಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.

Kiccha Sudeep Releases Vijay Antony Starrer Bhikshuka 2 Trailer

'ಪಿಚ್ಚೈಕಾರನ್ 2' ಸಿನಿಮಾ ಸೀಕ್ವೆಲ್ ಆಗಿರುವ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಮಾಡುತ್ತಿದೆ. ಕನ್ನಡದಲ್ಲಿ 'ಭಿಕ್ಷುಕ-2' ಎಂಬ ಟೈಟಲ್ ಇಟ್ಟು ತೆರೆಮೇಲೆ ಬರುವುದಕ್ಕೆ ಸಜ್ಜಾಗಿದೆ. ಆದರೆ, ಅದಕ್ಕೂ ಮುನ್ನ ಚಿತ್ರತಂಡ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದೆ.

ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಕನ್ನಡದ ಟ್ರೈಲರ್‌ ಅನ್ನು ಸ್ಯಾಂಡಲ್‌ವುಡ್‌ನ ಸೂಪರ್‌ಸ್ಟಾರ್ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ. ವಿಜಯ್ ಆಂಟೋನಿಗೆ ಕಿಚ್ಚ ಸುದೀಪ್ ಗೆಳೆಯ ಕೂಡ ಆಗಿರೋದ್ರಿಂದ ಟ್ರೈಲರ್ ರಿಲೀಸ್ ಮಾಡಿ ಶುಭ ಕೋರಿದ್ದಾರೆ.

'ಪಿಚೈಕಾರನ್' ಪಾರ್ಟ್ 1 ಭರ್ಜರಿ ಯಶಸ್ಸು ಕಂಡಿತ್ತು. ಈ ಸಿನಿಮಾ ವಿಜಯ್ ಆಂಟೋನಿಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು. ಈಗ ಇದೇ ಸಿನಿಮಾ ಸೀಕ್ವೆಲ್ ಮೂಲಕ ವಿಜಯ್ ನಿರ್ದೇಶಕರಾಗಿ ಹೆಜ್ಜೆ ಇಟ್ಟಿದ್ದಾರೆ. ತಮ್ಮದೇ ವಿಜಯ್ ಆಂಟೋನಿ ಫಿಲ್ಮಂ ಕಾರ್ಪೊರೇಷನ್‌ನಡಿ ಅವರೇ ನಿರ್ಮಿಸಿದ್ದು, ಪತ್ನಿ ಫಾತಿಮಾ ವಿಜಯ್ ಆಂಟೋನಿ 'ಭಿಕ್ಷುಕ-2' ಸಿನಿಮಾವನ್ನು ಅರ್ಪಿಸುತ್ತಿದ್ದಾರೆ.

'ಪಿಚೈಕಾರನ್-2' ಸಿನಿಮಾವನ್ನು ಮಲೇಷ್ಯಾದಲ್ಲಿ ಶೂಟಿಂಗ್ ಮಾಡಿದ್ದರು. ಈ ವೇಳೆ ವಿಜಯ್ ಆಂಟೋನಿ ಗಂಭೀರವಾಗಿ ಗಾಯಗೊಂಡಿದ್ದರು. ಶಸ್ತ್ರ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿರೋ ನಟ ಪ್ರಮೋಷನ್ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಅದರ ಮೊದಲ ಹಂತದಲ್ಲೇ 'ಭಿಕ್ಷುಕ-2' ಟ್ರೈಲರ್ ರಿಲೀಸ್ ಆಗಿದೆ.

ಖ್ಯಾತ ಉದ್ಯಮಿ ವಿಜಯ್ ಮೂರ್ತಿಯನ್ನು ಸತ್ಯ ಕೊಲೆ‌ ಮಾಡ್ತಾನೆ. ಕೊಲೆ ನಂತರ ಮುಂದೇನಾಗುತ್ತದೆ‌ ಎಂಬ ಒಂದಷ್ಟು ಟ್ವಿಸ್ಟ್ ಅಂಡ್ ಟರ್ನ್‌ ಅಂಶಗಳು ಟ್ರೈಲರ್‌ನ ಹೈಲೆಟ್ಸ್. ವಿಜಯ್ ಆಂಟೋನಿ ನಿರ್ದೇಶನದ ಈ ಸಿನಿಮಾದಲ್ಲಿ ದೇವ್ ಗಿಲ್, ಹರೀಶ್ ಪೆರಾಡಿ, ಜಾನ್ ವಿಜಯ್, ರಾಧಾ ರವಿ, ಮನ್ಸೂರ್ ಅಲಿ ಖಾನ್, ವೈ ಜಿ ಮಹೇಂದ್ರನ್, ರಾಜಾ ಕೃಷ್ಣಮೂರ್ತಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಾವ್ಯಾ ಥಾಪರ್ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾಗೆ ವಿಜಯ್ ಆಂಟೋನಿ ನಟನೆ, ನಿರ್ದೇಶನದ ಜೊತೆಗೆ ಸಂಗೀತ, ಎಡಿಟಿಂಗ್ ಕೂಡ ಇವರದ್ದೇ. ಮೇ 19 ರಂದು ಕನ್ನಡ ಸೇರಿ ಐದು ಭಾಷೆಯಲ್ಲಿ 'ಭಿಕ್ಷುಕ-2' ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ.

More from Filmibeat

English summary
Kiccha Sudeep Releases Vijay Antony Starrer Bhikshuka 2 Trailer, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X