ಸಾಹಸ ಸಿಂಹ ವಿಷ್ಣುವರ್ಧನ್ ಜತೆ ಹೋಲಿಸಿದ್ದಕ್ಕೆ ಕಿಚ್ಚ ಸುದೀಪ್ ಹೇಳಿದ್ದೇನು?
ಸಾಹಸ ಸಿಂಹ ಮತ್ತು ಕಿಚ್ಚ ಸುದೀಪ್ ಅವರ ಒಡನಾಟ ಹೇಗಿತ್ತು ಎನ್ನುವುದು ಎಲ್ಲರಿಗೂ ತಿಳಿದಿದೆ. 'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರದಲ್ಲಿ ಇಬ್ಬರೂ ತೆರೆ ಹಂಚಿಕೊಂಡಿದ್ದನ್ನು ಅನೇಕರು ಮೆಚ್ಚಿದ್ದರು. ಹಾಗೆಯೇ ಸುದೀಪ್, 'ವಿಷ್ಣುವರ್ಧನ' ಹೆಸರಿನ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರದಲ್ಲಿ ವಿಷ್ಣುವರ್ಧನ್ ಅವರನ್ನು ನೆನಪಿಸುವ ಅನೇಕ ಅಂಶಗಳಿದ್ದವು.
Recommended Video
ಸುದೀಪ್ ಅವರನ್ನು ವಿಷ್ಣುವರ್ಧನ್‌ಗೆ ಅನೇಕರು ಹೋಲಿಕೆ ಮಾಡಿದ್ದರು. ವಿಷ್ಣುವರ್ಧನ್ ಅವರ ಅಗಲುವಿಕೆಯಿಂದ ಉಂಟಾಗಿರುವ ಕೊರತೆಯನ್ನು ಸುದೀಪ್ ತುಂಬುತ್ತಿದ್ದಾರೆ ಎಂದು ಅವರ ಅಭಿಮಾನಿಗಳು ಹೊಂದುತ್ತಿದ್ದಾರೆ. ಅನೇಕರು ಸುದೀಪ್ ಅವರಲ್ಲಿಯೇ ವಿಷ್ಣುವರ್ಧನ್ ಅವರನ್ನು ಕಾಣುತ್ತಿರುವುದಾಗಿ ಹೇಳಿದ್ದಾರೆ. ಅವರ ಹೋಲಿಕೆಗೆ ನೀರೆರೆದಿರುವುದು 'ಕೋಟಿಗೊಬ್ಬ' ಸಿನಿಮಾ. ಮುಂದೆ ಓದಿ...

ಅಪ್ಪಾಜಿ ಜತೆ ಹೋಲಿಸಬೇಡಿ
ಆದರೆ ವಿಷ್ಣುವರ್ಧನ್ ಅವರಿಗೆ ತಮ್ಮನ್ನು ಹೋಲಿಸುವುದು ತರವಲ್ಲ ಎಂದು ಕಿಚ್ಚ ಸುದೀಪ್ ವಿನಮ್ರದಿಂದ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. 'ಕೋಟಿಗೊಬ್ಬ' ಚಿತ್ರದ ಸರಣಿಯಲ್ಲಿ ಅತ್ಯುತ್ತಮ ಶೀರ್ಷಿಕೆ ಗೀತೆ ಯಾವುದು ಎಂಬ ಪೋಲ್ ನಡೆದಿತ್ತು. ಅದಕ್ಕೆ ಸುದೀಪ್ ಈ ಪ್ರತಿಕ್ರಿಯೆ ನೀಡಿದ್ದಾರೆ.

ಆ ಜಾಗ ತುಂಬಲು ಆಗುವುದಿಲ್ಲ
'ಕೋಟಿಗೊಬ್ಬ ಶುರುವಾಗಿದ್ದು ಅಪ್ಪಾಜಿ ವಿಷ್ಣು ಸರ್ ಅವರಿಂದ. ಅವರು ಶುರು ಮಾಡಿದ ಸಿನಿಮಾವನ್ನು ಬೇರೆ ಯಾವುದರಿಂದಲೂ ತುಂಬಲು ಸಾಧ್ಯವಿಲ್ಲ' ಎಂದು ಸುದೀಪ್, ವಿಷ್ಣುವರ್ಧನ್ ಅಭಿನಯದ ಕೋಟಿಗೊಬ್ಬ ಚಿತ್ರಕ್ಕೆ ತಮ್ಮ ಅಭಿನಯದ ಕೋಟಿಗೊಬ್ಬ 2, ಕೋಟಿಗೊಬ್ಬ 3 ಚಿತ್ರವನ್ನು ಹೋಲಿಸುವುದು ಸರಿಯಲ್ಲ ಎಂದಿದ್ದಾರೆ.

ನಾನು ಬಹಳ ಚಿಕ್ಕವನು
ಹಿರಿಯರು ನಮ್ಮ ಚಿತ್ರರಂಗದ ಪಿಲ್ಲರ್‌ಗಳಿದ್ದಂತೆ. ಅವರು ಅದನ್ನು ಎತ್ತಿ ಬೆಳೆಸಿದ್ದಾರೆ. ಹೀಗಾಗಿ ಅವರನ್ನು ಒಳಗೊಂಡ ಇಂತಹ ಪೋಲ್‌ಗಳನ್ನು ದಯವಿಟ್ಟು ಯಾರೂ ಮಾಡಬೇಡಿ. ನನ್ನ ಸಿನಿಮಾಗಳು ಮತ್ತು ನಾನು ಇಬ್ಬರೂ ಹೋಲಿಕೆ ಮಾಡುವುದಕ್ಕೂ ತೀರಾ ಚಿಕ್ಕವು ಎಂದು ಸುದೀಪ್ ಹೇಳಿದ್ದಾರೆ.

ಲಿರಿಕಲ್ ವಿಡಿಯೋ ದಾಖಲೆ
2001ರಲ್ಲಿ ಬಿಡುಗಡೆಯಾದ ಕೋಟಿಗೊಬ್ಬ ಚಿತ್ರದಲ್ಲಿ ವಿಷ್ಣುವರ್ಧನ್ ನಟಿಸಿದ್ದರು. ಇದು 'ಬಾಷಾ' ಚಿತ್ರದ ರೀಮೇಕ್ ಆಗಿತ್ತು. ನಂತರ 2016ರಲ್ಲಿ ಸುದೀಪ್ ಅಭಿನಯದ 'ಕೋಟಿಗೊಬ್ಬ 2' ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿತ್ತು. ಈ ಗೆಲುವಿನ ಬೆನ್ನಲ್ಲೇ ಕೋಟಿಗೊಬ್ಬ 3 ಆರಂಭವಾಗಿತ್ತು. ಈ ಚಿತ್ರದ ಟೈಟಲ್ ಟ್ರ್ಯಾಕ್ 'ಆಕಾಶಾನೆ ಅದರಿಸುವ' ಲಿರಿಕಲ್ ವಿಡಿಯೋ ಯೂಟ್ಯೂಬ್‌ನಲ್ಲಿ ದಾಖಲೆಯ ಹಿಟ್ಸ್ ಗಳಿಸಿದೆ.


Click it and Unblock the Notifications











